Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮೋನೋಕ್ರೋಮ್ ಧಿರಿಸಿನಲ್ಲಿ ಹಾಟ್ ಆಗಿ ಮಿಂಚಿದ ನೇಹಾ
ಮೋನೋಕ್ರೋಮ್ ಈವೆಂಟ್‌ನಲ್ಲಿ ನಾವು ಯಾರನ್ನು ತೋರಿಸಿದ್ದೇವೆ ಎಂಬುದನ್ನು ನೋಡಿ! ನೇಹಾ ದೂಪಿಯಾ ಎಂಬ ಈ ಬಾಲಿವುಡ್ ಬೆಡಗಿ ತಮ್ಮ ಸ್ಟೈಲ್ ಸೆನ್ಸ್‌ನಲ್ಲಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸುವ ಮೋಡಿಯನ್ನು ಹೊಂದಿದ್ದಾರೆ.
ಈವೆಂಟ್ ಒಂದರಲ್ಲಿ ಮೋನೋಕ್ರೋಮ್ ಧಿರಿಸಿನಲ್ಲಿ ಕಂಡುಬಂದ ನೇಹಾ ಬಾಲಿವುಡ್‌ನ ರಾಣಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹೆಚ್ಚಿನ ಸ್ಟೈಲಿಶ್ ಸೆಲೆಬ್ರಿಟಿ ಸ್ಟಾರ್‌ಗಳಲ್ಲಿ ತಮ್ಮ ಹೆಸರನ್ನೂ ಚಿರಂತನವಾಗಿಸುವ ತುಡಿತದಲ್ಲಿರುವ ನೇಹಾ ಪೆನ್ಸಿಲ್ ಸ್ಕರ್ಟ್‌ನಲ್ಲಿ ತಮ್ಮ ಮಾಟವಾದ ಕಾಲುಗಳನ್ನು ಪ್ರದರ್ಶಿಸಿದ್ದಾರೆ.

ಹಳದಿಯಲ್ಲಿ ಮಿಂಚಿದ ಕರೀನಾ ಕಪೂರ್, ಯಾಮಿ ಗೌತಮ್
ಈ ಬಗೆಯ ಔಟ್‌ಫಿಟ್‌ನಲ್ಲಿ ಕಂಡುಬರುವ ಪ್ರತಿಯೊಬ್ಬ ಚೆಲುವೆ ಕೂಡ ಮಂತ್ರಮುಗ್ಧಗೊಳಿಸುವಂತೆ ಕಂಡುಬರುವುದು ಸಹಜವೇ ಆಗಿದೆ ನೇಹಾ ಕೂಡ ಇದಕ್ಕೆ ಹೊರತಲ್ಲ. ಅಜೆಟಿಕ್ ಪ್ರಿಂಟ್ ಉಳ್ಳ ಪೆನ್ಸಿಲ್ ಸ್ಕರ್ಟ್ ಬಟನ್ ಉಳ್ಳ ಎಲ್‌ಬೋ ಶರ್ಟ್‌ನೊಂದಿಗೆ ಚೆನ್ನಾಗಿ ಹೊಂದಿಕೆಯಾಗಿದ್ದು ನೇಹಾಗೆ ಹೆಚ್ಚಿನ ವೃತ್ತಿಪರ ನೋಟವನ್ನು ತಂದುಕೊಟ್ಟಿದೆ. ಆಕೆ ಧರಿಸಿರುವ ಶರ್ಟ್ ಲೋ ನೆಕ್‌ಲೈನ್ ಅನ್ನು ಹೊಂದಿದ್ದರೂ ವಿಶೇಷವಾಗಿದೆ.
ರೀಟೈಲ್ ಜ್ಯುವೆಲ್ಲರ್ಸ್ ಅವಾರ್ಡ್ ಫಂಕ್ಷನ್‌ನಲ್ಲಿ ನೇಹಾರ ಈ ಹೊಸ ಲುಕ್ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗನ್ನು ತಂದುಕೊಟ್ಟಿದ್ದಂತೂ ಸುಳ್ಳಲ್ಲ. ತಮ್ಮ ಧಿರಿಸಿಗೆ ಚೆನ್ನಾಗಿ ಒಪ್ಪುವಂತಹ ಕಪ್ಪು ಶೂಗಳನ್ನು ಧರಿಸಿರುವ ಈ ಬೆಡಗಿ ಸರಳವಾದ ಮೇಕಪ್‌ನಲ್ಲಿ ಕಣ್ಮನ ಸೆಳೆಯುವಂತಿದ್ದಾರೆ.
ಜ್ಯುವೆಲ್ಲರಿ ಈವೆಂಟ್‌ನಲ್ಲಿ ನೇಹಾ ಪಾಲ್ಗೊಂಡಿದ್ದರೂ ತಮ್ಮ ಆಭರಣವನ್ನು ಸೀಮಿತವಾಗಿರಿಸಿಕೊಂಡಿರುವ ನೇಹಾ ಆಕರ್ಷಕ ಕಿವಿಯಾಭರಣ ಮತ್ತು ವಜ್ರದ ಹರಳುಗಳಿಂದ ಕೂಡಿರುವ ಮಣಿಕಟ್ಟು ಬ್ರೇಸ್‌ಲೆಟ್‌ನೊಂದಿಗೆ ಸೊಗಸಾಗಿದ್ದಾರೆ. ಆಕೆಯ ಬೆರಳಿನಲ್ಲಿರುವ ಮನ ಕದಿಯುವ ಉಂಗುರವನ್ನು ಕೂಡ ನಾವಿಲ್ಲಿ ಮರೆಯುವಂತಿಲ್ಲ. ಮತ್ತು ಆಕೆ ತಮ್ಮ ಕೈಯಲ್ಲಿ ಹಿಡಿದುಕೊಂಡಿರುವ ಕಪ್ಪು ಪರ್ಸ್ ತಮ್ಮ ಧಿರಿಸಿಗೆ ಮತ್ತು ನೇಹಾಗೆ ವಿಶೇಷ ಆಕರ್ಷಣೆಯನ್ನು ತಂದುಕೊಟ್ಟಿದೆ.
ಹಾಟ್ ಮತ್ತು ಫಿಟ್ ಆಗಿರುವ 15 ಸೆಲೆಬ್ರಿಟಿಗಳು
ಒಟ್ಟಾರೆ, ಅಜೆಟಿಕ್ ಪೆನ್ಸಿಲ್ ಸ್ಕರ್ಟ್ ನೇಹಾ ಧೂಪಿಯಾರನ್ನು ಇನ್ನಷ್ಟು ಪರ್ಫೆಕ್ಟ್ ಸುಂದರಿಯನ್ನಾಗಿಸಿದ್ದು ಈ ದಿನಗಳಲ್ಲಿ ಹೆಚ್ಚು ಸ್ಟನ್ನಿಂಗ್ ಮತ್ತು ಮೋಡಿ ಮಾಡುವಂತಹ ಚೆಲುವೆಯನ್ನಾಗಿ ರೂಪಿಸಿದೆ.



Click it and Unblock the Notifications
