Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಿರ್ಚಿ ಮ್ಯೂಸಿಕ್ ಅವಾರ್ಡ್: ಸೀರೆಯಲ್ಲಿ ಮಿಂಚಿದ ಮಾಧುರಿ
ಮಾಧುರಿ ದೀಕ್ಷಿತ್ ಯಾವುದೇ ಉಡುಗೆಗೂ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಮಿಲಿಯನ್ ಡಾಲರ್ ನಗುವಿನ ಒಡತಿ ಮಾಧುರಿ ಸಾಂಪ್ರದಾಯಿಕ ಧಿರಿಸಿನಲ್ಲಿ ಇನ್ನೂ ಚೆನ್ನಾಗಿ ಕಂಡುಬರುತ್ತಿದ್ದಾರೆ. ಸೀರೆಯಲ್ಲಿ ಆಕೆ ಇನ್ನೂ ಚೆನ್ನಾಗಿ ಕಾಣಿಸುತ್ತಿದ್ದಾರೆ. ಮಾಧುರಿಯನ್ನು ಸೀರೆಯಲ್ಲಿ ಕಾಣುವುದೇ ಕಣ್ಣಿಗೆ ಹಬ್ಬದಂತೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪೀಟರ್ ಪೈಲಾಟ್ಟೊ ಡ್ರೆಸ್‌ನಲ್ಲಿ ಬೇಬೋ ಕರೀನಾ
ಇತ್ತೀಚೆಗೆ, ಸೀರೆಯುಟ್ಟುಕೊಂಡು ಈ ಸುಂದರ ನಟಿ ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್‌ನ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದರು. ಪಿಂಕ್ ಕಲರ್‌ನ ಲೆಹಂಗಾ ಸೀರೆ ಮಾಧುರಿಯ ಆಯ್ಕೆಯಾಗಿತ್ತು. ಸಬ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ ಲೆಹಂಗಾ ಸೀರೆಯಲ್ಲಿ ಮಾಧುರಿ ಇನ್ನಷ್ಟು ಮುದ್ದಾಗಿ ಕಾಣಿಸುತ್ತಿದ್ದರು.

ಬಬಲ್‌ಗಮ್ ಪಿಂಕ್ ಲೆಹಂಗಾ ಸೀರೆ ಸುಂದರವಾದ ಎಂಬ್ರಾಯಿಡರಿಗಳನ್ನು ಹೊಂದಿದ್ದು ಅಂಚುಗಳಲ್ಲಿ ಥ್ರೆಡ್ ವರ್ಕ್‌ನಿಂದ ಸುಂದರಗೊಂಡಿದೆ. ಸೆರಗಿನವರೆಗೂ ಹಬ್ಬಿರುವ ಈ ಸುಂದರ ವಿನ್ಯಾಸ ನೋಡಲು ಅತ್ಯಾಕರ್ಷವಾಗಿದೆ.
ಸಬ್ಯಸಾಚಿ ಸೀರೆಯನ್ನು ಮಾಧುರಿ ಸೆರಗು ಇಳಿಬಟ್ಟಂತೆ ಉಟ್ಟಿದ್ದು ಎಂಬ್ರಾಯಿಡರಿ ವರ್ಕ್ ಸೀರೆಯಲ್ಲಿ ಚೆನ್ನಾಗಿ ಎದ್ದುಕಾಣುತ್ತಿದೆ. ಸೀರೆಗೆ ತಕ್ಕಂತಿರುವ ಸ್ಲೀವ್ ಲೆಸ್ ಬ್ಲೌಸ್ ಅನ್ನು ಮಾಧುರಿ ಧರಿಸಿದ್ದರು.
ಗೆಹನಾ ಜ್ಯುವೆಲ್ಲರಿಯೊಂದಿಗೆ ಸಾಲಂಕೃತಳಾಗಿ ಆಗಮಿಸಿದ್ದ ಮಾಧುರಿ ಸಾಂಪ್ರದಾಯಿಕ ನೋಟಕ್ಕೆ ವಿಶೇಷ ಮೆರುಗನ್ನು ನೀಡಿದ್ದಾರೆ. ಕಲ್ಲು ಮತ್ತು ಮುತ್ತನ್ನು ಒಳಗೊಂಡಿರುವ ದೊಡ್ಡ ಕಿವಿಯಾಭರಣಗಳನ್ನು ಧರಿಸಿರುವ ಮಾಧುರಿ ಸರಳ ಮೇಕಪ್‌ನಲ್ಲಿ ಚಿಕ್ ಆಗಿ ಕಂಡುಬರುತ್ತಿದ್ದಾರೆ. ವಿಶೇಷವಾಗಿ ಕಟ್ಟಿರುವ ತುರುಬು ಹೀಗೆ ಸಾಲಂಕೃತ ಅಲಂಕಾರದಿಂದ ಸಂಪೂರ್ಣಗೊಂಡಿದ್ದಾರೆ ಮಾಧುರಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಭಾರತದ ಪ್ರಸಿದ್ಧ ರಿಟೇಲ್ ಜ್ಯುವೆಲರಿನಲ್ಲಿ ಮಿಂಚಿದ ತಾರೆಯರು
ಸೀರೆಯಲ್ಲಿ ಮಾಧುರಿಯನ್ನು ನೋಡಲು ನಮಗೆ ಬೇಸರವೆನಿಸುವುದಿಲ್ಲ. ಮಾಧುರಿಯ ಸೀರೆ ಆಯ್ಕೆ ತುಂಬಾ ಚೆನ್ನಾಗಿರುತ್ತದೆ ಮತ್ತು ಎಥ್ನಿಕ್ ಆಗಿ ಇರುತ್ತದೆ. ಆಕೆ ಧರಿಸಿರುವ ಬ್ಲೌಸ್ ಕೂಡ ಸೀರೆಗೆ ಒಪ್ಪುವಂತಿದ್ದು ಮಾಧುರಿಯ ಡ್ರೆಸ್ ಸೆನ್ಸ್ ಅನ್ನು ಬಹಿರಂಗಪಡಿಸಿದೆ.



Click it and Unblock the Notifications
