Latest Updates
-
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ! -
ರಾಜಸ್ಥಾನ UCC: ಲಿವ್-ಇನ್ ಮತ್ತು ಮದುವೆ ಜೋಡಿಗಳೇ ಎಚ್ಚರ, ಈ ದಾಖಲೆಗಳು ಸಿದ್ಧವಿರಲಿ! -
ಮಳೆಗಾಲದ ಎಚ್ಚರಿಕೆ: ಅಪಾರ್ಟ್ಮೆಂಟ್ ಸೋರಿಕೆ ತಡೆಯಲು ಮತ್ತು ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಸರಳ ಉಪಾಯಗಳು -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ₹350 ಕ್ಕಿಂತ ಕಡಿಮೆ ವೆಚ್ಚದಲ್ಲಿ 7 ಹೈ-ಪ್ರೋಟೀನ್ ಬ್ರೇಕ್ಫಾಸ್ಟ್ ಐಡಿಯಾಗಳು! -
ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಹೊಸ ರೂಲ್ಸ್: PoP ಮೂರ್ತಿ ನಿಷೇಧ, ಅನುಮತಿ ಪಡೆಯುವುದು ಹೇಗೆ? -
ದೆಹಲಿ ಆರೆಂಜ್ ಅಲರ್ಟ್: ಮಳೆಯಲ್ಲಿ ಮನೆಯಲ್ಲೇ ಫಿಟ್ ಆಗಿರಲು ಈ 20 ನಿಮಿಷದ ವರ್ಕೌಟ್ ಟ್ರೈ ಮಾಡಿ
ಪಂಕಜ್ ಮತ್ತು ನಿಧಿ ವಿನ್ಯಾಸದ ಧಿರಿಸಿನಲ್ಲಿ ಮಾಧುರಿ
ಪಂಕಜ್ ಮತ್ತು ನಿಧಿ ವಿನ್ಯಾಸದ ಧಿರಿಸಿನಲ್ಲಿ ಎರಡನೆಯ ಬಾರಿ ಮಾಧುರಿ ಮಿಂಚಿದ್ದಾರೆ. ತನ್ನ ಇತ್ತೀಚಿನ ಸಿನಿಮಾ ಗುಲಾಬ್ ಗ್ಯಾಂಗ್‌ನ ಮ್ಯೂಸಿಕ್ ಉದ್ಘಾಟನಾ ಸಮಾರಂಭದಲ್ಲಿ ಮಾಧುರಿ ಹಾಜರಿದ್ದರು. ಕಿತ್ತಳೆ ಬಣ್ಣದ ಸೂಟ್‌ನಲ್ಲಿ ಮಾಧುರಿ ಅಪ್ಸರೆಯಂತಿದ್ದರು.
ಸೂಟ್‌ನ ಬಣ್ಣ ಹಾಗೂ ಅದರಲ್ಲಿನ ವಿನ್ಯಾಸ ಮನಮೋಹಕವಾಗಿತ್ತು. ಸೂಟ್ ಗೋಲ್ಡನ್ ಮತ್ತು ಜರಿ ಕುಸುರಿಯ ವಿನ್ಯಾಸದಲ್ಲಿ ಕಂಗೊಳಿಸಿದ್ದು ಭಾರೀ ಎಂಬ್ರೊಯಿಡರಿ ಕೆಲಸದಿಂದ ಮೇಲಿನಿಂದ ಕೆಳಗಿನವರೆಗೂ ಭರ್ಜರಿಯಾಗಿದೆ.

ಸೂಟ್‌ನಲ್ಲಿನ ಮುಕ್ಕಾಲು ಸ್ಲೀವ್ಸ್ ಅದಕ್ಕೆ ಆಕರ್ಷಕ ನೋಟವನ್ನು ನೀಡಿದ್ದು, ಭುಜ ಮತ್ತು ಅಂಚುಗಳಲ್ಲಿ ಗೋಲ್ಡನ್ ಕುಸುರಿಯನ್ನು ಹೊಂದಿತ್ತು. ಅಂಚುಗಳಲ್ಲಿ ಪಿಂಕ್ ಮತ್ತು ಗೋಲ್ಡನ್ ಕೆಲಸವಿದ್ದಂತಹ ದುಪ್ಪಾಟ್ಟಾವನ್ನು ಸೂಟ್‌ಗೆ ಹೊಂದುವಂತೆ ಮಾಧುರಿ ತೊಟ್ಟಿದ್ದರು. ಮಾಧುರಿ ದುಪ್ಪಾಟ್ಟಾವನ್ನು ಒಂದೇ ಬದಿಗೆ ಹಾಕಿಕೊಂಡಿದ್ದು ಭಾರತೀಯ ಶೈಲಿಯಂತೆ ಚಿನ್ನದಾಭರಣಗಳೊಂದಿಗೆ ಅಲಂಕಾರವನ್ನು ಪೂರ್ಣಗೊಳಿಸಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಾಧುರಿ ಮತ್ತು ಹುಮಾ ಕುರೇಶಿ ಚಿತ್ರ ಪ್ರಚಾರದಲ್ಲಿ
ಚಿನ್ನದ ಜುಮುಕಿ ಮತ್ತು ಬಳೆಗಳಿಂದ ಆವೃತವಾದ ಮಾಧುರಿಯ ಸೊಗಸನ್ನು ಬಣ್ಣಿಸಲು ಪದಗಳೇ ಸಾಲುತ್ತಿರಲಿಲ್ಲ. ಆಕೆಯ ಕೇಶವಿನ್ಯಾಸ ವೇವಿ ಸ್ಟೈಲಿನಲ್ಲಿದ್ದು ಒಂದೇ ಬದಿಗೆ ಚಾಚಿತ್ತು. ತಿಳಿಯಾದ ಮೇಕಪ್, ಪಿಂಕ್ ಐಶ್ಯಾಡೋ, ಮತ್ತು ಕಂದು ಬಣ್ಣದ ಲಿಪ್‌ಸ್ಟಿಕ್ ತಮ್ಮ ಕೈ ಚಳಕವನ್ನು ಮಾಧುರಿಯ ಮೇಲೆ ಅದ್ಭುತವಾಗಿ ಮಾಡಿದ್ದವು. ಪಂಕಜ್ ಮತ್ತು ನಿಧಿ ವಿನ್ಯಾಸದ ಸೂಟ್‌ನೊಂದಿಗೆ ಸಿಲ್ವರ್ ಪಟ್ಟಿಯಿರುವ ಹೀಲ್ಡ್ ಅನ್ನು ಮಾಧುರಿ ಧರಿಸಿದ್ದರು.
ಕಳೆದ ಬಾರಿ ಮಾಧುರಿ ಗುಲಾಬ್ ಗ್ಯಾಂಗ್‌ನ ಪತ್ರಿಕಾಗೋಷ್ಠಿಯಲ್ಲಿ ಪಿಂಕ್ ಮತ್ತು ಗೋಲ್ಡನ್ ಪಟಿಯಾಲಾ ಸೂಟ್ ಅನ್ನು ಧರಿಸಿದ್ದರು. ಇದು ಕೂಡ ಪಂಕಜ್ ಮತ್ತು ನಿಧಿ ವಿನ್ಯಾಸದಲ್ಲಿ ಮೂಡಿ ಬಂದಿರುವಂಥದ್ದು ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈಗೀನ ಟ್ರೆಂಡ್ ಆಗಿರುವ ಫ್ಯಾಷನಬಲ್ ಡ್ರೆಸ್
ಈ ಪಟಿಯಾಲಾ ಸೂಟ್ ಗೋಲ್ಡನ್ ವರ್ಕ್‌ನಲ್ಲಿ ಝಗಮಗಿಸುತ್ತಿತ್ತು. ಮಾಧುರಿ ದೀಕ್ಷಿತ್ ಸೂಟ್‌ಗಳಲ್ಲಿ ಅದ್ಭುತವಾಗಿ ಕಂಗೊಳಿಸುತ್ತಾರೆ. ಆಕೆ ಭಾರತೀಯ ಸಂಪ್ರದಾಯವನ್ನು ತನ್ನ ಮೈ ಮನಗಳಲ್ಲಿ ಒಗ್ಗೂಡಿಸಿಕೊಂಡ ಸುಂದರಿ ನಟಿ ಎಂಬದರಲ್ಲಿ ಎರಡು ಮಾತಿಲ್ಲ.



Click it and Unblock the Notifications