Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಎಲ್ಎಫ್‌ಡಬ್ಲ್ಯೂನಲ್ಲಿ ಮನಕದ್ದ ಮನೀಶ್ ಮಲ್ಹೋತ್ರಾ ಸಂಗ್ರಹ
ಎಲ್ಎಫ್‌ಡಬ್ಲ್ಯೂ 2014 ರ 6 ನೇ ದಿನದಂದು ಹೆಚ್ಚಿನ ವಿನ್ಯಾಸಕಾರರು ತಮ್ಮ ದಿರಿಸುಗಳ ಪ್ರದರ್ಶನವನ್ನು ಪ್ರದರ್ಶಿಸಿದ್ದಾರೆ. ಕ್ರಿಯಾತ್ಮಕತೆ ಮತ್ತು ಅಂದದ ವಿನ್ಯಾಸಗಳ ಸಂಗ್ರಹ ನಿಜಕ್ಕೂ ಮನವನ್ನು ಕದಿಯುವಂತಿದೆ. ಪ್ರದರ್ಶನದ ಕೊನೆಯ ದಿನವಾದ 6 ನೇ ದಿನ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ.
ಮನೀಶ್ ಮಲ್ಹೋತ್ರಾ ಸಂಗ್ರಹ ನಿಜಕ್ಕೂ ಸ್ವರ್ಗವನ್ನೇ ಧರೆಗಿಳಿಸಿದಂತಿತ್ತು. ನೆರೆದಿದ್ದ ವಸ್ತ್ರ ಪ್ರೇಮಿಗಳ ಮನವನ್ನು ಈ ಅದ್ಭುತ ಕದಿಯುವಂತಿತ್ತು. ಅವರ ಕಲಾತ್ಮಕ ರಚನೆ ಮತ್ತು ಮನಸೆಳೆಯುವ ಸಂಗ್ರಹ ನಿಜಕ್ಕೂ ಅದ್ಭುತವನ್ನೇ ಉಂಟುಮಾಡಿತ್ತು. ಇನ್ನು ಮನೀಶ್ ಮಲ್ಹೋತ್ರಾ ವಿನ್ಯಾಸಕ್ಕೆ ಮುಖ್ಯ ಅತಿಥಿ ಆಗಿ ಕಾಣಿಸಿಕೊಂಡವರು ಬೇಬೋ ಕರೀನಾ ಕಪೂರ್. ವರುಣ್ ಧವನ್ ಈವೆಂಟ್ ಅನ್ನು ಇನ್ನಷ್ಟು ರಂಗೇರಿಸಿದರು.

ಚಳಿಗಾಲದ ಹಬ್ಬದ ಕೌಚರ್ ಅನ್ನು ಕರೀನಾ ಎಲ್ಎಫ್‌ಡಬ್ಲ್ಯೂ ನಲ್ಲಿ ಪ್ರದರ್ಶಿಸಿದ್ದಾರೆ. ಹೊಟ್ಟೆಯ ಬಳಿ ಕಟ್ ಇರುವಂತಹ ಹೊಳೆಯುವ ಪೀಚ್ ಲೆಹೆಂಗಾವನ್ನು ಕರೀನಾ ಧರಿಸಿದ್ದರು. ಕರೀನಾ ಸ್ಟೈಲ್ ಮತ್ತು ಹೆಚ್ಚು ಮನಸೆಳೆಯುವ ಹೆಜ್ಜೆಯನ್ನು ರಾಂಪ್ ಮೇಲೆ ಹಾಕಿ ಫೆಸ್ಟೀವ್ ಸೀಸನ್ ಅನ್ನು ಇನ್ನಷ್ಟು ಮೆರುಗಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ.
ಲಾಕ್ಮೆ ಫ್ಯಾಷನ್ ವೀಕ್‌ನ ಕಣ್ಮನ ಸೆಳೆದ ಅದ್ಭುತ ಕಲಾಗಾರಿಕೆ
ಮನೀಶ್ ಮಲ್ಹೋತ್ರಾ ಕಲರ್ ಕಾಂಬಿನೇಶನ್ ಅತ್ಯದ್ಭುತವಾಗಿದ್ದು ಸ್ಟೈಲ್ ಮತ್ತು ಬಣ್ಣಗಳ ಮೇಳ ಇಲ್ಲಿ ನಡೆದಿದೆ. ಪುರುಷ ಮತ್ತು ಮಹಿಳಾ ರೂಪದರ್ಶಿಯರು ರಾಂಪ್ ಮೇಲೆ ಹೆಜ್ಜೆ ಹಾಕಿ ಮನವನ್ನು ಕದ್ದಿದ್ದಾರೆ. ಗ್ರೇ ಮತ್ತು ಮೆರೂನ್ ಬಣ್ಣಗಳ ಮನಸೆಳೆಯುವ ಸಂಗ್ರಹ ಫ್ಯಾಷನ್ ವಾರದಲ್ಲಿ ನಡೆದಿದ್ದು ನಿಜಕ್ಕೂ ಇದೊಂದು ಅದ್ಭುತವಾದ ಕ್ಷಣವಾಗಿದೆ.
ಒಟ್ಟಿನಲ್ಲಿ ಎಲ್ಎಫ್‌ಡಬ್ಲ್ಯೂ 2014 ರ ಮನೀಶ್ ಮಲ್ಹೋತ್ರಾ ಸಂಗ್ರಹ ನಿಜಕ್ಕೂ ಮನವನ್ನು ಕದಿಯುವ0ತಿತ್ತು ಫ್ಯಾಷನ್ ಲೋಕದ ಹೊಸ ಅನುಭವವನ್ನು ಇದು ಉಂಟುಮಾಡಿತ್ತು. ಈ ವಸ್ತ್ರ ವಿನ್ಯಾಸದ ಅದ್ಭುತ ಸಂಗ್ರಹ ನಿಜಕ್ಕೂ ಮನವನ್ನು ಕದಿಯುವಂತಿತ್ತು.



Click it and Unblock the Notifications
