Latest Updates
-
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್
ಲಾಕ್ಮೆ ಫ್ಯಾಷನ್ ವೀಕ್ 2014: ಕಣ್ಸೆಳೆಯುವ ದೃಶ್ಯಗಳು
ಎಲ್‌ಎಫ್‌ಡಬ್ಲ್ಯೂ 2014 ಫ್ಯಾಶನ್ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧವಾಗಿರುವುದಾಗಿದೆ. ಎಲ್‌ಎಫ್‌ಡಬ್ಲ್ಯೂ 2014 ಕ್ಕಾಗಿ ಅಮಿತ್ ಅಗರ್‌ವಾಲ್ ವಸ್ತ್ರ ವಿನ್ಯಾಸ ಸಂಗ್ರಹಣೆ ಹೇಗಿರಬಹುದು ಎಂಬುದನ್ನು ಕಾಣಲು ಹೆಚ್ಚಿನವರು ಉತ್ಸುಕರಾಗಿದ್ದಾರೆ. ಲಾಕ್ಮೆ ಫ್ಯಾಷನ್ ವೀಕ್ 2014: ಎಂದೇ ಕರೆಯಲಾಗುವ ಈ ದಿರಿಸುಗಳ ಪ್ರದರ್ಶನ ಅತಿ ಅಪರೂಪದ ವಿನ್ಯಾಸಗಳ ದಿರಿಸುಗಳ ಸಂಗ್ರಹವನ್ನು ಹೊಂದಿದೆ.
ಸೀರೆ ಗೌನ್, ಪ್ಲಂಗಿಂಗ್ ನೆಕ್‌ಲೈನ್ ದಿರಿಸು, ಹೊಳೆಯುವ ಸೂಟ್ಸ್ ಹೀಗೆ ಮನಮೋಹಕ ವಸ್ತ್ರ ಸಂಗ್ರಹವನ್ನೇ ಈ ಫ್ಯಾಷನ್ ವೀಕ್ ಒಳಗೊಂಡಿದೆ. ಇದರಲ್ಲಿ ಬುರ್ಕಾ ಮಾದರಿಯ ದಿರಿಸುಗಳೂ ಇದ್ದು ಅತಿ ವಿಶೇಷ ಎಂದೇ ಪರಿಗಣಿಸಬಹುದಾಗಿದೆ. ಅಮಿತ್ ಅಗರ್‌ವಾಲ್ ಸಂಗ್ರಹಕ್ಕೆ ಮುಖ್ಯ ಅತಿಥಿಯಾಗಿ ಸುಶ್ಮಿತಾ ಸೇನ್ ಮಿಂಚಿದ್ದಾರೆ. ಇನ್ನಷ್ಟು ಫ್ಯಾಷನ್ ಪ್ರದರ್ಶನದ ಕಣ್ಸೆಳೆಯುವ ನೋಟಗಳು ಕೆಳಗಿನ ಸ್ಲೈಡ್‌ಗಳಲ್ಲಿ
ಲ್ಯಾಕ್ಮಿ ಫ್ಯಾಷನ್ ತಂದಿದೆ ಹೊಸ ವಿನ್ಯಾಸದ ಸೀರೆ

ಸೀರೆ ಶೈಲಿಯ ಗೌನ್
ಅಮಿತ್ ಅಗರ್‌ವಾಲ್ ಸಂಗ್ರಹದಲ್ಲಿ ಸೀರೆ ಮಾದರಿಯ ಗೌನ್‌ಗಳು ಹೆಚ್ಚಿನ ಆಕರ್ಷಣೆಯನ್ನು ಉಂಟುಮಾಡಿದ್ದವು.

ವ್ರೇಪ್ ಬಸ್ಟ್ ಗೌನ್ಸ್
ಕೆಲವೊಂದು ಗೌನ್‌ಗಳು ಫಿಟ್ ಮತ್ತು ಆಕರ್ಷಕವಾಗಿದ್ದವು. ಈ ಗೌನ್‌ಗಳ ಹೊಳೆಯುವಿಕೆ ಕಣ್ಣಿಗೆ ಸಂಭ್ರಮವನ್ನೇ ಉಂಟುಮಾಡಿತ್ತು

ಸ್ಲೀವ್ಸ್
ಈ ನಿಯೋನ್ ಗುಲಾಬಿ ಬಣ್ಣದ ಗೌನ್ ಹಗುರವಾಗಿರುವ ರೆಕ್ಕೆಯಂತಿರುವ ಸ್ಲೀವ್ಸ್ ಅನ್ನು ಹೊಂದಿದ್ದು ಆಕರ್ಷಕವಾಗಿದೆ

ಫ್ರಿಂಗ್ ಬುರ್ಕಾ
ಫ್ಯಾಷನ್ ಪ್ರದರ್ಶನದಲ್ಲಿ ಬುರ್ಕಾದ ಪ್ರದರ್ಶನ ಕಲ್ಪನೆಗೂ ನಿಲುಕದ್ದು ಆದರೆ ಇಲ್ಲಿ ಇದು ಅತಿ ವಿಭಿನ್ನವಾಗಿದೆ.

ಮುಖ್ಯ ಅತಿಥಿ
ಸುಶ್ಮಿತಾ ಸೇನ್ ಕಪ್ಪು ಮಿಂಚಿರುವ ಗೌನ್ ಅನ್ನು ಧರಿಸಿ ರಾಂಪ್ ಮೇಲೆ ಹೆಜ್ಜೆ ಹಾಕಿದ ಶೈಲಿ ನಿಜಕ್ಕೂ ಅದ್ಭುತ .

ಪೆಪ್ಲಮ್ ಫಿನಿಶ್
ಹೆಚ್ಚಿನ ಗೌನ್‌ಗಳು ಪೆಪ್ಲಮ್ ಫಿನಿಶ್ ಅನ್ನು ಹೊಂದಿ ಆಕರ್ಷಕವಾಗಿದ್ದವು

ವ್ರಾಪ್ ಗೌನ್ಸ್
ಕಣ್ಮನ ಸೆಳೆಯುವ ವ್ರೇಪ್ ಗೌನ್‌ಗಳು ಕೂಡ ಪ್ರದರ್ಶನದ ಪ್ರಧಾನ ಆಕರ್ಷಣೆಯಾಗಿದ್ದವು.

ತೆಳು ಸೂಟ್ಸ್
ಪ್ರದರ್ಶನದಲ್ಲಿದ್ದ ತೆಳುವಾದ ಗೌನ್‌ಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.

ಪ್ಲಂಗಿಂಗ್ ನೆಕ್
ಕುತ್ತಿಗೆಯ ವಿನ್ಯಾಸದಲ್ಲಿ ಅಮಿತ್ ಅಗರ್‌ವಾಲ್ ಸಿದ್ಧಹಸ್ತರು ಈ ಪ್ಲಂಗಿಂಗ್ ನೆಕ್‌ಲೈನ್ ಕೂಡ ಆಕರ್ಷಕವಾಗಿದೆ.

3 ಡಿ ಆಭರಣ
ಇನ್ನು ರೂಪದರ್ಶಿಗಳು ಧರಿಸಿರುವ ಆಭರಣಗಳು ಆಕರ್ಷಕವಾಗಿದ್ದು 3 ಡಿ ಸ್ವರೂಪದಲ್ಲಿದ್ದವು.

ಕಿರೀಟಗಳು
ಇನ್ನು ಬುಡಕಟ್ಟು ಸಂಪ್ರದಾಯದ ಪ್ರತೀಕವಾಗಿ ಈ ಕಿರೀಟಗಳು ಅಮಿತ್ ಅವರ ಹೊಸ ಯೋಜನೆಯ ರುವಾರಿಯಾಗಿದೆ.



Click it and Unblock the Notifications
