Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮನೀಷ್ ವಿನ್ಯಾಸದ ಧಿರಿಸಿನಲ್ಲಿ ಸುಂದರಿ ಕಂಗನಾ
ಕಂಗನಾ ತನ್ನ ಹೊಸ ಮೂವಿ ಕ್ವೀನ್ ಪ್ರಮೋಷನ್‌ನಲ್ಲಿ ತುಂಬಾ ಸ್ಟೈಲಿಶ್ ಆಗಿ ಕಂಡುಬಂದರು. ಬರ್ಬಾರಿ ಔಟ್‌ಫಿಟ್‌ಗಳಲ್ಲಿ ತನ್ನ ಫ್ಯಾಶನ್ ಝಲಕ್ ತೋರಿಸುತ್ತಿದ್ದ ನಟಿ ತನ್ನ ಹೊಸ ಚಿತ್ರ ಕ್ವೀನ್ ಪ್ರಚಾರಕ್ಕಾಗಿ ಭಾರತೀಯ ಉಡುಗೆಯನ್ನು ಆಯ್ಕೆಮಾಡಿಕೊಂಡಿದ್ದಾರೆ.
ದುಬೈ ಮತ್ತು ಮುಂಬೈನಲ್ಲಿ ಗಿರ್ಲಿಶ್ ಫ್ರಾಕ್‌ನಲ್ಲಿ ಈ ಸುಂದರಿ ಎಲ್ಲರ ಚಿತ್ತ ಕದಡಿದ್ದರು. ಆದರೆ ಈ ಬಾರಿ ಮಾತ್ರ ಕಂಗನಾ ಅಪ್ಪಟ ದೇಸೀ ಸ್ಟೈಲನ್ನು ಆಯ್ಕೆಮಾಡಿಕೊಂಡಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪೀಟರ್ ಪೈಲಾಟ್ಟೊ ಡ್ರೆಸ್‌ನಲ್ಲಿ ಬೇಬೋ ಕರೀನಾ
ಈ ಹಿಂದೆ ಇಂಡಿಯಾಸ್ ಗೋಟ್ ಟ್ಯಾಲೆಂಟ್‌ನಲ್ಲಿ ಕಂಗನಾ ಮನೀಷ್ ವಿನ್ಯಾಸದ ಉಡುಗೆಯಲ್ಲಿ ಗೋಚರಿಸಿದ್ದು ನಮಗೆಲ್ಲಾ ತಿಳಿದಿರುವ ವಿಷಯ. ಮೆಹಬೂಬ್ ಸ್ಟುಡಿಯೋಸ್‌ನಲ್ಲಿ ಅದೇ ಫ್ಯಾಶನ್‌ನ ಸೂಟ್‌ನಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ.
ಬಿಳಿ ಮತ್ತು ಪಿಂಕ್ ಬಣ್ಣದ ಸೂಟ್‌ನಲ್ಲಿ ಗಮನಸೆಳೆದ ಗುಂಗುರು ಕೂದಲಿನ ಈ ಚೆಲುವೆ ಭಾರತೀಯ ನಂಬಿಕೆಯನ್ನು ಹೊರಸೂಸಲಿದ್ದಾರೋ ಎಂಬಂತೆ ತೋರಿ ಬಂದಿರುವರು. ಯಾವುದೇ ಮೇಕಪ್ ಇಲ್ಲದೆ ಈ ಚೆಲುವೆ ಸರಳತೆಯೇ ಮೈವೆತ್ತಂತೆ ತನ್ನ ಚಿತ್ರ ಪ್ರಚಾರದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮನೀಷ್ ಅರೋರಾ ವಿನ್ಯಾಸದ ಧಿರಿಸಿನಲ್ಲಿ ಚೆಲುವೆ ಕಂಗನಾ ಇನ್ನಷ್ಟು ಸುಂದರರಾಗಿದ್ದರು. ಅತಿ ಸರಳ ಸೂಟ್‌ಗಳಲ್ಲಿ ಮೇಕಪ್‌ರಹಿತರಾಗಿ ಕಂಡುಬಂದ ಚೆಲುವೆಯ ಕೆಲವೊಂದು ಕಣ್ಣಮಿಂಚುನೋಟಗಳು ಇದೋ ನಿಮಗಾಗಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹುಟ್ಟುಹಬ್ಬದ ವಿಶೇಷಕ್ಕಾಗಿ ರಿಹಾನ್ನ ಬಿಕಿನಿ ಶೋ

ಪಿಂಕ್ ಮತ್ತು ಬಿಳಿ ಸೂಟ್:
ಈ ಕಾರ್ಯಕ್ರಮದಲ್ಲಿ ಮನೀಷ್ ವಿನ್ಯಾಸದ ಪಿಂಕ್ ಮತ್ತು ಬಿಳಿ ಬಣ್ಣದ ಸೂಟ್ ಧರಿಸಿದ್ದರು ಕಂಗನಾ. ಬಿಳಿ ಬಣ್ಣದ ಕುರ್ತವು ಪಿಂಕ್ ಎಂಬ್ರಾಯಿಡರಿಯನ್ನು ಹೊಂದಿದೆ. ಪಿಂಕ್ ಮತ್ತು ಬಿಳಿ ಬಣ್ಣದ ದುಪ್ಪಟ್ಟಾವನ್ನು ಕಂಗನಾ ಧರಿಸಿದ್ದರು.

ಪಿಂಕ್ ಸ್ಯಾಂಡಲ್ಸ್:
ಈ ಧಿರಿಸಿನೊಂದಿಗೆ ಸುಂದರವಾಗಿರುವ ಪಿಂಕ್ ಸ್ಯಾಂಡಲ್ಸ್‌ಗಳನ್ನು ಕಂಗನಾ ತೊಟ್ಟಿದ್ದರು.

ಮೆಹಬೂಬ್ ಸ್ಟುಡಿಯೋದಲ್ಲಿ:
ಕಂಗನಾ ಮೆಹಬೂಬ್ ಸ್ಟುಡಿಯೋದಲ್ಲಿ ಕ್ವೀನ್ ಚಿತ್ರದ ಸಹನಟರಾದ ಲಿಸಾ ಹೈಡನ್ ಮತ್ತು ವಿಕಾಸ್ ಭಾಲ್‌ನೊಂದಿಗೆ ಜೊತೆಯಾಗಿ ಫೋಟ್‌ಗೆ ಪೋಸ್ ಕೊಟ್ಟಾಗ.

ಕಂಗನಾರ ಮುಂಚಿನ ಪೋಸ್:
ಹಿಂದಿನ ದಿನ ಮನೀಷ್ ಅರೋರಾ ವಿನ್ಯಾಸದ ಸೂಟ್‌ನಲ್ಲಿ ಕಂಗನಾ ಹೀಗೆ ಕಂಡುಬಂದರು. ನೀಲಿ, ಪಿಂಕ್ ಮತ್ತು ಹಳದಿ ಬಣ್ಣದ ಮಿಶ್ರಣವಾಗಿತ್ತು ಅವರು ಹಾಕಿಕೊಂಡ ಸಲ್ವಾರ್. ಇತ್ತೀಚೆಗೆ ತೊಟ್ಟುಕೊಂಡ ಸೂಟ್‌ಗಿಂತ ಇದು ಇನ್ನೂ ಚೆನ್ನಾಗಿತ್ತು.

ಇಂಡಿಯಾಸ್ ಗಾಟ್ ಟ್ಯಾಲೆಂಟ್:
ಮನೀಷ್ ಅರೋರಾ ವಿನ್ಯಾಸದ ಈ ಭಾರತೀಯ ಉಡುಗೆಯಲ್ಲಿ ಕಂಗನಾ ಇಂಡಿಯಾಸ್ ಗೋಟ್ ಟ್ಯಾಲೆಂಟ್ ಶೋನಲ್ಲಿ ಕಣ್ಸೆಳೆದರು.

ಹೋಲಿಕೆ:
ಇವೆರಡೂ ಉಡುಗೆಗಳನ್ನು ಹೋಲಿಸಿದಾಗ ಸ್ವಾಭಾವಿಕವಾಗಿ ಕಂಗನಾ ಕಂಡುಬಂದಿರುವುದು ಮೆಹಬೂಬ್ ಸ್ಟುಡಿಯೋದಲ್ಲಿ ಮಾತ್ರ.

ಪ್ರಚಾರ:
ಕಂಗನಾ ದುಬೈ ಮತ್ತು ಮುಂಬೈನಲ್ಲಿ ನಡೆದ ಕ್ವೀನ್ ಚಿತ್ರದ ಪ್ರಚಾರದಲ್ಲಿ ಒಂದೇ ರೀತಿಯ ಉಡುಗೆಯನ್ನು ತೊಟ್ಟಿದ್ದರು.



Click it and Unblock the Notifications
