Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಐಸಿಡಬ್ಲ್ಯೂ 2014: ರಿನಾ ಧಾಕಾ ಅವರ ಕಣ್ಮನ ಸೆಳೆಯುವ ಅತ್ಯದ್ಭುತ ಸಂಗ್ರಹ
ಐಸಿಡಬ್ಲ್ಯೂನ ಎರಡನೇ ದಿನದಂದು ರೀನಾ ಧಾಕಾ ಅತ್ಯದ್ಭುತ ಸಂಗ್ರಹವನ್ನು ಪ್ರದರ್ಶಿಸಿದ್ದಾರೆ. ಮುತ್ತಿನ ಎಂಬ್ಲಿಶ್‌ಮೆಂಟ್‌ಗಳನ್ನು ಬಳಸಿ ಅವರು ತಯಾರಿಸಿದ ಉಡುಗೆಗಳು ಮನಸೂರೆಗೊಳ್ಳುವಂತಿದ್ದವು.
ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಕೆಲವೊಂದು ವಿನ್ಯಾಸಗಳನ್ನು ಅವರು ತಮ್ಮ ವಿನ್ಯಾಸದ ಉಡುಗೆಗಳಲ್ಲಿ ತಂದಿದ್ದು ಇದೊಂದು ವಿಭಿನ್ನ ಸಂಗ್ರಹವಾಗಿದೆ ಎಂಬುದಂತೂ ನಿಜ.

ಡಬಲ್ ಶೋಸ್ಟೋಪರ್ಸ್
ಮಲೈಕಾ ಅರೋರಾ ಖಾನ್ ಮತ್ತು ನಿಮ್ರತ್ ಕೌರ್ ಈ ವಿನ್ಯಾಸಕಿಯ ಉತ್ತಮ ಸಂಗ್ರಹದ ನಿಲುವಂಗಿಯನ್ನು ತೊಟ್ಟಿದ್ದಾರೆ.

ರೀನಾ ಧಾಕಾರ ಸೀರೆ
ಐಸಿಡಬ್ಲ್ಯೂ 2014 ರಲ್ಲಿ ರೀನಾ ಧಾಕಾ ವಿನ್ಯಾಸದ ಹಾವಿನ ವಿನ್ಯಾಸವಿರುವ ಸೀರೆಯಲ್ಲಿ ಮಲೈಕಾ ಅರೋರಾ ಖಾನ್ ಮಂತ್ರಮುಗ್ಧಗೊಳಿಸುವಂತೆ ನಮ್ಮನ್ನು ಸೆಳೆದಿದ್ದಾರೆ .

ಮಲೈಕಾ ಆಭರಣಗಳು
ಎಸ್‌ಆರ್‌ಎಮ್ ಆಭರಣಗಳನ್ನು ಧರಿಸಿರುವ ಮಲೈಕಾ ಐಸಿಡಬ್ಲ್ಯೂ 2014 ರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.

ಕಣ್ಮನ ಸೆಳೆಯುವ ನೋಟ
ರೀನಾ ಧಾಕಾರೊಂದಿಗೆ ಹೆಜ್ಜೆ ಹಾಕಿರುವ ಈ ರೂಪದರ್ಶಿಗಳ ನೋಟವನ್ನು ನಿಮಗಿಲ್ಲಿ ನೋಡಬಹುದಾಗಿದೆ. ಆಕರ್ಷಕ ಬಣ್ಣಗಳು ಮತ್ತು ಭಾರವಾದ ಸೂಟ್‌ಗಳನ್ನು ಅವರಿಲ್ಲಿ ಧರಿಸಿದ್ದಾರೆ.

ಇತರ ಶೋಸ್ಟಾಪರ್: ನಿಮ್ರತ್ ಕೌರ್
ಐಸಿಡಬ್ಲ್ಯೂ 2014 ರಲ್ಲಿ ರೀನಾ ಧಾಕಾರ ಮತ್ತೊಬ್ಬ ಶೋಸ್ಟಾಪರ್ ನಿಮ್ರತ್ ಕೌರ್ ಆಗಿದ್ದಾರೆ. ಬೆಳ್ಳಿಯ ಹೊಳೆಯುವ ಚೋಲಿಯನ್ನು ಧರಿಸಿ ಕೆಂಪು ರಕ್ತವರ್ಣದ ಲೆಹೆಂಗಾವನ್ನು ಧರಿಸಿದ್ದಾರೆ.

ಹಿಂಭಾಗದ ನೋಟ
ರೀನಾ ಧಾಕಾರ ಔಟ್‌ಫೀಟ್‌ಗಳು ನಿಜಕ್ಕೂ ಅದ್ಭುತವಾಗಿರುತ್ತದೆ. ಈ ಕಪ್ಪು ಲೆಹೆಂಗಾದ ಹಿಂಭಾಗದ ನೋಟವನ್ನು ನೋಡಿ.

ಆಭರಣಗಳು
ಮುತ್ತಿನ ಆಭರಣಗಳನ್ನು ಧರಿಸಿ ಐಸಿಡಬ್ಲ್ಯೂ 2014 ರಲ್ಲಿ ರೀನಾ ಧಾಕಾರೊಂದಿಗೆ ಹೆಜ್ಜೆ ಹಾಕಿದ ರೂಪದರ್ಶಿಯರು.

ಕೆಂಪು ಧಿರಿಸಿನಲ್ಲಿ ಮಹಿಳೆ
ಹಾಫ್ ಸೀರೆಯಂತಹ ಗೌನ್‌ನಲ್ಲಿ ತನ್ನ ಸಪೂರ ಮೈಕಟ್ಟನ್ನು ಪ್ರದರ್ಶಿಸಿರುವ ಈ ಬೆಡಗಿ ನಿಜಕ್ಕೂ ಸುಂದರಿ.

ಸುಂದರ ಬಣ್ಣಗಳು
ಐಸಿಡಬ್ಲ್ಯೂ 2014 ರ ರಾಂಪ್‌ನಲ್ಲಿ ನಾವು ವೈವಿಧ್ಯಮಯ ಬಣ್ಣಗಳನ್ನು ನೋಡಿದ್ದೇವೆ. ಈ ಹಳದಿ ಬಣ್ಣದ ಲೆಹೆಂಗಾವಂತೂ ರೀನಾ ಧಾಕಾರ ಪ್ರತಿಭೆಗೆ ಹಿಡಿದ ಕೈಗನ್ನಡಿ ಎಂದೇ ಹೇಳಬಹುದು.

ಶೀರ್ ಕೂಡ ಪಟ್ಟಿಯಲ್ಲಿದೆ
ರೀನಾ ಧಾಕಾ ಸಂಗ್ರಹಣೆಯಲ್ಲಿ ಶೀರ್ ಕೂಡ ಇದೆ. ಈ ಉಡುಗೆ ಆಕೆಯದೇ ಸ್ವಂತ ರಚನೆಯಾಗಿದೆ.



Click it and Unblock the Notifications
