Latest Updates
-
ರಾಜಸ್ಥಾನ UCC: ಲಿವ್-ಇನ್ ಮತ್ತು ಮದುವೆ ಜೋಡಿಗಳೇ ಎಚ್ಚರ, ಈ ದಾಖಲೆಗಳು ಸಿದ್ಧವಿರಲಿ! -
ಮಳೆಗಾಲದ ಎಚ್ಚರಿಕೆ: ಅಪಾರ್ಟ್ಮೆಂಟ್ ಸೋರಿಕೆ ತಡೆಯಲು ಮತ್ತು ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಸರಳ ಉಪಾಯಗಳು -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ₹350 ಕ್ಕಿಂತ ಕಡಿಮೆ ವೆಚ್ಚದಲ್ಲಿ 7 ಹೈ-ಪ್ರೋಟೀನ್ ಬ್ರೇಕ್ಫಾಸ್ಟ್ ಐಡಿಯಾಗಳು! -
ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಹೊಸ ರೂಲ್ಸ್: PoP ಮೂರ್ತಿ ನಿಷೇಧ, ಅನುಮತಿ ಪಡೆಯುವುದು ಹೇಗೆ? -
ದೆಹಲಿ ಆರೆಂಜ್ ಅಲರ್ಟ್: ಮಳೆಯಲ್ಲಿ ಮನೆಯಲ್ಲೇ ಫಿಟ್ ಆಗಿರಲು ಈ 20 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಬ್ರೇಕಪ್ ನಂತರ ಸೋಶಿಯಲ್ ಮೀಡಿಯಾ: ನಿಮ್ಮ ಗೌಪ್ಯತೆ ಮತ್ತು ಕಾನೂನು ರಕ್ಷಣೆಗೆ ಈ ಟಿಪ್ಸ್ ಪಾಲಿಸಿ -
ಜನ್ಮಾಷ್ಟಮಿ ಉಪವಾಸ: ಹಬ್ಬದ ಸಂಭ್ರಮದ ನಡುವೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಕಜರಿ ತೀಜ್ 2026: ಉಪವಾಸದ ದಿನ ಆರೋಗ್ಯ ಮತ್ತು ಸಂಗಾತಿಯೊಂದಿಗೆ ಸುಗಮ ಸಂವಹನಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಇಂದೇ ಕೊನೆಯ ಅವಕಾಶ: ಎಲ್ಪಿಜಿ ಇ-ಕೆವೈಸಿ ಮಾಡದಿದ್ದರೆ ಸಿಲಿಂಡರ್ ದರ ಏರಿಕೆ ಖಚಿತ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆ ಬಜೆಟ್ ಉಳಿಸಿ, ಈರುಳ್ಳಿ ಇಲ್ಲದೆಯೂ ರುಚಿಕರ ಹೈ-ಪ್ರೋಟೀನ್ ಊಟ ಮಾಡಿ!
ಐಬಿಎಫ್‌ಡಬ್ಲ್ಯೂ 2014: ಸುನೀತ್ ವರ್ಮಾ ದಿರಿಸಿನಲ್ಲಿ ಕಂಗನಾ ರಾಣಾವತ್
ಐಬಿಎಫ್‌ಡಬ್ಲ್ಯೂ 2014 ಕೇವಲ ತಾರೆಯರಿಂದ ಮಾತ್ರವಲ್ಲದೆ ಹೆಚ್ಚಿನ ರೂಪದರ್ಶಿಗಳು ವೈವಿಧ್ಯಮಯ ಉಡುಗೆಗಳನ್ನು ತೊಟ್ಟು ಗಮನ ಸೆಳೆದರು. 2ನೇ ದಿನದಂದು, ಅದಿತಿ ರಾವ್ ಹೈದರಿ ಮತ್ತು ಆಲಿ ಫಜಲ್ ಅವರ ಕಣ್ಮನ ಸೆಳೆಯುವ ನೋಟವನ್ನು ಕಣ್ತುಂಬಿಕೊಂಡೆವು. ಮೂರನೇ ದಿನದಂದು ನರ್ಗೀಸ್ ಫಕ್ರಿ ಕೂಡ ಭಾಗವಹಿಸಿದ್ದರು. ಅಲ್ಲದೆ ಸುನೀತ್ ವರ್ಮಾ ಉಡುಗೆಗೆ ಹೆಜ್ಜೆ ಹಾಕಿದ ಕಂಗನಾ ರಾಣಾವತ್ ಅಂತೂ ಎಲ್ಲರನ್ನೂ ಮೋಡಿ ಮಾಡುವಂತಿದ್ದರು.
ಮೆರೂನ್ ಬಣ್ಣದ ಲೆಹೆಂಗಾ ಚೋಲಿಯಲ್ಲಿ ಕಂಗನಾ ಅದ್ಭುತ ಚೆಲುವೆಯಾಗಿ ಮೋಡಿ ಮಾಡಿದ್ದಾರೆ. ಈ ದಿರಿಸನ್ನು ವಿನ್ಯಾಸಗೊಳಿಸಿದ ಸುನೀತ್ ವರ್ಮಾ ನಿಜಕ್ಕೂ ಅಸದಳ ವಿನ್ಯಾಸಗಾರರಾಗಿದ್ದಾರೆ. ಲೆಹೆಂಗಾ ಸುಂದರವಾಗಿ ಆಕರ್ಷಕವಾಗಿತ್ತು. ಸಿಲ್ಕ್ ಲೆಹೆಂಗಾದಲ್ಲಿ ಚಿನ್ನದ ಚಿತ್ತಾರವು ಮೋಡಿ ಮಾಡುವಂತ್ತಿದ್ದು ಒಂದು ರೀತಿಯ ವಿಶಿಷ್ಟ ಆಕರ್ಷಣೆಯನ್ನು ಉತ್ಪತ್ತಿ ಮಾಡಿತ್ತು.

ಈ ಸುಂದರವಾದ ಮದುಮಗಳ ಉಡುಗೆಯಲ್ಲಿ ಕಂಗನಾ ಅಪ್ಸರೆಯಂತೆ ಝಗಮಗಿಸುತ್ತಿದ್ದರು. ಅವರು ಇಲ್ಲಿ ಧರಿಸಿರುವ ಲೆಹೆಂಗಾದ ಮೇಲುಡುಗೆ ವೆಲ್ವೇಟ್‌ನದ್ದಾಗಿದ್ದು ಚೆರ್ರಿ ಬಣ್ಣದಿಂದ ಕೂಡಿತ್ತು. ಜೊತೆಗೆ ಕಿರೀಟವನ್ನು ಧರಿಸಿ ಮೋಹಕ ನೋಟವನ್ನು ನೆರೆದ ಅಭಿಮಾನಿಗಳಿಗೆ ನೀಡಿದ್ದರು.
ಐಬಿಎಫ್‌ಡಬ್ಲ್ಯೂನ ಆಜ್ವಾದಲ್ಲಿ ಚಿನ್ನದ ಮನಮೋಹಕ ಪ್ರದರ್ಶನ
ಕಳೆದ ವರ್ಷ ಇಂಡಿಯನ್ ಬ್ರೈಡಲ್ ವೀಕ್‌ಗಾಗಿ ಕಂಗನಾ ವಲಯಾ ವಿನ್ಯಾಸದ ಉಡುಗೆಗೆ ಹೆಜ್ಜೆ ಹಾಕಿದ್ದರು. ಆದರೆ ಈ ಬಾರಿ ಸುನೀತ್ ವರ್ಮಾ ವಿನ್ಯಾಸಕ್ಕೆ ಅವರು ಹೆಜ್ಜೆ ಹಾಕಿದ್ದಾರೆ. ಈ ಬಾರಿಯ ವಿನ್ಯಾಸಗಳು ಮನಸೆಳೆಯುವಂತಿದ್ದು ಒಂದು ರೀತಿಯ ಸುಂದರತೆಯನ್ನು ಉಂಟುಮಾಡಿತ್ತು.
ಲೆಹೆಂಗಾದ ಸುಂದರ ವಿನ್ಯಾಸ ಮನಸೆಳೆಯುವಂತಿದ್ದು ಯಾವುದೇ ಮದುವಣಗಿತ್ತಿಗೂ ಅದ್ಭುತ ಎಂದೆನಿಸದೇ ಇರಲಾರದು. ಬಿಎಮ್‌ಡಬ್ಲ್ಯೂನ ಮೂರನೇ ದಿನ ಅತ್ಯದ್ಭುತವಾಗಿ ಸುಂದರವಾಗಿ ಮುಕ್ತಾಯವಾಯಿತು ಎಂದೇ ಹೇಳಬಹುದು.



Click it and Unblock the Notifications