Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಗೀಮಾ ಅವಾರ್ಡ್ಸ್ 2014: ಕಣ್ಮನ ಸೆಳೆದ ಶ್ರೇಯಾ
ತನ್ನ ಮಧುರವಾದ ಸಂಗೀತದ ಮೂಲಕ ಎಲ್ಲರ ಮನಸೊರೆಗೈದ ಶ್ರೇಯಾ ಘೋಶಲ್, ಇತ್ತೀಚೆಗೆ ನಡೆದ ಗೀಮಾ ಅವಾರ್ಡ್ಸ್ 2014 ನಲ್ಲಿ ಭಾರತೀಯ ಸಾಂಪ್ರದಾಯಿಕ ಸೀರೆಯಲ್ಲಿ ಇನ್ನಷ್ಟು ಕಂಗೊಳಿಸುತ್ತಿದ್ದರು.
ದಕ್ಷಿಣ ಭಾರತದ ಸುಂದರ ಬೆಡಗಿ ಶ್ರೇಯಾ ಘೋಶಲ್ ಹಸಿರು, ಹಾಗೂ ಕಪ್ಪು ಬಣ್ಣದ ಸೀರೆಯಲ್ಲಿ ಎಲ್ಲರ ಕಣ್ಮನ ಸೆಳೆದರು, ತನ್ನ ಮಧುರವಾದ ಕಂಠದಿಂದ ಎಲ್ಲರ ಮನಗೆದ್ದ ಚೆಲುವೆ ಶ್ರೇಯಾ ಇತ್ತೀಚೆಗೆ ನಡೆದ ಗೀಮಾ ಅವಾರ್ಡ್ಸ್ 2014ನಲ್ಲಿ ಸಖತ್ ಆಗಿ ಕಂಡುಬಂದರು.

ಈವೆಂಟ್‌ನಲ್ಲಿ ಕೇಂದ್ರಬಿಂದುವಾಗಿ ಕಂಡುಬರುತ್ತಿದ್ದ, ಶ್ರೇಯಾ, ತನ್ನ ಹಸಿರು ಬಣ್ಣದ ಸೀರೆಯಲ್ಲಿ ಇನ್ನಷ್ಟು ಆಕರ್ಷಣೆಯಾಗಿ ಕಾಣುತ್ತಿದ್ದರು. ಎಲ್ಲರನ್ನು ಒಂದು ಕ್ಷಣ ಸ್ತಬ್ಧಗೊಳಿಸುವಂತ ಕಪ್ಪು ಹಸಿರು ಮಿಶ್ರಿತ ಸೀರೆಯಲ್ಲಿ ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿದರು. ಒಟ್ಟಾರೆ ಸಾಂಪ್ರದಾಯಿಕ ಸೀರೆಯಲ್ಲಿ ಶ್ರೇಯಾ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗೀಮಾ ಅವಾರ್ಡ್ಸ್ 2014 ರಲ್ಲಿ ಮೋಹಕಿ ಸೋನಾಕ್ಷಿ ಸಿನ್ಹಾ
ಭಾರತೀಯ ಸುಂದರಿ ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವಾರು ಭಾರತೀಯ ಸೆಲೆಬ್ರಿಟಿಗಳು ಭಾಗವಹಿಸಿದರು. ಪ್ರತಿಯೊಬ್ಬರೂ ಬಾಲಿವುಡ್‌ನ ಗೌರವಯುತ ಅವಾರ್ಡ್‌ನಲ್ಲಿ ರಾತ್ರಿ ತಮ್ಮ ಪ್ರಸ್ತುತಿಯನ್ನು ಉಂಟುಮಾಡಲು ಬಯಸುತ್ತಿದ್ದಾರೆ. ಹಾಗಾಗಿ ಬೋಲ್ಡ್ ಸ್ಕೈ ಅದ್ಭುತ ಸುಂದರಿ ಶ್ರೇಯಾ ಘೋಶಲ್ ಅವರ ಸುಂದರ ಭಂಗಿಗಳನ್ನು ಇಲ್ಲಿ ನಾವು ನಿಮಗಾಗಿ ಸೆರೆಹಿಡಿದಿದ್ದೇವೆ.
ಈ ಹಸಿರು ಬಣ್ಣದ ಸೀರೆಗೆ ಮ್ಯಾಚ್ ಆಗುವ ಕಪ್ಪು ಬಣ್ಣದ ರವಿಕೆ ಹಾಗೂ ಕಿವಿಗೆ ಧರಿಸಿದ ಕಿವಿಯೋಲೆ ಅವರ ಅಂದವನ್ನು ಇನ್ನಷ್ಟು ಸುಂದರಗೊಳಿಸಿತು. ಗುಲಾಬಿ ಬಣ್ಣದ ತುಟಿರಂಗನ್ನು, ಇಳಿಬಿಟ್ಟಂತಹ ಗುಂಗುರು ಸ್ಟೈಲ್‌ನ ಕೇಶವಿನ್ಯಾಸವನ್ನು ಮಾಡಿರುವ ಶ್ರೇಯಾ ಗೀಮಾ ಅವಾರ್ಡ್ಸ್‌ನಲ್ಲಿ ತಮ್ಮ ಅಲಂಕಾರವನ್ನು ಚೊಕ್ಕವಾಗಿ ಪೂರ್ಣಗೊಳಿಸಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗೀಮಾ 2014: ಸೀರೆಯಲ್ಲಿ ಕಣ್ಸೆಳೆದ ಸನ್ನಿ ಲಿಯೋನ್
ದಕ್ಷಿಣ ಭಾರತದ ಸುಂದರ ಬೆಡಗಿ ಶ್ರೇಯಾ ಘೋಶಲ್ ಭಾರತೀಯ ಶೈಲಿಯಲ್ಲಿ ಉಡುಗೆಯಲ್ಲಿ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು. ಇನ್ನೂ ಅವರ ಕೇಶವಿನ್ಯಾಸಕ್ಕೆ ಬಂದರೆ ಇಳಿಬಿಟ್ಟಂತಹ ಗುಂಗುರು ಸ್ಟೈಲ್‌ನ ಕೂದಲು ಅವರನ್ನು ಇನ್ನಷ್ಟು ಕಂಗೊಳಿಸುವಂತೆ ಮಾಡಿತ್ತು.
ಲೈಟ್ ಆಗಿ ಕಣ್ಣಿಗೆ ಮೇಕಪ್ ಮಾಡಿರುವ ಶ್ರೇಯಾ, ಗುಲಾಬಿ ಬಣ್ಣದ ತುಟಿರಂಗನ್ನು ಹಾಕಿದ್ದರು, ಒಟ್ಟಾರೆಯಾಗಿ ಗೀಮಾ ಅವಾರ್ಡ್ಸ್ 2014 ನಲ್ಲಿ ಭಾರತೀಯ ಸಾಂಪ್ರದಾಯಿಕ ಸೀರೆಯಲ್ಲಿ ಶ್ರೇಯಾ ಇನ್ನಷ್ಟು ಕಂಗೊಳಿಸುತ್ತಿದ್ದರು.



Click it and Unblock the Notifications
