Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಗೀಮಾ 2014: ಸೀರೆಯಲ್ಲಿ ಕಣ್ಸೆಳೆದ ಸನ್ನಿ ಲಿಯೋನ್
ಗೀಮಾ ಅವಾರ್ಡ್ಸ್ 2014 ರೆಡ್ ಕಾರ್ಪೆಟ್ ಹೊಳಪಿನಿಂದ ಕೂಡಿದ್ದು ಅತ್ಯದ್ಭುತವಾಗಿದೆ. ಹಲವಾರು ಸೆಲೆಬ್ರಿಟಿಗಳು ಈ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಶ್ರೇಯಾ ಘೋಷಲ್‌ನಿಂದ ಹಿಡಿದು ಸನ್ನಿಲಿಯೋನ್‌ವರೆಗೆ ಎಲ್ಲರೂ ಮನತಣಿಸುವಂತೆ ಉಡುಗೆ ಧರಿಸಿ ಮೆಚ್ಚುಗೆ ಗಳಿಸಿದ್ದಾರೆ ಒಟ್ಟಾರೆಯಾಗಿ ಮೆಚ್ಚುಗೆ ಗಳಿಸಲು ಸೆಲೆಬ್ರಿಟಿಗಳು ಸಾಕಷ್ಟು ಪ್ರಯತ್ನಿಸಿದ್ದಾರೆ ಮತ್ತು ಅದರಲ್ಲಿ ಸಫಲರಾಗಿದ್ದಾರೆ.
ಇಲ್ಲಿ ನಾವು ಇಂದು ಹೇಳಹೊರಟಿರುವ ಗೀಮಾ ಅವಾರ್ಡ್ಸ್ ರೆಡ್ ಕಾರ್ಪೆಟ್ ಸುಂದರಿ ಸನ್ನಿ ಲಿಯೋನ್ ಕುರಿತಾಗಿದೆ. ರೋಹಿತ್ ವರ್ಮಾ ವಿನ್ಯಾಸದ ಕಪ್ಪು ಫ್ಯುಶನ್ ಸೀರೆಯಲ್ಲಿ ರೆಡ್ ಕಾರ್ಪೆಟ್ ಅನ್ನು ಸನ್ನಿ ಅಲಂಕರಿಸಿದರು. ಭಾರೀ ಮಿಂಚು ಬೊಟ್ಟುಗಳನ್ನು ಹೊಂದಿ ಕಣ್ಮನಸೆಳೆಯುವ ಸೀರೆಯಲ್ಲಿ ಸನ್ನಿ ಕಂಡುಬಂದರು.

ರೋಹಿತ್ ವರ್ಮಾ ವಿನ್ಯಾಸದ ಸೀರೆಯು ಅತ್ಯಾಕರ್ಷಕ ಲೇಸ್ ಫ್ರಿಲ್ ವರ್ಕ್‌ಗಳನ್ನು ಹೊಂದಿದ್ದು ಮಿಂಚು ಬೊಟ್ಟುಗಳ ಕರಾಮತ್ತಿನಿಂದ ಇನ್ನಷ್ಟು ಕಂಗೊಳಿಸಿದೆ. ಈ ಸಾರಿ ಗೌನ್ ಗಾಥಿಕ್ ಆಗಿದೆ. ಹೊಳೆಯುವ ಬೊಟ್ಟುಗಳನ್ನು ಹೊಂದಿರುವ ಕಪ್ಪು ಬಣ್ಣದ ಲೇಸ್ ಸೀರೆಗೆ ಸರಿಹೊಂದುವ ಕಪ್ಪು ಮತ್ತು ಗಾಢ ವರ್ಣದ ಮಿಂಚು ಬೊಟ್ಟಿನ ರವಿಕೆಯನ್ನು ಸನ್ನಿ ತೊಟ್ಟಿದ್ದಾರೆ.
ರವಿಕೆಯು ತೋಳಿಲ್ಲದ ಮಾದರಿಯಲ್ಲಿದ್ದು ಸೀರೆಯಲ್ಲಿ ಮಾಡಿರುವ ವಿನ್ಯಾಸವನ್ನು ಕಂಗೊಳಿಸುವಂತೆ ಮಾಡಿದೆ. ಸೀರೆಯ ಕೆಳಭಾಗದ ಫ್ರಿಲ್ ವರ್ಕ್ ಗತ್ತಿನಿಂದ ಕೂಡಿದ್ದು, ಇದನ್ನು ಧರಿಸಿದ ಸನ್ನಿಗೆ ಜಂಭ ಪಡುವಂತೆ ಮಾಡಿದೆ.
ರೋಹಿತ್ ವರ್ಮಾ ವಿನ್ಯಾಸದ ಸೀರೆಯು ಸನ್ನಿಯ ಸೆಕ್ಸಿ ದೇಹವನ್ನು ಅಂದವಾಗಿ ಅಪ್ಪಿಕೊಂಡಿದೆ ಎಂದೇ ಹೇಳಬಹುದು. ಏಕೆಂದರೆ ಸೀರೆಯು ಅವರಿಗಾಗಿಯೇ ರಚಿತವಾಗಿದೆ ಎಂಬಂತೆ ಅದ್ಭುತವಾಗಿ ಸನ್ನಿಕಂಡುಬಂದಿದ್ದಾರೆ. ಆಕೆಯ ಬೋಲ್ಡ್ ಮತ್ತು ಗಾಥಿಕ್ ಸಮ್ಮಿಶ್ರಿತ ಲುಕ್‌ಗೆ ಸರಿಹೊಂದುವಂತೆ ಆಕೆ ಧರಿಸಿದ ಆಭರಣ ಸರಿಸಾಟಿಯಾಗಿದೆ. ಗೀಮಾ ಅವಾರ್ಡ್ಸ್ 2014 ರಲ್ಲಿ ಆಕೆ ಧರಿಸಿದ ವಜ್ರದ ಕಟ್ಟುಳ್ಳ ಮಾರಿಗೋಲ್ಡ್ ವಾಚ್ ಸುಂದರವಾಗಿದೆ.
ಸನ್ನಿ ಮಾಡಿಕೊಂಡ ಗಾಢ ಕಪ್ಪು ವರ್ಣದ ಮೇಕಪ್ ಆಕೆಯ ದೊಡ್ಡ ಕಣ್ಣುಗಳಿಗೆ ಸುಂದರವಾಗಿ ತೋರುತ್ತಿದೆ. ತುಟಿಗೆ ಹಚ್ಚಿರುವ ಪಿಂಕ್ ಬಣ್ಣದ ಲಿಪ್‌ಸ್ಟಿಕ್, ಮುಖಕ್ಕೆ ತೆಳುವಾಗಿ ಮಾಡಿಕೊಂಡ ಮೇಕಪ್ ಒಂದೇ ಕಡೆಗೆ ತುರುಬಿ ಕಟ್ಟಿಕೊಂಡು ಮಾಡಿದ ಬನ್ ಕೇಶವಿನ್ಯಾಸ ಅಬ್ಬಾ! ನಿಜವಾಗಿಯೂ ಸನ್ನಿ ಬಣ್ಣಿಸಲು ಸಾಧ್ಯವಾಗದಂತೆ ಕಂಡುಬರುತ್ತಿದ್ದಾರೆ.
ಗೀಮಾ ಅವಾರ್ಡ್ಸ್ 2014 ರ ರೆಡ್ ಕಾರ್ಪೆಟ್ ಅಂಗಣವನ್ನು ಸನ್ನಿ ಎಂಬ ರಾಜಕುವರಿ ಅತ್ಯದ್ಭುತಗೊಳಿಸಿದ್ದಾರೆ. ಆಕೆಯ ಬಳ್ಳಿಯಂತಿರುವ ಮೈಮಾಟವನ್ನು ರೋಹಿತ್ ವರ್ಮಾ ವಿನ್ಯಾಸದ ಸೀರೆಯು ಆಕರ್ಷಕವಾಗಿ ಮಾಡಿದೆ.
ಆಕೆಯ ಪತಿ ಡೇನಿಯಲ್ ವೆಬರ್ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದು ಕಪ್ಪು ಬಣ್ಣದ ಧಿರಿಸಿನಲ್ಲಿ ಕಂಡುಬಂದರು. ಕಪ್ಪು ಬಣ್ಣದ ಶರ್ಟ್ ಹಾಗೂ ಅದಕ್ಕೊಪ್ಪುವ ಅದೇ ಬಣ್ಣದ ಪ್ಯಾಂಟ್ ಡೇನಿಯಲ್ ಉಡುಗೆಯಾಗಿತ್ತು. ಅಂತೂ ಇಂತೂ ಈ ಜೋಡಿ ಗೀಮಾ ಅವಾರ್ಡ್ಸ್‌ನಲ್ಲಿ ಮನಮೋಹಕವಾಗಿ ಕಂಡುಬಂದರು.



Click it and Unblock the Notifications
