Latest Updates
-
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ?
ಮಿಯು ಮಿಯು ನಿಲುವಂಗಿಯಲ್ಲಿ ಅತ್ಯದ್ಭುತ ಚೆಲುವೆ ಫ್ರೀಡಾ ಪಿಂಟೋ
ಫ್ರೀಡಾ ಪಿಂಟೋರ ಸ್ಟೈಲ್ ಅನ್ನು ವಿವರಿಸುವುದೆಂತು? ಇವರು ಒಬ್ಬ ಹಾಟ್ ನಟಿಯಾಗಿದ್ದು ಮೈ ಬಿಸಿಯನ್ನು ಇನ್ನಷ್ಟು ತೀಕ್ಷ್ಣಗೊಳಿಸುವ ಚೆಲುವೆ. ಮಿಯು ಮಿಯು ರೆಸಾರ್ಟ್ ಪ್ರಸ್ತುತಿ ಕಾರ್ಯಕ್ರಮದಲ್ಲಿ ನಾವಂತೂ ಫ್ರೀಡಾರ ಅಂದವನ್ನು ನೋಡಿ ಮೈ ಮರೆತಿದ್ದೇವೆ. ತಮ್ಮ ಆಗಮನದಿಂದ ಮಿಂಚಿನ ಸಂಚಾರವನ್ನು ಉಂಟುಮಾಡಿರುವ ಈ ನಟಿ ಮುದ್ದಾಗಿ ಕಾಣುತ್ತಿದ್ದರು.
ಕೇನ್ಸ್ 2014 ರ ನಂತರ, ಫ್ರೀಡಾರ ಹಲವಾರು ಸಂಖ್ಯೆಯ ಸ್ಟೈಲ್ ಅನ್ನು ನಾವು ನೋಡಿದ್ದೇವೆ. ಕೇನ್ಸ್ ಕೆಂಪು ಹಾಸಿನಲ್ಲಿ ಫ್ರೀಡಾ ಹೆಜ್ಜೆ ಇರಿಸುತ್ತಿದ್ದಾಗ ಅವರಿಂದ ಕಣ್ಣು ಕೀಳದಷ್ಟು ಸುಂದರತೆಯನ್ನು ನಾವು ನೋಡಿದ್ದೇವೆ.
ಅದಾಗ್ಯೂ ಮಿಯು ಮಿಯು ರೆಸಾರ್ಟ್ ಕಾರ್ಯಕ್ರಮದಲ್ಲಿ ಫ್ರೀಡಾ ಇನ್ನಷ್ಟು ಅಂದಗಾತಿಯಾಗಿದ್ದರು. ಆಕೆಯ ಮಿಯು ಮಿಯು ದಿರಿಸು ಗಾಢವಾಗಿದ್ದು ಮತ್ತು ಕಣ್ಣಿಗೆ ರಾಚುವಂತಿತ್ತು, ಅಲ್ಲದೆ ಫ್ರೀಡಾ ಇನ್ನಷ್ಟು ಸುಂದರಿಯಾಗಿ ಕಾಣಿಸುತ್ತಿದ್ದರು. ಸಮಾರಂಭಕ್ಕೆ ಸೂಕ್ತವಾಗಿ ಪರ್ಫೆಕ್ಟ್ ಆಗಿ ಡ್ರೆಸ್ ಮಾಡಿಕೊಂಡು ಬಂದಂತೆ ಅವರು ಕಾಣುತ್ತಿದ್ದರು.

ಅನುಪಮಾ ಸ್ಕರ್ಟ್‌ನಲ್ಲಿ ಸುಂದರಿ ಕರೀನಾ ಕಪೂರ್
ಸುಂದರವಾದ ನೇವಿ ಬ್ಲ್ಯೂ ಬಣ್ಣದ ಮಿಯು ಮಿಯು ನಿಲುವಂಗಿಯನ್ನು ತೊಟ್ಟಿದ್ದ ಫ್ರೀಡಾ ದಿರಿಸಿನಲ್ಲಿ ಸಿಲ್ವರ್ ಚುಕ್ಕಿಗಳನ್ನು ಹೊಂದಿದ್ದರು. ಆಕೆಯ ಸಪೂರ ಕಾಲುಗಳನ್ನು ಚೆನ್ನಾಗಿಯೇ ತೋರಿಸಿರುವ ಈ ಮೊಣಕಾಲು ಉದ್ದದ ಅಂಗಿ ಅವರಿಗೆ ಹೇಳಿ ಮಾಡಿಸಿದಂತಿತ್ತು.
ಕೇನ್ಸ್ 2014ರಲ್ಲಿ ಈ ಸುಂದರಿ ಧರಿಸಿದ್ದ ಹಲವಾರು ಉಡುಗೆಗಳಿಂದ ಪ್ರತ್ಯೇಕವಾಗಿ ಈ ದಿರಿಸು ಕಂಡುಬಂದಿದೆ. ನೇವಿ ಬ್ಲ್ಯೂ ಬಣ್ಣದ ಈ ಮಿಯು ಮಿಯು ದಿರಿಸು ಫ್ರೀಡಾರ ಮೇಲೆ ಜಾದೂವನ್ನುಂಟು ಮಾಡಿದೆ ಎಂದೇ ಹೇಳಬಹುದು.
ಮಿಯು ಮಿಯು ಚಪ್ಪಲಿಗಳನ್ನು ಧರಿಸಿರುವ ಫ್ರೀಡಾ ಕಪ್ಪು ಪರ್ಸ್ ಅನ್ನು ತಮ್ಮ ಕೈಲ್ಲಿ ಹಿಡಿದುಕೊಂಡಿದ್ದಾರೆ. ಮಿಯು ಮಿಯು ಬ್ರ್ಯಾಂಡ್ ಅನ್ನು ಫ್ರೀಡಾ ಪ್ರದರ್ಶಿಸುತ್ತಿರುವಂತೆ ಇಲ್ಲಿ ಈ ಚೆಲುವೆ ಕಂಡುಬಂದಿದ್ದಾರೆ. ಆಕೆಯ ಸಹಜ ಸೌಂದರ್ಯಕ್ಕಿಂತಲೂ ಆಕೆ ಮಾಡಿಕೊಂಡಿರುವ ಗಾಢ ಮೇಕಪ್ ಇಲ್ಲಿ ಕೊಂಚ ಢಾಳಾಗಿ ಕಂಡುಬಂದಿದೆ. ಮಿಯು ಮಿಯು ದಿರಿಸಿನೊಂದಿಗೆ ಅವರು ಕನಿಷ್ಟ ಆಭರಣಗಳನ್ನು ಧರಿಸಿದ್ದರಂತೂ ಅದು ಇನ್ನೂ ಚೆನ್ನಾಗಿ ತೋರುತ್ತಿತ್ತು ಎಂಬುದು ನಮ್ಮ ಅಭಿಪ್ರಾಯವಾಗಿದೆ.



Click it and Unblock the Notifications
