Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಫಿಲ್ಮ್ ಫೇರ್ ಅವಾರ್ಡ್ಸ್ ಮಿಂಚಿದ ಸೆಲೆಬ್ರಿಟಿಗಳು
ಪಸ್ತುತ ಖುತುವಿನಲ್ಲಿ ಅವಾರ್ಡ್ಸ್ ಸೀಸನ್ ಅತ್ಯಂತ ಸೊಗಸಾಗಿ ಮೂಡಿಬಂತು. ಹೊಸ ವರುಷದ ಪ್ರಾರಂಭದ ದಿನದಲ್ಲೇ ಹಲವಾರು ಬಾಲಿವುಡ್ ಹಾಗೂ ಹಾಲಿವುಡ್ ಸೆಲೆಬ್ರಿಟಿಗಳು, ಈವೆಂಟ್‌ನಲ್ಲಿ ಬ್ಯೂಸಿಯಾಗಿ ಹೋಗಿದ್ದರು. ಗೋಲ್ಡನ್ ಗ್ಲೋಬ್ಸ್ ಹಾಗೂ ಸ್ಕ್ರೀನ್ ಅವಾರ್ಡ್ಸ್ 2014, ನಂತರ ಈಗ ಪ್ರಸಿದ್ದ ಫಿಲ್ಮ್ ಫೇರ್ ಅವಾರ್ಡ್ಸ್ ಅನ್ನು ಸ್ವಾಗತಿಸುವ ಸಮಯ ಹತ್ತಿರವಾಗಿದೆ.
ಫಿಲ್ಮ್ ಫೇರ್ ಫ್ರೀ- ಅವಾರ್ಡ್ಸ್ ನಾಮೀನೇಶನ್ಸ್ ಪಾರ್ಟಿ ಇತ್ತೀಚೆಗೆ ನಡೆಯಿತ್ತು, ಹಲವಾರು ಸೆಲೆಬ್ರಿಟಿಗಳು ಈ ಈವೆಂಟ್‌ನಲ್ಲಿ ಸಾಕ್ಷಿಯಾದರು. ದೀಪಿಕಾ ಪಡುಕೋಣೆ ಅವರಿಂದ ಹಿಡಿದು, ಸ್ಟೈಲೀಶ್ ಕಿಂಗ್ ಸೋನಮ್ ಕಪೂರ್‌ವರೆಗೆ ತಾರೆಗಳ ಮಹಾಪೂರವೇ ಹರಿದಿತ್ತು.
ರೆಡ್ ಕಾರ್ಪೆಟ್‌ನಲ್ಲಿ ಸೆಲೆಬ್ರಿಟಿಗಳು ತನ್ನ ವಿಭಿನ್ನ ಶೈಲಿಯ ಉಡುಗೆಯಲ್ಲಿ ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿದರು. ಬನ್ನಿ ಈವೆಂಟ್‌ನಲ್ಲಿ ಭಾಗವಹಿಸಿದ ಕೆಲವೊಂದು ಸೆಲೆಬ್ರಿಟಿಗಳನ್ನು ನೋಡಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೆಕ್‌ಕ್ವೀನ್ ಡ್ರೆಸ್‌ನಲ್ಲಿ ಮಿಂಚಿದ ದೀಪಿಕಾ

ದೀಪಿಕಾ ಪಡುಕೋಣೆ:
ತಮ್ಮ ಮೈಕಟ್ಟು ಮತ್ತು ದೇಹಸೌಂದರ್ಯಕ್ಕೆ ಹೊಂದುವಂತಹ ಉಡುಗೆಯನ್ನೇ ಅವರು ತೊಡುವುದರಿಂದ ಅವರು ಹೋದಲ್ಲೆಲ್ಲಾ ಅವರ ವ್ಯಕ್ತಿತ್ವ ಎದ್ದುಕಾಣುತ್ತದೆ ಮತ್ತು ಅದು ಸುದ್ದಿಯಾಗುತ್ತದೆ. ಫಿಲ್ಮ್ ಫೇರ್ ಫ್ರೀ- ಅವಾರ್ಡ್ಸ್ ನಾಮೀನೇಶನ್ಸ್ ಪಾರ್ಟಿ 2014 ನಲ್ಲಿ ತನ್ನ ವಿಭಿನ್ನ ಶೈಲಿಯ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದರು.

ಸೋನಮ್ ಕಪೂರ್:
ಫಿಲ್ಮ್ ಫೇರ್ ಫ್ರೀ- ಅವಾರ್ಡ್ಸ್ ನಾಮೀನೇಶನ್ಸ್ ಪಾರ್ಟಿ 2014 ನಲ್ಲಿ ಮೊದಲ ಬಾರಿ ರೆಡ್ ಕಾರ್ಪೆಟ್‌ನಲ್ಲಿ ಕಂಡುಬಂದ ಸೋನಮ್ ತನ್ನ ಸ್ಟೈಲೀಶ್ ಲುಕ್‌ನಲ್ಲಿ ಎಲ್ಲರ ಮನ ಸೊರೆಗೈದರು.

ಶ್ರುತಿ ಹಾಸನ್:
ಫಿಲ್ಮ್ ಫೇರ್ ಫ್ರೀ- ಅವಾರ್ಡ್ಸ್ ನಾಮೀನೇಶನ್ಸ್ ಪಾರ್ಟಿ 2014 ನಲ್ಲಿ ಗೌನ್‌ನ ಬಣ್ಣವು ಅನನ್ಯವಾಗಿದ್ದು ಶ್ರುತಿಯನ್ನು ಇನ್ನಷ್ಟು ಸುಂದರವಾಗಿಸಿದೆ. ಅವರ ಉಡುಗೆಯಲ್ಲಿರುವ ಪಾರದರ್ಶಕ ಲೇಸ್ ಮೋಹಕವಾಗಿದ್ದು ಗೌನ್‌ಗೆ ಸುಂದತೆಯನ್ನು ನೀಡಿದೆ. ಉಡುಗೆಗೆ ಸಮನಾದ ಕಪ್ಪು ಫ್ಲೋರಲ್ ಕಿವಿಯಾಭರಣಗಳನ್ನು ಶ್ರುತಿ ಧರಿಸಿದ್ದು ಅವರ ತುಟಿಯ ಕೆಂಪು ರಂಗು ಢಾಳವಾಗಿ ಕಂಡುಬರುತ್ತಿದೆ. ಈ ಸುಂದರ ಉಡುಗೆಗೆ ಕಪ್ಪು ಚುಕ್ಕೆ ಎಂದರೆ ಬನ್ ರೀತಿಯಲ್ಲಿ ತುರುಬು ಕಟ್ಟಿದ ಕೇಶವಿನ್ಯಾಸವು ಉಡುಗೆಗೆ ಅಷ್ಟಾಗಿ ಚೆನ್ನಾಗಿ ಹೊಂದಿಕೆಯಾಗುತ್ತಿಲ್ಲ ಎಂಬುದಾಗಿದೆ.

ಕಾಜಲ್ ಅಗರ್‌ವಾಲ್:
ಫಿಲ್ಮ್ ಫೇರ್ ಫ್ರೀ- ಅವಾರ್ಡ್ಸ್ ನಾಮೀನೇಶನ್ಸ್ ಪಾರ್ಟಿ 2014 ನಲ್ಲಿ ತುಂಡು ಉಡುಗೆಯಲ್ಲಿ ಕಂಡುಬಂದ ಕಾಜಲ್ ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿದರು. ಕಪ್ಪು ಬಣ್ಣದ ತುಂಡು ಉಡುಗೆಯನ್ನು ಧರಿಸಿರುವ ಕಾಜಲ್, ತನ್ನ ನಗು ಮುಖದಿಂದ ಎಲ್ಲರ ಮನಗೆದ್ದರು.

ಸೊನಾಲ್ ಚೌವಾನ್:
ಫಿಲ್ಮ್ ಫೇರ್ ಫ್ರೀ- ಅವಾರ್ಡ್ಸ್ ನಾಮೀನೇಶನ್ಸ್ ಪಾರ್ಟಿ 2014 ನಲ್ಲಿ ಸೊನಾಲ್ ಚೌವಾನ್ ಸ್ಯಾಟಿನ್ ಲೈಟ್ ಗ್ರೀನ್ ಬಣ್ಣದ ಕಾಕ್‌ಟೇಲ್ ಡ್ರೆಸ್‌ನಲ್ಲಿ ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿದರು.

ಶ್ರದ್ಧಾ ಕಪೂರ್:
ಫಿಲ್ಮ್ ಫೇರ್ ಫ್ರೀ- ಅವಾರ್ಡ್ಸ್ ನಾಮೀನೇಶನ್ಸ್ ಪಾರ್ಟಿ 2014 ನಲ್ಲಿ ಶ್ರದ್ಧಾ ಕಪೂರ್ ತನ್ನ ಕ್ರಿಮೀ ವೈಟ್ ಡ್ರೆಸ್‌ನಲ್ಲಿ ಇನ್ನಷ್ಟು ಕಂಗೊಳಿಸಿದರು.



Click it and Unblock the Notifications
