Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫಿಲ್ಮ್ ಫೇರ್ ಅವಾರ್ಡ್‌ನಲ್ಲಿ ಕಣ್ಮನ ಸೆಳೆದ ಉಡುಗೆಗಳು
59 ನೇ ಫಿಲ್ಮ್‌ಫೇರ್ ಅವಾರ್ಡ್ ಇದೇ ಜನವರಿ 24 ರಂದು ನಡೆಯಲಿದೆ. 1954 ರಲ್ಲಿ ಪ್ರಾರಂಭಗೊಂಡಿರುವ ಫಿಲ್ಮ್‌ಫೇರ್ ಅವಾರ್ಡ್ ಪುರಾತನ ಹಾಗೂ ಗೌರವಯುತವಾದ ಪ್ರಶಸ್ತಿಯಾಗಿದೆ . ಪ್ರತೀ ವರ್ಷದಂತೆ ಈ ಬಾರಿಯೂ ಮನಸೂರೆಗೊಳ್ಳುವ ಕಣ್ಮನಸೆಳೆಯುವ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಅನ್ನು ಅಲಂಕರಿಸಲಿದ್ದಾರೆ. ಒಂದು ರೀತಿಯಲ್ಲಿ ಈ ರೆಡ್ ಕಾರ್ಪೆಟ್ ಫ್ಯಾಶನ್ ಲೋಕದ ಹೊಸ ಹೊಸ ಮೈಲುಗಲ್ಲನ್ನು ಪ್ರತೀ ವರ್ಷ ತೋರಿಸುತ್ತಿದೆ.
ಫಿಲ್ಮ್‌ಫೇರ್ ಅವಾರ್ಡ್‌ನ ರೆಡ್ ಕಾರ್ಪೆಟ್ ಒಂದು ಮಿಶ್ರಣವಿದ್ದಂತೆ. ಭಾರತೀಯ ಹಾಗೂ ವಿದೇಶಿ ಧಿರಿಸುಗಳನ್ನು ತೊಟ್ಟ ಸುಂದರಿಯರು ರೆಡ್ ಕಾರ್ಪೆಟ್‌ನ ಮೇಲೆ ನಡೆಯಲಿದ್ದು, ಸ್ಟೈಲಿಶ್ ಆಗಿ ಕಾಣುವಂತೆ ವಿಧ ವಿಧ ಧಿರಿಸುಗಳು ಹಾಗೂ ಸುಂದರ ಮೇಕಪ್‌ಗಳೊಂದಿಗೆ ಫಿಲ್ಮ್‌ಫೇರ್‌ನ ವೈಭವ ಹೆಚ್ಚಿಸಲಿದ್ದಾರೆ.
ತಮ್ಮ ಉತ್ತಮ ಉಡುಗೆಗಳೊಂದಿಗೆ ನಮ್ಮ ಮನಸ್ಸಿಗೆ ಮುದ ನೀಡುವ ಹಲವಾರು ಸೆಲೆಬ್ರಿಟಿಗಳ ಪಟ್ಟಿ ಪ್ರತೀ ವರ್ಷದಂತೆ ಈ ವರ್ಷವೂ ಸಿದ್ಧಗೊಳ್ಳಲಿದೆ. ವಿಶ್ವಸುಂದರಿ ಐಶ್ವರ್ಯ ರೈ ನಿಂದ ಹಿಡಿದು ಅದ್ಭುತ ಪ್ರತಿಭಾವಂತೆ ದೀಪಿಕಾ ಪಡುಕೋಣೆವರೆಗೂ ನಟೀಮಣಿಯರು ಈ ಕೆಂಪು ಹಾಸನ್ನು ತಮ್ಮ ಸುಂದರ ಉಡುಗೆಗಳಿಂದ ಆಳಿದ್ದಾರೆ.
59ನೇ ಫಿಲ್ಮ್‌ಫೇರ್ ಅವಾರ್ಡ್ ಜನವರಿ 2014 ರಂದು ನಡೆಯಲಿದೆ. ದೀಪಿಕಾ ಪಡುಕೋಣೆಯಂತಹ ಅತ್ಯದ್ಭುತ ಪ್ರತಿಭಾವಂತೆಗೆ ಮತ್ತು ಇನ್ನಿತರರಿಗೆ ಇದೊಂದು ವಿಶೇಷ ಕಾರ್ಯಕ್ರಮ. ಸೆಲೆಬ್ರಿಟಿಗಳು ಯಾವ ಉಡುಗೆಗಳನ್ನು ಧರಿಸಿ ರೆಡ್ ಕಾರ್ಪೆಟ್ ಅನ್ನು ವರ್ಣರಂಜಿತಗೊಳಿಸಲಿದ್ದಾರೆ ಎಂಬ ಕುತೂಹಲ ನಮ್ಮಲ್ಲಿದೆ. ಈ ಹಿಂದೆ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ಧಿರಿಸು ಧರಿಸಿದ ಸೆಲೆಬ್ರಿಟಿಗಳ ವಿಶೇಷ ಝಲಕ್ ಇಲ್ಲದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಚ್ ಬಲಿಯೇ 6 ನಲ್ಲಿ ಶಿಲ್ಪಾ ಶೆಟ್ಟಿ

ದೀಪಿಕಾ ಪಡುಕೋಣೆ 2013 ರ ಫಿಲ್ಮ್‌ಫೇರ್‌ನಲ್ಲಿ
ಫಿಲ್ಮ್‌ಫೇರ್ ಅವಾರ್ಡ್ಸ್ 2013 ರ ರೆಡ್ ಕಾರ್ಪೆಟ್ ಅನ್ನು ದೀಪಿಕಾ ಪಡುಕೋಣೆ ತಮ್ಮ ಕಪ್ಪು ಬಣ್ಣದ ಪ್ರಾಬೆಲ್ ಗುರಂಗ್ ಗೌನ್‌ನಲ್ಲಿ ಅಲಂಕರಿಸಿದರು. ಇದೊಂದು ಬೋಲ್ಡ್ ಹಾಗೂ ಅತ್ಯುತ್ತಮ ಧಿರಿಸೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

2013 ರ ಫಿಲ್ಮ್‌ಫೇರ್‌ನಲ್ಲಿ ಸುಂದರಿ ಪರಿಣೀತಿ ಚೋಪ್ರಾ
ಪರೀಣಿತಿ ಧರಿಸಿದ ಮೆಶ್ ನೆಕ್ ಉಳ್ಳ ಕಪ್ಪು ರಜತ್ ತಂಗಾರಿ ಗೌನ್ ಮಧ್ಯ ಭಾಗದಲ್ಲಿ ಸ್ಲಿಟ್‌ನೊಂದಿಗೆ ಸುಂದರಗೊಂಡಿದೆ. ಈ ಧಿರಿಸು ಪರಿಣೀತಿಗೆ ಸುಂದರವಾಗಿ ಕಾಣುತ್ತಿದೆ.

ಅದ್ಭುತ ಸುಂದರಿ ಇಲಿಯಾನಾ ಡಿಕ್ರೂಸ್ 2013 ರಲ್ಲಿ
ಫಿಲ್ಮ್‌ಫೇರ್ 2013 ರಲ್ಲಿ ಇಲಿಯಾನಾ ಇನ್ನಷ್ಟು ಸುಂದರವಾಗಿದ್ದರು. ರೊಬಾರ್ಟೊ ಕವಾಲ್ಲಿ ಸುಂದರ ಗೌನ್ ಮಿನುಗು ಬೊಟ್ಟು, ಡೀಪ್ ಪ್ಲಂಗಿಂಗ್ ನೆಕ್‌ಲೈನ್‌ನೊಂದಿಗೆ ವೈಭವೋಪೇತವಾಗಿದೆ.

ಕಣ್ಮನಸೆಳೆದ ಯಾಮಿ ಗೌತಮ್
ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮವಾದ ಉಡುಗೆ ಯಾಮಿ ಗೌತಮ್‌ನದಾಗಿತ್ತು. ಫ್ರಿಲ್ ಹೊಂದಿರುವ ನ್ಯೂಡ್ ಬಣ್ಣದ ತರುಣ್ ತಹಿಲಾನಿ ಗೌನ್ ಅನ್ನು ಯಾಮಿ ಧರಿಸಿದ್ದರು.

ಗೋಡ್ಜಿಯಸ್ ಪ್ರಿಯಾಂಕ ಚೋಪ್ರಾ
ಬಾಲಿವುಡ್‌ನ ಬೇಡಿಕೆಯ ನಡಿ ಪ್ರಿಯಾಂಕ. 2013 ರ ಫಿಲ್ಮ್‌ಫೇರ್‌ನಲ್ಲಿ ಅತ್ಯದ್ಭುತವಾಗಿ ಪಿಗ್ಗಿ ಕಂಡುಬಂದರು. ಸಿಲ್ಕ್ ಅರ್ಮಾನಿ ತೋಳಿಲ್ಲದ ಗೌನ್ ಪ್ರಿಯಾಂಕ ಉಡುಗೆಯಾಗಿತ್ತು.

ಸುಂದರ ಗೌನ್‌ನಲ್ಲಿ ಆಲಿಯಾ ಭಟ್
ಮನೀಷ್ ಮಲ್ಹೋತ್ರಾ ವಿನ್ಯಾಸದ ಲೆಹಂಗಾದಲ್ಲಿ ಆಲಿಯಾ 2013 ರ ಫಿಲ್ಮ್‌ಫೇರ್‌ನಲ್ಲಿ ಮಿಂಚಿದರು. ನೀಲಿ ಬಣ್ಣದ ಲೆಹೆಂಗಾ ಸಿಲ್ವರ್ ಎಂಬ್ರೊಯಿಡರಿ ವರ್ಕ್ ಅನ್ನು ಫ್ರಿಲ್‌ಗಳಲ್ಲಿ ಹೊಂದಿದೆ.

2013 ರ ಫಿಲ್ಮ್‌ಫೇರ್‌ನಲ್ಲಿ ಚಿತ್ರಾಂಗದಾ ಲುಕ್
ಆನಂದ್ ಕಾಬ್ರಾ ವಿನ್ಯಾಸದ ಡಬಲ್ ಕಲರ್ ಸೀರೆಯಲ್ಲಿ ಚಿತ್ರಾಂಗದ ಮನ ಕದಡಿದರು. ಆಮ್ರಾಪಾಲಿ ಕಿವಿಯಾಭರಣಗಳು ಉಡುಗೆಗೆ ಇನ್ನಷ್ಟು ಸುಂದರತೆಯನ್ನು ನೀಡಿತು.

ದಂತದ ಗೊಂಬೆ ಅನುಷ್ಕಾ 2013 ರ ಫಿಲ್ಮ್‌ಫೇರ್‌ನಲ್ಲಿ
ಅನುಷ್ಕಾ ತನ್ನ ಹಳದೀ ಬಣ್ಣದ ಡೀಪ್ ಸ್ಕೂಪ್‌ಡ್ ಬ್ಯಾಕ್ ವಿಕ್ಟೋರಿಯಾ ಬೇಕ್‌ಗ್ಯಾಮ್ ಗೌನ್‌ನಲ್ಲಿ ನೆರೆದಿದ್ದವರ ಹೃದಯ ಕದ್ದರು.

ಅತ್ಯದ್ಭುತ ಸುಂದರಿ ಮಾಧುರಿ 2013 ರಲ್ಲಿ
ಕೋಟಿಗಟ್ಟಲೆ ಸುಂದರಿ ನಗುವಿನ ಒಡತಿ, ಪ್ರತಿಭಾವಂತೆ ಮಾಧುರಿ ಅತ್ಯಾಕರ್ಷಕವಾಗಿ 2013 ರ ಫಿಲ್ಮ್‌ಫೇರ್‌ನಲ್ಲಿ ಕಂಡುಬಂದರು. ಮಿನುಗು ಬೊಟ್ಟುಗಳಿರುವ ನೀಲಿ ಬಣ್ಣದ ಅಲ್ಬರ್ಟೊ ಮಕಾಲಿ ಗೌನ್ ಅನ್ನು ಮಾಧುರಿ ತೊಟ್ಟಿದ್ದರು.

2013 ರ ಫಿಲ್ಮ್‌ಫೇರ್‌ನಲ್ಲಿ ಕಂಡುಬಂದ ಸುಂದರಿಯರು
ರೇಖಾ ಹಾಗೂ ಶ್ರೀದೇವಿ ಬಾಲಿವುಡ್‌ನ ದಂತಕಥೆಗಳೆಂದೇ ಬಿರುದಾಂಕಿತರು. 2013 ರ ಫಿಲ್ಮ್‌ಫೇರ್‌ನಲ್ಲಿ ರೇಖಾ ಕಾಂಜಿವರಂ ಸೀರೆಯಲ್ಲಿ ಕಣ್ಸೆಳೆದರೆ, ಶ್ರೀದೇವಿ ಕೋರಲ್ ಬಣ್ಣದ ಅಲ್ಬೆರ್ಟಾ ಫೆರೆಟ್ಟಿ ಆಫ್ - ಶೋಲ್ಡರ್ ಗೌನ್‌ನಲ್ಲಿ ಮಿಂಚಿದರು.

2013 ರಲ್ಲಿ ರೊಚೆಲ್ ಮರಿಯಾ ರಾವ್
ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್ ರೊಚೆಲ್ ಮರಿಯಾ 2012 ರ ಫಿಲ್ಮ್‌ಫೇರ್‌ನಲ್ಲಿ ತನ್ನ ಕಪ್ಪು ಬಣ್ಣದ ಹಿಂಭಾಗದಲ್ಲಿ ಡೀಪ್ ಕಟ್ ಹೊಂದಿರುವ ಗೌನ್‌ನಲ್ಲಿ ಮನಸೂರೆಗೊಂಡರು.

ಎವ್ಲಿನ್ ಶರ್ಮಾ ಝಲಕ್ 2013 ರಲ್ಲಿ
ನಿಕಿಲ್ ಥಾಂಪಿ ವಿನ್ಯಾಸದ ಲೆಹೆಂಗಾ ಸೀರೆಯಲ್ಲಿ ರೂಪಸಿಯಾಗಿ ಎವ್ಲಿನ್ ಕಣ್ಣುಕೋರೈಸಿದರು.

ಸರಳ ಸುಂದರಿ ಅದಿತಿ ರಾವ್ ಹೈದಾರಿ 2013 ರ ಫಿಲ್ಮ್‌ಫೇರ್‌ನಲ್ಲಿ
ಮೆಟಾಲಿಕ್ ಬಣ್ಣದ ಗೌರವ್ ಗುಪ್ತಾ ವಿನ್ಯಾಸದ ಸೀರೆಯಲ್ಲಿ ಅದಿತಿ ಅಪ್ಸರೆಯಂತೆ ಕಂಡುಬಂದರು. ಸುರುಳಿ ಸುತ್ತಿದ ಪಲ್ಲು ಹಾಗೂ ತಿಳಿ ಬಣ್ಣ ಸುಂದರ ಧಿರಿಸಾಗಿ ಕಂಡುಬಂದಿತು.

ಪ್ರತಿಭಾವಂತ ಸುಂದರಿ ವಿದ್ಯಾಬಾಲನ್
ವಿದ್ಯಾಬಾಲನ್ ಪುನಃ ಸೀರೆಯಲ್ಲೇ ಕಂಗೊಳಿಸಿದರು. ತನ್ನ ಮೆಚ್ಚಿನ ಸಬ್ಯಸಾಚಿ ಮುಖರ್ಜಿ ಸೀರೆಯನ್ನೇ ವಿದ್ಯಾ ಇಲ್ಲೂ ಆರಿಸಿಕೊಂಡಿದ್ದರು. ಚೆಕ್ ವಿನ್ಯಾಸದ ಕಪ್ಪು ಬಿಳಿ ಬಣ್ಣದ ಸೀರೆ ಸುಂದರವಾಗಿ ವಿದ್ಯಾರನ್ನು ಅಲಂಕರಿಸಿದೆ.

ದೀಪಿಕಾ ಪಡುಕೋಣೆ 2012 ರಲ್ಲಿ
ಫಿಲ್ಮ್‌ಫೇರ್ ಅವಾರ್ಡ್ಸ್ 2012 ರಲ್ಲಿ ಸುಂದರಿಯಾಗಿ ದೀಪಿಕಾ ಕಂಡುಬಂದರು. ಪೀಚ್ ಕಲರ್‌ನ ಥ್ರೆಡ್ ಅಂಬ್ರಾಯ್ಡಿರಿ ಸೀರೆ ದೀಪಿಕಾಗೆ ಸುಂದರವಾಗಿ ಕಂಡುಬಂದಿದೆ.

2012 ರ ಫಿಲ್ಮ್‌ಫೇರ್‌ನಲ್ಲಿ ಸುಂದರಿ ಶ್ರೀದೇವಿ
ಹರ್ವ್ ಲೆಗರ್ ಮನಸೂರೆಗೊಳ್ಳುವ ಗೌನ್‌ನಲ್ಲಿ ಇನ್ನೂ ಚೆನ್ನಾಗಿ ಶ್ರೀದೇವಿ ಕಂಡುಬಂದಿದ್ದಾರೆ. ಅವರ ಸಪೂರ ದೇಹಕ್ಕೆ ಇದು ಚೆನ್ನಾಗಿ ಹೊಂದಿಕೆಯಾಗುತ್ತಿದೆ.

2012 ರಲ್ಲಿ ವಿದ್ಯಾಬಾಲನ್
ಸೀರೆಯನ್ನೇ ಹೆಚ್ಚಾಗಿ ಮೆಚ್ಚುವ ವಿದ್ಯಾ ಸಾಂಪ್ರಾದಾಯಿಕತೆಯನ್ನು ಹಲವಾರು ಸಮಾರಂಭಗಳಲ್ಲಿ ಪ್ರದರ್ಶಿಸುತ್ತಾರೆ. ಸಿಲ್ಕ್ ಸೀರೆ ದೊಡ್ಡ ಬಿಂದಿ ಇವರ ಸಾಮಾನ್ಯ ಉಡುಗೆ. ಒಂದು ರೀತಿಯಲ್ಲಿ ಇವರು ರೇಖಾರ ಪ್ರತಿಬಿಂಬ ಎಂದೇ ಹೇಳಬಹುದು.

ಕರೀನಾ ಕಫೂರ್ ಸೌಂದರ್ಯ 2012 ರಲ್ಲಿ
ಮನೀಷ್ ಮಲ್ಹೋತ್ರಾ ವಿನ್ಯಾಸದ ಮಿನುಗು ಬೊಟ್ಟುಳ್ಳ ಕ್ರೀಮಿ ಬಿಳಿ ಬಣ್ಣದ ಸೀರೆಯಲ್ಲಿ ಅಪ್ಸರೆಯಂತೆ ಕರೀನಾ ಕಂಡುಬಂದರು.

2011 ರ ಫಿಲ್ಮ್‌ಫೇರ್‌ನಲ್ಲಿ ಕತ್ರೀನಾ ಕೈಫ್
56 ನೇ ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ಮನೀಷ್ ಮಲ್ಹೋತ್ರಾ ವಿನ್ಯಾಸದ ಸಿಲ್‌ಹೌಟ್‌ನಲ್ಲಿ ಅಪ್ರತಿಮವಾಗಿ ಕತ್ರೀನಾ ಕೈಫ್ ಕಂಡುಬಂದರು.

2009 ರಲ್ಲಿ ವಿಶ್ವ ಸುಂದರಿ ಐಶ್ವರ್ಯಾ
ಮಿನುಗು ಬೊಟ್ಟುಳ್ಳ, ಮೆಚ್ಚಿನ ವಿನ್ಯಾಸಕಾರ ಸಬ್ಯಸಾಚಿ ವಿನ್ಯಾಸದ ಸೀರೆಯನ್ನು ಐಶ್ವರ್ಯಾ 2009 ರ ಫಿಲ್ಮ್‌ಫೇರ್‌ನಲ್ಲಿ ತೊಟ್ಟಿದ್ದರು.

2009 ರಲ್ಲಿ ಕತ್ರೀನಾ ಝಲಕ್
ಕೋರಲ್ ಕಲರ್ ತೋಳಿಲ್ಲದ ಗೌನ್‌ನಲ್ಲಿ ಕತ್ರೀನಾ ಮೋಹಕಿಯಾಗಿ ಕಂಡುಬಂದರು. ಈ ಗೌನ್‌ನ ವಿನ್ಯಾಸಕಾರರು ಗೌರಿ ಮತ್ತು ನೈನಿಕಾ.



Click it and Unblock the Notifications