Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಫಿಲ್ಮ್‌ಫೇರ್ 2014 ರಲ್ಲಿ ಮೆಚ್ಚುಗೆಗೆ ಪಾತ್ರವಾದ ಉಡುಗೆಗಳು
2014 ರ 59ನೇ ಫಿಲ್ಮ್‌ಫೇರ್ ಅವಾರ್ಡ್‌ನ ರೆಡ್ ಕಾರ್ಪೆಟ್ ಫ್ಯಾಶನ್‌ನಿಂದ ಸುಂದರಗೊಂಡಿದೆ. ಈ ಗೌರವಯುತ ಅವಾರ್ಡ್ ಅನ್ನು ತೆಗೆದುಕೊಳ್ಳುವ ಉತ್ಸುಕತೆಯಿಂದ ಸೆಲೆಬ್ರಿಟಿಗಳು ವಿಧ ವಿಧ ಉಡುಗೆ ತೊಡುಗೆಗಳಲ್ಲಿ ಕಣ್ಮನ ಸೆಳೆದಿದ್ದಾರೆ. ಅದ್ಭುತ ಸುಂದರಿ ದೀಪಿಕಾ ಪಡುಕೋಣೆಯಿಂದ ಹಿಡಿದು ಸೆಕ್ಸೀ ಪ್ರಿಯಾಂಕ ಚೋಪ್ರಾವರೆಗೆ ಫ್ಯಾಶನ್ ಹೊಳೆಯೇ ಹರಿದಂತೆ ಫಿಲ್ಮ್‌ಫೇರ್‌ನ ರೆಡ್ ಕಾರ್ಪೆಟ್ ಮಿನುಗುತ್ತಿತ್ತು.
2014 ರ ರೆಡ್ ಕಾರ್ಪೆಟ್ ಫ್ಯಾಶನ್‌ನ ಒಂದು ಕಲಸುಮೇಲೋಗರವಾಗಿದೆ. ಕೆಲವರು ಗೌನ್‌ನೊಂದಿಗೆ ಸಮಾರಂಭಕ್ಕೆ ಹಾಜರಾದರೆ, ಮತ್ತೆ ಕೆಲವರು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು. ಉದಾಹರಣೆಗೆ ಬಾಲಿವುಡ್‌ನ ದಂತಕಥೆ ರೇಖಾ ತಮ್ಮ ಉಡುಗೆಯನ್ನು ಭಾರತೀಯ ಸಾಂಪ್ರದಾಯಿಕ ಕಾಂಜಿವರಂಗೆ ಸೀಮಿತಗೊಳಿಸಿದ್ದರೆ, ಕರೀಷ್ಮಾ ಕಪೂರ್ ಕೂಡ ಎಂಬ್ರಾಯಿಡರಿ ಜಾಕೆಟ್‌ನೊಂದಿಗೆ ಸ್ಟೈಲಿಶ್ ಸೀರೆಯನ್ನು ಉಡುಗೆಯಾಗಿಸಿಕೊಂಡಿದ್ದರು.
ಸೆಕ್ಸಿ ಪ್ರಿಯಾಂಕ ಚೋಪ್ರಾ ತೋಳಿಲ್ಲದ ಕಪ್ಪು ಬಣ್ಣದ ಪೆಪ್ಲಂ ಸ್ಟೈಲ್‌ನ ಅಲೆಕ್ಸಾಂಡರ್ ಮೆಕ್ವೀನ್ ಗೌನ್‌ನಲ್ಲಿ ಕಂಡುಬಂದರೆ, ಅಪ್ಸರೆಯಂತಿದ್ದ ದೀಪಿಕಾ ಶೀರ್ ಗೋಲ್ಡನ್ ಗೌನ್‌ನಲ್ಲಿ ಕಂಗೊಳಿಸಿದರು. ಅದೇ ರೀತಿ ವಾಣಿ ಕಪೂರ್ ನೇರಳೆ ಬಣ್ಣದ ಹಿಂಭಾಗದಲ್ಲಿ ಡೀಪ್ ಆಗಿರುವ ತೈ ಹೈ ಸ್ಲಿಟ್ ಗೌನ್ ಅನ್ನು ಅಲಂಕರಿಸಿದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ಸುಂದರಿ ದೀಪಿಕಾ
ಪ್ರಾಚೀ ಕೂಡ ತಮ್ಮ ಸ್ಟೈಲಿಶ್ ಲುಕ್‌ನಿಂದ ರೆಡ್ ಕಾರ್ಪೆಟ್ ಅನ್ನು ವೈಭವಗೊಳಿಸಿದರು. ಪೀಚ್ ಕಲರ್‌ನ ಸ್ಲಿಟ್ಟೆಡ್ ಗೌನ್‌ನಲ್ಲಿ ಪ್ರಾಚೀ ಮೋಹನಾಂಗಿಯಾಗಿದ್ದರು. 2014 ರ ಫಿಲ್ಮ್‌ಫೇರ್‍ನ ರೆಡ್ ಕಾರ್ಪೆಟ್ ಅನ್ನು ತಮ್ಮ ಪರಿಪೂರ್ಣ ಉಡುಗೆಗಳಿಂದ ವೈಭವೋಪೇತಗೊಳಿಸಿದವರ ಪಟ್ಟಿ ಇಲ್ಲಿದೆ. ನೋಡಿ ಆನಂದಿಸಿ.

ಪ್ರಿಯಾಂಕ ಚೋಪ್ರಾ
ಬ್ಲಾಕ್ ಫಿಲ್ಮ್‌ಫೇರ್ ಲೇಡಿಗಿಂತಲೂ ಅತ್ಯದ್ಭುತವಾಗಿ ಪ್ರಿಯಾಂಕ ಚೋಪ್ರಾ ತಾವು ಧರಿಸಿದ ಕಪ್ಪು ಬಣ್ಣದ ಗೌನ್‌ನಲ್ಲಿ ಕಂಡುಬಂದರು. ಪೆಪ್ಲಂ ಸ್ಟೈಲ್ ಅಲೆಕ್ಸಾಂಡರ್ ಮೆಕ್ವೀನ್ ಗೌನ್‌ನಲ್ಲಿ ಪ್ರಿಯಾಂಕ ಚಿಕ್ ಆಗಿ ಕಾಣುತ್ತಿದ್ದರು.

ದೀಪಿಕಾ ಪಡುಕೋಣೆ
ಈ ವರ್ಷ ಎಲ್ಲರ ಗಮನವನ್ನು ಹೆಚ್ಚು ಸೆಳೆದವರು ದೀಪಿಕಾ ಪಡುಕೋಣೆ ಎಂದರೆ ತಪ್ಪಲ್ಲ. ತಮ್ಮ ಅದ್ಭುತಾ ನಟನೆಯಿಂದ ಕಲಾರಸಿಕರ ಮನಗೆದ್ದ ಚೆಲುವೆ ಸ್ಟೈಲ್‌ನಲ್ಲಿ ಫ್ಯಾಶನ್‌ನಲ್ಲಿ ಕೂಡ ಹಿಂದೆಬಿದ್ದಿಲ್ಲ. ಹೊಳೆಯುವ ಗೋಲ್ಡನ್ ಶೀರ್ ಗೌನ್‌ನಲ್ಲಿ ದೀಪಿಕಾ ನೆರೆದಿದ್ದವರ ಮನಸೂರೆಗೊಂಡರು.

ಕರಿಷ್ಮಾ ಕಪೂರ್
ಫಿಲ್ಮ್‌ಫೇರ್ 2014 ರ ರೆಡ್ ಕಾರ್ಪೆಟ್‌ನಲ್ಲಿ ತಮ್ಮ ಸುಂದರ ಧಿರಿಸಿನೊಂದಿಗೆ ಪ್ರೇಕ್ಷರನ್ನು ಮಂತ್ರಮುಗ್ಧಗೊಳಿಸಿದವರು ಕರೀಷ್ಮಾ ಕಪೂರ್. ಚಾಕಲೇಟ್ ಬಣ್ಣದ ಸ್ಯಾರೀ ಗೌನ್‌ನಲ್ಲಿ ಫುಲ್ ಸ್ಲೀವ್ ಜಾಕೆಟ್‌ನೊಂದಿಗೆ ತಮ್ಮ ಉಡುಗೆಯನ್ನು ಕರೀಷ್ಮಾ ಪೂರ್ಣಗೊಳಿಸಿದರು.

ವಾಣಿ ಕಪೂರ್
ನೇರಳೆ ಬಣ್ಣದ ನಿಕಿಲ್ ಥಾಂಪಿ ವಿನ್ಯಾಸದ ತೊಡೆಯವರೆಗೆ ಸ್ಲಿಟ್ ಹೊಂದಿರುವ ಗೌನ್‌ನಲ್ಲಿ ವಾಣಿ ಕಪೂರ್ ಸುಂದರಿಯಾಗಿದ್ದರು.

ಸೋಫಿ ಚೌಧುರಿ
ಸ್ಟ್ರಾಪ್‌ಲೆಸ್ ಪೆಪ್ಲಮ್ ಸ್ಟೈಲ್ ಬಿಸಿಬಿಜಿ ಕೆಂಪು ಬಣ್ಣದ ಗೌನ್ ರೆಡ್ ಕಾರ್ಪೆಟ್ ಸಮಾರಂಭದಲ್ಲಿ ಸೋಫಿಯನ್ನಲಂಕರಿಸಿತ್ತು. ಗೌನ್‌ನ ನೆಕ್ ವಿನ್ಯಾಸ ಕಣ್ಸೆಳೆಯುವಂತಿತ್ತು.

ಶ್ರುತಿ ಹಾಸನ್
ಕಪ್ಪು ಬಣ್ಣದ ಹೈ ನೆಕ್‌ಲೈನ್ ಪ್ಲೇನ್ ಗೌನ್‌ನಲ್ಲಿ ಶ್ರುತಿ ಹಾಸನ್ ಹಾಟ್ ಆಗಿ ಕಂಡುಬಂದರು.

.ತಮನ್ನಾ ಭಾಟಿಯಾ
ರೆಡ್ ಕಾರ್ಪೆಟ್ 2014 ರ ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ಗೌರಿ ಹಾಗೂ ನೈನಿಕಾ ವಿನ್ಯಾಸದ ಕೆಂಪು ಗೌನ್ ಅನ್ನು ತಮನ್ನಾ ಭಾಟಿಯಾ ತಮ್ಮ ಸ್ಟೈಲೀ ಲುಕ್‌ಗಾಗಿ ಬಳಸಿಕೊಂಡಿದ್ದರು.

ಸೋಹಾ ಆಲೀ ಖಾನ್
ಕೆನ್ ಫೆರ್ನ್ಸ್ ವಿನ್ಯಾಸದ ಗೌನ್‌ನಲ್ಲಿ ಸೋಹಾ ಮನಮೋಹಕವಾಗಿದ್ದರು. ತಮ್ಮ ಸ್ಟ್ರೈಟ್ ಮಾಡಿದ ಕೂದಲು ಸೋಹಾ ಧರಿಸಿದ ಗೌನ್‌ಗೆ ಸರಿಸಾಟಿಯಾಗುವಂತಿದೆ.

ಇಲಿಯಾನಾ ಡಿಕ್ರೂಸ್
ರೆಡ್ ಕಾರ್ಪೆಟ್‌ನಲ್ಲಿ ತಮ್ಮ ಕಪ್ಪು ಬಣ್ಣದ ಲೇಸ್ ಗೌನ್‌ನಲ್ಲಿ ಇಲಿಯಾನಾ ಕ್ಲಾಸಿಯಾಗಿ ಕಂಡುಬಂದರು.ಆಕೆಯ ಹಿಂದಿನ ಫಿಲ್ಮ್‌ಫೇರ್ ಉಡುಗೆಯಾದ ಹೊಳೆಯುವ ರೊಬಾರ್ಟೊ ಕವಾಲ್ಲಿ ಗೌನ್‌ಗೆ ಈ ಕಪ್ಪು ಗೌನ್ ಅನ್ನು ಹೋಲಿಸಿದರೆ 2014 ರ ಕಪ್ಪು ವರ್ಣದ ಲೇಸ್ ಗೌನ್ ಇಲಿಯಾನಾಗೆ ಚೆನ್ನಾಗಿ ಒಪ್ಪುತ್ತಿದೆ.

ಅದಿತಿ ರಾವ್ ಹೈದಾರಿ
ಸಿಲ್ವರ್ ಬಣ್ಣದ ಹೊಳೆಯುವ ಸೀಕ್ವಿನ್ನ್‌ಡ್ ಗೌರವ್ ಗುಪ್ತಾ ವಿನ್ಯಾಸದ ಗೌನ್‌ನಲ್ಲಿ ಅದಿತಿ ಅಪ್ಸರೆಯಾಗಿ ಕಂಡುಬಂದಿದ್ದಾರೆ. ಈ ಗೌನ್ ಅನ್ನು ಐಬಿಎಫ್‌ಡಬ್ಲೂ 2013 ರಲ್ಲಿ ಪ್ರದರ್ಶಿಸಲಾಗಿತ್ತು.

ಪ್ರಾಚೀ ದೇಸಾಯಿ
ಫಿಲ್ಮ್‌ಫೇರ್ 2014 ರ ರೆಡ್ ಕಾರ್ಪೆಟ್ ಅನ್ನು ಪ್ರಾಚೀ ಬೋಲ್ಡ್ ಆಗಿ ನಿರ್ವಹಿಸಿರುವಂತೆ ಕಂಡುಬರುತ್ತಿದೆ. ಪೀಚ್ ಕಲರ್‌ನ ದೇಹದ ಸುತ್ತಲೂ ಆವೃತವಾಗಿರುವ ತೊಡೆಯವರೆಗೆ ಸ್ಲಿಟ್ ಅನ್ನು ಹೊಂದಿರುವ ಗೌನ್ ಅನ್ನು ಧರಿಸಿರುವ ಪ್ರಾಚೀ ರೆಡ್ ಕಾರ್ಪೆಟ್‍ಗೆ ಇನ್ನಷ್ಟು ಸೌಂದರ್ಯವನ್ನು ಉಣಬಡಿಸಿದ್ದಾರೆ. ಆಕೆಯ ನೀಳ ಕಾಲುಗಳು ಗೌನ್‌ನಿಂದ ತೋರಿರುವುದು ಸುಂದರವಾಗಿದೆ.

ಅಮೃತಾ ರಾವ್
ನ್ಯೂಡ್ ಕಲರ್‌ನ ಪಾಯಲ್ ಸಿಂಗಾಲ್ ಸೀರೆಯಲ್ಲಿ ಅಮೃತಾ ದೇಸೀ ಹಾಗೂ ಸಾಂಪ್ರದಾಯಿಕವಾಗಿ ಕಂಡುಬಂದಿದ್ದಾರೆ. ಕಪ್ಪು ಬಣ್ಣದ ಗೋಲ್ಡನ್ ವಿನ್ಯಾಸದ ಕುಪ್ಪಸವನ್ನು ಮ್ಯಾಚಿಂಗ್ ಆಗಿ ಧರಿಸಿರುವ ಅಮೃತಾ ಅತ್ಯಾಕರ್ಷಕವಾಗಿ ಕಂಡುಬರುತ್ತಿದ್ದಾರೆ.



Click it and Unblock the Notifications