Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಸೆಲೆಬ್ರಿಟಿಗಳಿಂದ ಮ್ಯಾಗಝೀನ್ ಮುಖಪುಟಕ್ಕೆ ಹೊಸ ಕಳೆ
ಫೆಬ್ರವರಿ ತಿಂಗಳಿನಲ್ಲಿ ಪ್ರೇಮಿಗಳದ್ದೇ ಕಾರುಬಾರು ಆದ್ದರಿಂದ, ಬೋಲ್ಡ್ ಸ್ಕೈ ಇಂದು ನಿಮಗಾಗಿ ಮ್ಯಾಗಝೀನ್ ಮುಖಪುಟದಲ್ಲಿ ರಾರಾಜಿಸಿರುವ ಸೆಲೆಬ್ರಿಟಿಗಳ ಹೊಸ ಪರಿಯನ್ನು ಪರಿಚಯಿಸುತ್ತಿದೆ. ಹೆಸರಾಂತ ನಟ ನಟರು ಈ ಮ್ಯಾಗಝೀನ್ ಮಖಪುಟದಲ್ಲಿ ಮಿಂಚಿದ್ದಾರೆ. ನಿಮ್ಮ ಮೆಚ್ಚಿನ ಸೆಲೆಬ್ರಿಟಿಗಳ ಝಲಕ್ ಇದೋ ನಿಮಗಾಗಿ.

ಮಸಾಲಾ: ಶಾರುಖ್ ಖಾನ್
ಬಾಲಿವುಡ್ ಬಾದ್‌ಷಾ ಕಿಂಗ್ ಖಾನ್ ಶಾರುಖ್ ಮಸಾಲಾ ಮ್ಯಾಗಝೀನ್ 2014 ರ ಮುಖಪುಟದ ಕಳೆಯನ್ನು ಹೆಚ್ಚಿಸಿದ್ದಾರೆ. ಸುಂದರನಾಗಿ ಯುವಕನಾಗಿ ಕಂಡುಬರುತ್ತಿರುವ ಶಾರುಖ್ ಎಳೆ ಹೃದಯದಲ್ಲಿ ಕಿಚ್ಚು ಹತ್ತಿಸುವವರಂತೆ ಕಾಣುತ್ತಿದ್ದಾರೆ.

ಎಫ್‌ಎಚ್‌ಎಮ್: ಶ್ರುತಿ ಹಾಸನ್
ಈ ಸುಂದರ ನೋಟವನ್ನು ಯಾರಿಗೂ ಮಣಿಸಲು ಸಾಧ್ಯವೇ ಇಲ್ಲ! ಫೆಬ್ರವರಿ ತಿಂಗಳ ಬಿಸಿ ಮಸಾಲೆಯಂತಿರುವ ಈ ಮ್ಯಾಗಝೀನ್ ಅನ್ನು ಹಾಟ್ ಬೆಡಗಿ ಶ್ರುತಿಯನ್ನು ನೋಡಿಯೇ ಖರೀದಿಸಬಹುದು ಎಂಬುದರಲ್ಲಿ ಸಂದೇಹವೇ ಇಲ್ಲ.

ವೋಗ್ಯೂ: ಪರಿಣೀತಿ ಚೋಪ್ರಾ
ವೋಗ್ಯೂ ನಿಯತಕಾಲಿಕೆಯಲ್ಲಿ ಸಿಲ್ವರ್ ಬಣ್ಣದ ಗೌನ್‌ನಲ್ಲಿ ಕಂಡುಬರುತ್ತಿರುವ ಮುಖಪುಟ ಚೆಲುವೆ ಪರಿಣೀತಿ ಇನ್ನಷ್ಟು ಬೋಲ್ಡ್ ಬ್ಯೂಟಿಫುಲ್ ಆಗಿದ್ದಾರೆ. ವಿನ್ಯಾಸಕಾರರಾದ ರೋಹಿತ್ ಗಾಂಧಿ ಮತ್ತು ರಾಹುಲ್ ಖನ್ನಾ ಅವರ ಇದೇ ತರಹದ ಗೌನ್ ಅನ್ನು ಫ್ಯಾಶನ್ ಶೋ ಒಂದರಲ್ಲಿ ನರ್ಗೀಸ್ ಫಕ್ರಿಯವರು ಧರಿಸಿದ್ದರು.

ಸ್ಟಾರ್ ಡಸ್ಟ್: ಇಮ್ರಾನ್ ಖಾನ್
ಮಾದಕ ಮನಮೋಹಕ ನಟ ಇಮ್ರಾನ್ ಖಾನ್ ಅನ್ನು ಫೆಬ್ರವರಿ ಸಂಚಿಕೆಯ ಸ್ಟಾರ್ ಡಸ್ಟ್ ಮುಖಪುಟದಲ್ಲಿ ನೀವು ನೋಡಲೇಬೇಕು. ಅದಲ್ಲದೆ ನಿಯತಕಾಲಿಕೆಯ ಮೂಲೆಯಲ್ಲಿ ಮಂದಸ್ಮಿತೆ ಸ್ನಿಗ್ದ ಸೌಂದರ್ಯವಂತೆ ಮಾಧುರಿ ದೀಕ್ಷಿತ್ ಕೂಡ ಇದ್ದಾರೆ.

ಸೈನ್ ಬ್ಲಿಟ್ಜ್: ಫರ್ಹಾನ್ ಅಖ್ತರ್
ಈ ತಿಂಗಳ ಸೈನ್ ಬ್ಲಿಟ್ಜ್ ಫರ್ಹಾನ್ ಅಖ್ತರ್‌ನಿಂದ ಸುಶೋಭಿತಗೊಂಡಿದೆ. ಬೋಲ್ಡ್ ಲುಕ್‌ನಲ್ಲಿ ಕಂಡು ಬರುತ್ತಿರುವ ಫರ್ಹಾನ್ ಮ್ಯಾಗಝೀನ್‌ನ ಗಂಭೀರತೆಯನ್ನು ತಮ್ಮ ಗಂಭೀರ ನೋಟದೊಂದಿಗೆ ಸೆಳೆದಿದ್ದಾರೆ ಎಂದು ಹೇಳಬಹುದು. ಇವರ ನೋಟ ಹೆಂಗಳೆರ ಮನಸ್ಸು ಕದಿಯುವುದಂತೂ ನಿಜ. ಜೊತೆಗೆ ವಿದ್ಯಾಬಾಲನ್‌ರನ್ನು ನೋಡಲು ಮರೆಯದಿರಿ!

ಲೊಫಿಶಿಯಲ್: ಫರ್ಹಾನ್ ಅಖ್ತರ್ ಮತ್ತು ಅದುನಾ ಅಖ್ತರ್
ಹಾಟ್ ಮತ್ತು ಸುಂದರ ಜೋಡಿ ಫರ್ಹಾನ್ ಅಖ್ತರ್ ಮತ್ತು ಅದುನಾ ಅಖ್ತರ್ ಫೆಬ್ರವರಿ ತಿಂಗಳನ್ನು ಸೊಗಸಾಗಿ ಸ್ವಾಗತಿಸುವಂತೆ ಕಾಣುತ್ತಿದೆ. ಈ ಮ್ಯಾಗಝೀನ್‌ನ ಮುಖಪುಟದಲ್ಲಿ ರಾರಾಜಿಸುತ್ತಿರುವ ಈ ಜೋಡಿ ಮೋಡಿ ಮಾಡುವುದಂತೂ ನಿಜ.

ಫೆಮೀನಾ: ಕತ್ರೀನಾ ಕೈಫ್
ಬಾಲಿವುಡ್‌ನ ಚೆಲುವೆ ಎಂಬ ಬಿರುದಾಂಕಿತೆ ಪ್ರಬುದ್ಧ ನಟಿ ಕತ್ರೀನಾ ಕೈಫ್. ಈ ತಿಂಗಳ ಫೆಮೀನಾಗೊಂದು ಹೊಸ ಕಾಂತಿಯನ್ನು ಕತ್ರೀನಾರ ಸುಂದರ ಮುಖಾರವಿಂದ ತಂದಿದೆ.



Click it and Unblock the Notifications
