Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪಂಕಜ್, ನಿಧಿ ವಿನ್ಯಾಸದಲ್ಲಿ ಮನಮೋಹಕ ಚೆಲುವೆ ಇಶಾ ಗುಪ್ತಾ
ಸಾಮಾನ್ಯವಾಗಿ ಪ್ರಮುಖ ಮಳಿಗೆಗಳ ಪ್ರಾರಂಭೋತ್ಸವಕ್ಕೆ ಖ್ಯಾತನಾಮರನ್ನು ಆಹ್ವಾನಿಸುವುದು ವಾಡಿಕೆ. ಅಂತೆಯೇ ಇತ್ತೀಚೆಗೆ ಮುಂಬೈನ ಬಾಂದ್ರಾ ಹಿಲ್ ನಲ್ಲಿ ಪ್ರಾರಂಭವಾದ ಬಾಟಾದ ನೂತನ ಮಳಿಗೆಯ ಪ್ರಾರಂಭೋತ್ಸವಕ್ಕೆ ಖ್ಯಾತ ನಟಿ ಇಶಾ ಗುಪ್ತಾರನ್ನು ಆಹ್ವಾನಿಸಲಾಗಿತ್ತು. ಆದರೆ ಜನರನ್ನು ಸೂಜಿಗಲ್ಲಿನಂತೆ ಸೆಳೆದದ್ದು ಬಾಟಾದ ಉತ್ಪನ್ನಗಳಲ್ಲ, ಬದಲಿಗೆ ಇಶಾ ಗುಪ್ತಾರವರು ಧರಿಸಿದ್ದು ಅತ್ಯಂತ ಆಕರ್ಷಣೀಯವಾದ ಉಡುಪು.

ತೆಳುಹಸಿರು ಬಣ್ಣದ ಬಟ್ಟೆಯ ಮೇಲೆ ಅಸಾಧಾರಣವಾದ ವಿನ್ಯಾಸದ ಸಂಯೋಜನೆ ಈ ಉಡುಪಿನ ವಿನ್ಯಾಸಕಾರರಾದ ಪಂಕಜ್ ಮತ್ತು ನಿಧಿಯವರ ಒಂದು ಪ್ರಮುಖ ಕೊಡುಗೆಯಾಗಿದೆ. ಈ ಉಡುಪಿನಲ್ಲಿ ಅವರ ಸೌಂದರ್ಯ ನೂರ್ಮಡಿ ಹೆಚ್ಚಿದ್ದುದು ಮಾತ್ರ ಸುಳ್ಳಲ್ಲ.
ಬಾಲಿವುಡ್‌ನ ಖ್ಯಾತ ತಾರೆಯರು ತಮ್ಮ ಉಡುಪುಗಳನ್ನು ಕೆಲವೇ ವಿನ್ಯಾಸಕಾರರ ಹತ್ತಿರ ಹೊಲಿಸಿಕೊಳ್ಳುತ್ತಾರೆ. ಅವರಲ್ಲಿ ಪ್ರಮುಖವಾದ ಜೋಡಿ ಪಂಕಜ್ ಮತ್ತು ನಿಧಿ. ತಾರೆಯರಾದ ಸೋನಾಕ್ಷಿ ಸಿನ್ಹಾ, ದೀಪಿಕಾ ಪಡುಕೋಣೆ, ಪರಿಣೀತಿ ಚೋಪ್ರಾ, ನೇಹಾ ಧೂಪಿಯಾ ಹಾಗೂ ಇನ್ನೂ ಹಲವರು ಈ ಜೋಡಿಯ ಹತ್ತಿರವೇ ತಮ್ಮ ಉಡುಪುಗಳನ್ನು ವಿನ್ಯಾಸಗೊಳಿಸುತ್ತಾರೆ. ವಿಶೇಷವೆಂದರೆ ಈ ಜೋಡಿ ತಮ್ಮ ಪ್ರತಿ ವಿನ್ಯಾಸವನ್ನೂ ಅತಿ ಜಾಗರೂಕತೆಯಿಂದ ಆಯ್ದು ಸಿದ್ಧಗೊಳಿಸುತ್ತಾರೆ.
ಆದರೆ ಅವರು ಆಯ್ದುಕೊಳ್ಳುವ ವಿನ್ಯಾಸ ವಿಭಿನ್ನವಾಗಿದ್ದು ಇದುವರೆಗೆ ಯಾರೂ ಯೋಚಿಸಿರದ ನಿಟ್ಟಿನಲ್ಲಿ ಸಂಯೋಜನೆಗಳಿಸುವುದೇ ಇವರ ಗರಿಮೆಯಾಗಿದೆ. ಉಡುಪಿನ ವಿನ್ಯಾಸ ಒಂದೇ ಸ್ಥಳದಲ್ಲಿ ಕೇಂದ್ರೀಕೃತವಾಗಿರದೇ ಇಡಿಯ ಉಡುಪಿನ ಉದ್ದಕ್ಕೂ ವ್ಯಾಪಿಸಿ ನೋಡುಗರ ಇದುವರೆಗಿನ ನಂಬಿಕೆಯನ್ನೇ ಅಲ್ಲಾಡಿಸಿಬಿಡುತ್ತವೆ. ಗುಲಾಬಿ ವರ್ಣದಲ್ಲಿ ಮೋಡಿ ಮಾಡಿದ ಇಶಾಳ ಸೌ೦ದರ್ಯ!
ಇಶಾರ ಅತಿ ಸ್ವಂತ ಸಂಗ್ರಹದ ಈ ಉಡುಗೆಯಲ್ಲಿನ ಮುದ್ರಿತ ಭಾಗಗಳು ಸಾಮಾನ್ಯಕ್ಕಿಂತಲೂ ಹೆಚ್ಚಿರುವುದು ಹಾಗೂ ತೆಳುಹಸಿರು ಬಣ್ಣದ ಮೇಲೆ ಗಾಢವರ್ಣದ ವಿನ್ಯಾಸಗಳು ಬಣ್ಣಗಳ ನಡುವಣ ವೈದೃಶ್ಯತೆಯನ್ನುಸುಂದರವಾಗಿ ಬಿಂಬಿಸುತ್ತವೆ.
ಎರಡೂ ಬದಿಯಲ್ಲಿರುವ ಎರಡು ಮಡಿಕೆ, ತೋಳುಗಳ ಕೊನೆ ಹಾಗೂ ಉಡುಪಿನ ಕೆಳ ಅಂಚನ್ನು ಪೂರ್ಣವಾಗಿ ಆವರಿಸಿರುವ ಪಟ್ಟಿಯೂ ಸರಿಸುಮಾರು ವಿನ್ಯಾಸದ ಬಣ್ಣಗಳನ್ನೇ ಹೊಂದಿರುವುದು ವಿನ್ಯಾಸಕಾರರ ಜಾಣ್ಮೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಉಡುಪಿನೊಂದಿಗೆ ಅವರು ಚಿನ್ನದ ಬಣ್ಣದ ಕಿವಿಯೋಲೆ, ಕಪ್ಪು ಪಟ್ಟಿಗಳ ಪಾದರಕ್ಷೆಯನ್ನು ಧರಿಸಿದ್ದರು.
ಕೊಂಚ ಗುಂಗುರಾಗಿಸಿ ಇಳಿಬಿಟ್ಟ ಅವರ ನೀಳಗೂದಲು ಈ ಉಡುಪಿನೊಂದಿಗೆ ಅತಿ ಆಕರ್ಷಕವಾಗಿ ಕಾಣುತ್ತಿತ್ತು. ಜೊತೆಗೆ ಆತ್ಮವಿಶ್ವಾಸದಿಂದ ಮಿನುಗುತ್ತಿದ್ದ ಅವರ ವದನ ಅವರ ವ್ಯಕ್ತಿತ್ವವನ್ನು ನೋಡುಗರ ಮನಸೂರೆಗೊಳ್ಳುತ್ತಿತ್ತು. ನಿಮಗೆ ಹೇಗೆನಿಸುತ್ತಿದೆ?



Click it and Unblock the Notifications



