Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಪೇಸ್ಟಲ್ ಲೆಹಂಗಾದಲ್ಲಿ ಮಿಂಚಿದ ಸುಂದರಿ ದಿಯಾ ಮಿರ್ಜಾ
ಪಿಂಕ್ ಎನ್ನುವುದು ಎಲ್ಲಾ ಸೀಸನ್‌ಗೂ ಹೊಂದುವ ಬಣ್ಣವಾಗಿದೆ. ಪಾಲೆ ಪಿಂಕ್ ಬಣ್ಣದ ಲೆಹಂಗಾವನ್ನು ಧರಿಸಿದ್ದ ದಿಯಾ ಮಿರ್ಜಾ ಕೂಡ ಸುಂದರಿ ಮತ್ತು ಆಕರ್ಷಕವಾಗಿ ಕಾಣುತ್ತಿದ್ದರು. ಹೈದ್ರಾಬಾದ್‌ನಲ್ಲಿ ನಡೆಯುತ್ತಿರುವ ಚ್ಯಾರಿಟಿ ಈವೆಂಟ್‌ನಲ್ಲಿ ಕಂಡುಬಂದ ಈ ಸುಂದರಿ ಅತ್ಯಾಕರ್ಷಕ ಉಡುಗೆಯಲ್ಲಿ ನಮಗೆ ಕಂಡುಬಂದರು.
ಸೈಲೇಶ್ ಸಿಂಘಾನಿಯಾ ವಿನ್ಯಾಸಗೊಳಿಸಿದ ಲೆಹಂಗಾದಲ್ಲಿ ದಿಯಾ ಮಿರ್ಜಾ ಮಿಂಚಿನ ಬಳ್ಳಿಯಂತೆ ಕಣ್ಣು ಕುಕ್ಕಿದರು. ಭಾರತೀಯ ಉಡುಗೆಯಲ್ಲಿ ಆಕೆ ಕಂಡುಬಂದ ಪರಿ ಮನಸ್ಸಿಗೆ ನಾಟುವಂತಿತ್ತು ಮತ್ತು ಆಹ್ ಎಂಬ ಉದ್ಗಾರವನ್ನು ಬರಿಸುವಂತಿತ್ತು.

ಹೈದ್ರಾಬಾದ್‌ನಲ್ಲಿ ನಡೆಯುತ್ತಿರುವ ಚ್ಯಾರಿಟಿ ಕಾರ್ಯಕ್ರಮದಲ್ಲಿ ಕಂಡುಬಂದ ದಿಯಾ ಮಿರ್ಜಾ ಸರಳತೆಯೇ ಮೈವೆತ್ತಿ ನಿಂತಂತೆ ಕಂಡುಬಂದರು. ರಾಂಪ್‌ನಲ್ಲಿ ಪಾಲೆ ಪಿಂಕ್ ಲೆಹಂಗಾದಲ್ಲಿ ಹೆಜ್ಜೆ ಹಾಕಿದ ಈ ಸುಂದರಿ ಸೀಸನ್‌ನ ಹಾಟ್ ಬಣ್ಣಲ್ಲಿ ಮತ್ತಷ್ಟು ಹಾಟ್ ಆಗಿ ಕಾಣುತ್ತಿದ್ದರು.
ಅವರ ಉಡುಗೆ ಲೇಸ್ ಮತ್ತು ಟಿಕ್ಲಿಯನ್ನು ಒಳಗೊಂಡಿತ್ತು. ಲೆಹಂಗಾವು ಬಿಳಿ ಟಿಕ್ಲಿಗಳನ್ನು ಒಳಗೊಂಡಿತ್ತು ಮತ್ತು ಡಬ್ಬಲ್ ಕಲರ್‌ನಲ್ಲಿ ಶೋಭಿಸುತ್ತಿತ್ತು. ಉಡುಗೆ ಗೋಲ್ಡನ್ ಬಣ್ಣದ ಬಾರ್ಡರ್ ಅನ್ನು ಕೂಡ ಒಳಗೊಂಡಿತ್ತು. ಲೆಹಂಗಾದೊಂದಿಗೆ ದಿಯಾ ಸರಳವಾದ ವಜ್ರದ ಆಭರಣಗಳನ್ನು ಧರಿಸಿದ್ದರು. ವಜ್ರದ ಕಿವಿಯಾಭರಣ ಮತ್ತು ಓಲೆಗಳು ಆಕೆಯ ಮುಖದ ಅಂದವನ್ನು ಹೆಚ್ಚಿಸಿತ್ತು ಮತ್ತು ಮುದ್ದಾಗಿ ಕಾಣುವಂತೆ ಮಾಡಿತ್ತು.
ಅನುಪಮಾ ಸ್ಕರ್ಟ್‌ನಲ್ಲಿ ಸುಂದರಿ ಕರೀನಾ ಕಪೂರ್
ಆಕೆ ಗುಂಗುರು ಕೂದಲಿನ ಕೇಶ ಶೃಂಗಾರವನ್ನು ಮತ್ತು ತೆಳುವಾದ ಮೇಕಪ್ ಅನ್ನು ಮಾಡಿಕೊಂಡಿದ್ದರು. ಇತರ ಸೆಲೆಬ್ರಿಟಿಗಳೂ ಈವೆಂಟ್‌ನಲ್ಲಿ ಹೆಜ್ಜೆ ಹಾಕಿದ್ದರೂ ದಿಯಾರಂತೆ ಅವರು ಯಾರೂ ಆಕರ್ಷಕವಾಗಿರಲಿಲ್ಲ. ಈ ಮುದ್ದು ಮುಖದ ಸುಂದರಿ ತಮ್ಮ ಸರಳವಾದ ಉಡುಗೆನಲ್ಲೇ ನೆರೆದವರ ಮನವನ್ನು ಕದ್ದಿದ್ದರು ಮತ್ತು ಅವರತ್ತ ಆಕರ್ಷಿತರಾಗುವಂತೆ ಮಾಡಿದ್ದರು.
ಆಕೆಯ ಉಡುಗೆ, ಮೇಕಪ್. ಕೂದಲಿನ ಶೃಂಗಾರ ಹೀಗೆ ಪ್ರತಿಯೊಂದೂ ಕೂಡ ದಿಯಾರಿಗೆ ಈವೆಂಟ್‌ನಲ್ಲಿ ಮಿಂಚಲು ಧನತ್ಮಕ ಅಂಶವಾಗಿ ಪರಿಣಮಿಸಿದೆ. ಒಟ್ಟಾರೆ ಈ ಚೆಲುವೆ ಭಾರತೀಯ ಉಡುಗೆಯಲ್ಲಿ ಹೈದ್ರಾಬಾದ್ ನಗರದಲ್ಲಿ ಅಲೆಯನ್ನು ಎಬ್ಬಿಸಿದ್ದಂತೂ ನಿಜ.



Click it and Unblock the Notifications
