Latest Updates
-
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ!
ಜನ್ಮದಿನದಂದು ಮಿಂಚಿದ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ತಮ್ಮ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಅದ್ಭುತ ನಟನಾ ಸಾಮರ್ಥ್ಯದಿಂದ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಒತ್ತಿರುವ ಈ ಬೆಡಗಿ 27 ನೇ ವರ್ಷಕ್ಕೆ ಕಾಲಿಟ್ಟರು. ತಮ್ಮ ಪ್ರತಿಭೆ, ಸೌಂದರ್ಯ ನಟನಾ ಕೌಶಲ್ಯದಿಂದ ದೀಪಿಕಾ ಬಾಲಿವುಡ್‌ನಲ್ಲಿ ನಕ್ಷತ್ರವಾಗಿ ಮಿಂಚುತ್ತಿದ್ದಾರೆ.
ಅಷ್ಟೇ ಅಲ್ಲದೆ ತಮ್ಮ ಫ್ಯಾಶನ್ ಅಭಿರುಚಿಯಿಂದಲೂ ಈ ಸುಂದರಿ ಸುದ್ದಿಯಲ್ಲಿದ್ದಾರೆ. ಅವರು ಧರಿಸುವ ಉಡುಗೆ, ಫೋಸ್ ಕೊಡುವ ರೀತಿ ಇದೆಲ್ಲವೂ ಸೂಪರ್ ಹಿಟ್!
ಇಂದು ನಾವಿಲ್ಲಿ ನೋಡುತ್ತಿರುವುದು ಬರ್ತ್‌ಡೇ ಗರ್ಲ್ ದೀಪಿಕಾರ ವಿಭಿನ್ನ ಲುಕಪ್‌ಗಳನ್ನು, ತಮ್ಮ ಮೈಕಟ್ಟು ಮತ್ತು ದೇಹಸೌಂದರ್ಯಕ್ಕೆ ಹೊಂದುವಂತಹ ಉಡುಗೆಯನ್ನೇ ಅವರು ತೊಡುವುದರಿಂದ ಅವರು ಹೋದಲ್ಲೆಲ್ಲಾ ಅವರ ವ್ಯಕ್ತಿತ್ವ ಎದ್ದುಕಾಣುತ್ತದೆ ಮತ್ತು ಅದು ಸುದ್ದಿಯಾಗುತ್ತದೆ. ಲೇಸ್ ಔಟ್‌ಫಿಟ್‌ಗಳ ಮೇಲೆ ಹೆಚ್ಚಿನ ಒಲವನ್ನು ಹೊಂದಿರುವ ದೀಪಿಕಾ ಹಲವಾರು ಸಮಾರಂಭಗಳಲ್ಲಿ ಇಂತಹ ಉಡುಗೆಯನ್ನೇ ಹೆಚ್ಚಾಗಿ ತೊಡುತ್ತಾರೆ. ಕೆಂಪು ಬಣ್ಣದಲ್ಲಿ ಬೋಲ್ಡ್ ಆಗಿ ಕಾಣುವ ದೀಪಿಕಾ ಆ ಬಣ್ಣವನ್ನು ತಮ್ಮ ಲಿಪ್‌ಸ್ಟಿಕ್ ಆಗಿ ಅಥವಾ ಉಡುಗೆಯ ಬಣ್ಣವಾಗಿ ಬಳಸುತ್ತಾರೆ. ಅವರ ಹೇರ್‌ಸ್ಟೈಲ್ ಕೂಡ ಅವರು ತೊಡುವ ಉಡುಗೆಗೆ ಹೇಳಿ ಮಾಡಿಸಿದಂತಿರುತ್ತದೆ.
ತಮ್ಮ ಹುಟ್ಟುಹಬ್ಬದ ದಿನದಂದು ಬೇರೆ ಬೇರೆ ಉಡುಗೆಯಲ್ಲಿ ಭಿನ್ನವಾಗಿ ಸುಂದರಿಯಾಗಿ ಕಂಡುಬಂದ ದೀಪಿಕಾರ ಕೆಲವೊಂದು ಲುಕ್‌ಗಳು ನಿಮಗಾಗಿ.

ಹಳದಿ ಬಣ್ಣದ ಉಡುಗೆಯಲ್ಲಿ
ಗೌರಿ ಮತ್ತು ನೈನಿಕಾ ವಿನ್ಯಾಸದ ಹಳದಿ ಬಣ್ಣದ ರೆಡ್ ಕಾರ್ಪೆಟ್ ಗೌನ್‌ನಲ್ಲಿ ದೀಪಿಕಾ ಕಡೆದಿಟ್ಟ ಶಿಲ್ಪದಂತೆ ಸ್ನಿಗ್ಧ ಸೌಂದರ್ಯವತಿಯಾಗಿ ಕಾಣುತ್ತಿದ್ದಾರೆ. ನೀಳ ಕಾಯದ ತಮ್ಮ ಚೆಲುವನ್ನು ಈ ಉಡುಗೆಯಲ್ಲಿ ದೀಪಿಕಾ ಬಿಚ್ಚಿಟ್ಟಿದ್ದಾರೆ.

ಲೇಸ್‌ನಲ್ಲಿ
ಮೊದಲೇ ಹೇಳಿದಂತೆ ಲೇಸ್ ಉಡುಗೆಯ ಅಭಿಮಾನಿಯಾಗಿರುವ ದೀಪಿಕಾ ತಮ್ಮ ಬಳಿ ಇಂತಹ ದಿರಿಸುಗಳ ಸಂಗ್ರಹವನ್ನೇ ತಮ್ಮ ವಾರ್ಡ್‌ರೋಬ್ ತುಂಬಾ ಇರಿಸಿಕೊಂಡಿದ್ದಾರೆ. ಈ ಕಪ್ಪು ದಿರಿಸಿನ ಲೇಸ್ ಡೋಲ್ಸ್ ಮತ್ತು ಗಬ್ಬಾನಾ ಔಟ್‌ಫಿಟ್ ದೀಪಿಕಾರ ಬೆಸ್ಟ್ ಲುಕ್‌ಗಳಲ್ಲಿ ಒಂದಾಗಿದೆ.

ಹೊಳೆಯುವ ಗೌನ್
ಗುಸ್ಸಿ ವಿನ್ಯಾಸದ ಹೊಳೆಯುವ ಬ್ರೌನ್ ಗೋಲ್ಡನ್ ಬಣ್ಣದ ಗೌನ್ ಅನ್ನು ಧರಿಸಿಕೊಂಡಿದ್ದಾರೆ. ಈ ಉಡುಗೆಗೆ ಅವರು ಮಾಡಿಕೊಂಡಿರುವ ಫರಾ ಫಾವ್‌ಸೆಟ್ ಹೇರ್‌ಡೋ ಅದ್ಭುತವಾಗಿ ಕಾಣುತ್ತಿದೆ.

ಲೇಸ್ ಸೀರೆ
ಈ ನ್ಯೂಡ್ ಬಣ್ಣದ ಬಿಳಿ ದೊಡ್ಡ ಹೂಗಳುಳ್ಳ ಸೀರೆಯು ದೀಪಿಕಾರನ್ನು ಇನ್ನಷ್ಟು ಕಂಗೊಳಿಸುವಂತೆ ಮಾಡಿದೆ. ರಾಜಕುಮಾರಿಯಾಗಿ ಕಂಡುಬಂದಿರುವ ದೀಪಿಕಾ ಕಣ್ಣುಕೋರೈಸುವಂತೆ ಕಂಡುಬರುತ್ತಿದ್ದಾರೆ.

ಕೆಂಪು ಮತ್ತು ಗೋಲ್ಡನ್ ಡ್ರೆಸ್
ದೀಪಿಕಾ ಪಡುಕೋಣೆಯ ಬೆಸ್ಟ್ ಲುಕ್‌ಗಳಲ್ಲಿ ಇದೊಂದಾಗಿದೆ. ಅರ್ಪಿತಾ ಮೆಹ್ತಾ ವಿನ್ಯಾಸದ ಕೆಂಪು ಮತ್ತು ಗೋಲ್ಡನ್ ಉಡುಪನ್ನು ಅವರು ಧರಿಸಿದ್ದಾರೆ. ಮಿರರ್ ವರ್ಕುಳ್ಳ ದಿರಿಸಿನಲ್ಲಿ ದೀಪಿಕಾ ಅಪ್ಸರೆಯಾಗಿ ಕಾಣುತ್ತಿದ್ದಾರೆ.

ಕೋರಲ್ ಸೀರೆ
ಕೋರಲ್ ಬಣ್ಣದ ಈ ಸೀರೆಯಲ್ಲಿ ದೀಪಿಕಾರ ಸ್ಲಿಮ್ ಫಿಗರ್ ಎದ್ದುತೋರುತ್ತಿದೆ. ಮ್ಯಾಚಿಂಗ್ ರವಿಕೆಯನ್ನು ಈ ಸೀರೆಗಾಗಿ ತೊಟ್ಟುಕೊಂಡಿರುವ ಸೀರೆಯ ಸುಂದರ ವಿನ್ಯಾಸದೊಂದಿಗೆ ರೂಪಸಿಯಾಗಿದ್ದಾರೆ.

ಪಿಂಕ್ ಗೌನ್
ಪಿಂಕ್ ಲೇಸ್ ಗೌನ್‌ನಲ್ಲಿ ದೀಪಿಕಾರ ಸುಂದರ ಮೈಕಟ್ಟು ಸುಂದರವಾಗಿ ಕಾಣುತ್ತಿದೆ.

ಕ್ರೀಂ ಸೀರೆ
ಸಿಎನ್‌ಎನ್ಐಬಿಎನ್ ಅವಾರ್ಡ್ 2013 ನಲ್ಲಿ ಈ ಸೀರೆಯಲ್ಲಿ ದೀಪಿಕಾ ಕಂಡುಬಂದರು. ಅಬುಜಾನಿ ಸಂದೀಪ್ ಕೋಸ್ಲಾ ವಿನ್ಯಾಸ ಮಾಡಿದ ಕ್ರೀಂ ಮತ್ತು ಗೋಲ್ಡನ್ ಬಣ್ಣದ ಸೀರೆಯಲ್ಲಿ ದೀಪಿಕಾ ಅದ್ಭುತವಾಗಿ ತೋರುತ್ತಿದ್ದಾರೆ.

ಅನಾರ್ಕಲಿ ಗೌನ್
ಪುಲ್ ಸ್ಲೀವ್ ಹಳದಿ ಬಣ್ಣದ ಅನಾರ್ಕಲಿ ಗೌನ್ ದೀಪಿಕಾಗೆ ಹೇಳಿ ಮಾಡಿಸಿದಂತಿದೆ. ಇದನ್ನು ವಿನ್ಯಾಸ ಮಾಡಿದವರು ಪಂಕಜ್ ಮತ್ತು ನಿಧಿ.

ಸಿಲ್ಕ್ ಸೀರೆ
ಈ ಸೋನಾಕ್ಷಿ ರಾಜ್ ಸಿಲ್ಕ್ ಸೀರೆಯಲ್ಲಿ ಕಂಗೊಳಿಸುತ್ತಿರುವ ದೀಪಿಕಾ ಕೆಂಪು ಬಣ್ಣದ ಲಿಪ್‌ಸ್ಟಿಕ್‌ನೊಂದಿಗೆ ತಮ್ಮ ಮೇಕಪ್ ಅನ್ನು ಪೂರ್ಣಗೊಳಿಸಿದ್ದಾರೆ.

ಮ್ಯಾಕ್ಸಿ ಗೌನ್
ಇತ್ತೀಚಿನ ದಿನಗಳಲ್ಲಿ ಹೆಚ್ಚು ಸ್ಟೈಲಿಶ್ ಆಗಿ ಕಂಡುಬರುತ್ತಿರುವ ದೀಪಿಕಾ ಮ್ಯಾಕ್ಸಿ ಗೌನ್ ಅನ್ನು ಸುಂದರ ಅಪಿಯರೆನ್ಸ್‌ಗೆ ಬಳಸಿಕೊಂಡಿದ್ದಾರೆ. ಈ ಕಪ್ಪು ಮತ್ತು ಗೋಲ್ಡನ್ ಬಣ್ಣದ ದಿರಿಸು ಅವರಿಗೆ ಚೆನ್ನಾಗಿ ಹೊಂದಿಕೆಯಾಗುತ್ತಿದೆ.



Click it and Unblock the Notifications