Latest Updates
-
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ!
ಮೆಕ್‌ಕ್ವೀನ್ ಡ್ರೆಸ್‌ನಲ್ಲಿ ಮಿಂಚಿದ ದೀಪಿಕಾ
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ಸ್ 2014 ರೆಡ್ ಕಾರ್ಪೆಟ್ ಈವೆಂಟ್‌ನಲ್ಲಿ ಸೆಲೆಬ್ರಿಟಿಗಳ ಸುರಿ ಮಳೆಯೇ ಸುರಿದಿತ್ತು! ಹಲವಾರು ಸೆಲೆಬ್ರಿಟಗಳು ಸ್ಕ್ರೀನ್ ಅವಾರ್ಡ್ಸ್ 2014 ಈವೆಂಟ್‌ನಲ್ಲಿ ವಿಭಿನ್ನ ಶೈಲಿಯ ಉಡುಗೆಯಲ್ಲಿ ಕಂಗೊಳಿಸಿದರು. ಸೋನಾಕ್ಷಿ ಸಿಹ್ನಾ ಅವರಿಂದ ಹಿಡಿದು, ದೀಪಿಕಾ ಪಡುಪಡುಕೋಣೆಯವರೆಗೆ, ಹಲವಾರು ಸೆಲೆಬ್ರಿಟಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇಂದು ನಾವಿಲ್ಲಿ ನೋಡುತ್ತಿರುವುದು ದೀಪಿಕಾರ ವಿಭಿನ್ನ ಲುಕಪ್‌ಗಳನ್ನು, ತಮ್ಮ ಮೈಕಟ್ಟು ಮತ್ತು ದೇಹಸೌಂದರ್ಯಕ್ಕೆ ಹೊಂದುವಂತಹ ಉಡುಗೆಯನ್ನೇ ಅವರು ತೊಡುವುದರಿಂದ ಅವರು ಹೋದಲ್ಲೆಲ್ಲಾ ಅವರ ವ್ಯಕ್ತಿತ್ವ ಎದ್ದುಕಾಣುತ್ತದೆ ಮತ್ತು ಅದು ಸುದ್ದಿಯಾಗುತ್ತದೆ. ಲೇಸ್ ಔಟ್‌ಫಿಟ್‌ಗಳ ಮೇಲೆ ಹೆಚ್ಚಿನ ಒಲವನ್ನು ಹೊಂದಿರುವ ದೀಪಿಕಾ ಹಲವಾರು ಸಮಾರಂಭಗಳಲ್ಲಿ ಇಂತಹ ಉಡುಗೆಯನ್ನೇ ಹೆಚ್ಚಾಗಿ ತೊಡುತ್ತಾರೆ.
ಅಲೆಕ್ಸ್ಯಾಂಡರ್ ಮೆಕ್‌ಕ್ವೀನ್ ವಿನ್ಯಾಸದ ಉಡುಗೆಯಲ್ಲಿ ರೆಡ್ ಕಾರ್ಪೆಟ್ ಗೌನ್‌ನಲ್ಲಿ ದೀಪಿಕಾ ಕಡೆದಿಟ್ಟ ಶಿಲ್ಪದಂತೆ ಸ್ನಿಗ್ಧ ಸೌಂದರ್ಯವತಿಯಾಗಿ ಕಾಣುತ್ತಿದ್ದಾರೆ. ನೀಳ ಕಾಯದ ತಮ್ಮ ಚೆಲುವನ್ನು ಈ ಉಡುಗೆಯಲ್ಲಿ ದೀಪಿಕಾ ಬಿಚ್ಚಿಟ್ಟಿದ್ದಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜನ್ಮದಿನದಂದು ಮಿಂಚಿದ ದೀಪಿಕಾ ಪಡುಕೋಣೆ
ಇತ್ತೀಚಿನ ದಿನಗಳಲ್ಲಿ ಹೆಚ್ಚು ಸ್ಟೈಲಿಶ್ ಆಗಿ ಕಂಡುಬರುತ್ತಿರುವ ದೀಪಿಕಾ ತನ್ನ ಅಲೆಕ್ಸ್ಯಾಂಡರ್ ಮೆಕ್‌ಕ್ವೀನ್ ವಿನ್ಯಾಸದ ಉಡುಗೆಯಲ್ಲಿ ಇನ್ನಷ್ಟು ಕಂಗೊಳಿಸುತ್ತಿದ್ದರು. ಈ ಕಪ್ಪು ಬಣ್ಣದ ಉಡುಗೆಯಲ್ಲಿ ದೀಪಿಕಾ ಅದಕ್ಕೆ ಮ್ಯಾಚ್ ಆಗುವ ಚಿನ್ನದ ಕಿವಿಯೋಲೆಯನ್ನು ಧರಿಸಿದ್ದರು. ಒಟ್ಟಾರೆ ಲೈಫ್ ಓಕೆ ಸ್ಕ್ರೀನ್ ಅವಾರ್ಡ್ಸ್ 2014 ನಲ್ಲಿ ದೀಪಿಕಾ ಕಪ್ಪು ಬಣ್ಣದ ಉಡುಗೆಯಲ್ಲಿ ಇನ್ನಷ್ಟು ಬೋಲ್ಡ್ ಆಗಿ ಕಂಡುಬಂದರು. ತಮ್ಮ ಲಿಪ್‌ಸ್ಟಿಕ್, ಹೇರ್‌ಸ್ಟೈಲ್, ಕಿವಿಯೋಲೆ ಹೀಗೆ ಎಲ್ಲಾ ಫ್ಯಾಶನ್‌ನಲ್ಲಿಯೂ ಸೈ ಎನಿಸಿಕೊಂಡಿರುವ ದೀಪಿಕಾ ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸ್ಕ್ರೀನ್ ಅವಾರ್ಡ್‌ನಲ್ಲಿ ಮಿಂಚಿದ ಅದಿತಿ ರಾವ್ ಹೈದಾರಿ
ಅದೇ ರೀತಿ ಕಳೆದ ವರ್ಷ ಲೈಫ್ ಓಕೆ ಸ್ಕ್ರೀನ್ ಅವಾರ್ಡ್ಸ್ 2014 ನಲ್ಲಿ ಇನ್ನೊಬ್ಬಳು ರೂಪದರ್ಶಿ ಕಟೆ ಹಡ್‌ಸನ್ ಕೂಡ ಕಂಡು ಬಂದಿದ್ದರು. ಅಂದು ಅವರು ಕೂಡ ತಮ್ಮ ಕಪ್ಪು ಬಣ್ಣದ ಮೆಕ್‌ಕ್ವೀನ್ ವಿನ್ಯಾಸದ ಉಡುಗೆಯಲ್ಲಿ ಇನ್ನಷ್ಟು ಕಂಗೊಳಿಸುತ್ತಿದ್ದರು. ವಿಭಿನ್ನ ವಿನ್ಯಾಸದ ಮೆಕ್‌ಕ್ವೀನ್ ಉಡುಗೆಗೆ ಸರಿ ಹೊಂದುವ, ಗೋಲ್ಡನ್ ಬೆಲ್ಟ್ ಧರಿಸಿದ್ದರು, ಅಲ್ಲದೆ ತನ್ನ ವಿಭಿನ್ನ ಕೇಶವಿನ್ಯಾಸದ ಮೂಲಕ ಎಲ್ಲರ ಮನಗೆದ್ದಿದ್ದರು. ಒಟ್ಟಾರೆಯಾಗಿ ಲೈಫ್ ಓಕೆ ಸ್ಕ್ರೀನ್ ಅವಾರ್ಡ್ಸ್ 2014 ನಲ್ಲಿ ಇವರಿಬ್ಬರೂ ಕೂಡ ತಮ್ಮ ಮೆಚ್ಚಿನ ಮೆಕ್‌ಕ್ವೀನ್ ಉಡುಗೆಯಲ್ಲಿ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾದರು.



Click it and Unblock the Notifications
