Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅಲೆಕ್ಸಾಂಡರ್ ವಾಂಗ್ ಪ್ಯಾಂಟ್ ಸೂಟ್‌ನಲ್ಲಿ ದೀಪಿಕಾ
ಸೆಲೆಬ್ರಿಟಿಗಳು ಯಾವ ವಿಧದ ಧಿರಿಸನ್ನು ಧರಿಸಿದರೂ ಈಗ ಫ್ಯಾಶನ್. ಹೆಚ್ಚಿನವರು ಪ್ಯಾಂಟ್ ಸೂಟ್‌ಗಳನ್ನು ಫ್ಯಾಶನ್ ಆಗಿ ಧರಿಸುತ್ತಿದ್ದಾರೆ. ಸೋನಂ ಕಪೂರ್ ಕೂಡ ಪ್ಯಾಂಟ್ ಸೂಟ್‌ಗಳನ್ನು ಟ್ರೆಂಡಿಯಾಗಿ ಬಳಸುತ್ತಿದ್ದಾರೆ. ಆದರೆ ಈಗೀಗ ದೀಪಿಕಾ ಕೂಡ ಈ ಪ್ಯಾಂಟ್ ಸೂಟ್‌ಗೆ ಹೆಚ್ಚು ಮರಳಾಗುತ್ತಿದ್ದಾರೆ.
ಜನ್ಮದಿನದಂದು ಮಿಂಚಿದ ದೀಪಿಕಾ ಪಡುಕೋಣೆ
ಆದರೆ ಈ ಬಾರಿ ದೀಪಿಕಾ ಅಲೆಕ್ಸಾಂಡರ್ ವಾಂಗ್ ಪ್ಯಾಂಟ್ ಸೂಟ್‌ನಲ್ಲಿ ಪ್ರಥಮ ಬಾರಿಗೆ ಕಂಡುಬಂದಿದ್ದಾರೆ. ಇಂತಹ ಪ್ಯಾಂಟ್‌ಗಳನ್ನು ಧರಿಸಲು ಅತಿ ಮುಖ್ಯವಾಗಿ ಬೇಕಾಗಿರುವುದು ಎತ್ತರವಾಗಿದೆ. ಅವರಿಗೆ ಈ ಪ್ಯಾಂಟ್ ತುಂಬಾ ಆಕರ್ಷಕವಾಗಿ ಕಂಡುಬಂದಿದ್ದು ಅವರ ದೇಹದ ಎತ್ತರಕ್ಕೆ ಹೇಳಿ ಮಾಡಿಸಿದಂತಿದೆ.

ಅಲೆಕ್ಸಾಂಡರ್ ವಾಂಗ್ ಬ್ಲೇಜರ್ ಅನ್ನು ಕೂಡ ಧರಿಸಿರುವ ದೀಪಿಕಾ ತಮ್ಮ ದೇಹಕ್ಕೆ ಒಪ್ಪುವಂತಹ ಧಿರಿಸನ್ನು ಆರಿಸಿಕೊಂಡಿದ್ದಾರೆ. ಇದು ಕೋಟ್ ಆಗಿದ್ದು ಇದನ್ನು ಇನ್ನಷ್ಟು ಚೆನ್ನಾಗಿ ಫೋಲ್ಡ್ ಮಾಡಿ ದೀಪಿಕಾಗೆ ತೊಟ್ಟುಕೊಳ್ಳಬಹುದಿತ್ತು.
ಎಚ್‌ಪಿ ವಾಯ್ಸ್‌ಟ್ಯಾಬ್ ಸಿರೀಸ್‌ನಲ್ಲಿ ದೀಪಿಕಾ ಪಡುಕೋಣೆ
ಯುಇಎಫ್‌ಎ ಚಾಂಪಿಯನ್ ಲೀಗ್‌ನಲ್ಲಿ ಮುಖ್ಯ ಅತಿಥಿಯಾಗಿ ದೀಪಿಕಾ ಆಗಮಿಸಿದ್ದರು. ಅಲೆಕ್ಸಾಂಡರ್ ವಾಂಗ್ ಸೂಟ್‌ನೊಂದಿಗೆ ಸಾಂಪ್ರದಾಯಿಕ ನೆಕ್ಲೇಸನ್ನು ಕೂಡ ದೀಪಿಕಾ ತೊಟ್ಟುಕೊಂಡಿದ್ದಾರೆ. ಒಟ್ಟಾರೆ ತಮ್ಮ ಧಿರಿಸಿಗೆ ತಕ್ಕಂತಹ ಅಲಂಕಾರವನ್ನು ದೀಪಿಕಾ ಮಾಡಿಕೊಂಡಿದ್ದಾರೆ. ನೆಕ್ಲೇಸ್‌ಗಿಂತಲೂ ಅವರು ಉದ್ದನೆಯ ಚೈನ್ ಅಥವಾ ಪೆಂಡೆಂಟ್ ಉಳ್ಳ ಹಾರವನ್ನು ಧರಿಸಿದ್ದರೆ ಇನ್ನೂ ಚೆನ್ನಾಗಿ ಕಾಣುತ್ತಿತ್ತು.
ದೀಪಿಕಾ ತಮ್ಮ ಕೂದಲನ್ನು ಮೇಲಕ್ಕೆ ಎತ್ತಿ ಕಟ್ಟಿ ಬನ್‌ನಂತೆ ಮಾಡಿಕೊಂಡಿದ್ದಾರೆ. ಆಕೆಯ ಗಾಢ ಬೆರ್ರಿ ಬಣ್ಣದ ಲಿಪ್‌ಸ್ಟಿಕ್ ನಮ್ಮ ಮನವನ್ನು ಕದ್ದಿದೆ. ಧಿರಿಸಿನ ಬಣ್ಣ ಲೈಟ್ ಆಗಿದ್ದರೂ ಅವರು ಮಾಡಿಕೊಂಡ ತುಟಿಯ ಗಾಢ ರಂಗು ದೀಪಿಕಾರ ನೋಟವನ್ನು ಕಳೆಗಟ್ಟಿದೆ. ನಾವು ಅಂದುಕೊಂಡಂತೆ ದೀಪಿಕಾಗೆ ಈ ಒನಪು ವೈಯ್ಯಾರ ತುಂಬಾ ಚೆನ್ನಾಗಿ ಹೊಂದಿಕೆಯಾಗಿದೆ.
ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ಸುಂದರಿ ದೀಪಿಕಾ
ದೀಪಿಕಾರ ಈ ಧಿರಿಸು ಇನ್ನಷ್ಟು ಆಕರ್ಷಕವಾಗಿದ್ದಲ್ಲಿ ದೀಪಿಕಾರ ಹೊಸ ಲುಕ್ ಇನ್ನಷ್ಟು ಚೆನ್ನಾಗಿ ಕಂಡುಬರುತ್ತಿತ್ತು. ಅವರ ನೀಳ ದೇಹ ಕಾಯ ಮೋಡಿ ಮಾಡಿದಂತೆ ಕಂಡುಬರುವುದು ಅವರು ಹಾಕುವ ಧಿರಿಸಿನಿಂದ. ಪ್ರಥಮ ಬಾರಿಗೆ ಅಲೆಕ್ಸಾಂಡರ್ ವಾಂಗ್ ಪ್ಯಾಂಟ್ ಸೂಟ್ ಅನ್ನು ಧರಿಸಿದ್ದ ದೀಪಿಕಾರಿಗೆ ಈ ಡ್ರೆಸ್ ಅಷ್ಟೊಂದು ಸರಿ ಕಾಣುತ್ತಿಲ್ಲ ಎಂಬುದು ಬೋಲ್ಡ್ ಸ್ಕೈ ಅಭಿಪ್ರಾಯವಾಗಿದೆ.



Click it and Unblock the Notifications
