Latest Updates
-
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್!
ಅಹನಾ ಡಿಯೋಲ್ ರಿಸೆಪ್ಶನ್‌ನಲ್ಲಿ ತಾರಾಮಣಿಯರು
ಅಹನಾ ಡಿಯೋಲ್ ಮತ್ತು ವೈಭವ್ ವೋರಾ ರಿಸೆಪ್ಶನ್ ಅದ್ಭುತವಾಗಿತ್ತು. ಹೆಚ್ಚಿನ ಸೆಲೆಬ್ರಿಟಿಗಳು ನವ ದಂಪತಿಗಳಿಗೆ ಶುಭ ಹಾರೈಸಲು ರಿಸೆಪ್ಶನ್‌ನಲ್ಲಿ ಪಾಲ್ಗೊಂಡಿದ್ದರು. ಸೋನಾಕ್ಷಿ ಸಿನ್ಹಾನಿಂದ ಹಿಡಿದು ಐಶ್ವರ್ಯ ರೈ ಬಚ್ಚನ್‌ವರೆಗೆ ನಟೀಮಣಿಯರ ದಂಡೇ ರಿಸೆಪ್ಶನ್‌ಗೆ ಹೊಸ ಕಳೆಯನ್ನು ನೀಡಿತ್ತು.
ಪಾಲ್ಗೊಂಡಿದ್ದ ಸೆಲೆಬ್ರಿಟಿಗಳು ವಿವಿಧ ವಿನ್ಯಾಸದ ವೈಭವೋಪೇತ ಉಡುಗೆಯಲ್ಲಿ ಮಿಂಚಿದ್ದರು. ಸ್ಟೈಲಿಶ್ ಅಹನಾ ರಿಸೆಪ್ಶನ್‌ಗೆ ನವ ಮಧುಮಕ್ಕಳು ಆಕರ್ಷಣೆಯ ಕೇಂದ್ರಬಿಂದುವಂತೆ ಅತಥಿಗಳೂ ಸೂಜಿಗಲ್ಲಿನಂತೆ ಸೆಳೆದರು. ಅಹನಾ ತಾಯಿ ಕನಸಿನ ಕನ್ಯೆ ಹೇಮಾಮಾಲಿನಿ ಸುಂದರವಾಗಿ ಅಲಂಕೃತಗೊಂಡಿದ್ದರು. ಮಿಂಟ್ ಹಸಿರು ಬಣ್ಣದ ಸೀರೆಯಲ್ಲಿ ಝಗಮಗಿಸುವ ಆಭರಣಗಳೊಂದಿಗೆ ಮಗಳ ಮದುವೆಯನ್ನು ಸಾಂಗವಾಗಿ ನೆರವೇರಿಸಿದರು.
ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಯಾವ ಬಗೆಯಲ್ಲಿ ಅಲಂಕೃತಗೊಂಡು ಬಂದಿದ್ದಾರೆ ಎಂಬುದನ್ನು ನೋಡಲು ಮುಂದೆ ಕಣ್ಣು ಹಾಯಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಂಕಜ್ ಮತ್ತು ನಿಧಿ ವಿನ್ಯಾಸದ ಧಿರಿಸಿನಲ್ಲಿ ಮಾಧುರಿ

1.ಸೋನಾಕ್ಷಿ ಸಿನ್ಹಾ
ಗಾಢ ನೀಲ ವರ್ಣದ ಲೆಹೆಂಗಾ ಸೀರೆಯನ್ನು ಸೋನಾಕ್ಷಿ ಆಯ್ಕೆಮಾಡಿಕೊಂಡಿದ್ದಾರೆ. ಬಿಳಿ ಮತ್ತು ಕಪ್ಪು ಬಣ್ಣದ ಎಂಬ್ರಾಯ್ಡರಿ ಕೆಲಸವನ್ನು ಹೊಂದಿರುವ ಲೆಹಾಂಗಾ ಸೀರೆ ಸೋನಾಕ್ಷಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

2.ದೀಪಿಕಾ ಪಡುಕೋಣೆ
ಕರೀಷ್ಮಾ ಮತ್ತು ಮೋನಿಕಾ ವಿನ್ಯಾಸದ ಸೀರೆಯನ್ನು ದೀಪಿಕಾ ರಿಸೆಪ್ಶನ್‌ನಲ್ಲಿ ತೊಟ್ಟಿದ್ದರು. ಎರಡು ಬಣ್ಣ ಮಿಶ್ರತ ಕಿತ್ತಳೆ ಬಣ್ಣದ ಕೋರಲ್ ಸೀರೆ ಅಂಚುಗಳಲ್ಲಿ ಗೋಲ್ಡನ್ ಎಂಬ್ರಾಯ್ಡಿರಿಯನ್ನು ಹೊಂದಿದೆ. ಆಮ್ರಪಾಲಿ ಗೋಲ್ಡನ್ ಆಭರಣಗಳು ಸುಂದರಿ ದೀಪಿಕಾರನ್ನು ಇನ್ನಷ್ಟು ಸಜ್ಜುಗೊಳಿಸಿದೆ.

3.ಐಶ್ವರ್ಯ ರೈ ಬಚ್ಚನ್
ನಿಯೋನ್ ಪಿಂಕ್ ಕಲರ್‌ನ ಸರಳ ಸುಂದರ ಚೂಡಿದಾರ್ ಐಶ್ವರ್ಯಾಗೆ ಈ ಬಾರಿ ಜೋಡಿಯಾಗಿದೆ. ಹೊಳೆಯುವ ಗೋಲ್ಡನ್ ಕುಸುರಿಯನ್ನು ಹೊಂದಿರುವ ಚೂಡಿದಾರ್ ಅಬು ಜಾನಿ ಸಂದೀಪ್ ಕೋಸ್ಲಾ ವಿನ್ಯಾಸದ್ದು ಎಂಬುದನ್ನು ನೆನೆಪಿಸುತ್ತದೆ.

4.ಜೂಹಿ ಚಾವ್ಲಾ
ಕೇಸರಿ ಮತ್ತು ಪಿಂಕ್ ಕಲರ್‌ನ ನೆಲಮುಟ್ಟುವಂತಿರುವ ಅನಾರ್ಕಲಿಯಲ್ಲಿ ಜೂಹಿ ಅಪ್ಸರೆಯಂತೆ ಕಂಡುಬರುತ್ತಿದ್ದಾರೆ. ಗೋಲ್ಡನ್ ವರ್ಕಿರುವ ಪಿಂಕ್ ಜಾಕೆಟ್ ತುಂಬಾ ಚೆನ್ನಾಗಿದೆ!

5.ಅಹನಾ ಡಿಯೋಲ್
ಮದುಮಗಳಾದ ಅಹನಾ ಮನೀಷ್ ಮಲ್ಹೋತ್ರಾ ವಿನ್ಯಾಸದ ನೆಲಮುಟ್ಟುವಂತಿರುವ ಅನಾರ್ಕಲಿ ದಿರಿಸಿನಲ್ಲಿ ಶೋಭಾಯಮಾನರಾಗಿದ್ದಾರೆ. ಅಹನಾ ಸಾಂಪ್ರದಾಯಿಕ ಕೆಂಪು ಬಣ್ಣವನ್ನು ಬಿಟ್ಟು ವಿವಿಧ ಬಣ್ಣಗಳನ್ನು ಆರಿಸಿದ್ದು ಅನಾರ್ಕಲಿಯ ಸುಂದರತೆಯನ್ನು ಹೆಚ್ಚಿಸಿದೆ. ಆಕೆಯ ಮದುವೆ ಉಡುಗೆ ಕೂಡ ಆಕರ್ಷಕವಾಗಿತ್ತು.

6.ಹೇಮಾ ಮಾಲಿನಿ
ಹೊಳೆಯುವ ಮಿನುಗು ಬೊಟ್ಟುಳ್ಳ ಮಿಂಟ್ ಹಸಿರು ಬಣ್ಣದ ಸೀರೆಯಲ್ಲಿ ಹೇಮಾಮಾಲಿನಿ ಉಸಿರುಕಟ್ಟುವಷ್ಟು ರೂಪಸಿಯಾಗಿ ಕಂಡುಬರುತ್ತಿದ್ದಾರೆ. ಆಕೆ ಹಿಡಿದುಕೊಂಡಿರುವ ಚಿನ್ನದ ಪರ್ಸ್ ಮತ್ತು ತುರುಬಿಗೆ ಮುಡಿದುಕೊಂಡಿರುವ ಹೂವು ಹೇಮಾಮಾಲಿನಿಯ ಅಲಂಕಾರವನ್ನು ಪರಿಪೂರ್ಣವಾಗಿಸಿದೆ.

7.ರೇಖಾ
ಇಂದಿಗೂ ಚೆಲುವೆಯಾಗಿಯೇ ಕಂಗೊಳಿಸುತ್ತಿರುವ ರೇಖಾ ರಿಸೆಪ್ಶನ್‌ನಲ್ಲಿ ಪಾಲ್ಗೊಂಡಿದ್ದು ಕಾಂಜೀವರಂ ಮತ್ತು ಚಿನ್ನದ ಆಭರಣಗಳೊಂದಿಗೆ ಕಂಗೊಳಿಸುತ್ತಿದ್ದರು.

8.ದಿಯಾ ಮಿರ್ಜಾ
ಸುಂದರಿ ಹಾಗೂ ಕ್ಯೂಟ್ ನಟಿ ದಿಯಾ ಮಿರ್ಜಾ ಕೂಡ ನವದಂಪತಿಗಳನ್ನು ಶುಭಹಾರೈಸಲು ರಿಸೆಪ್ಶನ್‌ನಲ್ಲಿ ಕಾಣಿಸಿಕೊಂಡಿದ್ದರು. ಕೆಂಪು ವರ್ಣದ ಗೋಲ್ಡನ್ ಎಂಬ್ರಾಯಿಡರಿ ವಿನ್ಯಾಸವನ್ನು ಹೊಳೆಯುವ ಗೋಲ್ಡನ್ ರವಿಕೆಯನ್ನು ಆಕೆ ತೊಟ್ಟು ಇನ್ನಷ್ಟು ಕಂಗೊಳಿಸುತ್ತಿದ್ದಾರೆ.



Click it and Unblock the Notifications
