Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ಕೇನ್ಸ್ 2014 ಎರಡನೇ ದಿನದಂದು ಮನ ತಣಿಸಿದ ಸೆಲೆಬ್ರಿಟಿಗಳು
ಕೇನ್ಸ್ ಪ್ರಾರಂಭತ್ಸೋವ ಅದ್ಧೂರಿಯಾಗಿಯೇ ನಮ್ಮನ್ನು ರಂಜಿಸಿತು. ಹಾಲಿವುಡ್ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ವಯ್ಯಾರದ ಮೂಲಕ ರೆಡ್ ಕಾರ್ಪೆಟ್ ಮೇಲೆ ಶೋ ಮಾಡಿದರು.
ಕೇನ್ಸ್‌ನ ಎರಡನೇ ದಿನದಂದು ಕೂಡ ಸೆಲೆಬ್ರಿಟಿಗಳು ತಮ್ಮ ಸುಂದರವಾದ ದೇಹಸಿರಿಯನ್ನು ದುಬಾರಿ ಧಿರಿಸುಗಳ ಮೂಲಕ ನಮಗೆ ಪ್ರದರ್ಶಿಸಿದ್ದಾರೆ. ಕೇನ್ಸ್ ಚಿತ್ರೋತ್ಸವದಲ್ಲಿ ಒಬ್ಬ ಸೆಲೆಬ್ರಿಟಿಯ ಕೇಶವಿನ್ಯಾಸದಿಂದ ಹಿಡಿದು ಪ್ರತಿಯೊಂದನ್ನು ಗಮನಿಸುತ್ತಾರೆ.
ಕೇನ್ಸ್ ಫಿಲ್ಮ್ ಫೆಸ್ಟಿವಲ್ 2014: ಕಣ್ಮನ ಸೆಳೆದ ತಾರೆಯರು
ಹೆಚ್ಚಿನ ಸೆಲೆಬ್ರಿಟಿಗಳಿಗೆ ಇದೊಂದು ಭವಿಷ್ಯದ ಹೆಬ್ಬಾಗಿಲಾಗಿರುತ್ತದೆ. ತಮ್ಮನ್ನು ಚಿತ್ರೋದ್ಯಮಕ್ಕೆ ಪ್ರದರ್ಶಿಸಲು ಇದೊಂದು ತಕ್ಕ ಅವಕಾಶವೆಂದೇ ಅವರು ಭಾವಿಸುತ್ತಾರೆ. ಆದ್ದರಿಂದಲೇ ಅವರ ಶೃಂಗಾರ ಭರ್ಜರಿಯಾಗಿರುತ್ತದೆ. ಹಾಗಿದ್ದರೆ ಕೇನ್ಸ್ ಎರಡನೇ ದಿನದಂದು ಕೂಡ ನಿಮ್ಮ ಮನಮೆಚ್ಚುವಂತೆ ರೆಡ್ ಕಾರ್ಪೆಟ್ ಮೇಲೆ ನಡೆದಾಡಿದ ಸುಂದರಿಗಳ ಪಟ್ಟಿ ಇಲ್ಲಿದೆ.
ಕೇನ್ಸ್ 2014 ರಲ್ಲಿ ಕಣ್ಸೆಳೆದ ನಿಕೋಲ್ ಕಿಡ್‌ಮೆನ್

ಬ್ಲೇಕ್ ಲೈವ್ಲೀ:
ಚಾನೆಲ್ ಸೀಕ್ವಿನ್ ಗೌನ್‌ನಲ್ಲಿ ಸರಳ ಮೇಕಪ್‌ನಲ್ಲಿ ಕಾಣಿಸಿಕೊಂಡ ಚೆಲುವೆ ಬ್ಲೇಕ್ ಲೈವ್ಲೀ ಎಲ್ಲರ ಮನಸೂರೆಗೊಳ್ಳುವಂತಿದ್ದರು.

ಇಲೇನಾ ಲೆನಿನಾ:
ವಿಶಿಷ್ಟವಾಗಿ ಡ್ರೆಸ್ ಮಾಡಿ ಸಿಲ್ವರ್ ಕೊರಳ ಹಾರವನ್ನು ಧರಿಸಿ ಎತ್ತರಕ್ಕೆ ಗಂಟು ಕಟ್ಟಿದ ಕೇಶವಿನ್ಯಾಸದಿಂದ ಇಲೇನಾ ಅತಿ ವಿಶಿಷ್ಟವಾಗಿ ಗಮನ ಸೆಳೆದರು.

ಜೋ ಸಲ್ದಾನಾ:
ಜೋ ಸಲ್ದಾನಾ ಈ ಕಪ್ಪು ಗೌನ್‌ನಲ್ಲಿ ಅತಿ ಸುಂದರಿಯಾಗಿದ್ದರು. ಗೌನ್‌ನ ಹಿಂಬದಿಯ ನೋಟವಂತೂ ಕಣ್ಣಿಗೆ ಹಬ್ಬವನ್ನುಂಟು ಮಾಡಿತ್ತು.

ಜೂಲಿಯಾನಾ ಮೂರೆ:
ಇಳಿಬಿಟ್ಟ ಕತ್ತಿನ ವಿನ್ಯಾಸವುಳ್ಳ ಧಿರಿಸು ಧರಿಸಿದ ಈ ಸುಂದರಿ ಜೂಲಿಯಾನಾ ಮೂರೆ ರೆಡ್ ಕಾರ್ಪೆಟ್ ಸುಂದರಿಯಾಗಿ ಮನಮೋಹಕಗೊಳಿಸಿದರು.

ಮಲ್ಲಿಕಾ ಶೆರಾವತ್:
ಕ್ಯಾನಸ್ ಎರಡನೇ ದಿನದಂದು ಅತಿ ಸರಳವಾಗಿ ಕಾಣಬೇಕೆಂದು ನಿರ್ಧರಿಸಿದ್ದಾರೆ ಮಲ್ಲಿಕಾ ಶೆರಾವತ್. ಮನೀಶ್ ತ್ರಿಪಾಟಿ ವಿನ್ಯಾಸದ ಗೌನ್‌ನಲ್ಲಿ ಮಲ್ಲಿಕಾ ಮುದ್ದಾಗಿ ಕಾಣುತ್ತಿದ್ದಾರೆ.

ವಿಕ್ಟೋರಿಯಾ ಬೋನಿಯಾ:
ಅಲೆಕ್ಸಾಂಡರ್ ಮೆಕ್ವೀನ್ ಗೌನ್‌ನಲ್ಲಿ ಮನಮೋಹಕಿಯಾಗಿ ಕಾಣುತ್ತಿರುವ ವಿಕ್ಟೋರಿಯಾ ಕೇನ್ಸ್ ಎರಡನೇ ದಿನದಂದು ನಮ್ಮ ಚಿತ್ತ ಕಲಕಿದರು.

ಲುಪಿಟಾ ನ್ಯೋಂಗೋ:
ಲುಪಿಟಾ ನ್ಯೋಂಗೋ ಕೂಡ ನೆವಿ ಬ್ಲೂ ಆಫ್ ಶೋಲ್ಡರ್ ಧಿರಿಸಿನಲ್ಲಿ ಕಂಡುಬಂದರು.

ರೂನಿ ಮರಾ:
ರೂನಿ ಮರಾ ಕೂಡ ಕೇನ್ಸ್ ಎರಡನೇ ದಿನದಂದು ಸುರ ಸುಂದರಿಯಾಗಿ ಕಾಣುತ್ತಿದ್ದರು ಬಿಳಿ ಬಣ್ಣದ ಧಿರಿಸಿನಲ್ಲಿ ದೇವತೆಯಂತೆ ಕಾಣುತ್ತಿದ್ದರು.

ಜೂಲಿಯಾನಾ ಮೂರೆ:
ಕೆಲ್ವೀನ್ ಕ್ಲೇನ್ ಕಲೆಕ್ಷನ್ ವುಮೆನ್ ಸೆಲೆಬ್ರೇಶನ್‌ನಲ್ಲಿ ನಮ್ಮ ಮನಸೂರೆಗೊಳಿಸಿದ ಜೂಲಿಯಾನಾ ಮೂರೆ ಕೇನ್ಸ್ ದಿನ ಎರಡರಂದು ಕಣ್ಣಿಗೆ ಹಬ್ಬವನ್ನುಂಟು ಮಾಡಿದರು.

ಕೇಟ್ ಬ್ಲೇಂಚೆಟ್:
ಮೇಸೆನ್ ವ್ಯಾಲೆಂಟೆನೋ ಧಿರಿಸಿನಲ್ಲಿ ಕೇಟ್ ಸುರಸುಂದರಿಯಾಗಿದ್ದರು.

ನವೋಮಿ ವಾಟ್ಸ್:
ಆಫ್ ಶೋಲ್ಡರ್ ಪಿಂಕ್ ಬುಶ್ ಧಿರಿಸಿನಲ್ಲಿ ನಮ್ಮ ಮನಮುಟ್ಟುವಂತೆ ಕಾಣುತ್ತಿದ್ದರು ಈ ನಟಿ. ರೆಡ್ ಕಾರ್ಪೆಟ್‌ಗೆ ಒಂದು ಹೊಳಪು ಇವರಿಂದ ಬಂದಿದೆ.



Click it and Unblock the Notifications
