Latest Updates
-
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ!
ಬ್ಯಾಕ್‌ಲೆಸ್ ಧಿರಿಸಿನಲ್ಲಿ ಗಮನ ಸೆಳೆದ ಸೆಲೆಬ್ರಿಟಿ
ರೆಡ್‌ಕಾರ್ಪೆಟ್‌ನ ಸುದ್ದಿ ಬಂದಾಗ ವೈವಿಧ್ಯಮಯ ಉಡುಗೆಯಲ್ಲಿ ಚಿತ್ತಾಕರ್ಷಿಸುವ ಸೆಲೆಬ್ರಿಟಿಗಳ ಸಾಲೇ ನಮ್ಮ ಕಣ್ಣ ಮುಂದೆ ಬರುತ್ತದೆ. ಹೆಚ್ಚು ಪ್ರಚಲಿತ ಸ್ಟೈಲಿಶ್ ಉಡುಗೆಗಳಲ್ಲಿ ಸುಂದರಿಯರು ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುತ್ತಾರೆ. ಡೀಪ್ ಮತ್ತು ಸ್ವಲ್ಪ ಹಿಂಭಾಗ ತೆರೆದಿರುವ ಉಡುಗೆ ಈಗ ಅತ್ಯಾಧುನಿಕವಾಗುತ್ತಿದೆ.
ಹಿಂಭಾಗ ತೆರೆದಿರುವ ಉಡುಗೆಗಳು ರೆಡ್ ಕಾರ್ಪೆಟ್‌ನಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಸೋನಾಕ್ಷಿ ಸಿನ್ಹಾ, ವಾಣಿ ಕಪೂರ್, ಮತ್ತು ಹಲವಾರು ಬಾಲಿವುಡ್ ನಟಿಯರು ತಮ್ಮ ತೆರೆದ ಉಡುಗೆಯಿಂದ ಕಣ್ಮನ ಸೆಳೆದರು. ಸ್ಟೈಲ್,ಅಲಂಕಾರದಲ್ಲಿ ಈ ಬೆಡಗಿಯರನ್ನು ಸೋಲಿಸು ಯಾರಿಂದಲೂ ಸಾಧ್ಯವಿಲ್ಲ ಅಷ್ಟು ಅದ್ಭುತರಾಗಿದ್ದರು ಈ ಚೆಲುವೆಯರು.
ಬೋಲ್ಡ್ ಸ್ಕೈ ಇಂದು ನಿಮ್ಮೊಂದಿಗೆ ಇಂತಹ ಸೆಲೆಬ್ರಿಟಿಗಳ ಕಣ್ಸೆಳೆಯುವ ಭಂಗಿಗಳನ್ನು ತೋರಿಸುತ್ತಿದೆ. ಗೌನ್‌ಗಳಲ್ಲಿ ಸಖತ್ತಾಗಿ ಮಿಂಚಿರು ಈ ಲಲನಾ ಮಣಿಯರು ನಿಮ್ಮ ಕಣ್ಣನ್ನು ಮುಚ್ಚದಂತೆ ಮಾಡುತ್ತಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಝೀ ಸಿನಿ ಅವಾರ್ಡ್ಸ್ 2014: ಕಣ್ಮನ ಸೆಳೆದ ಬೆಡಗಿಯರು

ಸೋನಾಕ್ಷಿ ಸಿನ್ಹಾ:
ರೋಯಲ್ ಬಣ್ಣದ, ನೇರಳೆ ಗೌನ್‌ನಲ್ಲಿ ಇನ್ನಷ್ಟು ಸುಂದರಿಯಾಗಿದ್ದರು ಸೋನಾಕ್ಷಿ. ಗೀಮಾ ಅವಾರ್ಡ್ಸ್ 2014 ರಲ್ಲಿ ಸೋನಾಕ್ಷಿಯ ಈ ಉಡುಗೆ ಅವರ ಹೊಸ ಭಂಗಿಯನ್ನು ನಮಗೆಲ್ಲಾ ಪರಿಚಯಿಸಿತ್ತು. ಸ್ನಿಗ್ಧ, ಸುಂದರ ನೋಟ ನವಿರಾದ ಮೇಕಪ್ ಸೋನಾಕ್ಷಿಯನ್ನು ಅಪ್ಸರೆಯನ್ನಾಗಿಸಿದೆ.

ಸೋನಾಲ್ ಚವ್ಹಾಣ್:
ಝೀ ಸಿನಿ ಅವಾರ್ಡ್ಸ್ 2014, ನಲ್ಲಿ ಅತ್ಯದ್ಭುತ ಸುಂದರಿ ಸೋನಾಲ್ ಕಣ್ಮನ ಸೆಳೆದರು. ಕಪ್ಪು ಬಣ್ಣದ ಹಿಂಭಾಗ ತೆರೆದಿರುವ ಗೌನ್‌ನಲ್ಲಿ ಸೋನಾಲ್ ಇನ್ನಷ್ಟು ಮುದ್ದಾಗಿದ್ದಾರೆ.

ಶ್ರೀದೇವಿ:
ಯಾರಿಗೂ ಶ್ರೀದೇವಿಯಷ್ಟು ಅದ್ಭುತವಾಗಿ ಕಾಣಲು ಸಾಧ್ಯವಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. 56 ನೇ ಐಡಿಯಾ ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ಶ್ರೀದೇವಿ ಹಿಂಭಾಗ ತೆರೆದಿರುವ ಗೌನ್‌ನಲ್ಲಿ ಇನ್ನಷ್ಟು ಸೆಕ್ಸಿಯಾಗಿದ್ದರು.

ದೀಪಿಕಾ ಪಡುಕೋಣೆ ವೂಗ್ಯೂಗಾಗಿ:
ವೋಗ್ಯೂ ನಿಯತಕಾಲಿಕೆಯ ಮುಖಪುಟದಲ್ಲಿ ರಾರಾಜಿತಗೊಂಡಂತಹ ಬಾಲಿವುಡ್ ಬೆಡಗಿ ದೀಪಿಕಾರ ಈ ಬ್ಯಾಕ್‌ಲೆಸ್ ಡ್ರೆಸ್ ಹಲವರನ್ನು ಹುಬ್ಬೇರಿಸಿದ್ದಂತೂ ನಿಜ.

ಸ್ಟಾರ್‌ಡಸ್ಟ್ ಬ್ಯೂಟಿ ದೀಪಿಕಾ:
ದೀಪಿಕಾರ ಇನ್ನೊಂದು ಸುಂದರ ಬ್ಯಾಕ್‌ಲೆಸ್ ಭಂಗಿಗೆ ಸ್ಟಾರ್‌ಡಸ್ಟ್ ನಿಯತಕಾಲಿಕೆ ಸಾಕ್ಷಿಯಾಯಿತು. ಈ ತಿಂಗಳಿನ ಈ ನಿಯತಕಾಲಿಕೆ ಬಿಸಿ ದೋಸೆಯಂತೆ ಮಾರಾಟವಾಗುವುದಂತೂ ಖಂಡಿತ.

ವಾಣಿ ಕಫೂರ್:
ರೆಡ್ ಕಾರ್ಪೆಟ್ ಫಿಲ್ಮ್‌ಫೇರ್ 2014 ಅವಾರ್ಡ್ಸ್‌ನಲ್ಲಿ ವಾಣಿ ಕಪೂರ್ ಇನ್ನಷ್ಟು ಸುಂದರಿಯಾಗಿದ್ದಾರೆ. ಬ್ಯಾಕ್ ಲೆಸ್ ಧಿರಿಸಿನಲ್ಲಿ ಕಣ್ತುಂಬಿಕೊಂಡಂತಿರುವ ಚೆಲುವೆ ವಾಣಿ ನೋಡುಗರನ್ನು ಮಂತ್ರಮುಗ್ಧಗೊಳಿಸಿದ್ದಂತೂ ನಿಜ.

ಪಲ್ಲವಿ ಶರ್ದಾ:
ಫಿಲ್ಮ್‌ಫೇರ್ 2014 ರಲ್ಲಿ ಪಲ್ಲವಿ ಸ್ಟನ್ನಿಂಗ್ ಆಗಿ ಕಂಡುಬರುತ್ತಿದ್ದಾರೆ. ಕಪ್ಪು ಬಣ್ಣದ ಹಿಂಭಾಗ ತೆರೆದಿರುವ ಗೌನ್ ಪಲ್ಲವಿಗೆ ಚಿಕ್ ಆಗಿ ತೋರುತ್ತಿದೆ.

ಚಿತ್ರಾಂಗದಾ:
ಬ್ಯಾಕ್‌ಲೆಸ್ ಉಡುಗೆಯಲ್ಲಿ ಇನ್ನಷ್ಟು ಮಿಂಚುತ್ತಿದ್ದಾರೆ. ಸೊಗಸಾದ ಬನ್ ಕೇಶವಿನ್ಯಾಸದೊಂದಿಗೆ ಬ್ಯಾಕ್‌ಲೆಸ್ ಉಡುಗೆಯಲ್ಲಿ ಚಿತ್ರಾಂಗದಾ ಸುಂದರಿಯಾಗಿದ್ದಾರೆ.



Click it and Unblock the Notifications