Latest Updates
-
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ?
ಜನ್ಮಾಷ್ಟಮಿಗಾಗಿ ಪುಟಾಣಿ ಕೃಷ್ಣನ ವೇಷ ಭೂಷಣಗಳು
ಕೃಷ್ಟನ ಹುಟ್ಟುಹಬ್ಬವನ್ನು ಜನ್ಮಾಷ್ಟಮಿಯನ್ನಾಗಿ ಭಾರತದಾದ್ಯಂತ ಆಚರಿಸಲಾಗುತ್ತದೆ. ಈ ಹಬ್ಬದಂದು, ಕೃಷ್ಣನ ವೇಷಭೂಷಣಗಳನ್ನು ಧರಿಸಿ ಪುಟಾಣಿ ಮಕ್ಕಳಿಗೆ ಅಲಂಕಾರ ಮಾಡಲಾಗುತ್ತದೆ. ಕೃಷ್ಣನನ್ನು ಬಣ್ಣಬಣ್ಣದ ಅಲಂಕಾರಗಳಲ್ಲಿ ದ್ವಾಪರಯುಗದಲ್ಲಿ ಯಶೋಧೆಯು ಸಿಂಗರಿಸಿದಂತೆ, ಕಲಿಯುಗದಲ್ಲಿ ತಮ್ಮ ತಮ್ಮ ಮುದ್ದು ಕಂದಮ್ಮಗಳನ್ನು ತಾಯಂದಿರು ಕೃಷ್ಣನ ರೂಪದಲ್ಲಿ ಅಲಂಕರಿಸುತ್ತಾರೆ.
ಪ್ರತಿಯೊಂದು ಮನೆಯಲ್ಲೂ ಈ ಪುಟಾಣಿ ಕೃಷ್ಣನನ್ನು ಸಿಂಗರಿಸುವ ಹಬ್ಬ ಬಲು ಜೋರಾಗಿಯೇ ನಡೆಯುತ್ತದೆ ಎಂದೇ ಹೇಳಬಹುದು. ಇಲ್ಲಿ ನಾವು ಕೃಷ್ಣಾಷ್ಟಮಿಗೆ ಕೃಷ್ಣನ ವೇಷದಲ್ಲಿರುವ ಕೆಲ ಬಾಲ ಕೃಷ್ಣರ ಫೋಟೋಗಳನ್ನು ನೀಡಿದ್ದೇವೆ. ಈ ಬಾಲ ಕೃಷ್ಣರನ್ನು ನೋಡುತ್ತಿದ್ದರೆ ನಿಮ್ಮ ಚಿಂತೆ ಎಲ್ಲವೂ ಮಾಯವಾಗಿ ತುಟಿಯಲ್ಲಿ ಮಂದಹಾಸ ಖಂಡಿತವಾಗಿಯೂ ಮೂಡುತ್ತದೆ. ಬನ್ನಿ ಪುಟಾಣಿ ಕೃಷ್ಣನ ವೇಷ ಭೂಷಗಳಿಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಾಲ ಕೃಷ್ಣನ ದಿರಿಸು
ಬಾಲ ಕೃಷ್ಣ ತನ್ನ ತಲೆಯಲ್ಲಿ ಸಣ್ಣ ಜುಟ್ಟನ್ನು ಹೊಂದಿರುತ್ತಾನೆ. ಬಿಳಿಯ ದೋತಿಗೆ ಹೊಂದಿಕೆಯಾಗುವಂತೆ ಈ ಸಣ್ಣ ಜುಟ್ಟನ್ನು ಹೂವಿನೊಂದಿಗೆ ಅಲಂಕಾರಿಸುತ್ತಾರೆ.

ಆಧುನಿಕ ಕೃಷ್ಣ
ನಿಮ್ಮ ಮಗುವಿಗೆ ಧೋತಿ ಅಷ್ಟೊಂದು ಆರಾಮದಾಯಕ ಎಂದೆನಿಸದಿದ್ದಲ್ಲಿ, ಕುರ್ತಾ ಪೈಜಾಮವನ್ನು ಕೂಡ ಮಗುವಿಗೆ ನೀವು ಧರಿಸಬಹುದು.

ಕೃಷ್ಣನ ಕೊಳಲು
ಈ ಚಿತ್ರದಲ್ಲಿ ಈ ಪುಟ್ಟ ಮಗು ಕೊಳಲನ್ನು ಎಷ್ಟು ಸುಂದರವಾಗಿ ಹಿಡಿದುಕೊಂಡಿದೆ ಎಂಬುದನ್ನು ನೋಡಿ.

ಧೋತಿ ಕುರ್ತಾ
ಗಾಢ ಬಣ್ಣಗಳನ್ನು ಧರಿಸುವುದೆಂದರೆ ಕೃಷ್ಣನಿಗೆ ತುಂಬಾ ಇಷ್ಟ. ಗಾಢವಾದ ನೀಲಿ ಕುರ್ತಾ ಮತ್ತು ಕೆಂಪು ಧೋತಿಯಲ್ಲಿ ಮುದ್ದಾದ ಕೃಷ್ಣ.

ಕೃಷ್ಣನ ಕಿರೀಟ
ಕೃಷ್ಣನನ್ನು ಸುಂದರವಾಗಿ ಅಲಂಕರಿಸಿ, ಮುದ್ದಾದ ಕಿರೀಟವನ್ನು ತೊಡಿಸಲಾಗುತ್ತದೆ. ಈ ಪುಟ್ಟ ಮಗು ಕೃಷ್ಣನಂತೆ ಕಿರೀಟ ಧರಿಸಿ ಮುದ್ದಾಗಿ ಕಾಣುತ್ತಿದ್ದಾನೆ.

ಬೆಣ್ಣೆ ಕಳ್ಳ
ಮನೆಯಲ್ಲೇ ತಯಾರಿಸಿದ ಬೆಣ್ಣೆಯನ್ನು ಮುದ್ದು ಕೃಷ್ಣ ತುಂಬಾ ಇಷ್ಟಪಡುತ್ತಾನೆ, ಗೋಪಿಯರಿಂದ ಇದನ್ನು ಕದ್ದು ತಿನ್ನುವುದೆಂದರೆ ಕೃಷ್ಣನಿಗೆ ತುಂಬಾ ಇಷ್ಟವಾದ ಕೆಲಸವಾಗಿದೆ.

ರಾಧಾ
ಇನ್ನು ಕೃಷ್ಣನ ಆಪ್ತ ಗೆಳತಿ ರಾಧಾಳಂತೆ ಪುಟಾಣಿ ಹುಡುಗಿಗೆ ಅಲಂಕರಿಸಲಾಗುತ್ತದೆ. ರಾಧಾ ಇಲ್ಲದಿದ್ದರೆ ಕೃಷ್ಣನ ಅಲಂಕಾರವೇ ವ್ಯರ್ಥ.

ಬಾಂಧಿನಿ ದಿರಿಸು
ಕೃಷ್ಣನ ಬಾಂಧಿನಿ ದಿರಿಸು ಹೆಚ್ಚು ಜನಪ್ರಿಯ ಮತ್ತು ಹಳದಿ ಬಣ್ಣವೆಂದರೆ ಕೃಷ್ಣನಿಗೆ ತುಂಬಾ ಇಷ್ಟ.

ತುಂಟ ಕೃಷ್ಣ
ಕೃಷ್ಣನನ್ನು ತುಂಟ ಅವತಾರದಲ್ಲಿ ನೋಡಲು ನಿಮಗಿಷ್ಟವೇ? ತುಂಟಾಟವನ್ನು ಪ್ರದರ್ಶಿಸುವ ತುಂಟ ಕೃಷ್ಣನ ಮೋಜು ಯಾರಿಗೆ ಇಷ್ಟವಿಲ್ಲ ಹೇಳಿ.

ಗೋಪಿ
ನಿಮ್ಮ ಮುದ್ದು ತುಂಟ ಕೃಷ್ಣನಿಗೆ ಆಡಲು ಜೊತೆಗಾತಿ ಗೋಪಿಯಾಗಿದ್ದಾಳೆ. ಇಲ್ಲಿದೆ ಮುದ್ದಾದ ಗೋಪಿಯ ಸುಂದರ ಮುಖಾರವಿಂದ. ಗೋಪಿಗೆ ಮಾಡಿರುವ ಕಿರೀಟದ ಅಲಂಕಾರ ನಿಜಕ್ಕೂ ಮನಮೋಹಕವಾಗಿದೆ.

ಜುಟ್ಟುಳ್ಳ ಮುದ್ದು ಕೃಷ್ಣ
ಈ ಪುಟ್ಟ ಕೃಷ್ಣನ ನಗುವಲ್ಲದೆ ಸಿಂಗರಿಸಿರುವ ಆಕರ್ಷಕ ಜುಟ್ಟು ಕೂಡ ಸುಂದರವಾಗಿದೆ.

ಮುತ್ತಿನ ಅಲಂಕಾರ
ಮುತ್ತಿನ ಅಲಂಕಾರದಲ್ಲಿ ಈ ಬಾಲ ಕೃಷ್ಣ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದಾನೆ. ಬೆಳ್ಳಿಯ ಫ್ಯಾನ್ಸಿ ಕಿರೀಟ ಕೂಡ ಇಲ್ಲಿ ಅತಿ ಸುಂದರವಾಗಿದೆ.



Click it and Unblock the Notifications
