Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಕಾಮನ್ ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿ ಮನಸೆಳೆದ ಐಶ್ವರ್ಯಾ ರೈ
ನಮ್ಮನ್ನು ಆಕರ್ಷಿತರನ್ನಾಗಿ ಮಾಡಿ ತನ್ನತ್ತ ಸೆಳೆದುಕೊಳ್ಳುವ ನೀತಿ ಐಶ್ವರ್ಯಾ ರೈ ಬಚ್ಚನ್‌ಗೆ ಹೊಸತೇನಲ್ಲ. ಗ್ಲಾಸ್‌ಗೋವ್‌ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಐಶ್ ನಮ್ಮನ್ನು ಮೋಡಿ ಮಾಡುವಷ್ಟು ಚೆಲುವೆಯಾಗಿದ್ದರು. ಸುಂದರವಾಗಿರುವ ಗುಸ್ಸಿ ನಿಲುವಂಗಿಯಲ್ಲಿ ಅಂದಗಾತಿಯಾಗಿ ಐಶ್ ಕಾಣಿಸಿಕೊಂಡಿದ್ದರು.
ಆಧುನಿಕ ಸ್ಟೈಲಿಶ್ ಅಮ್ಮನಾಗಿ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡ ಐಶ್, ನಮ್ಮನ್ನು ಸೆಳೆದುಕೊಳ್ಳುವಲ್ಲಿನ ಜಾಣ್ಮೆಯನ್ನು ಎಂದಿಗೂ ಮರೆತಿಲ್ಲ ಎಂಬುದನ್ನು ಇನ್ನೊಮ್ಮೆ ಸಾಧಿಸಿ ತೋರಿಸಿದ್ದಾರೆ. ಗುಸ್ಸಿ ಪ್ರಿ ಫಾಲ್ ಕಪ್ಪು ಬಣ್ಣದ ಉಡುಗೆ ಗ್ಲಾಸ್‌ಗೋವ್‌ನ ಕಾಮನ್ ವೆಲ್ತ್ ಉದ್ಘಾಟನೆಯ ಕಳೆಯನ್ನು ಹೆಚ್ಚಿಸಿದ್ದು ಸುಳ್ಳಲ್ಲ.
ತಮ್ಮ ಸುಂದರ ಮತ್ತು ಸ್ನಿಗ್ಧ ಸೌಂದರ್ಯದಿಂದ ಕ್ರೀಡಾಂಗಣದಲ್ಲಿ ಉಸಿರು ನಿಂತುಹೋಗುವಂತೆ ಮಾಡಿದ ಬಚ್ಚನ್ ಕುಟುಂಬದ ಸೊಸೆ ಐಶ್ ಇನ್ನಷ್ಟು ತೆಳ್ಳಗಾಗಿದ್ದು ಸುಂದರಿಯಾಗಿದ್ದಾರೆ. ಹಾಗಿದ್ದರೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಐಶ್‌ರ ಅದ್ಭುತ ರೂಪ ಲಾವಣ್ಯವನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಾವು ನಿಮಗಾಗಿ ಪ್ರದರ್ಶಿಸಿದ್ದು ಅದರತ್ತ ನೋಟ ಹರಿಸಿ.

ಕಪ್ಪು ಬಣ್ಣದಲ್ಲಿ ಚೆಲುವೆ ಐಶ್
ತಮ್ಮ ಸ್ವಲ್ಪ ದಪ್ಪವನ್ನು ಮರೆ ಮಾಚಲು ಐಶ್ ಕಪ್ಪನ್ನು ಆರಿಸಿಕೊಳ್ಳುತ್ತಿದ್ದಾರೆ ಎಂದೇ ನಾವು ಭಾವಿಸುತ್ತಿದ್ದೆವು. ಸಿಡಬ್ಲ್ಯೂಜಿ 2014 ರಲ್ಲಿ ಕಪ್ಪು ಗುಸ್ಸಿ ಕೋಟ್‌ನಲ್ಲಿ ಮನಮೋಹಕಿಯಾಗಿ ಐಶ್ ಕಂಡುಬಂದಿದ್ದರು.

ಆಕೆಯ ಬೂಟ್ಸ್
ಈ ಗುಸ್ಸಿ ಕೋಟ್‌ಗೆ ಬೂಟ್ಸ್‌ಗಿಂತ ಹೆಚ್ಚು ಮ್ಯಾಚಿಂಗ್ ಯಾವುದಿದೆ ಹೇಳಿ ನಿಜಕ್ಕೂ ಐಶ್ ಧರಿಸಿದ ಪಾದರಕ್ಷೆ ಹೇಳಿ ಮಾಡಿಸಿದಂತಿದೆ ಮತ್ತು ಸುಂದರವಾಗಿದೆ.

ನೈಸರ್ಗಿಕ ಸುಂದರಿ
ಯಾವುದೇ ಮೇಕಪ್ ಇಲ್ಲದೆ ಈ ಸುಂದರಿಯನ್ನು ನೋಡುವುದು ನಮಗಿಷ್ಟ. ನಿಮ್ಮ ಹೃದಯ ಬಡಿತವನ್ನು ಈ ಸುಂದರಿ ಹೆಚ್ಚಿಸುವುದು ಖಂಡಿತ. ಬರಿಯ ಕಾಡಿಗೆಯನ್ನು ಹಚ್ಚಿ ಈ ಸುಂದರಿ ತಮ್ಮ ನೈಸರ್ಗಿಕ ಸೌಂದರ್ಯವನ್ನು ಬಿಚ್ಚಿಟ್ಟಿದ್ದಾರೆ.

ಬಿಹೀವ್ ಕೇಶಸೌಂದರ್ಯ
ಕಪ್ಪಗಿನ ಭುಜದವರೆಗೆ ಬರುವಂತಹ ತಮ್ಮ ನೀಳ ಕೇಶರಾಶಿಯನ್ನು ಐಶ್ ಬಿಹೀವ್ ಮಾದರಿಯಲ್ಲಿ ಕಟ್ಟಿದ್ದಾರೆ.

ಕಣ್ಣುಗಳೇ ಮಾತುಗಳು
ಗ್ಲಾಸ್‌ಗೋವ್‌ನ ಕಾಮನ್ ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಐಶ್‌ರ ಬೋಲ್ಡ್ ಲುಕ್ ಅನ್ನು ನಮಗೆ ಕಾಣಬಹುದು.

ನೀಲಿಯ ಸ್ಪರ್ಶ
ನೀಲಿ ಬಣ್ಣದ ಕ್ಲಚ್ ಅನ್ನು ತಮ್ಮ ಕಪ್ಪು ಸೂಟ್‌ಗೆ ಹೊಂದಿಕೆಯಾಗುವಂತೆ ತೆಗೆದುಕೊಂಡಿರುವ ಐಶ್ ತಾವು ನಿಜಕ್ಕೂ ಸ್ಟೈಲಿಶ್ ಮನಸ್ಸುಳ್ಳವರು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಬ್ರಾಂಡ್‌ಗಳಲ್ಲಿ ಪ್ರೀತಿ
ಲಾಂಗಿನ್ಸ್ ವಾಚ್ ಅನ್ನು ತಮ್ಮ ಮಣಿಗಂಟಿಗೆ ಕಟ್ಟಿಕೊಂಡಿರುವ ಈ ತಾರೆ ಬ್ರಾಂಡ್‌ಗಳಲ್ಲಿನ ತಮ್ಮ ಪ್ರೀತಿಯನ್ನು ಅರುಹಿದ್ದಾರೆ.



Click it and Unblock the Notifications
