Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಕಲ್ಯಾಣ್ ಜ್ಯುವೆಲ್ಲರ್ಸ್ ಉದ್ಘಾಟನೆಯಲ್ಲಿ ಐಶ್ವರ್ಯ
ಅದ್ಭುತ ಸುಂದರಿ ಐಶ್ವರ್ಯ ರೈಯನ್ನು ಸೌಂದರ್ಯದಲ್ಲಿ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ದುಬೈಯಲ್ಲಿ ನಡೆದ ಕಲ್ಯಾಣ್ ಜ್ಯುವೆಲ್ಲರ್ಸ್ ಉದ್ಘಾಟನಾ ಸಮಾರಂಭವೇ ಸಾಕ್ಷಿಯಾಯಿತು. ಬಾಲಿವುಡ್ ತಾರೆ ಐಶ್ವರ್ಯ ರೈ ಬಚ್ಚನ್ ಭುವನ ಸುಂದರಿಯಾಗಿ ನೋಡುಗರ ಕಣ್ಮನ ಸೆಳೆದರು. ಅವರು ಧರಿಸಿದ ಅನಾರ್ಕಲಿ ಧಿರಿಸಿನಲ್ಲಿ ಕಂಡುಬಂದ ಸುಂದರ ಗೋಲ್ಡನ್ ಕುಸುರಿ ನೋಡುಗರನ್ನು ಸ್ತಂಭೀಭೂತಗೊಳಿಸಿತು. ಸವ್ಯಸಾಚಿ ಅನಾರ್ಕಲಿ ಉಡುಗೆಯಲ್ಲಿ ರಾತ್ರಿ ಪೂರ್ತಿ ಐಶ್ ಮಿಂಚಿದರು.
ದುಬೈನಲ್ಲಿ ನಡೆದ ಕಲ್ಯಾಣ್ ಜ್ಯುವೆಲ್ಲರ್ಸ್ ಉದ್ಘಾಟನಾ ಸಮಾರಂಭದಲ್ಲಿ ಐಶ್ ಪ್ರತಿಯೊಬ್ಬರ ನೋಟವನ್ನು ತನ್ನತ್ತ ಸೆಳೆಯುವಂತೆ ಮಾಡಿದರು. ನಮಗೆ ಇಲ್ಲಿ ಕಂಡುಬಂದ ಪ್ರಮುಖ ಅಂಶವೆಂದರೆ ಸುಂದರಿ ಐಶ್ವರ್ಯರವರ ಸ್ಟೈಲ್ ಸೆನ್ಸ್ ಆಗಿದೆ. ತನ್ನ ಸೌಂದರ್ಯವನ್ನು ಇನ್ನಷ್ಟು ಕಾಂತಿಯುಕ್ತಗೊಳಿಸುವ ಕಲೆ ಐಶ್‌ಗೆ ಕರಗತವಾಗಿರುವುದು ಒಂದು ವಿಶೇಷವೇ ಸರಿ..! ಪ್ರತಿಯೊಂದು ಉಡುಗೆಯು ಅವರ ಧರಿಸುವ ಶೈಲಿಯಿಂದ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ಮುಕ್ತವಾಗಿ ಇಳಿಬಿಟ್ಟಂತೆ ಕಾಣುವ ಅನಾರ್ಕಲಿ ಗೌನ್ ವಿನ್ಯಾಸಕ ಸವ್ಯಸಾಚಿಯ ಪ್ರತಿಭೆಗೆ ಹಿಡಿದ ಕೈಗನ್ನಡಿ. ಪೂರ್ತಿ ಅನಾರ್ಕಲಿ ಧಿರಿಸು ಚಿನ್ನದ ಎಳೆಯಿಂದ ಮಾಡಲಾಗಿದ್ದು ಭಾರಿ ಎಂಬ್ರಾಯಿಡರಿ ಕೆಲಸ ಧಿರಿಸಿಗೆ ಹೊಸ ರೂಪವನ್ನು ನೀಡಿದೆ. ಉಡುಗೆಯ ಮುಂಭಾಗದಲ್ಲಿ ಫಿಶ್ ಸ್ಕೇಲ್ ವಿನ್ಯಾಸವನ್ನು ಮಾಡಲಾಗಿದ್ದು ಚಮತ್ಕಾರಿ ನೋಟವನ್ನು ಪ್ರದರ್ಶಿಸಿದೆ. ಈ ಗೋಲ್ಡನ್ ಅನಾರ್ಕಲಿಯ ಅಂಚನ್ನು ಸ್ಟೋನ್‌ಗಳಿಂದ ಅಲಂಕೃತಗೊಳಿಸಲಾಗಿದ್ದು ಹೆಚ್ಚಿನ ಗೋಲ್ಡನ್ ಎಂಬ್ರಾಯಿಡರಿ ಉಡುಗೆಯನ್ನು ಭಾರವಾಗಿಸಿದೆ.
ಇಂತಹ ಬೆಲೆಬಾಳುವ ಉಡುಗೆಯೊಂದಿಗೆ ಐಶ್ ಅಗಲವಾದ ಕುಸುರಿ ಕೆಲಸಗಳಿಂದ ಸಂಪೂರ್ಣಗೊಂಡ ಚೋಕರ್ ಸರವನ್ನು ಧರಿಸಿ ಕಲ್ಯಾಣ್ ಜ್ಯುವೆಲ್ಲರ್ಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದರು. ಚೋಕರ್ ಸರ ನಿಜವಾಗಿ ಅನಾರ್ಕಲಿ ಧಿರಿಸಿಗೆ ಹೊಂದಿಕೆಯಾಗುವುದಿಲ್ಲ. ಈ ಚಿನ್ನದ ಚೋಕರ್‌ಗಿಂತ ಇನ್ನಷ್ಟು ಉತ್ತಮವಾಗಿರುವುದನ್ನು ಧರಿಸಬಹುದಾಗಿತ್ತೆಂಬುದು ಬೋಲ್ಡ್‌ಸ್ಕೈ ಅಭಿಪ್ರಾಯವಾಗಿದೆ. ನಾವು ನೋಡಲು ನಿರೀಕ್ಷಿಸುವುದೇನಾಗಿತ್ತೆಂದರೆ ಈ ಉಡುಗೆಯೊಂದಿಗೆ ಇನ್ನಷ್ಟು ಸಾಂಪ್ರದಾಯಿಕವಾಗಿ ಹೊಂದಿಕೆಯಾಗುವುದನ್ನು ಧರಿಸಬೇಕೆಂಬುದಾಗಿದೆ.
ಈ ನೋಟದೊಂದಿಗೆ ಸ್ಟನ್ನಿಂಗ್ ಐಶ್ವರ್ಯ ಬೋಲ್ಡ್ ಆಗಿ ಕಂಡುಬರುತ್ತಿದ್ದಾರೆ. ಎಲ್ಲರ ನೋಟ ಆಕೆಯ ಮೇಲಿರುವಂತಹ ಮೇಕಪ್ ಕಡೆ ನೆಟ್ಟಿದ್ದು, ಅವಳ ಮೇಕಪ್ನ ಕೈಚಳಕ್ಕೆ ಸಾಕ್ಷಿ ಆಯಿತು . ಕಲ್ಯಾಣ್ ಜ್ಯುವೆಲ್ಲರ್ಸ್ ಉದ್ಘಾಟನಾ ಸಮಾರಂಭದ ರಾತ್ರಿ ಐಶ್ ಅನಾರ್ಕಲಿಯಲ್ಲಿ ಅಪ್ಸರೆಯಂತೆ ಮಿಂಚುತ್ತಿದ್ದರು. ಬೆಡಗಿ ಐಶ್ವರ್ಯ ರೈ ಬಚ್ಚನ್ ಯುಎಇ ಯಲ್ಲಿರುವ ದಾಮಾಸ್ಕಸ್‌ನಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್ ಅನ್ನು ಉದ್ಗಾಟಿಸಿದರು.
ಸವ್ಯಸಾಚಿ ವಿನ್ಯಾಸದ ಗೋಲ್ಡನ್ ಅನಾರ್ಕಲಿ ಉಡುಗೆಯಲ್ಲಿ ಸುಂದರವಾಗಿ ಕಂಡುಬರುತ್ತಿರುವ ಐಶ್ವರ್ಯ ರೈ ಬಚ್ಚನ್ ಬಗ್ಗೆ ನೀವೇನು ಆಲೋಚಿಸುತ್ತಿರುವಿರಿ? ಅವರ ಉಡುಗೆಯನ್ನು ನೀವು ಮೆಚ್ಚಿಕೊಂಡಿರುವಿರಾ?



Click it and Unblock the Notifications
