Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಮದುವೆ ಆರತಕ್ಷತೆಯಲ್ಲಿ ಕಣ್ಮನ ಸೆಳೆದ ನಟೀಮಣಿಯರು
ಪ್ರಿಯಾಂಕ ಚೋಪ್ರಾ, ಅನುಷ್ಕಾ ಶರ್ಮಾ, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಇನ್ನಿತರ ಸೆಲೆಬ್ರಿಟಿಗಳು ಶಿರಿನ್ ಮೊರಾನಿ-ಉದಯ್ ಸಿಂಗ್‍ರ ಮದುವೆಯ ಆರತಕ್ಷತೆಗೆ ಭೇಟಿ ನೀಡಿದ್ದರು. ಈ ಪೈಕಿ ಪ್ರತಿಯೊಬ್ಬ ಸುಂದರ ನಟಿ ಮಟಿಯು ಸಹ ಆಕರ್ಷಕವಾದ ಉಡುಗೆಗಳಲ್ಲಿ ಕಂಗೊಳಿಸುತ್ತಿದ್ದರು.
ಇವರೆಲ್ಲರು ಚಂದಿರನ ತುಂಡುಗಳು ಭೂಮಿಗೆ ಬಿದ್ದಿದೆಯೋ, ಎಂಬಂತೆ ಕಂಗೊಳಿಸುತ್ತಿದ್ದರು. ಪ್ರಿಯಾಂಕ ಚೋಪ್ರಾ ಸೀರೆಯಲ್ಲಿ ಕಂಗೊಳಿಸಿದರೆ, ಅನುಷ್ಕಾ ಶರ್ಮಾ ಕ್ಲೋಸ್ ಕೋಟ್‍ನಲ್ಲಿದ್ದರು. ಈ ಹೆಂಗಳೆಯರ ಕಾರಣದಿಂದಾಗಿ ಮದುವೆಯ ಆರತಕ್ಷತೆಯು ಮತ್ತಷ್ಟು ಮುದ ನೀಡುವಂತಿತ್ತು.

ಜಾಕ್ವೆಲಿನ್ ಫರ್ನಾಂಡೀಸ್ ತನ್ನ ಉದ್ದದ ಲೆಹೆಂಗಾ ತೊಟ್ಟುಕೊಂಡು ಬಂದ ಜನರ ಗಮನವನ್ನೆಲ್ಲ ತನ್ನತ್ತಲೆ ಸೆಳೆಯುತ್ತಿರುವುದನ್ನು ಕಂಡು ನಮಗೆ ಅಚ್ಚರಿಯಾಯಿತು. ಈ ಎಲ್ಲಾ ಸೆಲೆಬ್ರಿಟಿಗಳು ತಮ್ಮ ಇಚ್ಛೆಗೆ ಅನುಗುಣವಾಗಿ ಬಟ್ಟೆಗಳನ್ನು ಧರಿಸಿಕೊಂಡು ಬಂದಿದ್ದರು ಹಾಗು ಇವರ ಸೌಂದರ್ಯ ಪ್ರಜ್ಞೆಗೆ ನಾವು ಸಹ ಮಾರು ಹೋದೆವು.
ಅನುಷ್ಕಾ ಶರ್ಮಾಳು ಈ ಸಮಾರಂಭದಲ್ಲಿ ಅತ್ಯಂತ ಮುದ್ದಾಗಿ ಕಾಣುತ್ತಿದ್ದಳು. ಈಕೆ ಧರಿಸಿರುವ ಸೂಟ್ ಎಲ್ಲರ ಕಣ್ಮನ ಸೆಳೆಯುತ್ತಿತ್ತು, ಇದು ಈ "ಪಿಕೆ" ನಟಿಯನ್ನು ಅಡಿಯಿಂದ ಮುಡಿಯವರೆಗೆ ಮುಚ್ಚಿತ್ತು. ಮಿಂಟ್ ಬಣ್ನದ ಈ ಸೂಟ್ ಅನುಷ್ಕಾಳ ಬಣ್ಣಕ್ಕೆ ಸರಿಹೊಂದುತ್ತಿತ್ತು. ಆದರೆ ಈಕೆ ಧರಿಸಿದ್ದ ಹೊಳೆಯುವ ಕೆಂಪು ದುಪಟ್ಟಾ ನಮಗೆ ಹಿಡಿಸಲಿಲ್ಲ. ಅದು ಈ ಲೇಸ್ ಸೂಟ್‍ಗೆ ಅಷ್ಟೇನು ಸರಿ ಕಾಣುವುದಿಲ್ಲ.
ನಮ್ಮನ್ನು ಮೋಡಿ ಮಾಡಿದ ಮತ್ತೊಬ್ಬ ಸುಂದರಿಯೆಂದರೆ ಅದು ಮಲೈಕಾ ಅರೋರಾ. ಈಕೆಯು ಹೊಳೆಯುವ ಗುಲಾಬಿ ಬಣ್ಣದ ನಿಯಾನ್ ಸೀರೆಯನ್ನು ಉಟ್ಟಿದ್ದಳು. ಆಕೆ ದೇಹದ ಉಬ್ಬು ತಗ್ಗುಗಳನ್ನು ಸ್ವಲ್ಪ ಹೆಚ್ಚೆ ಎನಿಸುವಂತೆ ಪ್ರದರ್ಶನ ಮಾಡುತ್ತಿದ್ದಳು. ಇನ್ನು ಈಕೆಯ ಮೇಕಪ್ ಆಕೆಯ ಲುಕ್‍ಗೆ ಹೇಳಿ ಮಾಡಿಸಿದಂತಿತ್ತು.
ಪ್ರಿಯಾಂಕ ಚೋಪ್ರಾ ಸೀರೆಯಲ್ಲಿ ಬಂದು ಜನರನ್ನು ಮೋಡಿ ಮಾಡಿದಳು. ಇದು ಆಕೆಯ ಅತ್ಯುತ್ತಮವಾದ ಲುಕ್ ಆಗಿರಲಿಲ್ಲ. ಆದರೂ ಆಕೆ ರೇಖಾಳಂತೆ ಕಾಣಿಸಿಕೊಳ್ಳಬೇಕೆಂಬ ಬಯಕೆಯನ್ನು ನಾವೂ ಸಹ ಅಭಿನಂದಿಸುತ್ತೇವೆ. ಜಾಕ್ವೆಲಿನ್ ಫರ್ನಾಂಡೀಸ್‍ಳ ಗುಲಾಬಿ ಬಣ್ಣದ ಲೆಹೆಂಗಾವು ನೋಡಲು ಆಕರ್ಷಕ ಮತ್ತು ಸುಂದರವಾಗಿತ್ತು. ಈ ಬಣ್ಣವು ಜಾಕ್ವೆಲಿನ್‍ಳನ್ನು ಆಕರ್ಷಕ ಮಾಡಿದ್ದಷ್ಟೇ ಅಲ್ಲ, ಶಿರಿನ್ ಮೊರಾನಿ-ಉದಯ್ ಸಿಂಗ್‍ರ ಆರತಕ್ಷತೆಯಲ್ಲಿ ಆಕೆಯನ್ನು ಲಕ ಲಕ ಹೊಳೆಯುವಂತೆ ಮಾಡಿತ್ತು.
ಈ ಸಮಾರಂಭಕ್ಕೆ ಬಂದಿದ್ದ ಕೆಲವೇ ಕೆಲವು ಸೆಲಿಬ್ರಿಟಿಗಳು ತಿಳಿ ಬಣ್ಣದ ಉಡುಗೆಯನ್ನು ಧರಿಸಿದ್ದರು. ಅಂತಹವರಲ್ಲಿ ಇಶಾ ಗುಪ್ತಾ ಸಹ ಒಬ್ಬರು. ಸ್ವಲ್ಪ ಹೆಚ್ಚೆ ಲೇಸ್ ಹೊಂದಿದ್ದ ಲೆಹೆಂಗಾವು ಎಂಬ್ರಾಯಿಡ್ ಮಾಡಲಾದ ತೋಳುಗಳನ್ನು ಹೊಂದಿತ್ತು. ಈಕೆಯು ತನ್ನ ಲುಕ್ ಅನ್ನು ಮಾಣಿಕ್ಯದಿಂದ ಪೂರ್ಣಗೊಳಿಸಿದ್ದಳು. ಜೂಹಿಚಾವ್ಲಾ ಸಹ ತನ್ನ ಕೆಂಪು ಬಣ್ಣದ ಉಡುಗೆಯಿಂದ ನಯನ ಮನೋಹರವಾಗಿ ಕಾಣುತ್ತಿದ್ದಳು.
ಈಕೆಯ ಲುಕ್ ಸೂಜಿಗಲ್ಲಿನಂತೆ ಎಲ್ಲರನ್ನು ಸೆಳೆಯುತ್ತಿತ್ತು. ಇದರ ಜೊತೆಗೆ ಆಕೆಯ ಎಂದಿನ ವಿಶ್ವಾಸಾರ್ಹ ನಗು ಸಹ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿತ್ತು. ಸೋಫಿ ಚೌದರಿ ಸಹ ಇಲ್ಲಿ ಕಾಣಿಸಿಕೊಂಡಿದ್ದ ಸೆಲೆಬ್ರಿಟಿಗಳ ಗುಂಪಿನಲ್ಲಿ ಕಂಡು ಬಂದಳು.
ಈಕೆಯು ಸಿಲ್ವರ್ ಮತ್ತು ಗ್ರೇ ಸೀರೆಯಲ್ಲಿ ಕಂಡು ಬಂದಳು. ಈ ಉಡುಗೆಯಲ್ಲಿ ಆಕೆ ಶಿರಿನ್ ಮೊರಾನಿ-ಉದಯ್ ಸಿಂಗ್‍ರ ಆರತಕ್ಷತೆಯಲ್ಲಿ ಎದ್ದು ಕಾಣುವಷ್ಟು ಹೊಳೆಯುತ್ತಿದ್ದಳು.



Click it and Unblock the Notifications





