ಎರಡನೇ ಮಹಾಯುದ್ಧದ ಬಗ್ಗೆ ಕುತೂಹಲ ಕೆರಳಿಸುವ 12 ಸತ್ಯಗಳು

By Super

ಈ ಜಗತ್ತು ಎರಡು ಮಹಾಯುದ್ಧಗಳನ್ನು ಕಂಡಿದೆ. ಪ್ರಥಮ ಮಹಾಯುದ್ಧದಲ್ಲಿ ಸಾಕಷ್ಟು ಹಾನಿಯಾಗಿದ್ದರೂ ಸರಿಸುಮಾರು ವಿಶ್ವದ ಎಲ್ಲಾ ದೇಶಗಳು ಭಾಗಿಯಾಗಿದ್ದ ಎರಡನೆಯ ಮಹಾಯುದ್ಧದಲ್ಲಂತೂ ವಿಜ್ಞಾನದ ಕೊಡುಗೆಗಳನ್ನು ಅನಾಹುತಕ್ಕೆ ಉಪಯೋಗಿಸಿಕೊಂಡು ಮನುಕುಲ ಎಂದೂ ಮರೆಯಲಾಗದ ಅನಾಹುತಗಳು, ಪ್ರಾಣಹಾನಿ, ಆಸ್ತಿಹಾನಿ ಹಾಗೂ ನ್ಯೂಕ್ಲಿಯರ್ ಬಾಂಬ್ ಸ್ಫೋಟ ಸಂಭವಿಸಿದೆ.

ಬೆಲೆಕಟ್ಟಲಾಗದ ಅಮೂಲ್ಯ ಪ್ರಾಣಗಳನ್ನು ಹೊರತುಪಡಿಸಿ ಬೆಲೆಕಟ್ಟಬಹುದಾದ ಆಸ್ತಿಯನ್ನು ಪರಿಗಣಿಸಿದರೆ ವಿಶ್ವದ ಅತ್ಯಂತ ಹೆಚ್ಚಿನ ನಷ್ಟವನ್ನು ಜಗತ್ತು ಅನುಭವಿಸಿದೆ. ಯುದ್ದದ ಬಳಿಕ ಹಾನಿಗೊಳಗಾಗಿದ್ದ ಸ್ಥಳವನ್ನು ಮತ್ತೆ ಕಟ್ಟಲು, ಜನಜೀವನವನ್ನು ಒಂದು ಸುವ್ಯವಸ್ಥೆಗೆ ಬರಲು ತುಂಬಾ ದುಬಾರಿಯಾದ ಬೆಲೆಯನ್ನು ಜಗತ್ತು ಕಟ್ಟಬೇಕಾಗಿ ಬಂದಿತ್ತು.

ಪ್ರಪಂಚದಲ್ಲಿನ 8 ಅತ್ಯಂತ ಅಪಾಯಕಾರಿ ನಗರಗಳು

1939ರಿಂದ 1945ರ ವರೆಗೆ ಆರು ವರ್ಷಗಳ ನಡೆದ ಭೀಕರ ಮಹಾಯುದ್ಧದ ಬಳಿಕ ಕಲೆಹಾಕಿದ ಮಾಹಿತಿಗಳಲ್ಲಿ ಹಲವು ಮಾಹಿತಿಗಳು ಜಗತ್ತನ್ನು ಬೆರಗಾಗಿಸಿವೆ. ಯುದ್ಧಕ್ಕಾಗಿ ನಡೆದ ಸಂಶೋಧನೆಗಳು, ನೂತನ ಆವಿಷ್ಕಾರಗಳು ಬಳಿಕ ಮನುಕುಲದ ಒಳಿತಿಗಾಗಿ ಬಳಸಲ್ಪಟ್ಟಿವೆ. ಎಷ್ಟೋ ವಿಷಯಗಳು, ಕುರುಹುಗಳು ಸಮಾಧಿಯಾಗಿವೆ, ಇಂದಿಗೂ ಅದರ ಕುರುಹುಗಳು ಅಲ್ಲಲ್ಲಿ ಸಿಕ್ಕುತ್ತಿವೆ. ಮಹಾಯುದ್ಧದಲ್ಲಿ ಉರುಳಿದ ವಿಮಾನಗಳು ಆಗಾಗ ತುಕ್ಕುಹಿಡಿದ ಸ್ಥಿತಿಯಲ್ಲಿ ಸಿಕ್ಕುತ್ತಿವೆ. ಮಹಾಯುದ್ಧದ ಕಾಲದಲ್ಲಿ ಕಾಡು ಸೇರಿದ್ದವರಲ್ಲಿ ಹೆಚ್ಚಿನವರು ಕೊನೆಯುಸಿರೆಳೆದಿದ್ದರೂ ಇನ್ನೂ ಮಹಾಯುದ್ಧ ಮುಗಿದಿಲ್ಲ ಎಂಬ ಭ್ರಮೆಯಿಂದ ಕಾಡಿನಲ್ಲೇ ಉಳಿದಿದ್ದವರು ಎಷ್ಟೋ ವರ್ಷಗಳ ಬಳಿಕ ನಾಗರಿಕತೆಗೆ ಮರಳಿ ಅಚ್ಚರಿ ಮೂಡಿಸಿದ್ದಾರೆ.

ಈ ಲೇಖನದಲ್ಲಿ ಅಂತಹ ಅಚ್ಚರಿಗಳ ಪೈಕಿ ಹನ್ನೆರಡು ವಿಷಯಗಳನ್ನು ಸಂಗ್ರಹಿಸಲಾಗಿದೆ.

ರಷ್ಯದ ದುರಂತ

ರಷ್ಯದ ದುರಂತ

ಮಹಾಯುದ್ಧದಲ್ಲಿ ಜಗತ್ತಿನ ಹೆಚ್ಚಿನ ದೇಶಗಳು ಭಾಗಿಯಾಗಿದ್ದರೂ ಅತ್ಯಂತ ಹೆಚ್ಚಿನ ಪ್ರಾಣಹಾನಿ ಅನುಭವಿಸಿದ ದೇಶವೆಂದರೆ ರಷ್ಯ. ಆಗ ಯುವಕರೆಲ್ಲರೂ ಕಡ್ಡಾಯವಾಗಿ ಸೇನೆ ಸೇರಲೇಬೇಕೆಂಬ ನಿಯಮವಿದ್ದ ಕಾರಣ 1923ರಲ್ಲಿ ಜನಿಸಿದ್ದ ಯುವಕರಲ್ಲಿ 80% ಯುವಕರು ಮಹಾಯುದ್ಧದಲ್ಲಿ ತಮ್ಮ ಪ್ರಾಣವನ್ನರ್ಪಿಸಿದ್ದಾರೆ.

ಕೆಂಪು ಸೇನೆಯ ಮಹಾ ಅತ್ಯಾಚಾರ

ಕೆಂಪು ಸೇನೆಯ ಮಹಾ ಅತ್ಯಾಚಾರ

ಮಹಾಯುದ್ಧದ ಕಡೆಯ ವರ್ಷಗಳಲ್ಲಿ, ಅಂದರೆ 1944-45ರ ಸಮಯದಲ್ಲಿ ಮಿತ್ರರಾಷ್ಟ್ರ ಹಾಗೂ ಕೆಂಪು ಸೇನೆಗಳು ಮೇಲುಗೈ ಸಾಧಿಸುತ್ತಿದ್ದಂತೆಯೇ ಜರ್ಮನರ ಮೇಲೆ ಹಗೆ ತೀರಿಸಲು ಜನಸಾಮಾನ್ಯರನ್ನು ಗುರಿಯಾಗಿಸಿದ್ದು ಇತಿಹಾಸ ಮರೆಯಲಾಗದ ದುರಂತ. 1944ರ ಅಕ್ಟೋಬರ್ 21ರಂದು ನಾಜಿ ಜರ್ಮನಿಯ ಗಡಿಯಾಗಿದ್ದ ಅಂಗಾರೆಪ್ ಕ್ರೀಕ್ ಸೇತುವೆಯನ್ನು ದಾಟಿದ ಬಳಿಕ ಮಧ್ಯ ಯೂರೋಪ್, ಪ್ರಷಿಯ ಮತ್ತು ಪೊಮೆಯಾರಿನಾ ಪ್ರದೇಶದಲ್ಲಿ ಹೆಂಗಸರ ಮೇಲೆ ಭೀಭತ್ಸವಾಗಿ ಅತ್ಯಾಚಾರ ನಡೆಸಲಾಯಿತು. ಕೆಲವೊಮ್ಮೆ ಪ್ರತಿ ಹೆಂಗಸಿನ ಮೇಲೆ ಅರವತ್ತು ಎಪ್ಪತ್ತು ಬಾರಿ ಅತ್ಯಾಚಾರ ನಡೆಸಿರುವುದೂ ವರದಿಯಾಗಿದೆ. ಅತ್ಯಾಚಾರಕ್ಕೊಳಗಾದ ಹೆಂಗಸರ ಸಂಖ್ಯೆ ಸುಮಾರು ಇಪ್ಪತ್ತೈದು ಲಕ್ಷ! ಅದರಲ್ಲಿಯೂ ಪೂರ್ವ ಪ್ರಶಿಯಾ, ಪೊಮೆರಾನಿಯಾ ಮತ್ತು ಸೈಲೀಸಿಯಾಗಳಲ್ಲಿ ವರದಿಯಾದ ಸಂಖ್ಯೆ ಸುಮಾರು ಹದಿನಾಲ್ಕು ಲಕ್ಷ! ನಂತರದ ತಿಂಗಳುಗಳಲ್ಲಿ ನಗರದ ಅಷ್ಟೂ ಆಸ್ಪತ್ರೆಗಳಲ್ಲಿ ಗರ್ಭಾಪಾತಕ್ಕಾಗಿ ನೂಕುನುಗ್ಗಲು, ಲಭ್ಯವಿಲ್ಲದ ಸಲಕರಣೆ, ಔಷಧಿ, ವೈದ್ಯರು, ದಾದಿಯರು ಮೊದಲಾದವುಗಳ ಕಾರಣದಿಂದ ಪರೋಕ್ಷವಾಗಿ ಪ್ರಾಣ ತೆತ್ತವರ ಎಷ್ಟು ಎಂದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.

ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಪ್ರಾಣಗಳನ್ನು ಸೆಳೆದ ಸಮರ

ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಪ್ರಾಣಗಳನ್ನು ಸೆಳೆದ ಸಮರ

ರಷ್ಯಯಾದ ಸ್ಟಾಲಿನ್ ಗ್ರಾಡ್ ಪ್ರದೇಶವನ್ನು ಜರ್ಮನಿ ಅತಿ ಕ್ರಮಿಸಲು ನಡೆಸಿದ ನಡೆದ ಮಹಾಯುದ್ಧದಲ್ಲಿ ಕೇವಲ ಎಂಟು ತಿಂಗಳುಗಳಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರ ಯೋಧರು ಹತರಾಗಿದ್ದಾರೆ.

ಇತಿಹಾಸದಲ್ಲಿಯೇ ಅತ್ಯಂತ ದೀರ್ಘಕಾಲ ನಡೆದ ಯುದ್ಧ

ಇತಿಹಾಸದಲ್ಲಿಯೇ ಅತ್ಯಂತ ದೀರ್ಘಕಾಲ ನಡೆದ ಯುದ್ಧ

ಇದಕ್ಕೂ ಮೊದಲು ಹಲವು ಮಹಾಯುದ್ಧಗಳು ನಡೆದಿದ್ದರೂ 1939ರಿಂದ 1945ರ ವರೆಗೆ ಆರು ವರ್ಷಗಳ ಕಾಲ ಸತತವಾಗಿ ನಡೆಯುವ ಮೂಲಕ ವಿಶ್ವದ ಅತ್ಯಂತ ದೀರ್ಘವಾದ ಯುದ್ಧವಾಗಿದೆ.

ವಿಶ್ವಮಾನ್ಯತೆ ಪಡೆದ ಸ್ವಸ್ತಿಕ್ ಲಾಂಛನ

ವಿಶ್ವಮಾನ್ಯತೆ ಪಡೆದ ಸ್ವಸ್ತಿಕ್ ಲಾಂಛನ

ಸ್ವಸ್ತಿಕ್ ಲಾಂಛನ ಭಾರತ, ಚೀನಾ, ಈಜಿಪ್ಟ್, ಗ್ರೀಸ್ ಮೊದಲಾದ ದೇಶಗಳಲ್ಲಿ ಬಹಳ ಹಿಂದಿನಿಂದ ಧಾರ್ಮಿಕ ಗುರುತಾಗಿ ಬಳಸಲ್ಪಡುತ್ತಿತ್ತು. ಆದರೆ ಮಹಾಯುದ್ಧದ ಕಾಲದಲ್ಲಿ ಜರ್ಮನಿ ತನ್ನ ಜಗತ್ತನ್ನೇ ಜಯಿಸುವ ಇರಾದೆಯ ಗುರುತಾಗಿ ಉಪಯೋಗಿಸಲು ತೊಡಗಿದ್ದುದರ ಪರಿಣಾಮವಾಗಿ ಸ್ವಸ್ತಿಕ್ ಲಾಂಛನವನ್ನು ಇಂದಿಗೂ ಕೊಲೆಗಡುಕನಂತೆ ಜಗತ್ತು ಕಾಣುತ್ತಾ ಬರುತ್ತಿದೆ.

ಯು. ಬೋಟ್ ಮಹಾವಿಪತ್ತು

ಯು. ಬೋಟ್ ಮಹಾವಿಪತ್ತು

ಮಿತ್ರರಾಷ್ಟ್ರಗಳಿಗೆ ಸರಕು, ಔಷಧಿ, ದಿನಬಳಕೆಯ ವಸ್ತು, ಶಸ್ತ್ರಗಳನ್ನು ಕೆನಡಾ ಹಾಗೂ ಮತ್ತಿತರ ದೇಶಗಳಿಂದ ಯುದ್ಧ ನಡೆಸುತ್ತಿದ್ದ ಸ್ಥಳಗಳಿಗೆ ರವಾನಿಸಲಾಗುತ್ತಿತ್ತು. ಮಿತ್ರರಾಷ್ಟ್ರಗಳ ಶಕ್ತಿಯನ್ನು ಮಟ್ಟಹಾಕಲು ಈ ಸರಕು ಸರಬರಾಜು ಹಡಗುಗಳ ಮೇಲೆ ಜರ್ಮನರು ಸಬ್ ಮೆರೀನ್ ಮಾದರಿಯ ಯು.ಬೋಟ್ ಗಳನ್ನು ಉಪಯೋಗಿಸಿ ಕುತಂತ್ರದಿಂದ ದಾಳಿ ನಡೆಸುತ್ತಿದ್ದವು. ಅಂದಿನ ಪ್ರಧಾನಿ ವಿನ್ಸ್ಟಂಟ್ ಚರ್ಚಿಲ್ಲರೂ ಈ ಯು. ಬೋಟುಗಳ ಉಪಟಳವೇ ತಮಗೆ ಅತ್ಯಂತ ದೊಡ್ಡ ತಲೆನೋವಾಗಿದೆ ಎಂದು ಉದ್ಗರಿಸಿದ್ದರು. ಈ ಧಾಳಿಗಳಲ್ಲಿ ಸುಮಾರು ನಲವತ್ತು ಸಾವಿರ ಜನರು ಪ್ರಾಣ ತೆತ್ತಿದ್ದಾರೆಂದು ಅಂದಿನ ಅಂಕಿ ಅಂಶಗಳು ಪ್ರಸ್ತುತಪಡಿಸಿದರೆ, ದಾಳಿಯಲ್ಲಿ ಬದುಕುಳಿದ ಜನರು ನೀಡಿದ ಮಾಹಿತಿಯ ಪ್ರಕಾರ ಈ ಸಂಖ್ಯೆ 72,232.

ಇತಿಹಾಸದಲ್ಲಿಯೇ ಅತಿಹೆಚ್ಚು ಅಮೇರಿಕನ್ನರ ಪ್ರಾಣ ಸೆಳೆದ ಯುದ್ಧ

ಇತಿಹಾಸದಲ್ಲಿಯೇ ಅತಿಹೆಚ್ಚು ಅಮೇರಿಕನ್ನರ ಪ್ರಾಣ ಸೆಳೆದ ಯುದ್ಧ

ಅಮೇರಿಕವೂ ಹಲವು ಯುದ್ಧಗಳನ್ನು ಕಂಡಿದೆ. ಆದರೆ ಎರಡನೇ ಮಹಾಯುದ್ಧ ಕಾಲದಲ್ಲಿ ನಲವತ್ತು ಸಾವಿರ ಅಮೇರಿಕನ್ ಯೋಧರು ಪ್ರಾಣ ಕಳೆದುಕೊಂಡಿರುವುದು ಅಮೇರಿಕದ ಪಾಲಿನ ದಾಖಲೆಯಾಗಿದೆ.

ಅತ್ಯಂತ ಹೇಯವಾದ ಪ್ರಯೋಗಗಳು

ಅತ್ಯಂತ ಹೇಯವಾದ ಪ್ರಯೋಗಗಳು

ಮಹಾಯುದ್ದದ ಕಾಲದಲ್ಲಿ ಹಲವು ಸಂಶೋಧನೆಗಳಾಗಿವೆ. ವೈದ್ಯಕೀಯ ಕ್ಷೇತ್ರದಲ್ಲಿಯೂ ಹಲವು ಔಷಧಿಗಳನ್ನು ಕಂಡುಹಿಡಿಯಲಾಗಿತ್ತು. ಯಾವುದೇ ವೈದ್ಯಕೀಯ ಸಂಶೋಧನೆಯನ್ನು ಮನುಷ್ಯರ ಮೇಲೆ ಪ್ರಯೋಗಿಸುವ ಮುನ್ನ ಇಲಿ, ಹಂದಿ ಮೊದಲಾದವುಗಳ ಮೇಲೆ ಪ್ರಯೋಗ ನಡೆಸಿ ಅಧ್ಯಯನದ ಬಳಿಕ ಮನುಷ್ಯರ ಮೇಲೆ ಪ್ರಯೋಗಿಸಲಾಗುತ್ತದೆ. ಆದರೆ ಎರಡನೇ ಮಹಾಯುದ್ದದ ಕಾಲದಲ್ಲಿ ಹಿಟ್ಲರ್ ಮೂಡಿಸಿದ್ದ ಜ್ಯೂ ವಿರೋಧಿ ಅಲೆ ಜ್ಯೂಗಳನ್ನು ಹಂದಿಗಳಿಗಿಂತಲೂ ಕೀಳಾಗಿ ಕಾಣುವ ಮಟ್ಟಕ್ಕೆ ಕರೆದೊಯ್ದಿತ್ತು. ಉದಾಹರಣೆಗೆ ಎಕ್ಸ್ ರೇ ಕಿರಣಗಳನ್ನು ಜ್ಯೂ ಪುರುಷರ ಮೇಲೆ ಮತ್ತು ಮಹಿಳೆಯರ ಮೇಲೆ ಹಾಯಿಸಿ ಅವರ ಫಲವತ್ತತೆ ಬಗ್ಗೆ ಅಧ್ಯಯನ ನಡೆಸಲಾಯಿತು. ಕಿರಣ ಹಾಯಿಸಿದ ಕೈ ಕಾಲು, ಮಾಂಸಖಂಡಗಳನ್ನು ಯಾವುದೇ ಅರವಳಿಕೆಯಿಲ್ಲದೇ ಕತ್ತರಿಸಿ ತೆಗೆಯಲಾಯಿತು. ಒಟ್ಟಾರೆ ಜ್ಯೂಗಳು ಜೀವಂತವಿದ್ದಂತೆಯೇ ನರಕ ಅನುಭವಿಸಿದರು.

ಮುಗಿಲು ಮುಟ್ಟಿದ ಅಮೇರಿಕಾದ ಸೇನಾವೆಚ್ಚ

ಮುಗಿಲು ಮುಟ್ಟಿದ ಅಮೇರಿಕಾದ ಸೇನಾವೆಚ್ಚ

1940 ಮತ್ತು 1945ರ ನಡುವೆ ಅಮೇರಿಕದ ಸೇನಾ ಖರ್ಚು ಒಮ್ಮೆಲೇ ಏರಿತು. ಪ್ರತಿವರ್ಷ ಎರಡು ಬಿಲಿಯನ್ ಡಾಲರುಗಳಷ್ಟಿದ್ದ ವೆಚ್ಚ ಆ ವರ್ಷಗಳಲ್ಲಿ ಅರವತ್ತು ಬಿಲಿಯನ್ ಡಾಲರುಗಳಿಗೆ ಏರಿತ್ತು. ಆದರೆ ಮಹಾಯುದ್ದದ ಬಳಿಕ ಸೇನೆ, ಸುರಕ್ಷತೆಗೆ ಅತಿಹೆಚ್ಚು ಪ್ರಾಮುಖ್ಯತೆ ನೀಡಿದ ಸರ್ಕಾರ ಆ ವೆಚ್ಚವನ್ನು ಕಡಿತಗೊಳಿಸದೇ ಮುಂದುವರೆಸುತ್ತಾ ಬಂದಿದೆ. ಇಂದು ಅಮೇರಿಕಾದ ವಾರ್ಷಿಕ ಸೇನಾ ವೆಚ್ಚ ಆರುನೂರು ಬಿಲಿಯನ್ ಡಾಲರುಗಳು!

ವಿಶ್ವದ ಪ್ರಥಮ ಜೆಟ್ ವಿಮಾನಗಳು

ವಿಶ್ವದ ಪ್ರಥಮ ಜೆಟ್ ವಿಮಾನಗಳು

ಮಹಾಯುದ್ದದಲ್ಲಿ ವೈಮಾನಿಕ ಧಾಳಿಯೂ ಪ್ರಮುಖ ಪಾತ್ರ ವಹಿಸಿದೆ. ಜರ್ಮನರ ಬಾಂಬರುಗಳಿಗೆ ಉತ್ತರವಾಗಿ ಮಿತ್ರರಾಷ್ಟ್ರಗಳ ಬಳಿ ಬ್ರಿಟಿಷ್ ರಾಯಲ್ ಏರ್ ಫೋರ್ಸ್ ನ 722 ಮತ್ತು ಯು.ಎಸ್. ಆರ್ಮಿ ಏರ್ ಫೋರ್ಸ್ ನ 527 ಹೆವಿ ಬಾಂಬರು ವಿಮಾನಗಳು ಜರ್ಮನಿಯ ಡ್ರೆಸ್ಡೆನ್ ನಗರದ ಮೇಲೆ ಧಾಳಿ ನಡೆಸಿ ಸುಮಾರು ಇಪ್ಪತ್ತೈದು ಸಾವಿರ ಜನರನ್ನು ಆಹುತಿ ತೆಗೆದುಕೊಂಡವು. ಈ ಹೆವಿ ಬಾಂಬರುಗಳಿಗೆ ಪ್ರಬಲ ಎದುರಾಳಿಯಾಗಿ ಜರ್ಮನ್ ಸಂಶೋಧಕರು ಮಾಸೆರ್ ಸ್ಕ್ಮಿಟ್ ( Messerschmitt ME-262) ಎಂಬ ವಿಮಾನವನ್ನು ತಯಾರಿಸಿ ಕಳುಹಿಸಿದರೂ ಆ ವೇಳೆಗೆ ಯುದ್ದ ಮುಗಿಯುತ್ತಾ ಬಂದಿದ್ದು ಮಿತ್ರರಾಷ್ಟ್ರಗಳ ಕೈ ಮೇಲಾಗಿತ್ತು. ಇದು ಜೆಟ್ ಇಂಜಿನ್ ಉಪಯೋಗಿಸಿದ ಜಗತ್ತಿನ ಪ್ರಥಮ ವಿಮಾನವಾಗಿದೆ. ಒಂದು ವೇಳೆ ಈ ವಿಮಾನ ತನ್ನ ಪೂರ್ಣ ಪ್ರಮಾಣದ ಪ್ರಕೋಪ ತೋರಿದ್ದಲ್ಲಿ ಮಹಾಯುದ್ದದ ಅಂಕಿ ಅಂಶಗಳು ಇನ್ನಷ್ಟು ಘೋರವಾಗುವ ಸಂಭವವಿತ್ತು. ಬ್ರಿಟನ್ನಿನ ಗ್ಲೋಸ್ಟರ್ ಮೀಟಿಯಾರ್ (Gloster Meteor) ಎಂಬ ವಿಮಾನವನ್ನೇ ಹೋಲುತ್ತಿದ್ದ ಈ ವಿಮಾನವನ್ನು ಕಂಡವರು ಇದು ತಮ್ಮ ಕಡೆಯವರದ್ದೇ ಅಥವಾ ವಿರೋಧಿಗಳ ಕಡೆಯವರದ್ದೇ ಎಂಬ ಗೊಂದಲಕ್ಕೀಡಾಗಿ ಎದುರುತ್ತರ ಕೊಡಲು ಹಿಂದೆ ಮುಂದೆ ನೋಡುತ್ತಿದ್ದಂತೆಯೇ ಜರ್ಮನರು ಕುತಂತ್ರದಿಂದ ಧಾಳಿ ನಡೆಸುತ್ತಿದ್ದರು. ಆದರೆ ಈ ಧಾಳಿಗಳಲ್ಲಿ ಹತರಾದವರು ಕೇವಲ 542 ಜನರು. ಕೇವಲ 1430 ವಿಮಾನಗಳನ್ನು ಅಂದು ನಿರ್ಮಿಸಲಾಗಿದ್ದು ಇಂದಿಗೂ ಹಲವು ಉತ್ತಮ ಸ್ಥಿತಿಯಲ್ಲಿ ಮ್ಯೂಸಿಯಮ್ಮುಗಳಲ್ಲಿ ನೋಡಲು ಲಭ್ಯವಿವೆ.

ಅಮೇರಿಕವನ್ನು ಪ್ರತಿನಿಧಿಸಿದ ಹಿಟ್ಲರನ ಸೋದರಳಿಯ

ಅಮೇರಿಕವನ್ನು ಪ್ರತಿನಿಧಿಸಿದ ಹಿಟ್ಲರನ ಸೋದರಳಿಯ

ಇಡಿಯ ಜರ್ಮನಿ ಹಿಟ್ಲರನ ಪ್ರಭಾವಕ್ಕೊಳಗಾಗಿ ಯುದ್ಧದಲ್ಲಿ ಭಾಗವಹಿಸಿದರೆ, ಹಿಟ್ಲರನ ಸೋದರಳಿಯ, ವಿಲಿಯಂ ಪ್ಯಾಟ್ರಿಕ್ ಹಿಟ್ಲರ್ ಮಾತ್ರ ಮಿತ್ರ ರಾಷ್ಟ್ರಗಳ ಪರವಾಗಿ ಯುದ್ಧದಲ್ಲಿ ಭಾಗವಹಿಸಿದ. ಇಂಗ್ಲಿಂಡಿನ ಲಿವರ್ ಪೂಲ್ ನಲ್ಲಿ ಜನಿಸಿ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದ ವಿಲಿಯಂರಿಗೆ ಹಿಟ್ಲರ್ ಬ್ರಿಟಿಷ್ ಪೌರತ್ವವನ್ನು ತ್ಯಜಿಸಿ ನಾಜಿ ಸಂಸ್ಥೆಯನ್ನು ಸೇರಿದರೆ ಉನ್ನತ ಪದವಿಯನ್ನು ನೀಡುವುದಾಗಿ ಆಮಿಷವೊಡ್ಡಿದ್ದ. ಆದರೆ ಜರ್ಮನಿಯ ಹೊರಗಿದ್ದು ಹಿಟ್ಲರನ ದುರಾಲೋಚನೆಯ ಬಗ್ಗೆ ಅರಿವಿದ್ದ ವಿಲಿಯಂ ಈ ಪ್ರಲೋಭನೆಗೆ ಒಳಗಾಗದೇ ಜರ್ಮನಿಯ ಏಜೆಂಟ್ ಒಬ್ಬರ ನೆರವಿನ ಮೂಲಕ ಅಮೇರಿಕಕ್ಕೆ ಬಂದಿಳಿದ. ಯುದ್ಧಕಾಲದಲ್ಲಿ ಬ್ರಿಟಿಶ್ ರಹಸ್ಯ ಏಜೆಂಟ್ ಆಗಿ ಜರ್ಮನಿಯಲ್ಲಿದ್ದು ಹಲವು ಮಾಹಿತಿಗಳನ್ನು ಪಡೆದಿದ್ದ. ಹಿಟ್ಲರನ ಮೇಲಿನ ತನ್ನ ದ್ವೇಶವನ್ನು ಲಂಡನ್ನಿನ ಲುಕ್ ಪತ್ರಿಕೆಯಲ್ಲಿ "Why I Hate my Uncle"ಎಂಬ ಲೇಖನದ ಮೂಲಕ ಪ್ರಕಟಿಸಿದ.

1944ರಲ್ಲಿ ಅಮೇರಿಕಾದ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್ ರ ವಿಶೇಷ ಅನುಮತಿಯ ಬಳಿಕ ಅಮೇರಿಕಾ ಸೇನೆಯನ್ನು ಸೇರಿ ಯುದ್ಧಕಾಲದಲ್ಲಿ ಸೇವೆ ಸಲ್ಲಿಸಿದ.

ಅತಿಹೆಚ್ಚು ಸಂಖ್ಯೆಯಲ್ಲಿ ಮಕ್ಕಳ ಪ್ರಾಣಹರಣ ಮಾಡಿದ ಮಹಾಯುದ್ಧ

ಅತಿಹೆಚ್ಚು ಸಂಖ್ಯೆಯಲ್ಲಿ ಮಕ್ಕಳ ಪ್ರಾಣಹರಣ ಮಾಡಿದ ಮಹಾಯುದ್ಧ

ಎರಡನೇ ಮಹಾಯುದ್ದದಲ್ಲಿ ಸುಮಾರು ಹದಿನೈದು ಲಕ್ಷ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಸುಮಾರು ಹನ್ನೆರಡು ಲಕ್ಷ ಮಕ್ಕಳು ಜ್ಯೂ ಗಳಾಗಿರುವುದು ಮಹಾಯುದ್ದದ ದುರಂತದ ಪರಾಕಾಷ್ಠೆಯಾಗಿದೆ.

X
Desktop Bottom Promotion