Latest Updates
-
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್
ಐಬಿಎಫ್ ಡಬ್ಲ್ಯೂ13:ಶಂತನು,ನಿಖಿಲ್ ಸಂಗ್ರಹ
ಐಬಿಎಫ್ ಡಬ್ಲ್ಯೂ 13ರ ನಾಲ್ಕನೆ ದಿನ ಶಂತನು ಮತ್ತು ನಿಖಿಲ್ ತಮ್ಮ 'ಟು ಡೈ' ಎನ್ನುವ ಸಂಗ್ರಹ ಪ್ರದರ್ಶಿಸಿದರು. ಇದರಲ್ಲಿ ಆಧುನಿಕ ವಿನ್ಯಾಸದ ಬಟ್ಟೆಗಳನ್ನು ಪ್ರದರ್ಶಿಸಿದರು.
ಶಂತನು ಮತ್ತು ನಿಖಿಲ್ ಮಾಡ್ರನ್ ಟ್ರೆಂಡ್ ಗೆ ಅನುಗುಣವಾಗಿ ತಮ್ಮ ವಸ್ತ್ರಗಳನ್ನು ವಿನ್ಯಾಸಗೊಳಿಸಿದ್ದರು. ಇಲ್ಲಿ ಹಲವು ಶೀರ್ ಗೌನುಗಳಿಂದ ಹಿಡಿದು ಹೈ ಲೋ ಹೆಮ್ ಬ್ಲೌಸ್ ಲೆಹಂಗಾಗಳನ್ನು ಕಾಣಬಹುದಿತ್ತು. ಒಟ್ಟಾರೆಯಾಗಿ ಇವರ ಸಂಗ್ರಹ ಅದ್ಭುತವಾಗಿತ್ತು. ಆದರೆ ದೆಹಲಿಯ ಐಬಿಎಫ್ ಡಬ್ಲ್ಯೂ ಸಂಗ್ರಹವನ್ನೇ ಇದು ಹೋಲುತಿತ್ತು.
ಈ ಸಂಗ್ರಹವು ಹೆಚ್ಚಾಗಿ ಮೃದು ಸ್ವಭಾವದ ಹೆಚ್ಚಾಗಿ ಹೆಣ್ತತನವನ್ನು ಎತ್ತಿ ತೋರುವ ಸಮಕಾಲೀನ ಫ್ಯಾಷನ್ ಇಷ್ಟಪಡುವ ವಧುವನ್ನೇ ಗಮನದಲ್ಲಿರಿಸಿಕೊಂಡಿತ್ತು. ಈ ಉಡುಪುಗಳಲ್ಲಿ ಹೆಚ್ಚಾಗಿ ಗೋಲ್ಡನ್ ವರ್ಕ್ ಕಂಡುಬಂದಿತು.
ಈ ವಧು ಸಂಗ್ರಹದ ಬಟ್ಟೆಗಳು ಹೆಚ್ಚಾಗಿ ಚಿನ್ನದ ವಿವಿಧ ರೀತಿಗಳನ್ನು ಒಳಗೊಂಡಿತ್ತು. ಮಾಡೆಲ್ ಗಳು ಚಿನ್ನದ ಎಲೆಗಳು ಮತ್ತು ಝರಿ ಕುಸುರಿಯನ್ನು ಹೊಂದಿದ್ದ ಬಟ್ಟೆಗಳಲ್ಲಿ ಮಿಂಚಿದರು.
ಶಂತನು ಮತ್ತು ನಿಖಿಲ್ ವಿನ್ಯಾಸದ ವಸ್ತ್ರ ಸಂಗ್ರಹ:

ಪ್ರದರ್ಶಕಿ
ಸಾನಿಯಾ ಮಿರ್ಜಾ ಈ ವಿನ್ಯಾಸಕರ ಉಡುಗೆಗಳನ್ನು ತೊಟ್ಟು ಪ್ರದರ್ಶಿಸಿದಳು. ಇವರ ವಿನ್ಯಾಸದ ಉಡುಗೆಗಳಲ್ಲಿ ಸಾನಿಯಾ ಬಹಳ ಸುಂದರವಾಗಿ ಕಾಣುತ್ತಿದ್ದಳು.

ಗೋಲ್ಡ್ ಮತ್ತು ಕ್ರೀಂ
ಗೋಲ್ಡ್ ಮತ್ತು ಕ್ರೀಂ ಈ ಎರಡು ಬಣ್ಣಗಳನ್ನು ಈ ಉಡುಪಿಗೆ ಬಳಸಲಾಗಿದೆ. ಇದರ ಮೇಲೆ ಚಿನ್ನದ ಬಣ್ಣದ ಕಸೂತಿಯನ್ನು ಮಾಡಲಾಗಿದ್ದು ಅದೇ ಬಣ್ಣದ ಅಂಚನ್ನು ಕಾಣಬಹುದಾಗಿದೆ.

ಚಿನ್ನದ ಉಡುಗೆ
ಈ ಉಡುಪು ಒಟ್ಟಾರೆಯಾಗಿ ಅದ್ಭುತವಾಗಿತ್ತು. ಇದು ಮೂರು ಪದರಗಳನ್ನು ಒಳಗೊಂಡಿತ್ತು. ಇವು ಕ್ರಮವಾಗಿ ಶೀರ್, ಲೇಸ್ ಮತ್ತು ನೆಟ್ ಪದರಗಳಾಗಿದ್ದವು. ಸೊಂಟದ ಸುತ್ತಲೂ ಚಿನ್ನದ ಬಣ್ಣದ ಸ್ಯಾಟಿನ್ ಬಟ್ಟೆಯನ್ನು ಕಟ್ಟಲಾಗಿತ್ತು.

ಬಿಳಿ ಕುರ್ತಾ
ಹ್ಯಾಂಡ್ ಸಂ ಮತ್ತು ಸ್ಟೈಲಿಶ್ ಆಗಿದ್ದ ಈ ಉಡುಗೆಯು ಪೈಜಾಮ ಮತ್ತು ಜೋದ್ ಪುರಿಯನ್ನು ಒಳಗೊಂಡಿತ್ತು.

ಕಾಫಿ ಬಣ್ಣ
ಶಂತನು ಮತ್ತು ನಿಖಿಲ್ ಇಲ್ಲಿ ಪ್ರದರ್ಶಿಸಿದ ಬಟ್ಟೆಗಳಲೆಲ್ಲ ಕಾಫಿ ಬಣ್ಣದ ಈ ದಿರಿಸು ಬಹಳ ಸುಂದರವಾಗಿತ್ತು. ಸಾಸಿವೆ ಮತ್ತು ಕಾಫಿ ಬಣ್ಣದ ಮಿಶ್ರಣ ನೋಡಲು ಸುಂದರವಾಗಿತ್ತು.

ಬ್ರಾಂಜ್ ಕುರ್ತಾ
ಬಿಳಿ ಬಣ್ಣದ ಕುರ್ತಾಗೆ ತಾಮ್ರದ ಬಣ್ಣದ ವೇಸ್ಟ್ ಕೋಟನ್ನು ಹಾಕಲಾಗಿತ್ತು.

ಡ್ಯೊ ಕಾಂಬೋ
ಮಸ್ಟರ್ಡ್ ಮತ್ತು ನೇರಳೆ ಬಣ್ಣವನ್ನು ಈ ಉಡುಪಿನಲ್ಲಿ ಬಳಸಿದ್ದರು. ಕುತ್ತಿಗೆ ಮುಚ್ಚುವಂತಿದ್ದ ಸಲ್ವಾರ್ ಮತ್ತು ಅದರ ನಿರಿಗೆಗಳು ಅದ್ಭುತವಾಗಿತ್ತು.

ಪ್ಯಾಸ್ಟಲ್ ಗೋಲ್ಡ್
ಡಾರ್ಕ್ ಬ್ರೌನ್ ಮತ್ತು ಚಿನ್ನದ ಬಣ್ಣಗಳನ್ನು ಈ ಉಡುಪಿನಲ್ಲಿ ಬಳಸಲಾಗಿತ್ತು. ಇದರ ವೈಶಿಷ್ಟ್ಯತೆಯೆಂದರೆ ಇದರ ಅಂಚುಗಳು. ಇದು ಸಾಂಪ್ರದಾಯಿಕ ಶೈಲಿಯ ವಿನ್ಯಾಸಗಳನ್ನು ಒಳಗೊಂಡಿತ್ತು. ನೋಡಲು ಆಪ್ತವೆನಿಸುತಿತ್ತು.

ವರ್ಣಮಯ
ಸಮಕಾಲೀನ ಎನಿಸುವಂತಹ ಈ ಕುರ್ತಾ ಹೆಚ್ಚು ಸ್ಟೈಲಿಶ್ ಆಗಿತ್ತು.

ಚಾಕೊಲೇಟ್ ಗೋಲ್ಡ್
ಈ ಸುಂದರ ಡಾರ್ಕ್ ಚಾಕೊಲೇಟ್ ಬಣ್ಣದ ಗೌನಿನ ಮೇಲ್ಭಾಗಕ್ಕೆ ಚಿನ್ನದ ಬಣ್ಣವನ್ನು ಬಳಸಲಾಗಿತ್ತು. ಇದರೊಂದಿಗೆ ಚಿನ್ನದ ಬಣ್ಣದ ಅಂಚನ್ನು ರೂಪಿಸಲಾಗಿತ್ತು.

ಮಿಂಚುವ ಸೌಂದರ್ಯ
ಈ ವೇದಿಕೆಯಲ್ಲಿ ಕಾಣಿಸಿಕೊಂಡ ಬೆಸ್ಟ್ ಕಾಂಬಿನೇಷನ್ ಬಣ್ಣವೆಂದರೆ ಡಾರ್ಕ್ ಬ್ರೌನ್ ಮತ್ತು ಗೋಲ್ಡ್. ಈ ಸುಂದರ ನಿರಿಗೆಗಳ ಉಡುಪಿನಲ್ಲಿ ಕೂಡ ಈ ಬಣ್ಣಗಳನ್ನು ಕಾಣಬಹುದು.

ಕ್ಲಿಯೊಪಾತ್ರ
ಕೆಂಪು ಬಣ್ಣದ ಈ ಉಡುಪಿನಲ್ಲಿ ಈ ರೂಪದರ್ಶಿಯು ಈಜಿಪ್ಟ್ ನ ಚೆಲುವೆ ಕ್ಲಿಯೊಪಾತ್ರಳನ್ನು ಹೋಲುತ್ತಿದ್ದಳು. ಕೆಂಪು ಮತ್ತು ಕಪ್ಪು ಬಣ್ಣಗಳ ಸಂಯೋಜನೆ ಸುಂದರವಾಗಿತ್ತು.

ಕಪ್ಪು
ವರನಿಗೆ ಕಪ್ಪು ಬಣ್ಣದ ದಿರಿಸು ಹೆಚ್ಚು ಒಪ್ಪುತ್ತದೆ. ಚಿನ್ನದ ಗುಂಡಿಗಳೊಂದಿಗಿನ ಈ ಕಪ್ಪು ಕುರ್ತಾ ಕಣ್ಣನ್ನು ಸೆಳೆಯುವಂತಿತ್ತು.

ಕೆಂಪು ರಾಣಿ
ಈ ಕೆಂಪು ಬಣ್ಣದ ಲೇಸ್ ಸಲ್ವಾರ್ ಸರಳವಾಗಿತ್ತು. ತಲೆಗೆ ಹಾಕಿದ್ದ ಚಿನ್ನದ ಕವಚ ಮಾತ್ರ ನೋಡುವಂತಿತ್ತು.



Click it and Unblock the Notifications