Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಐಬಿಎಫ್ ಡಬ್ಲ್ಯೂ13ರಲ್ಲಿ ಅದಿತಿ ರಾವ್ ಹೈದರಿ
ಐಬಿಎಫ್ ಡಬ್ಲ್ಯೂ 13ರ ಐದನೇ ದಿನ ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಎಲ್ಲರ ಕಣ್ಣು ಸೆಳೆದಳು. ಈಕೆ ಪ್ರೀತಿ ಎಸ್. ಕಪೂರ್ ವಿನ್ಯಾಸದ ಉಡುಪುಗಳನ್ನು ಪ್ರದರ್ಶಿಸಿದಳು.
ಈಕೆಯತ್ತ ಎಲ್ಲರ ಚಿತ್ತ ಹರಿಯಲು ಮುಖ್ಯ ಕಾರಣ ಈಕೆ ನಡೆದು ಬಂದ ರೀತಿ. ಅದಿತಿ ರಾವ್ ಟಿಪಿಕಲ್ ಉತ್ತರ ಭಾರತದ ವಧುವಿನ ಹಾಗೆ ಸಿಂಗರಿಸಿಕೊಂಡು ಹೂವಿನ ಚಾದರ ಕೆಳಗೆ ನಡೆದು ಬಂದಳು. ಇದು ಎಲ್ಲರ ಗಮನವನ್ನು ಸೆಳೆಯಿತು.
ಈಕೆ ಕ್ರಿಮ್ಸನ್ ರೆಡ್ ಮತ್ತು ಕೋರಲ್ ಬಣ್ಣದ ಲೆಹಂಗ ತೊಟ್ಟಿದ್ದಳು. ಲೆಹಂಗಾವನ್ನು ಬೆಳ್ಳಿಯ ಬೀಡ್ಸ್ ಗಳಿಂದ ಸಿಂಗರಿಸಲಾಗಿತ್ತು ಮತ್ತು ಅದರ ಮೇಲೆ ಮಾಡಿದ್ದ ಎಂಬ್ರಾಯ್ಡರಿ ಕೂಡ ಗಮನ ಸೆಳೆಯುವಂತಿತ್ತು.

ಅದಿತಿ ತೊಟ್ಟಿದ್ದ ಲೆಹಂಗದ ಮೇಲಿನ ಉಡುಪು ಕ್ರಿಮ್ಸನ್ ರೆಡ್ ಮತ್ತು ಸ್ಕರ್ಟ್ ಗೆ ಸುಂದರವಾಗಿ ಎರಡು ಪದರಗಳಲ್ಲಿ ಚಿನ್ನದ ಜರಿ ಬಳಸಿ ಎಂಬ್ರಾಯ್ಡರಿ ಮಾಡಲಾಗಿತ್ತು. ಆಕೆಯ ಚೋಲಿ ಕೂಡ ಸುಂದರವಾಗಿತ್ತು. ಇಡೀ ಚೋಲಿ ಲಂಬಾಕಾರದ ಸ್ಟ್ರಿಪ್ಸ್ ನ ಮೇಲೆ ಎಂಬ್ರಾಯ್ಡರಿಯನ್ನು ಒಳಗೊಂಡಿತ್ತು. ದುಪ್ಪಟ್ಟಾ ಕೋರಲ್ ಬಣ್ಣದಲ್ಲಿದ್ದು ನೆಟ್ ಬಳಸಿ ಮಾಡಲಾಗಿತ್ತು. ಇದರ ಅಂಚುಗಳು ಕಣ್ಸೆಳೆಯುವಂತಿತ್ತು. ಗೋಲ್ಡನ್ ಅಂಚಿನ ಈ ಉಡುಪು ಭರ್ಜರಿಯಾಗಿ ಕಾಣುತಿತ್ತು.
ಈ ಉಡುಪಿಗೆ ಅದಿತಿ ರಾವ್ ಸಾಂಪ್ರದಾಯಿಕ ರೀತಿಯ ಚಿನ್ನದೋಲೆ, ಮುತ್ತಿನ ಹಾರಗಳು ಮತ್ತು ಚಿನ್ನದ ಬೈತಲೆ ಬೊಟ್ಟನ್ನು ಹಾಕಿಕೊಂಡಿದ್ದಳು. ಇದು ಆಕೆಯ ಅಲಂಕಾರಕ್ಕೆ ಹೆಚ್ಚಿನ ಮೆರುಗನ್ನು ತಂದುಕೊಟ್ಟಿತು.
ಒಟ್ಟಿನಲ್ಲಿ ಐಬಿಎಫ್ ಡಬ್ಲ್ಯೂ 13ರಲ್ಲಿ ಪ್ರೀತಿ ಎಸ್ ಕಪೂರ್ ವಿನ್ಯಾಸದ ಸಂಗ್ರಹವನ್ನು ಅದಿತಿ ರಾವ್ ತುಂಬ ಆಕರ್ಷಕವಾಗಿ ಪ್ರದರ್ಶಿಸಿದಳು.



Click it and Unblock the Notifications
