Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಐಬಿಎಫ್ ಡಬ್ಲ್ಯೂ 13 ಫ್ಯಾಷನ್ ಶೋ
ಬಹುನಿರೀಕ್ಷಿತ ಇಂಡಿಯಾ ಬ್ರೈಡಲ್ ಫ್ಯಾಷನ್ ವೀಕ್ 2013 ಮುಂಬೈನಲ್ಲಿ ಆರಂಭಗೊಂಡಿತು. ಜೋತ್ಸ್ಯಾ ತಿವಾರಿಯವರ ವಿನ್ಯಾಸದ ಬಟ್ಟೆಗಳ ಪ್ರದರ್ಶನೊಂದಿಗೆ ಈ ಸಮಾರಂಭವು ಆರಂಭಗೊಂಡಿತು. ಅತಿ ಹೆಚ್ಚು ಕಸೂತಿಯನ್ನೇ ಬಳಸಿ ವಿನ್ಯಾಸಗೊಳಿಸಲಾಗಿದ್ದ ವಸ್ತ್ರಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.
ಜ್ಯೋತ್ಸ್ನಾ ತಿವಾರಿ ಗಾಢ ಬಣ್ಣವಾದ ಕೆಂಪನ್ನು ಹೆಚ್ಚಾಗಿ ಮತ್ತು ಇದರೊಂದಿಗೆ ಕೊರಲ್, ಬೀಜ್, ನ್ಯೂಡ್ ಮತ್ತು ಕ್ರೀಮಿ ಯೆಲ್ಲೋ ಬಣ್ಣಗಳನ್ನು ಬಳಸಿ ವಸ್ತ್ರಗಳನ್ನು ವಿನ್ಯಾಸಗೊಳಿಸಿದ್ದಳು. ಬೆಳ್ಳಿ ಮತ್ತು ಚಿನ್ನದಚುಮ್ಕಿಗಳನ್ನು ಕಸೂತಿಗಾಗಿ ಬಳಸಿದ್ದಳು.
ಜ್ಯೋತ್ಸ್ನಾ ತಿವಾರಿ ವಿನ್ಯಾಸಗೊಳಿಸಿದ ವಸ್ತ್ರಗಳನ್ನು ಜ್ಯಾಕ್ವಿಲಿನೆ ಫರ್ನಾಂಡೀಸ್ ಮತ್ತು ಊರ್ವಶಿ ರೌತೆಲ ಪ್ರದರ್ಶಿಸಿದರು. ಜ್ಯಾಕ್ವಿಲಿನೆ ಫರ್ನಾಂಡೀಸ್ ಗುಲಾಬಿ ಬಣ್ಣದ ಚಿನ್ನದ ಚುಮ್ಕಿ ಕಸೂತಿ ಮಾಡಿದ ಲೆಹಂಗಧರಿಸಿದ್ದಳು.

ಜ್ಯಾಕ್ವಿಲಿನೆ ಫರ್ನಾಂಡೀಸ್ ಶಾರ್ಟ್ ಬ್ಲೌಸ್ ಮತ್ತು ಲೋ ವೇಸ್ಟ್ ಲೆಹಂಗಾದಲ್ಲಿ ಮಾದಕವಾಗಿ ಕಾಣುತ್ತಿದ್ದಳು. ಲೆಹಂಗಾಕ್ಕೆ ಮಾಡಿದ್ದ ಚಿನ್ನದ ಕಸೂತಿ ಕಲ್ಲು ಮತ್ತು ಮಣಿಗಳನ್ನು ಹೊಂದಿತ್ತು. ಬೆಳ್ಳಿಯ ಬಣ್ಣದ ಮಣಿಗಳನ್ನು ಲೆಹಂಗಾದ ಅಂಚುಗಳಲ್ಲಿ ಕೂಡ ಕಾಣಬಹುದಿತ್ತು. ಇದರ ದುಪಟ್ಟ ಗುಲಾಬಿ ಬಣ್ಣದಲ್ಲಿದ್ದು ಚಿನ್ನದ ಚುಮ್ಕಿಯ ಕಸೂತಿಯನ್ನು ಒಳಗೊಂಡಿತ್ತು. ಈ ಉಡುಗೆಗೆ ಆಕೆ ವಜ್ರದ ಆಭರಣಗಳನ್ನು ತೊಟ್ಟಿದ್ದಳು. ಮುತ್ತಿನಪದಕವಿದ್ದ ವಜ್ರದ ನೆಕ್ ಲೇಸ್ ತೊಟ್ಟಿದ್ದಳು. ಇದರೊಂದಿಗೆ ಡಾಬನ್ನು ಹಾಕಿಕೊಂಡಿದ್ದು ಆಕೆಯ ದೇಸಿ ಲುಕ್ ಗೆ ಮೆರುಗನ್ನು ತಂದಿತು.
ಊರ್ವಶಿ ರೌತೆಲ ಬಿಳಿ ಬಣ್ಣದ ತೋಳಿಲ್ಲದ ಉಡುಗೆಯಲ್ಲಿ ದೇವತೆಯ ಹಾಗೆ ಕಾಣಿಸುತ್ತಿದ್ದಳು. ನಿರಿಗೆಗಳಿದ್ದ ಈ ಉಡುಗೆ ಚುಮ್ಕಿ ಕಸೂತಿಯನ್ನು ಹೊಂದಿತ್ತು. ಬೆಲ್ಟ್ ಸ್ಲೀವ್ ಸ್ಟ್ರಾಪ್ಸ್, ಡೀಪ್ ಕಟ್ ಬ್ಯಾಕ್ ಮತ್ತು ಫ್ರಿಲ್ ಬಾಟಂಉಡುಗೆಯ ಅಂದವನ್ನು ಹೆಚ್ಚಿಸಿತ್ತು. ನಿರಿಗೆಗಳು ಈ ಉಡುಗೆಯನ್ನು ಹೆಚ್ಚು ಪಾಶ್ಚಾತ್ಯ ಉಡುಗೆಯ ಹಾಗೆ ತೋರುತಿತ್ತು. ಇದಕ್ಕೆ ಆಕೆ ವಜ್ರದ ಕಿವಿಯೋಲೆಗಳನ್ನು ಹಾಕಿಕೊಂಡಿದ್ದಳು.
ಜ್ಯೋತ್ಸ್ನಾ ತಿವಾರಿ ವಿನ್ಯಾಸದ ಉಡುಗೆಯಲ್ಲಿ ಜಾಕ್ವಿಲಿನೆ ಫರ್ನಾಂಡೀಸ್ ಮತ್ತು ಊರ್ವಶಿ ಇಬ್ಬರೂ ಅದ್ಭುತವಾಗಿ ಕಾಣುತ್ತಿದ್ದರು. ಒಬ್ಬಳು ದೇಸಿ ರೀತಿಯಲ್ಲಿದ್ದರೆ ಮತ್ತೊಬ್ಬಳು ಸ್ಟೈಲಿಶ್ ಕ್ರಿಶ್ಚಿಯನ್ ವಧುವಾಗಿದ್ದಳು.



Click it and Unblock the Notifications
