Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ!
ವಿಚಿತ್ರ ಹವ್ಯಾಸ ಹೊಂದಿರುವ ಸೆಲೆಬ್ರಿಟಿಗಳು
ಸೆಲೆಬ್ರಿಟಿಗಳು ಹಲವಾರು ಮಂದಿಗೆ ಮಾದರಿಯಾಗಿರುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸೆಲೆಬ್ರಿಟಿಗಳನ್ನು ಅನುಕರಿಸಲು ಹಾಗೂ ಆರಾಧಿಸಲು ಇಷ್ಟಪಡುತ್ತಾರೆ. ಇದರಿಂದಾಗಿ ಈ ಸೆಲೆಬ್ರಿಟಿಗಳು ತಮ್ಮ ನಡವಳಿಕೆ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅವರಿಗೆ ಯಾವುದಾದರೂ ವಿಚಿತ್ರ ಹಾಗೂ ಅಸಾಮಾನ್ಯ ಹವ್ಯಾಸಗಳಿದ್ದರೆ ತುಂಬಾ ಕಷ್ಟವಾಗುತ್ತದೆ. ಕೆಲವು ಸೆಲೆಬ್ರಿಟಿಗಳಿಗೆ ವಿಚಿತ್ರ ಹವ್ಯಾಸಗಳಿರುತ್ತದೆ ಮತ್ತು ಅವರು ಇದರ ಬಗ್ಗೆ ಬಹಿರಂಗವಾಗಿಯೂ ಹೇಳುತ್ತಾರೆ.
ವಿಲಕ್ಷಣ ಹವ್ಯಾಸಗಳನ್ನು ಹೊಂದಿರುವಂತಹ ಕೆಲವೊಂದು ಸೆಲೆಬ್ರಿಟಿಗಳನ್ನು ಇಷ್ಟಪಡುವ ಅವರ ಅಭಿಮಾನಿಗಳು ಈ ವಿಲಕ್ಷಣ ಮತ್ತು ಅಸಾಮಾನ್ಯ ಹವ್ಯಾಸಗಳನ್ನೂ ಇಷ್ಟಪಡುತ್ತಾರೆ. ಈ ಕಲಾವಿದರು ಅಥವಾ ಸಮಾಜದ ಪ್ರಮುಖರಲ್ಲಿ ಇರುವ ಕೆಲವೊಂದು ಹವ್ಯಾಸಗಳು ತುಂಬಾ ತಮಾಷೆಯದ್ದಾಗಿರುತ್ತದೆ. ಕೆಲವೊಂದು ಸಲ ಈ ಹವ್ಯಾಸಗಳು ಅವರ ವ್ಯಕ್ತಿತ್ವಕ್ಕೆ ತದ್ವಿರುದ್ಧವಾಗಿರುತ್ತದೆ.
ಸೆಲೆಬ್ರಿಟಿಗಳ ಕೆಲವೊಂದು ವಿಲಕ್ಷಣ ಹವ್ಯಾಸಗಳ ಬಗ್ಗೆ ತಿಳಿಯುವುದು ಒಳ್ಳೆಯದು. ಅವರ ಹವ್ಯಾಸಗಳನ್ನು ನೋಡಿದಾಗ ಅವರು ಕೂಡ ನಮ್ಮಂತೆ ಎಂದನಿಸುತ್ತದೆ. ಸೆಲೆಬ್ರಿಟಿಗಳ ಕೆಲವೊಂದು ವಿಲಕ್ಷಣ ಹಾಗೂ ಅಸಾಮಾನ್ಯ ಹವ್ಯಾಸಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

1. ಡರ್ಟಿ ಪಿಕ್ಚರ್ ನ ವಿದ್ಯಾ ಬಾಲನ್
ಡರ್ಟಿ ಪಿಕ್ಚರ್ ನಲ್ಲಿ ತುಂಬಾ ಬೋಲ್ಡ್ ಆಗಿ ನಟಿಸಿದ್ದ ವಿದ್ಯಾ ಬಾಲನ್ ಗೆ ಕವಿತೆಗಳನ್ನು ಬರೆಯುವ ಹವ್ಯಾಸವಿದೆ. ಆಕೆ ತನ್ನ ಕವಿತೆ ಬರೆಯುವ ಹವ್ಯಾಸದ ಬಗ್ಗೆ ಇದುವರೆಗೆ ಬಹಿರಂಗವಾಗಿ ಹೇಳಿಲ್ಲವಾದರೂ ಮುಂದೊಂದು ದಿನ ನೀವು ಆಕೆಯ ಕವಿತೆಗಳ ಪುಸ್ತಕವನ್ನು ಓದಬಹುದು. ವಿದ್ಯಾ ಬಾಲನ್ ತನ್ನ ಸಾಹಿತ್ಯದ ಆಸಕ್ತಿಯ ಬಗ್ಗೆ ತಿಳಿಸಬಹುದು. ಈಗ ವಿದ್ಯಾಬಾಲನ್ ಬರೆದ ಕವಿತೆಗಳನ್ನು ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಮಾತ್ರ ಓದಬಹುದಾಗಿದೆ.

2. ರೌಂಚಿ ರಾಮ್ ರಣವೀರ್ ಸಿಂಗ್
ತನ್ನ ತುಂಟ ಮತ್ತು ಬಾಹ್ಯ ವರ್ತನೆಗೆ ಜನಪ್ರಿಯವಾಗಿರುವ ರಣವೀರ್ ಸಿಂಗ್ ಗೆ ಇರುವ ವಿಚಿತ್ರ ಹವ್ಯಾಸವೆಂದರೆ ರಾಪಿಂಗ್. ಭಾರತೀಯ ಆವೃತ್ತಿಯಾದ ಅಕೋನ್ ಬಗ್ಗೆ ತುಂಬಾ ಆಸಕ್ತಿ ಹೊಂದಿರುವ ಅವರು ರಾಪ್ ಸಂಗೀತಕಾರನಾಗಲು ಇಷ್ಟಪಡುತ್ತಾರೆ. ಲೇಡಿಸ್ vs ರಿಕಿ ಬೆಹ್ಲ್ ಚಿತ್ರದಲ್ಲಿ ಅವರು ತನ್ನ ಪ್ರತಿಭೆ ತೋರಿಸಿದ್ದಾರೆ. ಭವಿಷ್ಯದಲ್ಲಿ ಅವರು ಮತ್ತಷ್ಟು ರಾಪ್ ಪ್ರದರ್ಶನ ನೀಡುವುದನ್ನು ನೀವು ನೋಡಬಹುದಾಗಿದೆ.

3. ಸೋನಂ ಕಪೂರ್
ವೋಗ್ ನ ಮುಖಪುಟದಲ್ಲಿ ಕಾಣಿಸಿಕೊಂಡಿರುವ ಹುಡುಗಿಯ ಹವ್ಯಾಸವೆಂದರೆ ಸಾಮಾನ್ಯ ಹುಡುಗಿಯರಿಗಿರುವ ಶಾಪಿಂಗ್ ಹವ್ಯಾಸ. ಆಕೆಗೆ ಶಾಪಿಂಗ್ ಎಂದರೆ ಪಂಚಪ್ರಾಣ. ಆದರೆ ಶಾಂಪಿಂಗ್ ವೇಳೆ ಆಕೆ ತಿನ್ನುವುದು, ಪ್ರಾರ್ಥನೆ ಮಾಡುವುದು ತುಂಬಾ ವಿಚಿತ್ರ ಹಾಗೂ ಅಸಾಮಾನ್ಯ ಸಂಗತಿ. ಆಕೆ ಇಡೀ ದಿನ ಶಾಪಿಂಗ್ ಮಾಡಿ ಲಕ್ಷಗಟ್ಟಲೆ ಹಣ ವ್ಯಯಿಸುತ್ತಾಳೆ. ಆಕೆಗೆ ಬ್ರಾಂಡ್ ಗಳ ಬಗ್ಗೆ ತುಂಬಾ ಆಸಕ್ತಿ ಮತ್ತು ಆಕೆಯ ಬಳಿ ಹಲವಾರು ಬ್ರಾಂಡ್ ಗಳ ಉತ್ಪನ್ನಗಳಿವೆ. ಆಕೆಯ ಚಿತ್ರ ಐಶಾದಿಂದ ಆಕೆ ಪ್ರೇರಣೆ ಪಡೆದಿರಬಹುದು.

4. ಸಲ್ಮಾನ್ ಖಾನ್
ಬಾಲಿವುಡ್ ನ ಅಗ್ರ ಬೇಡಿಕೆಯ ದಬಾಂಗ್ ಹೀರೋಗೆ ತುಂಬಾ ಸೂಕ್ಷ್ಮ ಮತ್ತು ಕ್ರಿಯಾತ್ಮಕ ಪೈಂಟಿಂಗ್ ಹವ್ಯಾಸವಿದೆ. ಅವರ ವ್ಯಕ್ತಿತ್ವ ಮತ್ತು ನಡವಳಿಕೆ ನೋಡಿದರೆ ಇದು ತುಂಬಾ ವಿಚಿತ್ರವೆನಿಸುತ್ತದೆ. ಸಲ್ಮಾನ್ ಖಾನ್ ವಿವಾದಗಳಿಂದ ಹೆಚ್ಚು ಜನಪ್ರಿಯ. ಆದರೆ ಯಾರಾದರೂ ಅವರ ಸೂಕ್ಷ್ಮ ಮತ್ತು ಸೃಜನಶೀಲ ಹವ್ಯಾಸ ಪೈಟಿಂಗ್ ಬಗ್ಗೆ ಅವರನ್ನು ಜನಪ್ರಿಯಗೊಳಿಸಬಹುದು. ಅವರ ಅಭಿಮಾನಿಗಳು ಸಲ್ಮಾನ್ ಹವ್ಯಾಸದ ಬಗ್ಗೆ ಕೇಳಿ ತುಂಬಾ ಸಂತಸಪಡಬಹುದು.

5. ಜಾನಿ ಡೆಪ್
ಕ್ಯಾಪ್ಟನ್ ಜ್ಯಾಕ್ ಸ್ಪ್ಯಾರೋ ಮತ್ತು ವಿಲ್ಲಿ ವೊನ್ಕದಂತಹ ವೈವಿಧ್ಯಮಯ ಪಾತ್ರಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಹಾಲಿವುಡ್ ಸ್ಟಾರ್ ಗೆ ಬಾರ್ಬಿ ಬೊಂಬೆಗಳನ್ನು ಸಂಗ್ರಹಿಸುವ ಮತ್ತು ಅದರೊಂದಿಗೆ ಆಡುವ ಹವ್ಯಾಸವಿದೆ. ಜಾನಿ ಡೆಪ್ ನಂತಹ ವ್ಯಕ್ತಿಗೆ ಇದು ತುಂಬಾ ಅಸಾಮಾನ್ಯ ಮತ್ತು ವಿಲಕ್ಷಣ ಹವ್ಯಾಸ. ಅವರಲ್ಲಿ ಎಲ್ಲಾ ಬಗೆಯ ಬಾರ್ಬಿಗಳಿವೆ ಮತ್ತು ವಿರಾಮದ ಸಮಯದಲ್ಲಿ ಅವರು ಇದರೊಂದಿಗೆ ಆಡುತ್ತಾರೆ.
ಸೆಲೆಬ್ರಿಟಿಗಳ ಜನಪ್ರಿಯತೆ ಮತ್ತು ಗ್ಲ್ಯಾಮರ್ ನೊಂದಿಗೆ ಅವರ ಕೆಲವೊಂದು ಅಸಾಮಾನ್ಯ ಮತ್ತು ವಿಲಕ್ಷಣ ಹವ್ಯಾಸಗಳು ಇದಾಗಿವೆ. ಇತರ ಕೆಲವು ಸೆಲೆಬ್ರಿಟಿಗಳಾದ ಕ್ರಿಸ್ಟೆನ್ ಸ್ಟುವರ್ಟ್ ಗೆ ಚಮತ್ಕಾರ ಇಷ್ಟ. ಅಭಯ್ ಡಿಯೋಲ್ ಗೆ ಇಂಟೀರಿಯರ್ ಡಿಸೈನ್ ಮತ್ತು ಶಾರೂಕ್ ಖಾನ್ ಗೆ ಗ್ಯಾಜೆಟ್ಸ್ ಗಳನ್ನು ಸಂಗ್ರಹಿಸುವ ಹವ್ಯಾಸವಿದೆ.
ಸೆಲೆಬ್ರಿಟಿಗಳು ಕೂಡ ಸಾಮಾನ್ಯ ಜನರಂತೆ ಜೀವನದಲ್ಲಿ ಸಾಮಾನ್ಯ ಹವ್ಯಾಸ ಅಥವಾ ಆಸಕ್ತಿ ಹೊಂದಿರುತ್ತಾರೆ. ಈ ಎಲ್ಲಾ ಹವ್ಯಾಸಗಳು ತುಂಬಾ ಸಾಮಾನ್ಯವೆಂದು ನಮಗನಿಸುತ್ತದೆ. ಆದರೆ ಸೆಲೆಬ್ರಿಟಿಗಳ ವಿಷಯಕ್ಕೆ ಬಂದರೆ ಅವರ ಹವ್ಯಾಸ ಮತ್ತು ಆಸಕ್ತಿಯನ್ನು ಅವರ ಸುತ್ತಲು ಇರುವ ಸಾವಿರಾರು ಮಂದಿ ಗಮನಿಸಿ ತೀರ್ಪು ನೀಡುತ್ತಾರೆ. ಇದರಿಂದ ಜನರಿಗೆ ಜಾನ್ ಡೆಪ್ ಬಾರ್ಬಿ ಗೊಂಬೆಗಳನ್ನು ಸಂಗ್ರಹಿಸುವುದು ತುಂಬಾ ವಿಲಕ್ಷಣವೆನಿಸಬಹುದು ಮತ್ತು ಸಲ್ಮಾನ್ ಖಾನ್ ಗೆ ಪೈಟಿಂಗ್ ಬಗ್ಗೆ ಆಸಕ್ತಿ ಇರುವುದು ಜನರಿಗೆ ಅಸಾಮಾನ್ಯವೆಂದನಿಸಬಹುದು.



Click it and Unblock the Notifications