Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಹಿಳೆಯರು ಎಡ ಮೂಗಿಗೆ ಮೂಗುತ್ತಿ ಹಾಕೋದ್ರಿಂದಾಗುವ ಲಾಭಗಳೇನು?
ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರು ಮೂಗುತ್ತಿ ಧರಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರ್ತಿದ್ದಾರೆ. ಅದ್ರಲ್ಲೂ ಮೂಗಿನ ಎಡಭಾಗಕ್ಕೆ ಮೂಗುತ್ತಿಯನ್ನು ಧರಿಸಲಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು ಮದುವೆಗೂ ಮೊದಲು ಮೂಗು ಚುಚ್ಚಿಸಿಕೊಳ್ಳುತ್ತಾರೆ.
ವಿಪರ್ಯಾಸ ಅಂದ್ರೆ ಹೆಚ್ಚಿನವರು ಈ ಪದ್ಧತಿಯನ್ನು ಪಾಲಿಸಿಕೊಂಡು ಬರ್ತಿದ್ದಾರೆ ಹೊರತು ಇದರ ಹಿಂದಿನ ಕಾರಣ ಏನು ಅನ್ನೋದು ಯಾರಿಗೂ ತಿಳಿದಿಲ್ಲ. ಅಷ್ಟಕ್ಕು ಮಹಿಳೆಯರು ಮೂಗಿನ ಎಡಭಾಗಕ್ಕೆ ಯಾಕೆ ಮೂಗುತ್ತಿ ಹಾಕೋದು? ಇದರ ಹಿಂದಿನ ಕಾರಣವೇನು ಅನ್ನೋದನ್ನು ತಿಳಿಯೋಣ.

ಋತುಚಕ್ರದಿಂದಾಗೋ ನೋವನ್ನು ಕಡಿಮೆ ಮಾಡುತ್ತದೆ!
ಆಯುರ್ವೇದದ ಪ್ರಕಾರ ಎಡ ಮೂಗಿನ ಹೊಳ್ಳೆಯು ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಬಂಧಿಸಿದೆ. ನಿಮ್ಮ ಎಡ ಮೂಗಿನ ಹೊಳ್ಳೆಗೆ ಮೂಗುತ್ತಿಯನ್ನು ಚುಚ್ಚಿದರೆ ಮುಟ್ಟಿನ ಸೆಳೆತ ಮತ್ತು ಹೆರಿಗೆ ನೋವುಗಳನ್ನು ನಿವಾರಿಸಲು ಸಹಾಯವಾಗುತ್ತಂತೆ. ಇದೇ ಕಾರಣಕ್ಕೆ ಹಿಂದೂ ಸಂಪ್ರದಾಯದಲ್ಲಿ ಮೂಗುತ್ತಿಗೆ ಇಷ್ಟೊಂದು ಮಹತ್ವ ನೀಡಿರೋದು.
ಮೊಘಲರಿಂದ ಭಾರತಕ್ಕೆ ಪರಿಚಯವಾಯ್ತಾ?
ಈ ಕೆಲವು ನಂಬಿಕೆಗಳ ಪ್ರಕಾರ ಮೂಗುತಿ ಧರಿಸುವ ಪದ್ಧತಿಯು ಮಧ್ಯಪ್ರಾಚ್ಯದಲ್ಲಿ ಮೊದಲು ಹುಟ್ಟಿಕೊಂಡಿತಂತೆ. ಮತ್ತು ಇದು 16 ನೇ ಶತಮಾನದಲ್ಲಿ ಮೊಘಲ್ ಯುಗದಲ್ಲಿ ಭಾರತಕ್ಕೆ ಬಂದಿತು ಎಂದು ಹೇಳಲಾಗುತ್ತದೆ. ಇನ್ನೂ ಪುರಾತನ ಆಯುರ್ವೇದ ಗ್ರಂಥವಾದ ಸುಶ್ರುತ ಸಂಹಿತೆಯಲ್ಲಿ ಮೂಗುತಿ ಧರಿಸುವುದರ ಆರೋಗ್ಯ ಪ್ರಯೋಜನಗಳನ್ನು ಸಹ ಉಲ್ಲೇಖ ಮಾಡಲಾಗಿದೆ.
ಇದರ ಮೂಲದ ಕಥೆ ಏನೇ ಇರಲಿ ಮೂಗುತಿ ಧರಿಸುವುದು ಅಥವಾ ಮೂಗು ಚುಚ್ಚುವುದು ಭಾರತೀಯ ಮಹಿಳೆಯರು ಅನುಸರಿಸುವ ಪ್ರಮುಖ ಸಂಪ್ರದಾಯವಾಗಿದೆ. ವಿವಾಹಿತರು ಮತ್ತು ಅವಿವಾಹಿತ ಮಹಿಳೆಯರು ಇಬ್ಬರೂ ಮೂಗುತಿ ಧರಿಸಬಹುದು. ಈ ಸಂಪ್ರದಾಯವು ಹಿಂದೂ ಮಹಿಳೆಯರಲ್ಲಿ ಮಾತ್ರವಲ್ಲದೆ ಇತರ ಧರ್ಮಗಳ ಮಹಿಳೆಯರಲ್ಲಿಯೂ ಸಹ ಪ್ರಚಲಿತವಾಗಿದೆ.
ಪಾರ್ವತಿಗೆ ಗೌರವ ಸೂಚಿಸುವ ಸಂಕೇತ!
ಭಾರತದಾದ್ಯಂತ ಅನೇಕ ಸಂಸ್ಕೃತಿಗಳನ್ನು ಪಾಲನೆ ಮಾಡಲಾಗುತ್ತದೆ. ಅದ್ರಲ್ಲಿ ಮೂಗುತಿಯನ್ನು ಧರಿಸುವುದು ಕೂಡ ಒಂದಾಗಿದೆ. ಹಿಂದೂ ಧರ್ಮದಲ್ಲಿ ಗಂಡನ ಮರಣದ ನಂತರ ಮಹಿಳೆಯ ಮೂಗುತ್ತಿಯನ್ನು ತೆಗೆದು ಹಾಕಲಾಗುತ್ತದೆ. ಅಲ್ಲದೆ ಹಿಂದಿನ ಕಾಲದಲ್ಲಿ ಸಾಂಪ್ರದಾಯಿಕ ಮದುವೆಯ ವಯಸ್ಸಾದ 16 ನೇ ವಯಸ್ಸಿನಲ್ಲಿ ಹುಡುಗಿಯರು ಮೂಗು ಚುಚ್ಚಿಕೊಳ್ಳಬೇಕೆಂದು ಹೇಳಲಾಗುತ್ತಿತ್ತು. ಮದುವೆಯ ಅಧಿದೇವತೆಯಾದ ಪಾರ್ವತಿ ದೇವಿಗೆ ಗೌರವ ಸಲ್ಲಿಸುವ ಸಲುವಾಗಿ ಮೂಗುತಿ ಚುಚ್ಚಲಾಗುತ್ತಿತ್ತು ಎಂದು ಹೇಳಲಾಗುತ್ತದೆ.
ಜನಪ್ರಿಯ ನಂಬಿಕೆಗಳ ಪ್ರಕಾರ ಹೆಂಡತಿಯು ನೇರವಾಗಿ ಹೊರಹಾಕುವ ಗಾಳಿಯು ಗಂಡನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಂತೆ. ಆದ್ದರಿಂದ ಮಹಿಳೆಯರು ಮೂಗುತ್ತಿ ಧರಿಸಬೇಕು ಅಂತ ಹೇಳಲಾಗುತ್ತದೆ. ಮೂಗುತ್ತಿ ಧರಿಸೋದ್ರಿಂದ ಗಾಳಿಯು ಲೋಹದ ಅಡಚಣೆಯ ಮೂಲಕ ಬರುತ್ತದೆ. ಅದು ಸ್ಪಷ್ಟವಾಗಿ ಯಾವುದೇ ಕೆಟ್ಟ ಆರೋಗ್ಯ ಪರಿಣಾಮಗಳನ್ನು ಬೀರುವುದಿಲ್ಲ. ಇದು ಹೆಚ್ಚಾಗಿ ಭಾರತದ ಪೂರ್ವ ಭಾಗಗಳಲ್ಲಿ ಜನಪ್ರಿಯವಾಗಿರುವ ಮೂಢನಂಬಿಕೆಯಾಗಿದೆ.
ಈ ಎಲ್ಲಾ ನಂಬಿಕೆಗಳ ಹೊರತಾಗಿಯೂ ಈಗ ಮೂಗುತ್ತಿಯನ್ನು ಮಹಿಳೆಯರು ಫ್ಯಾಶನ್ ಎನ್ನುವ ಕಾರಣಕ್ಕೂ ಧರಿಸುತ್ತಾರೆ. ಇತ್ತೀಚಿಗಂತೂ ಮೂಗುತ್ತಿ ಹಲವಾರು ವಿಭಿನ್ನ ಮತ್ತು ಸುಂದರವಾದ ವಿನ್ಯಾಸಗಳಲ್ಲಿ ಲಭ್ಯವಿದೆ. ಅಷ್ಟೇ ಅಲ್ಲದೇ, ಇದು ಪ್ರತಿ ಮಹಿಳೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.



Click it and Unblock the Notifications
