Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಅಧಿಕ ವರ್ಷದ ಕುರಿತು ಇರುವ ಚಿತ್ರ ವಿಚಿತ್ರ ಮೂಢನಂಬಿಕೆಗಳು..!
ಪ್ರತಿ 4 ವರ್ಷಕ್ಕೊಮ್ಮೆ ಅಧಿಕ ವರ್ಷ ಬರುತ್ತದೆ ಎಂಬುದು ನಮಗೆಲ್ಲ ತಿಳಿಸಿದೆ. ಈ ವರ್ಷ ಸಹ ಅಧಿಕ ವರ್ಷವಾಗಿದ್ದು, ಫೆಬ್ರವರಿಯಲ್ಲಿ 29ನೇ ದಿನವಿದೆ. ಮೊದಲು ಅಧಿಕ ವರ್ಷ ಆರಂಭಿಸಿದ್ದು ಯಾರು? ಯಾವ ಕಾರಣಕ್ಕಾಗಿ ಅಧಿಕ ವರ್ಷ ಎಂಬ ವಿಶೇಷ ನಿಯಮ ಜಾರಿ ಮಾಡಿದ್ದರು ಎಂಬ ಪ್ರಶ್ನೆಗಳು ಮೂಡುವುದು ಸಹಜವೆ.
ಅಧಿಕ ವರ್ಷಗಳನ್ನು 16ನೇ ಶತಮಾನದಲ್ಲಿ ಪರಿಚಯಿಸಲಾಯಿತು. ಸೌರ ವರ್ಷದಲ್ಲಿನ ವ್ಯತ್ಯಾಸವನ್ನು ಸರಿಪಡಿಸುವ ಉದ್ದೇಶದಿಂದ ಒಂದು ದಿನವನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಈ ದಿನದಂದು ಜನಿಸಿದವರು ಪ್ರತಿ 4 ವರ್ಷಕ್ಕೊಮ್ಮೆ ತಮ್ಮ ಹುಟ್ಟುಹಬ್ಬ ಆಚರಿಸುತ್ತಾರೆ. ಜೊತೆಗೆ ಈ ದಿನ ನಡೆಯುವ ಪ್ರತಿಯೊಂದು ವಿಚಾರವು ವಿಶೇಷವಾಗಿರುತ್ತದೆ.

ಫೆಬ್ರವರಿ 29 ರಂದು ಜನಿಸಿದ ಜನರು ಲೀಪ್ಲಿಂಗ್ಸ್ ಎಂದೂ ಕರೆಯುತ್ತಾರೆ, ವಿಶ್ವದಾದ್ಯಂತ ಸುಮಾರು 5 ಮಿಲಿಯನ್ ಜನರು ಫೆಬ್ರವರಿ 29ರಂದು ತಮ್ಮ ಹುಟ್ಟುಹಬ್ಬ ಆಚರಿಸುತ್ತಾರೆ ಎನ್ನಲಾಗಿದೆ.
ಅಧಿಕ ವರ್ಷ ಎಂದರೇನು?
16ನೇ ಶತಮಾನದಿಂದ, ಅಧಿಕ ವರ್ಷಗಳು ಸೌರ ವರ್ಷದಲ್ಲಿನ ವ್ಯತ್ಯಾಸವನ್ನು ಪರಿಹರಿಸಲು ಗ್ರೆಗೋರಿಯನ್ ಕ್ಯಾಲೆಂಡರ್ನ ಆವಿಷ್ಕಾರವಾಗಿದೆ. ಭೂಮಿಯು ಸೂರ್ಯನ ಸುತ್ತ ಸುತ್ತಲು ಪ್ರತಿ ವರ್ಷ ಸುಮಾರು 365.2422 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ನಾವು 365 ದಿನವನ್ನು ಮಾತ್ರ ಲೆಕ್ಕ ಮಾಡುತ್ತೇವೆ. ಆದರೆ ಉಳಿದ ಗಂಟೆಗಳನ್ನು ಸರಿಯಾಗಿ ಕೂಡಿಸಿದರೆ ನಾಲ್ಕು ವರ್ಷಕ್ಕೆ ಸರಿಯಾಗಿ 24 ಗಂಟೆಗಳು ಬರುತ್ತದೆ. ಹೀಗಾಗಿ ಅಧಿಕವಾಗಿ ಒಂದು ದಿನ ಸೇರಿಸಿ 366 ದಿನವನ್ನಾಗಿ ಮಾಡಲಾಗಿದೆ.
ಅಧಿಕ ವರ್ಷದಂದು ವಿಶ್ವದಾದ್ಯಂತ ಇರುವ ಸಂಪ್ರದಾಯಗಳು ಮತ್ತು ಮೂಢನಂಬಿಕೆಗಳೇನು?
ಈ ದಿನ ಹುಟ್ಟಿದರೆ ಆತ್ಮಹತ್ಯೆ
ಸ್ಕಾಟ್ಲೆಂಡ್‌ನಲ್ಲಿ ಅಧಿಕ ದಿನದಂದು ಜನಿಸಿದವರು ಕಷ್ಟಗಳಿಂದ ತುಂಬಿದ ಜೀವನವನ್ನು ಅನುಭವಿಸುತ್ತಾರೆ ಎಂಬ ನಂಬಿಕೆ ಅಸ್ತಿತ್ವದಲ್ಲಿದೆ. ಇದು ಮಾತ್ರವಲ್ಲ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ನಂಬಲಾಗಿದೆ. ಜೊತೆಗೆ ಅಧಿಕ ವರ್ಷವನ್ನು ರೈತರಿಗೆ ಕೆಟ್ಟ ವರ್ಷವೆಂದು ಪರಿಗಣಿಸುತ್ತಾರೆ. ವರ್ಷಕ್ಕೆ ಸಂಬಂಧಿಸಿದ ಮೂಢನಂಬಿಕೆಗಳ ಕೆಲವು ವರದಿಗಳ ಪ್ರಕಾರ, ಸಾವಿನ ಸಂಖ್ಯೆಯು ಹಠಾತ್ತನೆ ಏರುತ್ತದೆ ಮತ್ತು ಆ ನಿರ್ದಿಷ್ಟ ವರ್ಷದಲ್ಲಿ ಅನೇಕ ಜನರು ಆತ್ಮಹತ್ಯೆ ಮಾಡುಕೊಳ್ಳುತ್ತಾರೆ ಎಂದು ವರದಿಯಾಗಿದೆ.
4 ವರ್ಷಕ್ಕೊಮ್ಮೆ ವಿಶೇಷ ಪತ್ರಿಕೆ ಮುದ್ರಣ
ಫ್ರಾನ್ಸ್‌ನಲ್ಲಿ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಿರ್ದಿಷ್ಟವಾಗಿ ಫೆಬ್ರವರಿ 29 ರಂದು ವಿಶೇಷ ವೃತ್ತಪತ್ರಿಕೆಯನ್ನು ಪ್ರಕಟಿಸಲಾಗುತ್ತದೆ. 1980ರಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಆ ದಿನ ಆ ವಿಶೇಷ ಪತ್ರಿಕೆಯ ಮಾರಾಟ ಗಗನಕ್ಕೇರುತ್ತದೆ. ಜನ ಅಂಗಡಿಗಳಿಗೆ ಮುಗಿಬಿದ್ದು ಈ ಪತ್ರಿಕೆಯನ್ನು ಖರೀದಿಸುತ್ತಾರೆ. ಜೊತೆಗೆ ಈ ಪತ್ರಿಕೆಯನ್ನು ಸಂಗ್ರಹವಾಗಿ ಇಟ್ಟುಕೊಳ್ಳುತ್ತಾರೆ.
ಅಧಿಕ ದಿನದಂದು ಪ್ರಪೋಸ್ ಮಾಡಿದರೆ ತಿರಸ್ಕರಿಸುವಂತಿಲ್ಲ
1288ರಲ್ಲಿ ಸ್ಕಾಟ್ಲೆಂಡ್‌ನ ರಾಣಿ ಮಾರ್ಗರೆಟ್ ಈ ಕಾನೂನನ್ನು ಜಾರಿಗೆ ತಂದರು, ಲೀಪ್ ಡೇಯಂದು ಯಾವುದೇ ವ್ಯಕ್ತಿ ಹುಡುಗಿಯನ್ನು ತಿರಸ್ಕರಿಸಿದರೆ ಆತ ದಂಡ ಪಾವತಿಸಬೇಕು ಇಲ್ಲವೆ ರೇಷ್ಮೆಯ ಗೌನ್ ಅನ್ನು ದಂಡವಾಗಿ ನೀಡಬೇಕು. ಅಲ್ಲದೆ ಒಂಟಿಯಾಗಿ ಉಳಿಯಲು ನಿರ್ಧರಿಸಿದ ಹುಡುಗ ಯುವತಿಗೆ 12 ಜೊತೆ ಗ್ಲೌಸ್ ನೀಡಬೇಕು ಎಂಬ ನಿಯಮವಿದೆ.
ವಯಸ್ಸಾದ ಪೋಷಕರಿಗೆ ಹಂದಿಮಾಂಸದ ನೂಡಲ್ಸ್
ಇನ್ನೂ ವಿಚಿತ್ರವಾದ ಆಚರಣೆ ಎಂದರೆ ಅದು ಥೈವಾನ್‌ನಲ್ಲಿದೆ. ಅಲ್ಲಿ ನೆಲೆಸಿರುವ ವಯಸ್ಸಾದ ಪೋಷಕರು ಈ ಅಧಿಕ ವರ್ಷದ ದಿನ ಸಾಯುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ ಅವರು ಮದುವೆಯಾಗಿ ಕಳುಹಿಸಿಕೊಟ್ಟ ಮಗಳು ಮನೆಗೆ ವಾಪಾಸು ಬರಬೇಕು, ಜೊತೆಗೆ ಪೋಷಕರು ಇನ್ನಷ್ಟು ವರ್ಷ ಬದುಕಲಿ ಎಂದು ಹೆಚ್ಚು ಪೋಷಕಾಂಶ ತುಂಬಿರುವ ಆಹಾರದ ಹಂದಿಮಾಂಸದ ನೂಡಲ್ಸ್ ಮಾಡಿ ಅವರಿಗೆ ಕೊಡಬೇಕು.



Click it and Unblock the Notifications
