Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಲಕ್ಷ್ಮಿ ಪೂಜೆ ಶುಭಾಶಯಗಳು, ಸಂಪತ್ತು ವೃದ್ಧಿಗೆ ಪೂಜೆಗೆ ಶುಭ ಮುಹೂರ್ತ ಹಾಗೂ ಮಂತ್ರ
ದೀಪಾವಳಿಯ ಸಂಭ್ರಮ ಕಳೆಕಟ್ಟಿದೆ, ದೀಪಾವಳಿಗೆ ಲಕ್ಷ್ಮಿ ಪೂಜೆಗೆ ತುಂಬಾನೇ ಮಹತ್ವವಿದೆ, ನಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ ಹೆಚ್ಚಾಗಲಿ, ಲಕ್ಷ್ಮಿ ಕೃಪೆ ಸದಾ ನಮ್ಮ ಮೇಲಿರಲಿ ಎಂದು ಲಕ್ಷ್ಮಿಯಂದು ದೇವಿಯಲ್ಲಿ ಪ್ರಾರ್ಥಿಸುತ್ತೇವೆ. ಲಕ್ಷ್ಮಿ ಪೂಜೆ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ನಾವಿಲ್ಲಿ ಲಕ್ಷ್ಮಿ ಪೂಜೆಗೆಶುಭಾಶಯಗಳು ಹಾಗೂ ಲಕ್ಷ್ಮಿ ಪೂಜೆ ಶುಭ ಮುಹೂರ್ತ ನೀಡಿದ್ದೇವೆ ನೋಡಿ:

1.
ಲಕ್ಷ್ಮಿ ಪೂಜೆ 2024
ದೀಪಾವಳಿ ಹಬ್ಬದ ಶುಭಾಶಯಗಳು
ಲಕ್ಷ್ಮಿ ಕೃಪೆ ಸದಾ ನಿಮ್ಮ ಮೇಲಿರಲಿ
2. ಲಕ್ಷ್ಮಿ ಕೃಪೆ ನಿಮ್ಮ ಹಾಗೂ ಕುಟುಂಬದ ಮೇಲಿರಲಿ
ಸಂಪತ್ತು, ಸಮೃದ್ಧಿ ಹೆಚ್ಚಿಸಲಿ
ದೀಪಾವಳಿ ಬೆಳಕು ನಿಮ್ಮ ಬಾಳಲ್ಲಿ ತುಂಬಿರಲಿ
3. ಸಂಜೆ ಲಕ್ಷ್ಮಿಗೆ ದೀಪ ಹಚ್ಚಿದಾಗ ಆ ಬೆಳಕು ಕತ್ತಲ ದೂರಾಗಿಸಿ ಬೆಳಕು ತುಂಬುತ್ತೆ
ಅದರಂತೆ ಲಕ್ಷ್ಮಿ ಕೃಪೆಯಿಂದ ನೀವು ಬಯಸಿದ್ದೆಲ್ಲಾ ನೆರವೇರಲಿ
4. ಲಕ್ಷ್ಮಿ ಪೂಜೆಯ ಶುಭಾಯಶಯಗಳು
''ಮಹಾಲಕ್ಷ್ಮೀ ಚ ವಿದ್ಮಹೇ|
ವಿಷ್ಣುಪತ್ನೀ ಚ ಧೀಮಹಿ|
ತನ್ನೋ ಲಕ್ಷ್ಮಿಃ ಪ್ರಚೋದಯಾತ್||''
5. ಲಕ್ಷ್ಮಿ ಪೂಜೆಯ ಶುಭಾಶಯಗಳು
''ಓಂ ಶ್ರೀಂ ಶ್ರೀಂ ಮಹಾಲಕ್ಷ್ಮ್ಯೈ ಶ್ರೀಂ ಶ್ರೀಂ ಓಂ ನಮಃ|''
ದೀಪಾವಳಿಯ ಅಮವಾಸ್ಯೆಯಂದು ಲಕ್ಷ್ಮಿ ಮತ್ತು ಕುಬೇರನ ಆರಾಧನೆ ಮಾಡಲಾಗುವುದು. ಈ ದಿನ ಲಕ್ಷ್ಮಿ ಪೂಜೆಯನ್ನು ಪ್ರದೋಷ ಸಮಯದಲ್ಲಿ ಮಾಡಲಾಗುವುದು. ಈ ದಿನ ಇಡೀ ರಾತ್ರಿ ಅಮವಾಸ್ಯೆ ತಿಥಿ ಇದೆ. ಅಮವಾಸ್ಯೆ ತಿಥಿ ಅಕ್ಟೋಬರ್ 31 ಮಧ್ಯಾಹ್ನ 3:52ಕ್ಕೆ ಪ್ರಾರಂಭವಾಗಿ ನವೆಂಬರ್ 1 ಸಂಜೆ 06:16ರವರೆಗೆ ಇದೆ.
ಡ್ರಿಕ್ ಪಂಚಾಂಗ ಪ್ರಕಾರ ಪ್ರದೋಷ ಕಾಲ ಅಕ್ಟೋಬರ್ 31 ಸಂಜೆ 05:53ರಿಂದ ರಾತ್ರಿ 9:21ರವರೆಗೆ ಇದೆ
ವೃಷಭ ಕಾಲ: ಸಂಜೆ 06:47ರಿಂದ 08:49ರವರೆಗೆ ಇದೆ
ಅಮವಾಸ್ಯೆ ತಿಥಿ ಪ್ರಾರಂಭ ಅಕ್ಟೋಬರ್ 31 ಮಧ್ಯಾಹ್ನ 03:52ಕ್ಕೆ
ಲಕ್ಞ್ಮಿ ಪೂಜೆ ಮುಹೂರ್ತ ಸಂಜೆ 06:47ರಿಂದ 8:21ರವರೆಗೆ ಇದೆ.
ಲಕ್ಷ್ಮಿ ಪೂಜೆಗೆ ಒಂದು ಗಂಟೆ 34 ನಮಿಷವಿದೆ.
ಚೋಘಾಡಿಯಾ ಮುಹೂರ್ತ ಕೂಡ ಲಕ್ಷ್ಮಿ ಪೂಜೆಗೆ ಶ್ರೇಷ್ಠವೆಂದು ಪರಿಗಣಿಸಲಾಗಿದೆ
ಮಧ್ಯಾಹ್ನ ಮುಹೂರ್ತ: ಸಂಜೆ 04:26ರಿಂದ 0:53ರವರೆಗೆ ಇದೆ
ಸಂಜೆಯ ಮುಹೂರ್ತ(ಅಮೃತ ಕಾಲ) ಸಂಜೆ 05:53ರಿಂದ 08: 58ರವರೆಗೆ ಇದೆ
ನಿಶಿತ್ ಮುಹೂರ್ತ: ಮಧ್ಯರಾತ್ರಿ:12:03ರಿಂದ 01:36ರವರೆಗೆ ಇದೆ
ಶುಭ ಮುಂಜಾನೆ ಪೂಜೆಗೆ ಮುಹೂರ್ತ : ನವೆಂಬರ್ 1 ಬೆಳಗ್ಗೆ 03:08ರಿಂದ 06:13ರವರೆಗೆ ಇದೆ
ಲಕ್ಷ್ಮಿ ಪೂಜೆಯ ಪೂಜಾ ವಿಧಾನ
ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಹಿರಿಯರಿಗೆ ನಮಿಸಿ ನಂತರ ಪೂರ್ವಜರಿಗೆ ಮನಸ್ಸಿನಲ್ಲಿಯೇ ನಮಿಸಿ, ದೇವರಿಗೆ ದೀಪ ಹಚ್ಚಬೇಕು. ಕೆಲವರು ದೀಪಾವಳಿ ಅಮವಾಸ್ಯೆಯಂದು ಪೂರ್ವಜರಿಗೆ ಶ್ರಾದ್ಧ ಮಾಡುತ್ತಾರೆ, ಹೀಗೆ ಮಾಡುವುದರಿಂದ ಪಿತೃ ದೋಷವಿದ್ದರೆ ಅದು ನಿವಾರಣೆಯಾಗುತ್ತದೆ, ಹಿರಿಯರ ಆಶೀರ್ವಾದದಿಂದ ಮನೆಗೆ ಒಳಿತಾಗುತ್ತದೆ.
ಲಕ್ಷ್ಮಿ ಪೂಜೆಗೆ ಸಿದ್ಧತೆ
ಮನೆಯನ್ನು ಸ್ವಚ್ಛ ಮಾಡಿ ತಳಿರು ತೋರಣಗಳಿಂದ ಸಿಂಗರಿಸಬೇಕು. ಲಕ್ಷ್ಮಿ ಕಲಶವಿಡಬೇಕು, ಒಂದು ಹಲಗೆ ಇಟ್ಟು ಅದರ ಮೇಲೆ ಕೆಂಪು ಬಟ್ಟೆ ಹರಡಿ, ಅದರ ಲಕ್ಷ್ಮಿಯ ಮೂರ್ತಿ ಅಥವಾ ಫೋಟೋವನ್ನು ಪ್ರತಿಷ್ಠಾಪಿಸಿ ಲಕ್ಷ್ಮಿಯನ್ನ ಆವಾಹನೆ ಮಾಡಬೇಕು. ಲಕ್ಷ್ಮಿ ಪೂಜೆಗೆ ಮುನ್ನ ಗಣಪತಿಗೆ ಪೂಜೆ ಮಾಡಬೇಕು. ನಂತರ ಲಕ್ಷ್ಮಿ ಪೂಜೆ ವಿಧಿ ವಿಧಾನಗಳಂತೆ ಲಕ್ಷ್ಮಿ ಪೂಜೆ ಮಾಡಬೇಕು, ಲಕ್ಷ್ಮಿ ಮಂತ್ರವನ್ನು ಪಠಿಸಬೇಕು.
ಲಕ್ಷ್ಮಿ ಪೂಜೆ ಮುಹೂರ್ತ
ಲಕ್ಷ್ಮಿ ಪೂಜೆ ಮುಹೂರ್ತವನ್ನು ಪ್ರದೋಷ ಕಾಲದಲ್ಲಿ ಮಾಡಬೇಕು, ಕೆಲವರು ನಿಶಿತ್ ಕಾಲದಲ್ಲಿ ಕೂಡ ಲಕ್ಷ್ಮಿಯನ್ನು ಮಾಡುತ್ತಾರೆ.
ಚೋಘಾಡಿಯಾ ಮುಹೂರ್ತ ಪೂಜೆಗಿಂತ ಪ್ರಯಾಣ ಮಾಡಲು ಒಳ್ಳೆಯದು. ಲಕ್ಷ್ಮಿ ಪೂಜೆಯನ್ನು ನಿಶಿತ್ ಕಾಲ ಅತವಾ ಸ್ಥಿರ ಲಗ್ನದಲ್ಲಿ ಮಾಡಬೇಕು, ಈ ಸಮಯದಲ್ಲಿ ಲಕ್ಷ್ಮಿಗೆ ಪೂಜೆಗೆ ಸಲ್ಲಿಸುವುದರಿಂದ ಲಕ್ಷ್ಮಿ ನಮ್ಮ ಮನೆಯಲ್ಲಿಯೇ ನೆಲೆಸಿರುತ್ತಾಳೆ, ಸಂಪತ್ತಿಗೆ ಯಾವ ಕೊರತೆಯೂ ಉಂಟಾಗುವುದಿಲ್ಲ ಎಂಬ ನಂಬಿಕೆ.



Click it and Unblock the Notifications




