Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನಗುತ್ತಲೇ ಪ್ರಾಣ ಕಳೆದುಕೊಳ್ಳಬಹುದಾ? ಹೌದು ಈ ಮೂವರ ಉಸಿರು ನಿಲ್ಲಿಸಿತ್ತು ನಗು.!
ಮಾನವರಿಗೆ ಯಾವಾಗ ಮರಣ ಹುಡುಕಿ ಬರುತ್ತೆ ಅನ್ನೋದನ್ನು ಊಹಿಸಲು ಸಹ ಸಾಧ್ಯವಿಲ್ಲ. ಏಕೆಂದರೆ ಒಂದು ಕ್ಷಣದಲ್ಲಿ ಏನು ಬೇಕಾದರು ಆಗಬಹುದು, ನಮ್ಮ ಮುಂದೆ ಇದ್ದವರು ಕಣ್ಣು ಮುಚ್ಚಿ ಬಿಡುವ ವೇಳೆಗೆ ಇಲ್ಲವಾಗಬಹುದು. ಹಾಗೆ ಯಾವ ವಯಸ್ಸಿನಲ್ಲಿ ಸಾವು ಬರುತ್ತೆ ಅನ್ನೋದನ್ನು ಕೂಡ ನಮಗೆ ಊಹಿಸಲು ಆಗುವುದಿಲ್ಲ. ಸಾವು ಮೊದಲೇ ಹೇಳಿ ಬರುವಂತದ್ದಲ್ಲ. ಹಾಗೆ ಯಾವ ರೀತಿಯಲ್ಲಿ ಬರಲಿದೆ ಎಂಬುದನ್ನು ಕೂಡ ನಾವು ಊಹಿಸಲಾಗುವುದಿಲ್ಲ.
ಆದ್ರೆ ಕೆಲವೊಬ್ಬರ ಮರಣ ಎಷ್ಟು ವಿಚಿತ್ರವಾಗಿರುತ್ತೆ ಅಂದ್ರೆ ನೀವದನ್ನು ಊಹಿಸಿರುವುದಿಲ್ಲ. ಹೀಗೂ ಕೂಡ ಸಾವು ಬರುತ್ತಾ ಎಂದು ಶಾಕ್ ಆಗಬೇಕಾಗುತ್ತದೆ. ಇಂತಹ ಕೆಲವು ಘಟನೆಗಳಲ್ಲಿ ನಗು ನಗುತ್ತಲೇ ಮರಣ ಹೊಂದಿರುವ ಪ್ರಕರಣಗಳ ಕುರಿತು ನಿಮಗೆ ಗೊತ್ತಾ? ನಗು ಮನದಲ್ಲಿನ ನೋವನ್ನು ಮರೆಸಲಿದೆ ಎಂಬುದನ್ನು ಮಾತ್ರ ನಾವು ತಿಳಿದಿದ್ದೇವೆ, ಆದ್ರೆ ನಗು ಸಾವು ಕೂಡ ತರಲಿದೆ ಎಂಬುದು ನಿಮಗೆ ಗೊತ್ತಾ?

ಹೌದು ಕೆಲವೊಂದು ವಿಚಿತ್ರ ಸನ್ನಿವೇಶದಲ್ಲಿ ನಗುತ್ತಿದ್ದಾಗಲೇ ಕೆಲವೊಬ್ಬರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ನಗುತ್ತಲೇ ಮರಣ ಹೊಂದಿದ ಮೂವರ ಕುರಿತು ನಾವಿಂದು ತಿಳಿದುಕೊಳ್ಳೋಣ.
ನಗುತ್ತಲೇ ಪ್ರಾಣ ಬಿಟ್ಟಿದ್ದ ಸೋಲಿಯ ಕ್ರಿಸಿಪ್ಪಸ್
ಸೋಲಿಯ ಕ್ರಿಸಿಪ್ಪಸ್ ಗ್ರೀಸ್‌ನ ಪ್ರಸಿದ್ಧ ತತ್ವಜ್ಞಾನಿಯಾಗಿದ್ದು ಕ್ರಿ.ಪೂ. 279 ರಿಂದ 206 ರ ವರೆಗೆ ಬದುಕಿದ್ದರು. ಬರೋಬ್ಬರಿ 700 ಪುಸ್ತಕಗಳನ್ನು ಬರೆದಿರುವ ಅವರು ತರ್ಕಶಾಸ್ತ್ರಕ್ಕೆ ಹೆಸರಾದವರು. ಆದರೆ ಅವರ 73ನೇ ವಯಸ್ಸಿನಲ್ಲಿ ಅವರು ಮರಣಹೊಂದಿದರು. ಆದರೆ ಅವರ ಸಾವಿನ ಉಲ್ಲೇಖ ಇಂದಿಗೂ ಅಚ್ಚರಿಯಾಗಿದೆ. ಅವರು ಒಮ್ಮೆ ತಮ್ಮ ಕ್ಲಬ್ ಹೊರಗೆ ವ್ಯಕ್ತಿಯೊಬ್ಬ ಕತ್ತೆಯೊಂದಕ್ಕೆ ತನ್ನ ಗ್ಲಾಸ್‌ನಲ್ಲಿದ್ದ ವೈನ್ ನೀಡುವುದನ್ನು ನೋಡಿದರಂತೆ. ಆಗ ಸೋಲಿಯ ಕ್ರಿಸಿಪ್ಪಸ್‌ಗೆ ತಡೆಯಲಾಗದ ನಗುಬಂತಂತೆ, ಆದ್ರೆ ನಗುನಗುತ್ತಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂಬ ಉಲ್ಲೇಖವಿದೆ.
ಹಾಗೆ ಅವರು ನಗುತ್ತಲೇ ಕುಸಿದು ಬಿದ್ದಾಗ ಅವರ ಬಾಯಿ ಕೂಡ ಮುಚ್ಚಿರಲಿಲ್ಲವಂತೆ. ಅವರ ನಗು ಮುಖ ಹಾಗೆಯೇ ಉಳಿದುಬಿಟ್ಟಿತ್ತಂತೆ. ಹೀಗಾಗಿ ಅವರು ಅತ್ಯಂತ ಸುಖಕರ ಮರಣಕ್ಕೆ ಒಳಗಾದರು ಎಂಬುದು ಇತಿಹಾಸದ ಉಲ್ಲೇಖ ಹೇಳುತ್ತದೆ.
ಕಾಮಿಡಿ ಶೋ ನೋಡುತ್ತಲೇ ಅಲೆಕ್ಸ್ ಮಿಚೆಲ್ ಕೊನೆಯುಸಿರು
ಅಲೆಕ್ಸ್ ಮಿಚೆಲ್ ಇಂಗ್ಲೆಂಡ್‌ನ ನಾರ್ಫೋಕ್‌ನ ನಿವಾಸಿ. ಕೂಲಿ ಕೆಲಸ ಮಾಡಿಕೊಂಡಿದ್ದ ಆತ ಮಾರ್ಚ್ 24, 1975ರಲ್ಲಿ ಮರಣ ಹೊಂದಿದೆ. ಆದ್ರೆ ಆತನ ಮರಣ ಕೂಡ ಉಲ್ಲೇಖಗೊಂಡಿದೆ. ಆತ ಒಂದು ದಿನ ಬಿಬಿಸಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದ 'ದಿ ಗುಡೀಸ್' ಎಂಬ ಕಾಮಿಡಿ ಶೋ ನೋಡಿತ್ತಿದ್ದ. ಈ ಶೋನಲ್ಲಿ ಬಂದ ಒಂದು ಹಾಸ್ಯ ಭರಿತ ಸನ್ನಿವೇಶವನ್ನು ನೋಡಿ ನಗುತ್ತಿರುವಾಗ ಆತ ನಿಧನ ಹೊಂದಿದೆ. ಅಚ್ಚರಿ ಎಂದರೆ ಆತ ಬರೋಬ್ಬರಿ 24 ನಿಮಿಷಗಳ ಕಾಲ ನಗುತ್ತಲೇ ಇದ್ದನಂತೆ. ಆದ್ರೆ ಆತನ ಸಾವಿಗೆ ಹೃದಯಾಘಾತ ಕಾರಣ ಎಂದು ವರದಿ ಹೇಳಿತು. ಆದ್ರೆ ಹೃದಯಾಘಾತಕ್ಕೂ ಮುನ್ನ ಸುದೀರ್ಘವಾದ ನಗು ಇದಕ್ಕೆ ಕಾರಣವಾಗಿತ್ತು, ಆತ ತನ್ನ 55ನೇ ವಯಸ್ಸಿನಲ್ಲಿ ಅಸುನೀಗಿದ್ದ.
ಕಾಮಿಡಿ ಸಿನಿಮಾ ನೋಡುವಾಗ ಓಲೆ ಬೆಂಟ್ಜೆನ್ ಸಾವು
71 ವರ್ಷದ ಡ್ಯಾನಿಷ್‌ನ ಓಲೆ ಬೆಂಟ್ಜೆನ್ ದೂರದರ್ಶನದಲ್ಲಿ ಕಾಮಿಡಿ ಸಿನಿಮಾ ನೋಡುವಾಗ ನಗುತ್ತಲೇ ಬಿದ್ದು ಮೃತಪಟ್ಟ ವ್ಯಕ್ತಿ. 1989 ರಲ್ಲಿ "ಎ ಫಿಶ್ ಕಾಲ್ಡ್ ವಂಡಾ" ಎಂಬ ಕಾಮಿಡಿ ಸಿನಿಮಾ ನೋಡುವಾಗ ನುಗು ತಡೆಯಲಾಗದೆ ಕುಸಿದು ಬಿದ್ದು ಮೃತಪಟ್ಟರು. ಆತ ನಗುತ್ತ ಆತನ ಹೃದಯ ಬಡಿತ ನಿಮಿಷಕ್ಕೆ 250 ಬಾರಿ ಬಡಿದುಕೊಂಡಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಮನೆಯಲ್ಲಿ ಕುಸಿದು ಬಿದ್ದಾಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದರು.



Click it and Unblock the Notifications
