ಕೊನೆಯ ಬಾರಿಗೆ ಪ್ಲಾನೆಟ್ ಪರೇಡ್ ಕಣ್ತುಂಬಿಕೊಳ್ಳಿ..! ಇಲ್ಲದಿದ್ದರೆ 2040ರ ವರೆಗೂ ಕಾಯಬೇಕಿದೆ..!!

ಆಕಾಶದಲ್ಲಿ ಎಷ್ಟೊಂದು ವಿಚಿತ್ರ, ವಿಸ್ಮಯಗಳು ನಡೆಯುತ್ತವೆ ಅನ್ನೋದನ್ನು ನಾವು ಊಹಿಸಲು ಕೂಡ ಸಾಧ್ಯವಾಗೋದಿಲ್ಲ. ಆಕಾಶಯಕಾಯಗಳು, ಗ್ರಹಗಳು ಹೀಗೆ ಒಂದಲ್ಲಾ ಒಂದು ವಿಚಾರದಲ್ಲಿ ಆಗಾಗ ಖಗೋಳವು ಇಡೀ ಮಾನವಕುಲವನ್ನು ಅಚ್ಚರಿಗೆ ತಳ್ಳುತ್ತೆ. ಅದರಲ್ಲೂ ಗ್ರಹಗಳ ಚಲನೆ, ಗ್ರಹಣ, ಭೂಮಿಯ ಸಂಚಾರಗಳು ಬಹಳ ಕುತೂಹಲ ಮೂಡಿಸುವ ವಿಚಾರಗಳಾಗಿವೆ.

ಸದ್ಯ ಕಳೆದೊಂದು ತಿಂಗಳಿಂದ ಖಗೋಳ ವಿಜ್ಞಾನಿಗಳ ಅಚ್ಚರಿಗೆ ಕಾರಣವಾಗಿದ್ದ ಗ್ರಹಗಳ ಪಥಸಂಚಲನ ಕೊನೆಯ ಬಾರಿಗೆ ನೀವು ಕಣ್ತುಂಬಿಕೊಳ್ಳಬಹುದು. ಹೌದು ಜನವರಿ 25ರಂದು ಅಪರೂಪದ ವಿದ್ಯಮಾನ ಒಂದು ಆಕಾಶದಲ್ಲಿ ನಡೆದಿತ್ತು, ಇದನ್ನು ಇಡೀ ವಿಶ್ವವೇ ನೋಡಿ ಬೆರಗಾಗಿತ್ತು. ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳುವ ವಿದ್ಯಮಾನವದು.

Witness The Rare Planetary Parade Before It Disappears For 15 Years

ಇದೊಂದು ಅಪರೂಪದಲ್ಲಿ ಅಪರೂಪವಾದ ಘಟನೆ ಎಂದು ಪರಿಗಣಿಸಲಾಗಿತ್ತು. ಭೂಮಿಯಿಂದ ಸುಲಭವಾಗಿ ನೀವು ಈ ಗ್ರಹಗಳನ್ನು ಗುರುತು ಹಿಡಿಯಬಹುದಿತ್ತು. ಬರಿಗಣ್ಣಿನಲ್ಲಿ ನೋಡಿದಾಗ ಸಾಮಾನ್ಯಕ್ಕಿಂತ ತುಸು ದೊಡ್ಡದಾಗಿ ಕಾಣುತ್ತಿದ್ದವು. ಹಾಗೆ ದೂರ್ದರ್ಶಕದ ಮೂಲಕ ಬಹಳ ಸುಲಭವಾಗಿ ಗೋಚರವಾಗುತ್ತಿದ್ದವು. ಇದನ್ನು ಪ್ಲಾನೆಟ್ ಪರೇಡ್ ಎಂದು ಕರೆಯಲಾಗಿತ್ತು.

6 ಗ್ರಹಗಳು ಸರಿಸುಮಾರಾಗಿ ಒಂದೇ ಸಾಲಿನಲ್ಲಿ ಬಂದಂತೆ ಕಾಣಿಸಿದ್ದವು. ಆದ್ರೆ ಅವು ಬಹಳಷ್ಟು ದೂರದಲ್ಲಿ ನೆಲೆಸಿದ್ದವು. ಇದು ತಿಂಗಳ ಕಾಲ ನೋಡಬಹುದಾದ ವಿದ್ಯಮಾನವಾಗಿತ್ತು. ಹಾಗೆ ಈಗ ಮತ್ತೆ ಇದೇ ವಿದ್ಯಮಾನ ನಡೆಯುತ್ತಿದೆ. ಈಗ ಫೆಬ್ರವರಿ 28 ರಿಂದ ಮಾರ್ಚ್ 12 ರವರೆಗೆ ಕೊನೆಯಬಾರಿಗೆ ನೀವು 7 ಗ್ರಹಗಳು ಒಂದೇ ಸಾಲಿನಲ್ಲಿ ಬರುವುದನ್ನು ನೋಡಬಹುದು.

ಈ 7 ಗ್ರಹಗಳ ಪ್ಲಾನೆಟ್‌ ಅಲೈನ್‌ಮೆಂಟ್‌ ಸಮಯದಲ್ಲಿ 4 ಗ್ರಹಗಳನ್ನು ಬರಿಗಣ್ಣಿನಲ್ಲಿಯೇ ನೋಡಬಹುದು. ಇವು ಸಾಮಾನ್ಯಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಿಸಲಿವೆ. ಹೀಗಾಗಿ ಬರಿಗಣ್ಣಿನಲ್ಲೂ ಇವು ಗ್ರಹಗಳೆಂದು ಗುರುತಿಸಬಹುದು. ಅಚ್ಚರಿ ಏನೆಂದರೆ ಈ ಸಮಯದಲ್ಲಿ ನೋಡುವ ಅವಕಾಶ ನೀವು ಕಳೆದುಕೊಂಡರೆ ಈ ವಿದ್ಯಮಾನ ಇನ್ನು 2040ರಲ್ಲಿ ಮಾತ್ರ ಸಂಭವಿಸುತ್ತದೆ. ಇನ್ನು 15 ವರ್ಷಗಳ ಕಾಲ ಈ ವಿಶೇಷ ವಿದ್ಯಮಾನಕ್ಕೆ ಕಾಯಬೇಕಿದೆ. ಹೀಗಾಗಿ ಮಾರ್ಚ್‌ 12ರ ವರೆಗೆ ನೀವು ಈ ಅಚ್ಚರಿ ಕಣ್ತುಂಬಿಕೊಳ್ಳಬಹುದು.

ಏನಿದು ಗ್ರಹಗಳ ಪರೇಡ್?

ಗ್ರಹಗಳು ಒಂದೇ ಸಮಯದಲ್ಲಿ ಸೂರ್ಯನ ಒಂದು ಬದಿಯಲ್ಲಿ ನೇರವಾಗಿ ಬಂದಾಗ ಅವು ಸೂರ್ಯನ ಬೆಳಕಿನಲ್ಲಿ ಸುಲಭವಾಗಿ ಬರಿಗಣ್ಣಿಗೆ ಗೋಚರವಾಗುತ್ತವೆ. ಮೂರರಿಂದ 8 ಗ್ರಹಗಳು ಒಂದೇ ಸಾಲಿನಲ್ಲಿ ಬಂದಾಗ ಅದನ್ನು ವಿಶೇಷ ಎಂದು ಪರಿಗಣಿಸಲಾಗಿದೆ. ಆದರೆ 5ಕ್ಕಿಂತ ಕಡಿಮೆ ಸಂಖ್ಯೆಯ ಗ್ರಹಗಳು ಯಾವಾಗಲು ಈ ರೀತಿ ಒಂದೇ ಸಾಲಿನಲ್ಲಿ ಬರುತ್ತಿರುತ್ತವೆ, ಆದ್ರೆ ಇದನ್ನು ವಿಶೇಷ ವಿದ್ಯಮಾನ ಎಂದು ಪರಿಗಣಿಸಲಾಗಿಲ್ಲ.

ಸೂರ್ಯನ ಮುಂದೆ ಸಾಲಿನಲ್ಲಿ ಕಾಣಿಸಿಕೊಳ್ಳುವ ಗ್ರಹಗಳ ಈ ರೇಖೆಯನ್ನು ಎಕ್ಲಿಪ್ಟಿಕ್ ಎಂದು ಕರೆಯಲಾಗುತ್ತದೆ. ಗ್ರಹಗಳು ಸೂರ್ಯನ ಸುತ್ತ ಸುತ್ತುವ ಸೌರವ್ಯೂಹದ ಸಮತೋಲನವನ್ನು ಇದು ಪ್ರತಿನಿಧಿಸುತ್ತದೆ. ಇದರಿಂದ ಗ್ರಹಗತಿಗಳ ವೇಗ, ಚಲನೆಯ ದಿಕ್ಕು ನಿಖರವಾಗಿ ಹೇಳಬಹುದಾಗಿದೆ. ನಮಗೆ ಭೂಮಿಯಿಂದ ಗ್ರಹಗಳ ಈ ರೇಖೆ ನೋಡಿದಾಗ ಗ್ರಹಗಳು ಒಂದಕ್ಕೊಂದು ಅಂಟಿಕೊಂಡ ಹತ್ತಿರದಲ್ಲಿ ಕಾಣಿಸುತ್ತದೆ. ಆದ್ರೆ ಅವುಗಳು ತಮ್ಮ ಕಕ್ಷೆಯ ಮೇಲೆ ಬಿಲಿಯನ್ ವರ್ಷದಷ್ಟು ದೂರದಲ್ಲಿ ನೆಲೆಗೊಂಡಿರುತ್ತವೆ.

ಆಕಾಶದ ಈ ಅಚ್ಚರಿ ವಿದ್ಯಮಾನವನ್ನು ನೀವು ದೂರದರ್ಶಕ ಅಥವಾ ಅತ್ಯುತ್ತಮ ಕ್ಯಾಮರಾ ಇದ್ದರೂ ಸಾಕಾಗುತ್ತದೆ. ಬೆಂಗಳೂರಿನ ಜವಾಹರ್‌ಲಾಲ್‌ ನೆಹರು ತಾರಾಲಯದಲ್ಲಿ ಈ ಗ್ರಹಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ದೇಶದ ಹಲವು ವಿವಿಗಳು, ವಿಜ್ಞಾನ ಕೇಂದ್ರಗಳಲ್ಲೂ ಈ ವ್ಯವಸ್ಥೆ ಇರಲಿದೆ. ಹಾಗೆ ಮೊಬೈಲ್ ಆಪ್ ಮೂಲಕ ನೋಡಬಹುದು. ಸ್ಟಾರ್ ವಾಕ್, ಸ್ಕೈ ಮ್ಯಾಪ್‌ನಂತಹ ಆಪ್‌ ಮೂಲಕ ಕೂಡ ಲೈವ್ ಆಗಿ ನೀವು ಈ ಪರೇಡ್ ನೋಡಬಹುದು.

English summary

Last Chance Alert: Witness The Rare Planetary Parade Before It Disappears For 15 Years

Now, from February 28 to March 12, you can see 7 planets coming in a row for the last time. During this planetary alignment of 7 planets, 4 planets can be seen with the naked eye.
X
Desktop Bottom Promotion