Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಗಣಿಯಲ್ಲಿ ಅತೀ ದೊಡ್ಡ ಸ್ಪಟಿಕ ಪತ್ತೆ..! ಕಲ್ಲಿನೊಳಗೆ ಸ್ಪಟಿಕ ಹೇಗಿರುತ್ತೆ ಗೊತ್ತಾ?
ಆನ್‌ಲೈನ್‌ನಲ್ಲಿ ಹರಿದಾಡುವ ಕೆಲವು ವಿಡಿಯೋಗಳು ಹೊಸ ಚರ್ಚೆ ಹುಟ್ಟುಹಾಕುತ್ತೆ. ಅದ್ರಲ್ಲೂ ಭೂಮಿ ಅಡಿಯಲ್ಲಿ ಕೆಲವರಿಗೆ ನಿಧಿ ಸಿಗುವುದು, ಚಿನ್ನದ ನಾಣ್ಯಗಳು, ಬೆಳ್ಳಿ ವಸ್ತು, ವಜ್ರ ಸಿಗುವುದು ನಾವು ನೋಡಿದ್ದೇವೆ. ಕೆಲವೊಂದು ವಿಡಿಯೋಗಳು ನಮಗೆ ಅಚ್ಚರಿಯ ಜೊತೆಗೆ ಕುತೂಹಲಕ್ಕೂ ಕಾರಣವಾಗುತ್ತವೆ. ಏಕೆಂದರೆ ವಿಡಿಯೋದಲ್ಲಿ ಯಾರು ಊಹಿಸಲಾಗದ ವಿಚಾರಗಳು ನಡೆದಿರುತ್ತವೆ.
ಇಲ್ಲೊಂದು ವಿಡಿಯೋದಲ್ಲೂ ಸಹ ವ್ಯಕ್ತಿಯೊಬ್ಬನಿಗೆ ಯಾರು ಊಹಿಸಲಾಗದ ವಸ್ತುವೊಂದು ಪತ್ತೆಯಾಗಿದೆ. ವಿಡಿಯೋದಲ್ಲಿ, ವ್ಯಕ್ತಿ ಬಂಡೆಯ ಸಣ್ಣ ಭಾಗವನ್ನು ಒಡೆದು ತೆಗೆಯುತ್ತಿರುವುದನ್ನು ಕಾಣಬಹುದು. ಆತ ಬಂಡೆ ಒಡೆದಾಗ ಅದರೊಳಗೆ ಹೊಳೆಯುವ ನೇರಳೆ ಬಣ್ಣದ ಸ್ಪಟಿಕದಂತಹ ವಸ್ತು ಪತ್ತೆಯಾಗಿದೆ.

ಅದೃಷ್ಟ ಅಂದರೆ ಎಲ್ಲರಿಗೂ ಒಲಿಯೋದಿಲ್ಲ. ಕೆಲವೊಮ್ಮೆ ಅದಷ್ಟವೇ ನಿಮ್ಮ ಬಳಿಗೆ ಬರುತ್ತೆ. ಈ ಮಾತು ಎಷ್ಟು ಸತ್ಯ ಎಂಬುದು ಈ ಪ್ರಕರಣದಲ್ಲಿ ನಿಜವಾಗಿದೆ. ಇಲ್ಲೊಬ್ಬ ನಮೀಬಿಯಾದ ಗುಡ್ಡ ಗಾಡು ಪ್ರದೇಶದಲ್ಲಿ ಬಂಡೆ ಕಲ್ಲಿನಲ್ಲಿ ಅದೃಷ್ಟದ ಸ್ಪಟಿಕ ಸಿಕ್ಕಿದೆ ಎಂದು ಈ ವಿಡಿಯೋವನ್ನು ಹರಿಬಿಡಲಾಗಿದೆ.
ವೈರಲ್ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಬಂಡೆಯ ಸಣ್ಣ ಭಾಗವನ್ನು ಒಡೆದು ತೆಗೆಯುತ್ತಿರುವುದನ್ನು ಕಾಣಬಹುದು. ಅವನು ತುಣುಕನ್ನು ಹೊರತೆಗೆಯುತ್ತಿದ್ದಂತೆ, ಹೊಳೆಯುವ ನೇರಳೆ ಸ್ಫಟಿಕವು ಕಂಡುಬರುತ್ತದೆ. ಈ ಕಲ್ಲನ್ನು ಅಮೆಥಿಸ್ಟ್ ಎಂದು ವಿವರಿಸಲಾಗಿದೆ. ಅದ್ರಲ್ಲೂ ನಮೀಬಿಯಾದಲ್ಲಿ ಇಂತಹ ಸ್ಪಟಿಕಗಳು ಪತ್ತೆಯಾಗುತ್ತವೆ ಎಂದು ಹೇಳಲಾಗುತ್ತದೆ.
ಆತ ಟ್ರೆಷರ್ ಹಂಟರ್ ಆಗಿದ್ದು ನಮೀಬಿಯಾದ ಗಣಿ ಪ್ರದೇಶಕ್ಕೆ ಪ್ರವಾಸ ಕೈಗೊಂಡು ಅಲ್ಲಿರುವ ಪ್ರದೇಶದಲ್ಲಿ ವಜ್ರಗಳ ಅನ್ವೇಷಣೆಗೆ ಆತ ಮುಂದಾಗಿದ್ದ. ಆದರೆ ಈ ಪ್ರದೇಶದಲ್ಲಿದ್ದ ಒಂದು ಕಲ್ಲನ್ನು ಆತ ಯಂತ್ರದಿಂದ ಕತ್ತರಿಸಿ ತೆಗೆದಾಗ ಒಳಗೆ ಸ್ಪಟಿಕ ಪತ್ತೆಯಾಗಿದೆ. ಈ ಸ್ಪಟಿಕ ಬೆಳಕಿನಲ್ಲಿ ಪಳ ಪಳ ಹೊಳೆಯುತ್ತಿದೆ. ಅತ್ಯಂತ ದೊಡ್ಡ ಗಾತ್ರದಲ್ಲಿರುವ ಸ್ಪಟಿಕ ನೇರಳ ಬಣ್ಣದಿಂದ ಕೂಡಿದೆ. ಆತ ಸ್ಪಟಿಕ ಕಂಡು ಸಂತಸಗೊಂಡಿದ್ದಾನೆ.
ಫಾದರ್ಸ್ ಸನ ಮಿನರಲ್ಸ್ ಹೆಸರಿಗೆ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ಇದನ್ನು ಲಕ್ಷಾಂತರ ಜನರು ನೋಡಿದ್ದಾರೆ ಮತ್ತು ಸಾವಿರಾರು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಅಮೆಥಿಸ್ಟ್ ಸ್ಟೋನ್ ಅಂದರೆ ಜಮುನಿಯಾ ರತ್ನ ಎಂದು ಗುರುತಿಸಿದ್ದಾರೆ. ಇನ್ನು ಕೆಲವರು ಇದು ಸಾಧ್ಯವಿಲ್ಲ ಎಂದು ಕಲ್ಲಿನ ನಡುವೆ ಸ್ಪಟಿಕ ಸಿಗುವುದಿಲ್ಲವೆಂದು ವಾದಿಸಿದ್ದಾರೆ. ಜೊತೆಗೆ ನಮೀಬಿಯಾದ ಈ ಗಣಿಯಲ್ಲಿ ಈವರೆಗೂ ಇಷ್ಟು ದೊಡ್ಡ ಗಾತ್ರದ ಸ್ಪಟಿಕ ಪತ್ತೆಯಾಗಿಲ್ಲ ಎಂದು ಬರೆದುಕೊಂಡಿದ್ದಾರೆ.
ಮತ್ತೆ ಕೆಲವರು ಆತನಿಗೆ ಅಲ್ಲಿ ಸ್ಪಟಿಕ ಇರುವುದು ತಿಳಿದಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಸ್ಪಟಿಕ ಹಾಗೂ ಚಿನ್ನ, ವಜ್ರ ಪತ್ತೆಗೆ ಅದರದ್ದೇ ಆದ ಯಂತ್ರಗಳಿವೆ, ತಂತ್ರಗಳಿವೆ. ಆದರೆ ಆತ ಇಷ್ಟೊಂದು ಸುಲಭವಾಗಿ ಸ್ಪಟಿಕ ಇರುವ ಕಲ್ಲನ್ನು ಹೇಗೆ ಗುರುತಿಸಿದ ಎಂಬುದನು ಇಲ್ಲಿ ದೊಡ್ಡ ಪ್ರಶ್ನೆಯಾಗಿದೆ. ಇದು ನಿಜವಾದ ಸ್ಪಟಿಕವೇ ಅಥವಾ ಮೊದಲೇ ಈ ವಿಡಿಯೋ ನಿರ್ಧರಿಸಿ ಶೂಟ್ ಮಾಡಲಾಗಿದೆಯೇ ಎಂಬುದು ಯಾರಿಗೂ ತಿಳಿದಿಲ್ಲ. ಹೀಗಾಗಿ ಇದರ ಸತ್ಯಾಸತ್ಯತೆ ತಿಳಿದುಬರಬೇಕಿದೆ.
ಅಮೆಥಿಸ್ಟ್ ಸ್ಫಟಿಕವು ಶಿಲೆಯಾಗಿದ್ದು, ತೆಳು ನೀಲಿ ಬಣ್ಣದಿಂದ ಹಿಡಿದು ಆಳವಾದ ಕೆಂಪು ಕೆನ್ನೇರಳೆವರೆಗಿನ ಬಣ್ಣಗಳಲ್ಲಿ ಕಂಡುಬರುತ್ತದೆ. ಈ ಸ್ಪಟಿಕವನ್ನು ಜನ್ಮ ದಿನಾಂಕದ ಆಧಾರವಾಗಿ ಆಭರಣವಾಗಿ ಬಳಸಲಾಗುತ್ತದೆ. ಅಲಂಕಾರಿಕ ವಸ್ತುಗಳ ಮಾಡಲು ಸಹ ಬಳಸುತ್ತಾರೆ. ಇವು ಚಿನ್ನದ ಉಂಗುರಗಳ ನಡುವೆ ಬಳಸುವ ಸ್ಟೋನ್‌ಗಳಿಗಾಗಿ ಶೇಪ್ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಪ್ರತಿಯಿಂದು ಸ್ಪಟಿಕಗಳಿಗೂ ಬೇಡಿಕೆ ಹಾಗೂ ಬೆಲೆ ಇದೆ.



Click it and Unblock the Notifications
