Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮುಖದ ತುಂಬಾ ಕೂದಲು: ಹದಿಹರೆಯದ ಪ್ರಾಯದ ಈ ಟೀನೇಜ್ ಹುಡುಗ ಕೋಟಿಗೊಬ್ಬ
ಹುಡುಗರಿಗೆ ಹದಿ ಹರೆಯದ ಪ್ರಾಯದಲ್ಲಿ ಗಡ್ಡ-ಮೀಸೆ ಬರುತ್ತದೆ. ಇದನ್ನು ಮುಖದಲ್ಲಿ ಕೂದಲು ಬಂದಿದೆ ಎಂದು ಹೇಳಲ್ಲ, ಗಡ್ಡ ಮೀಸೆ ಅಂತೆಲೇ ಹೇಳುವುದು, ಆದರೆ ಈ ಹುಡುಗನಿಗ ಬಂದಿರುವುದು ಗಡ್ಡ ಮೀಸೆಯಲ್ಲ ಮುಖದ ತುಂಬಾ ಕೂದಲು. ಕೂದಲು ಎಷ್ಟಿದೆ ಎಂದರೆ ನೋಡಿದರೆ ಆತನ ಕಣ್ಣುಗಳು ಬಿಟ್ಟರೆ ಮುಖದ ತುಂಬಾ ಉದ್ದನೆಯ ಕೂದಲು.
ಇಂದೊಂದು ಸಮಸ್ಯೆ, ಈ ರೀತಿ ಬಿಲಿಯನ್ ಜನರಲ್ಲಿ ಒಬ್ಬರಿಗಷ್ಟೇ ಉಂಟಾಗುವುದು, ಇದನ್ನು ವೈದ್ಯಕೀಯ ಭಾಷೆಯಲ್ಲಿ werewolf syndrome ಎಂದು ಕರೆಯಲಾಗುವುದು, ಈ ಬಗೆಯ ಜನರು ವಿಶ್ವದಲ್ಲಿ ಇದ್ದಾರೆ, ಆದರೆ ಮುಖದಲ್ಲಿ ಅತಿ ಹೆಚ್ಚಿನ ಕೂದಲು ಹೊಂದಿರುವ ವ್ಯಕ್ತಿ ಎಂದು 18 ವರ್ಷದ ಲಿಲಿತ್ ಪಡಿಕರ್‌ನ ಗುರುತಿಸಲಾಗಿದೆ. ಈತನ ಶೇ. 95ರಷ್ಟು ಮುಖ ಮಂದವಾದ ಕೂದಲಿನಿಂದಲೇ ಮುಚ್ಚಿ ಹೋಗಿದೆ.

ಇದೊಂದು ಅಪರೂಪದ ಕಾಯಿಲೆ
ಮುಖದಲ್ಲಿ ಈ ರೀತಿ ಕೂದಲು ಬರುವುದು ತುಂಬಾನೇ ಅಪರೂಪದ ಕಾಯಿಲೆಯಾಗಿದೆ, ಇದನ್ನು hypertrichosis ಅಥವಾ ವೇರ್‌ವೂಲ್ಫ್ ಸಿಂಡ್ರೋಮ್ ಎಂದು ಕರೆಯಲಾಗುವುದು.
ಈ ರೀತಿ ಕೂದಲು ಇರುವವರು ವಿಶ್ವದಲ್ಲಿ 50ಕ್ಕೂ ಅಧಿಕ ಜನರ ಬಗ್ಗೆ ಡಾಕ್ಯೂಮೆಂಟ್‌ಗಳಿವೆ, ಅವರಲ್ಲಿ ಈ ಭಾರತೀಯ ಹುಡುಗ ಕೂಡ ಒಬ್ಬ, ಇವನನ್ನು ಬಿಲಿಯನ್ ಜನರಲ್ಲಿ ಒಬ್ಬ ಎಂದು ಗುರುತಿಸಲಾಗಿದೆ. ಹಾಗಾಗಿ ಈತನ ಮಾತ್ರ ತುಂಬಾನೇ ಸ್ಪೆಷಲ್.
ಈತ ವಿಶೇಷವಾದರೂ ಈತ ಹಲವು ಸಲ ಅವಮಾನ ಎದುರಿಸಿದ್ದಾನೆ
ಈತನನ್ನು ನೋಡಿದಾಗ ಜನರು ವಿಚಿತ್ರ ಜೀವಿಯನ್ನು ನೋಡಿದಂತೆ ನೋಡುತ್ತಾರೆ, ಕೆಲವರು ಭಯ ಪಡುತ್ತಾರೆ, ಮಕ್ಕಳು ಭಯ ಪಡುತ್ತಾರೆ, ಶಾಲೆಯಲ್ಲಿ ಕೆಲ ಮಕ್ಕಳು ತಮಾಷೆ ಮಾಡುತ್ತಾರೆ, ಹೀಗೆ ಆದಾಗ ಈ ಹುಡುಗನ ಮನಸ್ಸಿಗೆ ತುಂಬಾನೇ ನೋವಾಗುತ್ತದೆ.
ಮೊದ ಮೊದಲು ಜನ ಅಥವಾ ಇತರ ಮಕ್ಕಳು ನನ್ನ ನೋಡಿ ಭಯ ಪಡುತ್ತಾರೆ, ಆದರೆ ನನ್ನ ಬಗ್ಗೆ ತಿಳಿಯುತ್ತಿದ್ದಂತೆ ನಾನು ಕೂಡ ಅವರಂತೆಯೇ ಸಹಜ ವ್ಯಕ್ತಿ ಎಂದು ಅನಿಸಿ ನಂತರ ಚೆನ್ನಾಗಿ ಮಾತನಾಡುತ್ತಾರೆ ಎಂದು ಹೇಳಿದ್ದಾನೆ.
ಈತ ಇತ್ತೀಚೆಗೆ ಇಟಲಿಯ ಮಿಲನ್‌ಗೆ ಹೋಗಿ Lo Show dei Record ಎಂಬ ಶೋದಲ್ಲಿ ಭಾಗವಹಿಸಿದ್ದ. ಈಗ ಈತ ತನ್ನ ಫೀಚರ್‌ನಿಂದಾಗಿ
ರೆಕಾರ್ಡ್ ಬ್ರೇಕ್ ಮಾಡಿದ್ದಾನೆ. ಇದೀಗ ತನ ನೋಡಲೆಂದೇ ಜನರು ಹೋಗುತ್ತಿದ್ದಾರೆ.



Click it and Unblock the Notifications
