Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಬಾಹ್ಯಾಕಾಶಕ್ಕೆ ತೆರಳಿದ್ದ ಲೈಕಾ ನಾಯಿ ಬಗ್ಗೆ ಗೊತ್ತಾ? ಇದು ಭೂಮಿಗೆ ವಾಪಾಸು ಬರಲೇ ಇಲ್ಲ..!
ಚಂದ್ರನ ಮೇಲೆ ಇಳಿದ ಮೊದಲ ವ್ಯಕ್ತಿ ಯಾರು ಎಂದು ಕೇಳಿದ್ರೆ ಎಲ್ಲರು ನೀಲ್ ಆರ್ಮ್‌ಸ್ಟ್ರಾಂಗ್ ಎಂಬ ಉತ್ತರ ನೀಡುತ್ತಾರೆ. ಹೌದು ಆತ ಮೊಟ್ಟ ಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟು ಇತಿಹಾಸ ಬರೆದ ವ್ಯಕ್ತಿ. 1969ರಲ್ಲಿ ಇಡೀ ವಿಶ್ವ ದಂಗಾಗುವಂತೆ ಮಾಡಿದ್ದ ಐತಿಹಾಸಿಕ ಘಟನೆ ಅದು. ಇದಾದ ಬಳಿಕ ಯಾರೊಬ್ಬರು ಇಂತಹ ಸಾಹಸ ಮಾಡಲು ಸಾಧ್ಯವಾಗಿಲ್ಲ. ಆದ್ರೆ ಮಾನವರಿಗೆ ಚಂದ್ರನ ಮೇಲೆ ಇಳಿಯುವ ಕನಸು ಮಾತ್ರ ಕಮರಿ ಹೋಗಿಲ್ಲ.
ಆದ್ರೆ ನಿಮಗೆ ಗೊತ್ತಾ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಇಳಿಯುವುದಕ್ಕೂ ಮೊದಲು ನಾಯಿಯೊಂದು ಆಗಸಕ್ಕೆ ಹಾರಿತ್ತು. ಹೌದು ನೀಲ್‌ಗಿಂತ ಮೊದಲು ನಾಯಿಯೊಂದು ಗಗನಯಾತ್ರಿಯಾಗಿ ಆಕಾಶದಲ್ಲಿ ಹಾರಾಡಿತ್ತು. ಆದ್ರೆ ಆ ನಾಯಿ ಭೂಮಿಗೆ ವಾಪಾಸು ಬರಲೇ ಇಲ್ಲ. ಆ ನಾಯಿಯ ಕಥೆ ಹಲವರಿಗೆ ಕಣ್ಣೀರು ತರಿಸಬಹುದು.

ನೀಲ್‌ಗಿಂತ ಮುನ್ನ 1957ರಲ್ಲಿ ಈ ನಾಯಿ ಆಕಾಶಕ್ಕೆ ಜಿಗಿದಿತ್ತು, ಸುಮಾರು 7ರಿಂದ 8 ದಿನ ಅದು ಆರ್ಬಿಟ್‌ನಲ್ಲಿ ಬದುಕಿತ್ತು ಎಂದು ತಿಳಿದುಬಂದಿದೆ. ಆದ್ರೆ ಆ ನಾಯಿ ವಾಪಾಸು ಬರಲೇ ಇಲ್ಲ. ಸೋವಿಯತ್ ಒಕ್ಕೂಟ ಆ ಕಾಲದಲ್ಲಿ ಅಮೆರಿಕಕ್ಕೆ ದೊಡ್ಡ ಸವಾಲು ನೀಡುವ ಉದ್ದೇಶದಿಂದ ನಾಯಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಆ ನಾಯಿಯ ಹೆಸರು ಲೈಕಾ. ಇದೇ ಹೆಸರಿನಲ್ಲಿ ಹಲವು ಸೇನಾ ನಾಯಿಗಳಿಗೆ ಗೌರವ ನೀಡುವುದು ಕೂಡ ಇಂದಿಗೆ ಫೇಮಸ್ ಆಗಿದೆ.
ಈ ಲೈಕಾ ನಾಯಿ ತನ್ನ ಪಾಡಿಗೆ ತಾನು ಮಾಸ್ಕೋದಲ್ಲಿ ಅಡ್ಡಾಡುತ್ತಿತ್ತು. ಆದ್ರೆ ಸೋವಿಯತ್ ಒಕ್ಕೂಟ ನಾಯಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಿದ್ಧತೆ ನಡೆಸಿತ್ತು. ಈ ವೇಳೆ ಕಣ್ಣಿಗೆ ಬಿದ್ದಿದ್ದೇ ಈ ಲೈಕಾ. ಆದ್ರೆ ಮೊದಲು ಈ ಲೈಕಾದ ಹೆಸರು ಕುದ್ರ್ಯಾವ್ಕಾ ಎಂಬುದಾಗಿತ್ತು. ಈ ನಾಯಿಯನ್ನು ಹಿಡಿದು ತಂದ ಸಿಬ್ಬಂದಿ ಅದರ ವೈದ್ಯಕೀಯ ಪರೀಕ್ಷೆಯಿಂದ ಹಿಡಿದು ಎಲ್ಲಾ ರೀತಿ ಪರೀಕ್ಷೆ ನಡೆಸಿ ಅದಕ್ಕೆ ಬಾಹ್ಯಾಕಾಶದಲ್ಲಿ ಹೇಗಿರಬೇಕು ಎಂಬುದನ್ನು ಕಲಿಸಲು ಒಂದಿಷ್ಟು ದಿನ ರೂಮಿನಲ್ಲಿ ಕೂಡಿ ಹಾಕಿ ತರಬೇತಿ ನೀಡಿದ್ದರು.
ಬಾಹ್ಯಾಕಾಶಕ್ಕೆ ತೆರಳುವ ವಾಹನದಲ್ಲಿ ನಾಯಿಗೆ ಬೇಕಾಗಿದ್ದ ಆಹಾರ ಇಟ್ಟು ಕಳುಹಿಸಲಾಗಿತ್ತು. ಅದು ನವೆಂಬರ್ 3 1957 ರಲ್ಲಿ ಲೈಕಾ ಬಾಹ್ಯಾಕಾಶಕ್ಕೆ ಹಾರಿತ್ತು. ನಾಯಿಯು ಬಾಹ್ಯಾಕಾಶದಲ್ಲಿ ಯಾವ ರೀತಿಯ ಗುರುತ್ವಾಕರ್ಷಣೆಗೆ ಒಳಗಾಗಲಿದೆ, ಅದು ಎಷ್ಟು ಸಮಯ ಬದುಕುಳಿಯಲಿದೆ ಎಂಬುದನ್ನು ಪರೀಕ್ಷಿಸುವುದೇ ಸೋವಿಯತ್ ಒಕ್ಕೂಟದ ಉದ್ದೇಶವಾಗಿತ್ತು.
ನವೆಂಬರ್ 3, 1957 ರಂದು ಲೈಕಾ ಅವರ ಬಾಹ್ಯಾಕಾಶದ ಪ್ರಯಾಣ ಬೆಳೆಸಿದ ಬಳಿಕ 7ರಿಂದ 8 ದಿನ ಬದುಕಿತ್ತು, ಆದ್ರೆ ಅದು ಆಮ್ಲಜನಕದ ಕೊರತೆಯಿಂದ ಮೃತಪಟ್ಟಿತು ಎಂದು ತಿಳಿಸಲಾಗಿತ್ತು. ಆದ್ರೆ ಈ ಲೈಕಾ ನಾಯಿಯನ್ನು ಭೂಮಿಗೆ ವಾಪಾಸು ಕರೆತರುವ ಉದ್ದೇಶವಿರಲಿಲ್ಲ ಎಂಬ ಆರೋಪ ಸಹ ಕೇಳಿಬಂದಿತ್ತು. 2002 ರಲ್ಲಿ ರಷ್ಯಾದ ವಿಜ್ಞಾನಿ ಡಿಮಿಟ್ರಿ ಮಲಾಶೆಂಕೋವ್ ಅವರು ಲೈಕಾ ಬಾಹ್ಯಾಕಾಶಕ್ಕೆ ಪ್ರವೇಶಿಸಿದ ನಂತರ ಕೇವಲ ಐದರಿಂದ ಏಳು ಗಂಟೆಗಳ ಕಾಲ ಬದುಕಿತ್ತು ಎಂಬ ಮಾಹಿತಿ ಹಂಚಿಕೊಂಡಿದ್ದರು. ಆದ್ರೆ ನಿಖರವಾಗಿ ಎಷ್ಟು ಸಮಯ ಬದುಕಿತ್ತು ಎಂಬುದು ಪತ್ತೆಯಾಗಲಿಲ್ಲ.
ಆದ್ರೆ ಈ ಬಾಹ್ಯಾಕಾಶ ವಾಹನದಲ್ಲಿ ಉಷ್ಣತೆ ಹೆಚ್ಚಳದಿಂದ ನಾಯಿ ಮೃತಪಟ್ಟಿತು ಎಂದು ನಾಸಾ ತಿಳಿಸಿತ್ತು. ಇದಿ ಬಾಹ್ಯಾಕಾಶ ವಾಹನದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆ ಈ ಬಡಪಾಯಿ ನಾಯಿಯ ಜೀವ ತೆಗೆದಿತ್ತು ಎಂಬ ವಾದವೂ ಇದೆ. ಆದ್ರೆ ನಾಯಿ ಮಾತ್ರ ಇತಿಹಾಸ ಬರೆದು ಬಾಹ್ಯಾಕಾಶದಲ್ಲೇ ಮರೆಯಾಗಿತ್ತು, ಇದಾದ ಬಳಿಕ ಸೋವಿಯತ್ ಒಕ್ಕೂಟ 1960ರಲ್ಲಿ ಬೆಲ್ಕಾ ಮತ್ತು ಸ್ಟ್ರೆಲ್ಕಾ ಎಂಬ ಎರಡು ನಾಯಿಗಳನ್ನ ಬಾಹ್ಯಾಕಾಶಕ್ಕೆ ಕಳುಹಿಸಿ ವಾಪಾಸು ಕೂಡ ತರೆತರಲಾಗಿತ್ತು.



Click it and Unblock the Notifications
