Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಹಿಳೆ ಖರೀದಿಸಿದ್ದ 6 ಲಾಟರಿ ಟಿಕೆಟ್ ಪೈಕಿ 6ಕ್ಕೂ ಹೊಡೀತು ಬಂಪರ್!
ಅದೃಷ್ಟ ಅನ್ನೋದು ಕೆಲವರಿಗೆ ರಾತ್ರೋರಾತ್ರಿ ಒಲಿದು ಬಿಡುತ್ತೆ. ರಾತ್ರಿ ಮಲಗುವಾಗ ಬಡವನಾಗಿದ್ದವ ಬೆಳಗ್ಗೆ ಎದ್ದಾಗ ಶ್ರೀಮಂತನಾಗುತ್ತಾನೆ. ಹೀಗಾಗಬೇಕಾದ್ರೆ ಆತನಿಗೆ ಲಾಟರಿ ಹೊಡಯಬೇಕಷ್ಟೆ. ಇಲ್ಲೊಬ್ಬಾಕೆ ಸಹ ಇದೇ ರೀತಿ ಲಾಟರಿ ಗೆದ್ದು ರಾತ್ರೋರಾತ್ರಿ ಶ್ರೀಮಂತೆ ಆಗಿದ್ದಾಳೆ.
ಆಕೆಯ 5 ಲಾಟರಿ ಟಿಕೆಟ್ ಖರೀದಿಸಿ ಅಷ್ಟಕ್ಕೂ ಲಾಟರಿ ಹೊಡೆದಿದೆ. ಆಕೆ ಇದನ್ನು ಕಂಡು ಶಾಕ್ ಆಗಿದ್ದಾಳೆ. ಅದೃಷ್ಟ ಎಲ್ಲರನ್ನು ಹುಡುಕಿಕೊಂಡು ಬರುವುದಿಲ್ಲ ಹಾಗೆ ಎಲ್ಲರಿಗೂ ದಿಢೀರ್ ಹಣ ಮಾಡಲು ಸಾಧ್ಯವಿಲ್ಲ. ಅದ್ರಲ್ಲೂ ಲಾಟರಿ ವಿಚಾರದಲ್ಲಿ ಎಲಪ್ಲರಿಗೂ ಅದೃಷ್ಟವಿರುವುದಿಲ್ಲ. ಲಾಟರಿ ಖರೀದಿಸುವ ಲಕ್ಷಾಂತರ ಮಂದಿಯಲ್ಲಿ ಒಬ್ಬರಿಗೆ ಜಾಕ್‌ಪಾಟ್ ಹೊಡೆಯುತ್ತೆ. ಹೀಗಾಗಬೇಕಾದ್ರೆ ಅದೃಷ್ಟ ಇರಲೇಬೇಕು.

ಈಗ ಅಮೇರಿಕನ್ ಮಹಿಳೆಯೊಬ್ಬರು 6 ಒಂದೇ ರೀತಿಯ ಟಿಕೆಟ್‌ಗಳನ್ನು ಖರೀದಿಸಿದ ನಂತರ 6 ವರ್ಜೀನಿಯಾ ಲಾಟರಿ ಗೆದ್ದು ಬೀಗಿದ್ದಾರೆ. ಚೆಸಾಪೀಕ್‌ನ ಲಟೋಯಾ ಬರ್ಕ್ ಎಂಬಾಕೆ ಜೂನ್ 5 ರ ಪಿಕ್ 5 ಡ್ರಾಯಿಂಗ್‌ನಲ್ಲಿ ಜಾಕ್ಸನ್ ಅವೆನ್ಯೂನಲ್ಲಿರುವ ಟಿನೀ ಜೈಂಟ್ ಸ್ಟೋರ್‌ಗೆ ಭೇಟಿ ನೀಡಿ ಅಲ್ಲಿ ಲಾಟರಿ ಟಿಕೆಟ್ ಖರೀದಿಸಿದ್ದಳು.
ಇದೇ ಲಾಟರಿ ಟಿಕೆಟ್‌ಗಳು ಆಕೆಯ ಅದೃಷ್ಟವನ್ನೇ ಬದಲಾಯಿಸಿವೆ. ಈ ಟಿಕೆಟ್‌ಗಳ ಮೂಲಕ ಆಕೆ ಬರೋಬ್ಬರಿ $1,80,000 ಡಾಲರ್ ಗೆದ್ದು ರಾತ್ರೋರಾತ್ರಿ ಹಣದ ಹೊಳೆ ಹರಿಸಿದ್ದಾಳೆ. ವರ್ಜೀನಿಯಾ ಲಾಟರಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಒಬ್ಬರೆ ಈ 6 ಲಾಟರಿ ಟಿಕೆಟ್ ಖರೀದಿಸಿದ್ದಾರೆ. 6 ಸಂಖ್ಯೆಗಳು ಹೀಗಿದ್ದವು 5-5-5-5-0. ಈ ಎಲ್ಲಾ ಟಿಕೆಟ್‌ಗಳೂ ಆ ಮಹಿಳೆ ಖರೀದಿಸಿದ್ದಳು.
ಪ್ರತಿ ಟಿಕೆಟ್‌ನಲ್ಲು ಸುಮಾರು $30,000 ಬಹುಮಾನವನ್ನು ಗೆದ್ದಿದ್ದಾಳೆ ಎಂದು ಆಕೆಗೆ ತಿಳಿದಾಗ ಆಕೆ ಅಚ್ಚರಿ ಜೊತೆಗೆ ಖುಷಿಯಲ್ಲಿ ಕುಣಿದಾಡಿದ್ದಾಳೆ. ಲಾಟರಿ ಆಯೋಜಕರ ಪ್ರಕಾರ, ಪ್ರತಿ 32 ಟಕೆಟ್‌ಗಳ ಪೈಕಿ ಸರಾಸರಿ ಒಂದು ಟಿಕೆಟ್‌ಗೆ ಲಾಟರಿ ಹೊಡೆಯುವ ಸಂಭವ ಹೆಚ್ಚು. ಆದ್ರೆ ಇಲ್ಲಿ ಒಬ್ಬಾಕೆಗೆ 6 ಟಿಕೆಟ್‌ಗೆ ಲಾಟರಿ ಹೊಡೆದಿರುವುದು ಇದೇ ಮೊದಲ ಪ್ರಕರಣ ಎಂದಿದ್ದಾರೆ.
ಆದ್ರೆ ಜಾಕ್‌ಪಾಟ್ ಟಿಕೆಟ್ ಮಾತ್ರ 501,386 ಗಳಲ್ಲಿ 1 ಟಿಕೆಟ್‌ಗೆ ಹೊಡೆಯಲಿದೆ. ಆದ್ರೆ ಇಲ್ಲಿ 6 ಟಿಕೆಟ್‌ಗಳಿಗೂ ಲಾಟರಿ ಹೊಡೆದಿದೆ. ಆದ್ರೆ ಇದ್ಯಾವುದೂ ಜಾಕ್‌ಪಾಟ್ ನಂಬರ್ ಆಗಿಲ್ಲ.
ಜನರು ಅನೇಕ ಬಾರಿ ಲಾಟರಿ ಗೆದ್ದ ದಾಖಲಿತ ಪ್ರಕರಣಗಳ ಸರಣಿಯಲ್ಲಿ ಬರ್ಕ್ ಅವರ ಅದ್ಭುತವಾದ ಕಥೆಗಳಲ್ಲಿ ಈ ಚೆಸಾಪೀಕ್‌ನ ಲಟೋಯಾ ಬರ್ಕ್ ಕಥೆ ತುಂಬಾನೆ ಕುತೂಹಲಕರವಾಗಿರುವ ಜೊತೆಗೆ ಬಹಳ ಅಪರೂಪವಾಗಿದೆ. ಇದಕ್ಕೂ ಮೊದಲು ವರ್ಜೀನಿಯಾದ ಡೆಬೊರಾ ಬ್ರೌನ್ ಅವರು ಪಿಕ್ 4 ಲಾಟರಿಯನ್ನು ಒಂದೇ ದಿನದಲ್ಲಿ 30 ಬಾರಿ ಗೆದ್ದಿದ್ದರು. ಇದು ಸಹ ಅಪರೂಪದ ಘಟನೆಯಾಗಿತ್ತು.
ಇನ್ನು ಇತ್ತೀಚಿಗೆ ಚೀನಾದಲ್ಲಿ ಯುವಕನೊಬ್ಬ ವಿಶ್ವದ ಅತ್ಯಂತ ದುಬಾರಿ ಲಾಟರಿ ಗೆದ್ದು ಇತಿಹಾಸ ಬರೆದಿದ್ದ, ಆತ ಬರೋಬ್ಬರಿ 96 ಮಿಲಿಯನ್ ಡಾಲರ್ ಮೊತ್ತ ಗೆದ್ದಿದ್ದಾನೆ. ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಇದು ಅಂದಾಜು 750 ಕೋಟಿ ರೂಪಾಯಿಯಾಗುತ್ತದೆ. ಇಷ್ಟೊಂದು ದೊಡ್ಡ ಲಾಟರಿ ಗೆದ್ದಿದ್ದು ಇದೇ ಮೊದಲು.
ಇದಕ್ಕೂ ಮೊದಲು ಚೀನಾದ ಮತ್ತೊಬ್ಬ ವ್ಯಕ್ತಿಯೊಬ್ಬ 30 ಮಿಲಿಯನ್ ಡಾಲರ್ ಲಾಟರಿ ಗೆದ್ದಿದ್ದ, ಆದರೆ ಈ ವಿಚಾರ ತನ್ನ ಕುಟುಂಬದವರಿಗೆ ಹೇಳದೆ ಮುಚ್ಚಿಟ್ಟಿದ್ದ ಪ್ರಕರಣ ಭಾರೀ ಸದ್ದು ಮಾಡಿತ್ತು. ಆತ ಕೇವಲ 11 ಡಾಲರ್ ನೀಡಿ 40 ಲಾಟರಿ ಟಿಕೆಟ್ ಖರೀದಿಸಿದ್ದ, ಆದರೆ ಲಾಟರಿ ಹೊಡೆದ ವಿಚಾರವನ್ನು ಹೆಂಡತಿ ಮಕ್ಕಳಿಂದ ಮುಚ್ಚಿಟ್ಟಿದ್ದ. ಬಳಿಕ $684,992 ಡಾಲರ್ ಅನ್ನು ದಾನವಾಗಿ ನೀಡಿ ಎಲ್ಲರ ಗಮನಸೆಳೆದಿದ್ದ.



Click it and Unblock the Notifications
