Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಡಿಸೆಂಬರ್ ಅಂತ್ಯಕ್ಕೆ ಲಾ ನಿನಾ ಆರಂಭ: ಈ ವರ್ಷ ಅಧಿಕ ಚಳಿ..!
ವಾತಾವರಣದಲ್ಲಿನ ಬದಲಾವಣೆಗಳ ಕುರಿತಾಗಿ ಹವಾಮಾನ ಇಲಾಖೆಯು ಮಾಹಿತಗಳ ಹಂಚಿಕೊಳ್ಳುತ್ತಲೇ ಇರಲಿದೆ. ಹಾಗೆ ಭಾರತದಲ್ಲಿ ಮಾನ್ಸೂನ್ ಮುಗಿಯುತ್ತಿದೆ. ಈ ಋತುಗಳ ಬದಲಾವಣೆಯ ಹಿಂದೆ ದೊಡ್ಡ ಪ್ರಕ್ರಿಯೆಗಳು ನಡೆಯಲಿವೆ. ಅದ್ರಲ್ಲೂ ಎಲ್ ನಿನೊ, ಲಾ ನಿನಾ ಬಗ್ಗೆ ನೀವೆಲ್ಲಾ ಕೇಳಿರಬಹುದು. ಸದ್ಯ ಈಗ ಲಾ ನಿನಾ ಪ್ರಕ್ರಿಯೆ ಭಾರತದಲ್ಲಿ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ.
ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಭಾರತದಲ್ಲಿ ಲಾ ನಿನಾ ಪ್ರಕ್ರಿಯೆ ಆರಂಭವಾಗುವ ಮುನ್ಸೂಚನೆ ಇದೆ ಎಂದು ತಿಳಿಸಿದೆ. ಪೂರ್ವ ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ತಾಪಮಾನದ ಉಷ್ಣತೆಗೆ ಸಂಬಂಧಿಸಿದ ನೈಸರ್ಗಿಕ ಪ್ರಕ್ರಿಯೆ ಇದಾಗಿದೆ. ಲಾ ನಿನಾ ಸ್ಥಿತಿಯಲ್ಲಿ ಶೀತಗಾಳಿ ಹೆಚ್ಚಾಗಿರಲಿದೆ.

ಈ ವರ್ಷದ ಅಂತ್ಯದಲ್ಲಿ ಲಾ ನಿನಾ ಪರಿಸ್ಥಿತಿ ನಿರೀಕ್ಷಿಸಬಹುದು ಎಂದು ಅಂದಾಜಿಸಲಾಗಿದೆ. ಇದು ಭಾರತದಲ್ಲಿ ವಾರ್ಷಿಕ ಅತೀ ಹೆಚ್ಚು ಚಳಿ ನೋಡಬಹುದು. ಅದ್ರಲ್ಲೂ ಡಿಸೆಂಬರ್‌ನಿಂದ ಫೆಬ್ರವರಿಯ ನಡುವೆ ಚಳಿ ಉತ್ತುಂಗದಲ್ಲಿರಲಿದೆ ಎಂದು ತಿಳಿದುಬಂದಿದೆ. ಇನ್ನು ಈ ಬಾರಿ ಭಾರತದಲ್ಲಿ ವಾಡಿಕೆಗಿಂತ ಅಧಿಕ ಶೀತದ ವಾತಾವರಣ ಇರಲಿದೆ ಎಂದು ಕೂಡ ಅಂದಾಜಿಸಲಾಗಿದೆ.
2025ರ ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳ ನಡುವೆ ಲಾ ನಿನಾ ಅಭಿವೃದ್ಧಿಯಾಗುವ ಸಾಧ್ಯತೆ ಶೇ.71ರಷ್ಟು ಇದೆ ಎಂದು ಅಮೆರಿಕದ ನ್ಯಾಷನಲ್ ವೆದರ್ ಸರ್ವೀಸಸ್ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ. ಹಾಗೆ ಮುಂದಿನ ತಿಂಗಳಲ್ಲಿ ಈ ಪರಿಸ್ಥಿತಿ ಕೊಂಚ ತಗ್ಗಲಿದೆ ಎಂದಿದೆ. ಇದು ಭಾರತದಲ್ಲಿ ವಿಪರೀತ ಚಳಿ ತರಲು ಕಾರಣವಾಗಲಿದೆ. ಉತ್ತರ ಭಾರತದಲ್ಲಿ ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಚಳಿ ನಿರೀಕ್ಷಿಸಬಹುದಾಗಿದೆ.
IMDಯ ಮಾನ್ಸೂನ್ ಮಿಷನ್ ಹವಾಮಾನ ಮುನ್ಸೂಚನೆ ವ್ಯವಸ್ಥೆ (MMCFS) ಮತ್ತು ಇತರ ಜಾಗತಿಕ ಮುನ್ಸೂಚನೆಗಳು ಮಾನ್ಸೂನ್ ಸಮಯದಲ್ಲಿ ಈ ತಟಸ್ಥ ಪರಿಸ್ಥಿತಿಗಳು ಮುಂದುವರಿಯುತ್ತವೆ ಎಂದು ಸೂಚಿಸುತ್ತವೆ. ಹಾಗೆ ಎಲ್ ನಿನೊ- ದಕ್ಷಿಣ ಸಂಚಲನದ ತಂಪಾಗುವಿಕೆಯ ಹಂತವು ಸಮಭಾಜಕ ಫೆಸಿಫಿಕ್ ಪ್ರದೇಶದಲ್ಲಿ ಸಾಗರ ತಾಪಮಾನವನ್ನು ಪರಿವರ್ತಿಸಲಿದ್ದು, ವಿಶ್ವಾದ್ಯಂತ ಹವಾಮಾನದ ಮೇಲೆ ಪರಿಣಾಮ ಬೀರಲಿದೆ.
ಲಾ ನಿನೊ ಪರಿಸ್ಥಿತಿಯು ಫೆಸಿಫಿಕ್ ಸಾಗರದಲ್ಲಿ ಉಂಟಾಗುತ್ತದೆ. ಅದ್ರಲ್ಲೂ ಪೆರು ದೇಶದ ಕಡೆಯಿಂದ ಬೀಸುವ ಮಾರುತಗಳು ಆಸ್ಟ್ರೇಲಿಯಾ ಖಂಡದ ಮೇಲೆ ಕಡಿಮೆ ಒತ್ತಡ ಉಂಟು ಮಾಡಲಿವೆ. ಹಾಗೆ ಅಲ್ಲಿಂದ ಭಾರತದ ಕಡೆ ಬೀಸುವ ತಣ್ಣನೆಯ ಗಾಳಿ ಭಾರತವನ್ನು ಹಾದು ಏಷ್ಯಾದಲ್ಲಿ ತಂಪಿನ ವಾತಾವರಣಕ್ಕೆ ಕಾರಣವಾಗಲಿದೆ, ಇದು ಪೂರ್ವ ಮುಂಗಾರಿಗೂ ಕಾರಣವಾಗಲಿದೆ.
ಹಾಗೆ ಬೇಸಿಗೆಯ ಸಮಯದಲ್ಲಿಯೂ ಈ ಬಾರಿ ಹೆಚ್ಚು ಬಿಸಿಗಾಳಿ ನೋಡಬಹುದು. ಈ ವಿದ್ಯಮಾನವನ್ನು ಮೊದಲ ಬಾರಿಗೆ ಗಿಲ್ಬರ್ಟ್ ಥಾಮಸ್ ವಾಕರ್ ಪತ್ತೆ ಮಾಡಿದ್ದಾರೆ. ಇವರು 1904ರಲ್ಲಿ ಭಾರತದಲ್ಲಿ ಹವಾಮಾನ ಮುನ್ಸೂಚನೆಯ ಪ್ರಧಾನ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದಿಗೂ ಈ ಎಲ್ ನಿನೊ ಹಾಗೂ ಲಾ ನಿನೊ ಕುರಿತಾಗಿ ಅಧ್ಯಯನಗಳು ನಡೆಯುತ್ತಲೇ ಇವೆ.
ಏಕೆಂದರೆ ಎಲ್ ನಿನೋ ಹಾಗೂ ಲಾ ನಿನೊ ಪರಿಸ್ಥಿತಿಗಳು ಎಷ್ಟಿ ಪ್ರಮಾಣದಲ್ಲಿ ಹವಾಮಾನದ ಮೇಲೆ ಪರಿಣಾಮ ಬೀರುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಲಾಗುತ್ತಿದೆ. ಯಾವ ಪರಿಣಾಮವು ಯಾವ ರೀತಿಯ ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದೆ ಎಂಬುದನ್ನು ವಿವರಿಸಲಾಗುತ್ತಿದೆ. ಹಾಗೆ ಇದು ಭಾರತದ ಭೌಗೋಳಿಕ ಲಕ್ಷಣದ ಮೇಲೆ, ಮಾನ್ಸೂನ್ ಮಾರುತಗಳು, ಪೂರ್ವ ಹಾಗೂ ಹಿಂಗಾರು ಮಾರುತಗಳ ಮೇಲೆ ಹಾಗೆ ಪರಿಣಾಮ ಬೀರಲಿದೆ ಎಂಬ ಕುರಿತಾಗಿಯೂ ಕೂಡ ನಿರಂತರ ಅಧ್ಯಯನಗಳು ನಡೆಯುತ್ತಿವೆ.



Click it and Unblock the Notifications