ಮಾಸಿಕ ರಾಶಿಫಲ: ಆಗಸ್ಟ್ ತಿಂಗಳು ಕುಂಭ ರಾಶಿಯವರ ವೃತ್ತಿ, ಆರ್ಥಿಕ, ಪ್ರೇಮ-ವಿವಾಹ, ಕುಟುಂಬ ಭವಿಷ್ಯ

ಗ್ರಹಗತಿಗಳ ಆಧಾರದ ಮೇಲೆ ಆಗಸ್ಟ್ 2023ರ ರಾಶಿಫಲ ನೀಡಲಾಗಿದ್ದು ನಾವಿಲ್ಲಿ ಕುಂಭ ರಾಶಿಯವರಿಗೆ ಆಗಸ್ಟ್ ತಿಂಗಳು ಹೇಗಿರಲಿದೆ? ಅವರ ಆರ್ಥಿಕ ಭವಿಷ್ಯ, ವೃತ್ತಿ ಜೀವನ ಭವಿಷ್ಯ, ವ್ಯಾಪಾರ, ಆರೋಗ್ಯ, ಕುಟುಂಬ ಹಾಗೂ ಪ್ರೀತಿಯ ಭವಿಷ್ಯದ ಬಗ್ಗೆ ಹೇಳಲಾಗಿದೆ. ಅಷ್ಟಕ್ಕು ಆಗಸ್ಟ್ ತಿಂಗಳಲ್ಲಿ ಕುಂಭ ರಾಶಿಯವರ ಬಾಳಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ ಅನ್ನೋದನ್ನು ತಿಳಿಯೋಣ.

ಶನಿಗ್ರಹವು ಕುಂಭ ರಾಶಿಯನ್ನು ಆಳುತ್ತಿದೆ. ಈ ರಾಶಿಯವರಿಗೆ ಸಂಶೋಧನೆಯಲ್ಲಿ ಆಸಕ್ತಿ ಹೆಚ್ಚು.ಕುಂಭ ರಾಶಿಯವರು ಆಗಸ್ಟ್ ತಿಂಗಳಲ್ಲಿ ವೃತ್ತಿ, ಹಣ, ಕುಟುಂಬ ಮತ್ತು ಆರೋಗ್ಯದ ವಿಷಯದಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯಬಹುದು. ಕುಂಭ ರಾಶಿಯವರು ಈ ತಿಂಗಳು ತಮ್ಮ ವೃತ್ತಿ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಈ ತಿಂಗಳು ಪ್ರಮುಖ ಗ್ರಹಗಳ ಸ್ಥಿತಿಯು ಕುಂಭ ರಾಶಿಯವರಿಗೆ ಪ್ರತಿಕೂಲವಾಗಿದೆ. ಈ ತಿಂಗಳು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗಬಹುದು.

Kumbha Rashi (Aquarius) Monthly Horoscope For August 2023 in Kannada

ವೃತ್ತಿ ಜೀವನ

ಕುಂಭ ರಾಶಿಯವರಿಗೆ ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಗಸ್ಟ್ ತಿಂಗಳು ಸವಾಲುಗಳಿಂದ ಕೂಡಿರುತ್ತದೆ. ವೃತ್ತಿಯ ಗ್ರಹವಾದ ಶನಿಯು ತನ್ನ ಸ್ವಂತ ರಾಶಿಯಲ್ಲಿ ಮೊದಲ ಮನೆಯಲ್ಲಿ ಸ್ಥಿತರಾಗಿದ್ದು ಇದರಿಂದ ನಿಮಗೆ ಸಮಸ್ಯೆಗಳು ಹೆಚ್ಚಾಗಬಹುದು. ಗುರು ಈ ತಿಂಗಳು ಮೂರನೇ ಮನೆಯಲ್ಲಿ ಇರುತ್ತಾನೆ. ಇದು ಕುಂಭ ರಾಶಿಯವರಿಗೆ ಅನುಕೂಲಕರವಾಗಿರುವುದಿಲ್ಲ.

ಶನಿಯು ತನ್ನ ಸ್ವಂತ ರಾಶಿಯಲ್ಲಿ ಮೊದಲ ಮನೆಯಲ್ಲಿದ್ದಾನೆ. ಅದರ ಪ್ರಭಾವದಿಂದಾಗಿ ನಿಮಗೆ ಈ ತಿಂಗಳಲ್ಲಿ ತೃಪ್ತಿ ಇರೋದಿಲ್ಲ. ಮತ್ತು ನೀವು ಸವಾಲುಗಳನ್ನು ಎದುರಿಸುವ ಸಾಧ್ಯತೆ ಇರುತ್ತದೆ. ನೀವು ಕೆಲಸದಲ್ಲಿ ಸವಾಲುಗಳನ್ನು ಎದುರಿಸೋದು ಮುಂದುವರಿಯುತ್ತದೆ. ಮತ್ತು ಕೆಲಸದಲ್ಲಿ ಒತ್ತಡ ಉಳಿಯುವ ಸಾಧ್ಯತೆಯಿದೆ.

ಮೊದಲನೆಯ ಮನೆಯಲ್ಲಿ ಶನಿಯ ಉಪಸ್ಥಿತಿಯಿಂದಾಗಿ ನೀವು ಅನಪೇಕ್ಷಿತ ಪ್ರಯಾಣವನ್ನು ಮಾಡಬೇಕಾಗಬಹುದು. ಅತಿಯಾದ ಕೆಲಸದ ಕಾರಣದಿಂದಾಗಿ ಕುಂಭ ರಾಶಿಯವರು ಈ ತಿಂಗಳು ಒತ್ತಡ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಶ್ರಮಪಟ್ಟರೂ ಕೆಲಸದಲ್ಲಿ ಮೆಚ್ಚುಗೆ ಸಿಗದ ಲಕ್ಷಣಗಳಿವೆ. ಇದರಿಂದ ನಿಮ್ಮಲ್ಲಿ ಕೆಲಸದಲ್ಲಿ ತೃಪ್ತಿಯ ಕೊರತೆ ಉಂಟಾಗುವ ಸಾಧ್ಯತೆ ಇದೆ.

ವ್ಯಾಪಾರಸ್ಥರು ಈ ತಿಂಗಳು ಯೋಚಿಸಿದಷ್ಟು ಲಾಭವನ್ನು ಗಳಿಸಲು ಸಾಧ್ಯವಾಗೋದಿಲ್ಲ. ಈ ತಿಂಗಳು ನಿಮಗೆ ಲಾಭವಾಗಲಿ ನಷ್ಟವಾಗದೇ ಇರುವ ಸೂಚನೆಗಳಿದೆ. ಪಾಲುದಾರಿಕೆಯಲ್ಲಿ ನಡೆಸುವ ವ್ಯವಹಾರವು ನಿಮಗೆ ಪ್ರಯೋಜನಕಾರಿಯಾಗುವುದಿಲ್ಲ. ಪಾಲುದಾರಿಕೆಯಲ್ಲಿ ನೀವು ನಷ್ಟವನ್ನು ಎದುರಿಸಬೇಕಾಗುತ್ತದೆ. ಅಥವಾ ನಿಮ್ಮ ಪಾಲುದಾರರೊಂದಿಗೆ ನೀವು ವಿವಾದವನ್ನು ಎದುರಿಸಬೇಕಾಗುತ್ತದೆ.

ಆರ್ಥಿಕ ಜೀವನ

ಕುಂಭ ರಾಶಿಯವರು ಆಗಸ್ಟ್ ತಿಂಗಳು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕಠಿಣ ಸವಾಲುಗಳನ್ನು ಅನುಭವಿಸುತ್ತಾರೆ. ಶನಿ ಮತ್ತು ಕೇತು ಪ್ರತಿಕೂಲ ಮನೆಯಲ್ಲಿರುವುದರಿಂದ ಲಾಭ ಗಳಿಸೋದಕ್ಕೆ ಸಾಧ್ಯವಾಗೋದಿಲ್ಲ. ಕುಂಭ ರಾಶಿಯವರ ಮೂರನೇ ಮನೆಯಲ್ಲಿ ಗುರು ಗ್ರಹವಿದ್ದು, ಈ ಕಾರಣದಿಂದಾಗಿ ನೀವು ನಿಮ್ಮ ಜೀವನವನ್ನು ಉತ್ತಮ ಹಣವನ್ನು ಗಳಿಸಲು ಕಷ್ಟವಾಗಬಹುದು. ಈ ತಿಂಗಳು ನೀವು ಹಣದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ಈ ತಿಂಗಳು ಹಣದ ನಷ್ಟದ ಸಾಧ್ಯತೆಗಳಿದೆ.

ಈ ತಿಂಗಳು ಉದ್ಯಮಿಗಳಿಗೆ ಸ್ವಲ್ಪ ಕಷ್ಟವಾಗಬಹುದು. ನೀವು ಲಾಭ ಗಳಿಸಲು ಕಷ್ಟವಾಗಬಹುದು. ಏಕೆಂದರೆ ನಿಮ್ಮ ಪ್ರತಿಸ್ಪರ್ಧಿಗಳಿಂದ ನೀವು ಕಠಿಣ ಸ್ಪರ್ಧೆಯನ್ನು ಎದುರಿಸುವ ಸಾಧ್ಯತೆಯಿದೆ. ಆದ್ದರಿಂದ ನೀವು ಲಾಭ ಗಳಿಸಲು ಈ ತಿಂಗಳು ನಿಮ್ಮ ತಂತ್ರವನ್ನು ಬದಲಾಯಿಸಬೇಕಾಗಬಹುದು. ಶುಕ್ರನು ಹಿಮ್ಮುಖ ಸ್ಥಿತಿಯಲ್ಲಿರುವುದರಿಂದ ಸ್ಥಳೀಯರು ನೀವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಬಹುದು. ಇದರ ಹೊರತಾಗಿ ನೀವು ಹಣವನ್ನು ಉಳಿಸುವ ಸಾಧ್ಯತೆ ಕಡಿಮೆ. ಆದ್ದರಿಂದ ನೋಡಿಕೊಂಡು ಖರ್ಚು ಮಾಡಿದರೆ ಒಳ್ಳೆಯದು.

ಆರೋಗ್ಯ

ಆಗಸ್ಟ್ ತಿಂಗಳು ಕುಂಭ ರಾಶಿಯವರಿಗೆ ಆರೋಗ್ಯದ ದೃಷ್ಟಿಯಿಂದ ಅಷ್ಟು ಚೆನ್ನಾಗಿಲ್ಲ. ಈ ತಿಂಗಳ ಮೊದಲ 15 ದಿನಗಳಲ್ಲಿ ಶನಿಯು ಮೊದಲ ಮನೆಯಲ್ಲಿರುವುದರಿಂದ ನೀವು ಒತ್ತಡ ಮತ್ತು ಬೆನ್ನಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮೊಳಗೆ ಚಡಪಡಿಕೆ ಮತ್ತು ಆತಂಕ ಹೆಚ್ಚಾಗುವ ಸಾಧ್ಯತೆಯಿದೆ. ಇದರ ಹೊರತಾಗಿ ನೀವು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ತಿಂಗಳು ನೀವು ಧ್ಯಾನ ಮತ್ತು ಯೋಗದತ್ತ ಗಮನಹರಿಸಬೇಕು.

ಈ ತಿಂಗಳು ಯಾವುದೇ ದೀರ್ಘ ಪ್ರಯಾಣವನ್ನು ಮಾಡೋದಕ್ಕೆ ಹೋಗಬೇಡಿ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸಿ. ಗುರು ಮೂರನೇ ಮನೆಯಲ್ಲಿರುವುದರಿಂದ ನಿಮಗೆ ತಲೆನೋವು ಮತ್ತು ಅಧಿಕ ರಕ್ತದೊತ್ತಡ ಉಂಟಾಗಬಹುದು. ಶುಕ್ರನು ಹಿಮ್ಮುಖ ಸ್ಥಿತಿಯಲ್ಲಿರೋದ್ರಿಂದ ನೀವು ಶೀತ ಮತ್ತು ಜ್ವರದಿಂದ ಬಳಲವ ಸಾಧ್ಯತೆಯಿದೆ.

ಪ್ರೀತಿ ಮತ್ತು ವೈವಾಹಿಕ ಜೀವನ

ಕುಂಭ ರಾಶಿಯವರಿಗೆ ಆಗಸ್ಟ್ ತಿಂಗಳು ಪ್ರೇಮ ಮತ್ತು ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಅಷ್ಟೇನು ಚೆನ್ನಾಗಿ ಇರೋದಿಲ್ಲ. ಮೊದಲನೇ ಮನೆಯಲ್ಲಿ ಶನಿಯಂತಹ ಪ್ರಮುಖ ಗ್ರಹಗಳಿಂದ ನಿಮಗೆ ತೊಂದರೆಗಳು ಉಂಟಾಗಬಹುದು. ಈ ಕಾರಣದಿಂದಾಗಿ ನಿಮ್ಮ ಪ್ರೀತಿಪಾತ್ರರೊಂದಿಗೆ ಕೊಂಚ ಕಿರಿಕಿರಿ, ಅಸಮಾಧಾನ ಉಂಟಾಗಬಹುದು. ಅವಿವಾಹಿತರ ಮದುವೆಯ ಕೆಲಸಗಳು ಮತ್ತಷ್ಟು ಮುಂದೂಡುವ ಸಾಧ್ಯತೆಯಿದೆ. ವಿವಾಹಿತರಿಗೆ ಗುರು ಮತ್ತು ಕೇತು ಮೂರನೇ ಮನೆಯಲ್ಲಿ ಒಟ್ಟಿಗೆ ಇರುವುದರಿಂದ ಸಾಮರಸ್ಯದ ಕೊರತೆ ಉಂಟಾಗಬಹುದು.

ಮೂರನೇ ಮನೆಯಲ್ಲಿ ಗುರುವಿನ ಉಪಸ್ಥಿತಿಯಿಂದಾಗಿ ಸಂವಹನದಲ್ಲಿ ಸಮಸ್ಯೆಗಳು ಆಗಬಹುದು. ಮತ್ತು ನಿಮ್ಮ ಪ್ರೇಮ ವ್ಯವಹಾರಗಳಲ್ಲಿ ಆಕರ್ಷಣೆಯ ಕೊರತೆ ಎದುರಾಗುವ ಸಾಧ್ಯತೆಯಿದೆ. ಕುಂಭ ರಾಶಿಯವರಿಗೆ ಈ ತಿಂಗಳು ಶುಕ್ರನು ಆರನೇ ಮನೆಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿರುತ್ತಾನೆ. ಈ ಕಾರಣದಿಂದಾಗಿ ನೀವು ಪ್ರೀತಿಯಲ್ಲಿ ನಿರಾಳತೆಯ ಕೊರತೆಯನ್ನು ಅನುಭವಿಸುತ್ತೀರಿ. ಮತ್ತು ನಿಮ್ಮ ಮಧ್ಯೆ ಆಕರ್ಷಣೆಯು ಕಡಿಮೆಯಾಗುತ್ತದೆ. ಈ ತಿಂಗಳು ನಿಮ್ಮ ಸಂಗಾತಿಯೊಂದಿಗೆ ನೀವು ಹೆಚ್ಚು ಖುಷಿಯಾಗಿ ಇರೋದಕ್ಕೆ ಸಾಧ್ಯವಿಲ್ಲ.

ಈ ತಿಂಗಳು ಮದುವೆಗಾಗಿ ಯೋಜಿಸುತ್ತಿರುವವರಿಗೆ ಯಾವುದೇ ವಿಶೇಷ ಫಲಿತಾಂಶಗಳು ಇರೋದಿಲ್ಲ. ಅದಕ್ಕಾಗಿಯೇ ನೀವು ಮದುವೆಯ ಯೋಜನೆಯನ್ನು ಮುಂದೂಡುವುದು ಉತ್ತಮ. ವಿವಾಹಿತರು ಈ ತಿಂಗಳು ಸಂತೋಷವಾಗಿ ಇರೋದಿಲ್ಲ. ಇದಲ್ಲದೆ ನಿಮ್ಮ ಸಂಗಾತಿಯೊಂದಿಗೆ ನೀವು ಜಗಳವಾಡುವ ಸಾಧ್ಯತೆಯಿದೆ.

ಪರಿಹಾರ :

ಶನಿವಾರದಂದು ಶನಿ ಚಾಲೀಸವನ್ನು ಪಠಿಸಿ.
ಪ್ರತಿದಿನ 108 ಬಾರಿ ಓಂ ನಮೋ ನಾರಾಯಣಾಯ ಜಪಿಸಿ.
ಮಂಗಳವಾರದಂದು ಕೆಂಪು ಹೂವುಗಳಿಂದ ಹನುಮಂತನನ್ನು ಪೂಜಿಸಿ.

English summary

Kumbha Rashi (Aquarius) Monthly Horoscope For August 2023 in Kannada

Here August Month Kumbha Rashi (Aquarius) People career, financial, Health, love-family horoscope Read on.
Story first published: Monday, July 31, 2023, 18:32 [IST]
X
Desktop Bottom Promotion