Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ಮಾಸಿಕ ರಾಶಿಫಲ: ಜುಲೈ ತಿಂಗಳು ಕುಂಭ ರಾಶಿಯವರ ವೃತ್ತಿ, ಆರ್ಥಿಕ, ಪ್ರೇಮ-ವಿವಾಹ, ಕುಟುಂಬ ಭವಿಷ್ಯ
ಗ್ರಹಗತಿಗಳ ಆಧಾರದ ಮೇಲೆ ಜುಲೈ 2023ರ ರಾಶಿಫಲ ನೀಡಲಾಗಿದ್ದು ನಾವಿಲ್ಲಿ ಕುಂಭ ರಾಶಿಯವರಿಗೆ ಜೂನ್ ತಿಂಗಳು ಹೇಗಿರಲಿದೆ? ಅವರ ಆರ್ಥಿಕ ಭವಿಷ್ಯ, ವೃತ್ತಿ ಜೀವನ ಭವಿಷ್ಯ, ವ್ಯಾಪಾರ, ಆರೋಗ್ಯ, ಕುಟುಂಬ ಹಾಗೂ ಪ್ರೀತಿಯ ಭವಿಷ್ಯದ ಬಗ್ಗೆ ಹೇಳಲಾಗಿದೆ. ಅಷ್ಟಕ್ಕು ಜುಲೈ ತಿಂಗಳಲ್ಲಿ ಕುಂಭ ರಾಶಿಯವರ ಬಾಳಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ ಅನ್ನೋದನ್ನು ತಿಳಿಯೋಣ.
ಶನಿಯು ಕುಂಭ ರಾಶಿಯ ಅಧಿಪತಿ. ಜುಲೈ ತಿಂಗಳಿನಲ್ಲಿ ಕುಂಭ ರಾಶಿಯವರು ವೃತ್ತಿ, ಹಣಕಾಸು, ಕುಟುಂಬ ಮತ್ತು ಆರೋಗ್ಯ ಈ ಎಲ್ಲಾ ಕ್ಷೇತ್ರಗಳಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ. ಶನಿಯು ತನ್ನದೇ ಆದ ಚಂದ್ರನ ರಾಶಿಯಲ್ಲಿ ಇರುವುದರಿಂದ ಈ ತಿಂಗಳು ಪ್ರಮುಖ ಗ್ರಹಗಳ ಸ್ಥಾನವು ಕುಂಭ ರಾಶಿಯವರಿಗೆ ಪ್ರತಿಕೂಲವಾಗಿದೆ. ಗುರುವು ಈ ತಿಂಗಳು ಮೂರನೇ ಮನೆಯಲ್ಲಿ ಕುಳಿತಿದ್ದಾನೆ. ಆದ್ದರಿಂದ ಇದು ಹೆಚ್ಚಿನ ಖರ್ಚುಗಳನ್ನು ಉತ್ತೇಜಿಸುತ್ತದೆ. ಈ ವೆಚ್ಚಗಳು ನಿರೀಕ್ಷೆಗಿಂತ ಹೆಚ್ಚಿರಬಹುದು. ಈ ತಿಂಗಳಲ್ಲಿ ಹಲವು ಬಾರಿ ಹಣದ ನಷ್ಟವನ್ನು ಎದುರಿಸಬೇಕಾಗಬಹುದು.

ವೃತ್ತಿ ಜೀವನ
ಈ ತಿಂಗಳು ಕುಂಭ ರಾಶಿಯವರು ತಮ್ಮ ವೃತ್ತಿ ಕ್ಷೇತ್ರದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಈ ತಿಂಗಳು ವೃತ್ತಿಯ ಗ್ರಹವಾದ ಶನಿಯು ತನ್ನದೇ ರಾಶಿಯಲ್ಲಿ ಮೊದಲ ಮನೆಯಲ್ಲಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ನೀವು ವೃತ್ತಿಜೀವನದ ವಿಚಾರದಲ್ಲಿ ಕೊಂಚ ಕಷ್ಟವಾಗಬಹುದು. ಇನ್ನೂ ಈ ತಿಂಗಳು ಗುರುವು ಮೂರನೇ ಮನೆಯಲ್ಲಿ ಪ್ರತಿಕೂಲ ಸ್ಥಾನದಲ್ಲಿದ್ದಾನೆ.
ಶನಿಯ ಪ್ರಭಾವದಿಂದಾಗಿ ಕೆಲಸದಲ್ಲಿ ತೃಪ್ತಿ ಇರೋದಿಲ್ಲ. ಹಾಗೂ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲಸದ ಕಡೆಗೆ ಹೆಚ್ಚಿನ ಗಮನ ಇರೋದಿಲ್ಲ. ನೀವು ಕೆಲಸದಲ್ಲಿ ಒತ್ತಡ ಹಾಗೂ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇನ್ನೂ ಶನಿಯ ಪ್ರಭಾವದಿಂದಾಗಿ ಕೆಲಸ ವಿಚಾರವಾಗಿ ನೀವು ಅನಗತ್ಯವಾಗಿ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು.
ಈ ತಿಂಗಳಲ್ಲಿ ನೀವು ಎಷ್ಟೇ ಕಷ್ಟ ಪಟ್ಟರೂ ಕೂಡ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗೋದಿಲ್ಲ. ಹಾಗೂ ನಿಮ್ಮ ಕೆಲಸವನ್ನು ಯಾರೂ ಗುರುತಿಸೋದಿಲ್ಲ. ಹಾಗೂ ನೀವು ಮಾಡಿದ ಕೆಲಸದಲ್ಲಿ ನೀವು ತೃಪ್ತಿಯ ಕೊರೆತೆ ಅನುಭವಿಸಬೇಕಾಗುತ್ತದೆ.
ಆರ್ಥಿಕ ಜೀವನ
ಈ ತಿಂಗಳು ಕುಂಭ ರಾಶಿಯವರು ಆರ್ಥಿಕವಾಗಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಈ ತಿಂಗಳು ಕೇತು ಮತ್ತು ಶನಿ ಪ್ರತಿಕೂಲ ಸ್ಥಾನದಲ್ಲಿದ್ದಾರೆ. ಏಕೆಂದರೆ ಈ ತಿಂಗಳು ಕೇತು ಮತ್ತು ಶನಿ ಪ್ರತಿಕೂಲ ಸ್ಥಾನದಲ್ಲಿದ್ದಾರೆ. ಗುರು ಮೂರನೇ ಮನೆಯಲ್ಲಿರುತ್ತಾನೆ ಇದರ ಪರಿಣಾಮವಾಗಿ ಸ್ಥಳೀಯರು ಹಣ ಗಳಿಸುವಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಈ ತಿಂಗಳು ಹಣವನ್ನು ಉಳಿಸುವ ಮತ್ತು ಖರ್ಚು ಮಾಡುವ ಮೊದಲು ನೀವು ಎಚ್ಚರಿಕೆಯಿಂದ ಯೋಚಿಸಬೇಕು. ಏಕೆಂದರೆ ಈ ತಿಂಗಳು ಹಣದ ನಷ್ಟದ ಸಾಧ್ಯತೆಯಿದೆ.
ಆದಷ್ಟು ತೊಂದರೆಗಳನ್ನು ತಪ್ಪಿಸಿ, ಮತ್ತು ಹಣವನ್ನು ಉಳಿಸಲು ಮತ್ತು ನಿರ್ವಹಿಸಲು ಮತ್ತು ಅದಕ್ಕೆ ಅನುಗುಣವಾಗಿ ಖರ್ಚು ಮಾಡಲು ಯೋಜನೆಯನ್ನು ಮಾಡಿದರೆ ಉತ್ತಮ. ಇಲ್ಲದಿದ್ದರೆ ನೀವು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.
ವ್ಯಾಪಾರ
ಕುಂಭ ರಾಶಿಯ ವ್ಯಾಪಾರಿಗಳು ಈ ತಿಂಗಳು ಲಾಭ ಗಳಿಸೋದಕ್ಕೆ ಕಷ್ಟ ಪಡಬೇಕಾಗುತ್ತದೆ. ಈ ತಿಂಗಳು ವ್ಯಾಪಾರದಲ್ಲಿ ಕಠಿಣ ಸ್ಪರ್ಧೆ ಇರುತ್ತದೆ. ವ್ಯವಹಾರದಲ್ಲಿ ಲಾಭ ಗಳಿಸಲು ನೀವು ಯೋಜನೆಗಳಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಇನ್ನೂ ವ್ಯವಹಾರದಲ್ಲಿ ಯಾವುದೇ ಲಾಭ ಮತ್ತು ನಷ್ಟದ ಪರಿಸ್ಥಿತಿಯು ಮೇಲುಗೈ ಸಾಧಿಸಲು ಸಾಧ್ಯವಿಲ್ಲ. ಈ ತಿಂಗಳು ಯಾವುದೇ ಕಾರಣಕ್ಕೂ ಪಾಲುಗಾರಿಕೆಯಲ್ಲಿ ವ್ಯಾಪಾರ ಮಾಡೋದಕ್ಕೆ ಹೋಗಬೇಡಿ. ಏಕೆಂದರೆ ಪಾಲುದಾರಿಕೆಯಿಂದಾಗಿ ವಿವಾದ ಮತ್ತು ನಷ್ಟವಾಗುವ ಸಾಧ್ಯತೆಯಿದೆ.
ಆರೋಗ್ಯ
ಈ ತಿಂಗಳು ಆರೋಗ್ಯದ ವಿಚಾರದಲ್ಲಿ ಅಂದುಕೊಂಡಷ್ಟು ಉತ್ತಮ ಫಲಿತಾಂಶ ಕಂಡು ಬರೋದಿಲ್ಲ. ಶನಿಯು ಮೊದಲ ಮನೆಯಲ್ಲಿ ನೆಲೆಸಿದ್ದಾನೆ. ಇದರ ಪರಿಣಾಮವಾಗಿ ಕುಂಭ ರಾಶಿಯವರಿಗೆ ಒತ್ತಡ, ಚಡಪಡಿಕೆ, ಆತಂಕ, ನಿದ್ರಾಹೀನತೆ ಮತ್ತು ಬೆನ್ನುನೋವಿನಂತಹ ಸಮಸ್ಯೆಗಳನ್ನು ಎದುರಾಗಬಹುದು. ಹೀಗಾಗಿ ನಿತ್ಯ ಯೋಗ ಹಾಗೂ ಧ್ಯಾನ ಮಾಡಿದರೆ ಉತ್ತಮ. ನಿಮ್ಮನ್ನು ನೀವು ಫಿಟ್ ಆಗಿರುವಂತೆ ನೋಡಿಕೊಳ್ಳಿ.
ಈ ತಿಂಗಳಲ್ಲಿ ನೀವು ದೂರದ ಪ್ರಯಾಣ ಮಾಡಲು ಯೋಜನೆಯನ್ನು ರೂಪಿಸಬೇಡಿ. ಏಕೆಂದರೆ ಇದರಿಂದ ಕಾಲುಗಳಲ್ಲಿನ ಬಿಗಿತ ಸೇರಿದಂತೆ ಇತರ ಅನೇಕ ಆರೋಗ್ಯ ಸಮಸ್ಯೆಗಳಾಗುವ ಸಾಧ್ಯತೆಯಿದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿಮಗೆ ಉಂಟಾಗುವ ಸಾಧ್ಯತೆಯಿದ್ದು, ಹೀಗಾಗಿ ಸರಿಯಾದ ಸಮಯಕ್ಕೆ ಆರೋಗ್ಯವಾದ ಆಹಾರವನ್ನು ಸೇವಿಸುವ ಕಡೆಗೆ ಗಮನ ನೀಡಿದರೆ ಉತ್ತಮ. ಇನ್ನೂ ಈ ತಿಂಗಳು ಮೂರನೇ ಮನೆಯಲ್ಲಿ ಗುರು ಇರುವುದರಿಂದ ಕುಂಭ ರಾಶಿಯವರಿಗೆ ತಲೆನೋವು ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ.
ಪ್ರೀತಿ ಮತ್ತು ವೈವಾಹಿಕ ಜೀವನ
ಈ ತಿಂಗಳಲ್ಲಿ ಕುಂಭ ರಾಶಿಯವರಿಗೆ ಪ್ರೀತಿ ಮತ್ತು ವೈವಾಹಿಕ ಜೀವನದ ವಿಷಯದಲ್ಲಿ ಕೊಂಚ ಪರವಾಗಿಲ್ಲ. ಏಕೆಂದರೆ ಮುಖ್ಯ ಗ್ರಹ ಶನಿಯು ನಿಮ್ಮ ಮೊದಲ ಮನೆಯಲ್ಲಿದ್ದು ಸಂಬಂಧದಲ್ಲಿ ಅಡಚಣೆ ಉಂಟಾಗಬಹುದು. ಮದುವೆಗಾಗಿ ಸಂಗಾತಿಯನ್ನು ಹುಡುಕುತ್ತಿರುವವರಿಗೆ ವಿಳಂಭವಾಗುವ ಸಾಧ್ಯತೆಯಿದೆ. ಈ ತಿಂಗಳಲ್ಲಿ ಗುರುವು ರಾಹುವಿನೊಡನೆ ಮೂರನೇ ಮನೆಯಲ್ಲಿ ಇರುವುದರಿಂದ ವೈವಾಹಿಕ ಜೀವನದಲ್ಲಿ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬಹುದು.
ರಾಹುವಿನ ಪ್ರಭಾವದಿಂದಾಗಿ ಇಬ್ಬರ ಮಧ್ಯೆ ಸಾಮರಸ್ಯದ ಕೊರತೆ ಅನುಭವಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಪ್ರೀತಿಯಲ್ಲಿ ಆಕರ್ಷಣೆ ಕಣ್ಮರೆಯಾಗಬಹುದು. ಶುಕ್ರನು ಏಳನೇ ಮನೆಯಲ್ಲಿ ಕುಳಿತಿದ್ದಾನೆ. ಹೀಗಾಗಿ ಪ್ರೀತಿ ವಿಚಾರದಲ್ಲಿ ನೀವು ಪದೇ ಪದೇ ಬೇಸರ ಅನುಭವಿಸುತ್ತೀರಿ. ಈ ತಿಂಗಳು ಮದುವೆಯಾಗಬೇಕು ಎಂದು ಯೋಚಿಸಿದ್ದರೆ ಅದನ್ನು ಮುಂದೂಡಿದರೆ ಉತ್ತಮ. ಒಟ್ಟಾರೆಯಾಗಿ ಈ ತಿಂಗಳು ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಯಾವುದೇ ವಿಶೇಷ ಫಲಿತಾಂಶಗಳು ಕಂಡುಬರುವುದಿಲ್ಲ.
ಪರಿಹಾರಗಳು :
ಶನಿವಾರದಂದು ಪ್ರತಿದಿನ ಹನುಮಾನ್ ಚಾಲೀಸವನ್ನು ಪಠಿಸಿ.
"ಓಂ ನಮೋ ನಾರಾಯಣಾಯ" ಎಂಬ ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಿ.
ಮಂಗಳವಾರದ ದಿನ ಕೆಂಪು ಹೂವಿನಿಂದ ಹನುಮಂತನಿಗೆ ಪೂಜೆ ಮಾಡಿ.



Click it and Unblock the Notifications











