Latest Updates
-
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ!
ಮಾಸಿಕ ರಾಶಿಫಲ: ಗ್ರಹಗತಿಗಳ ಪ್ರಕಾರ ಜೂನ್ ತಿಂಗಳು ಕುಂಭ ರಾಶಿಯವರಿಗೆ ಹೇಗಿರಲಿದೆ?
ಗ್ರಹಗತಿಗಳ ಆಧಾರದ ಮೇಲೆ ಜೂನ್ 2023ರ ರಾಶಿಫಲ ನೀಡಲಾಗಿದ್ದು ನಾವಿಲ್ಲಿ ಕುಂಭ ರಾಶಿಯವರಿಗೆ ಜೂನ್ ತಿಂಗಳು ಹೇಗಿರಲಿದೆ? ಅವರ ಆರ್ಥಿಕ ಭವಿಷ್ಯ, ವೃತ್ತಿ ಜೀವನ ಭವಿಷ್ಯ, ವ್ಯಾಪಾರ, ಆರೋಗ್ಯ, ಕುಟುಂಬ ಹಾಗೂ ಪ್ರೀತಿಯ ಭವಿಷ್ಯದ ಬಗ್ಗೆ ಹೇಳಲಾಗಿದೆ. ಅಷ್ಟಕ್ಕು ಜೂನ್ ತಿಂಗಳಲ್ಲಿ ಕುಂಭ ರಾಶಿಯವರ ಬಾಳಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ ಅನ್ನೋದನ್ನು ತಿಳಿಯೋಣ.
ಈ ತಿಂಗಳಿನಿಂದ ಗುರುವು ಕುಂಭ ರಾಶಿಯವರ ಮೂರನೇ ಮನೆಯಲ್ಲಿ ಇರುವುದರಿಂದ ನಿಮ್ಮ ಖರ್ಚುಗಳು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಮತ್ತು ಕೆಲವೊಮ್ಮೆ ಈ ವೆಚ್ಚಗಳನ್ನು ನಿಭಾಯಿಸೋದು ನಿಮಗೆ ಕಷ್ಟವಾಗಬಹುದು. ಅಲ್ಲದೆ ಈ ಅವಧಿಯಲ್ಲಿ ಧನಹಾನಿಯಾಗುವ ಸಾಧ್ಯತೆಯಿದೆ. ರಾಹು-ಕೇತುಗಳು ನಿಮ್ಮ ಮೂರನೇ ಮತ್ತು ಒಂಬತ್ತನೇ ಮನೆಯಲ್ಲಿ ಸ್ಥಿತರಿರೋದ್ರಿಂದ ಕುಂಭ ರಾಶಿಯವರಿಗೆ ವಿದೇಶಕ್ಕೆ ಹೋಗಲು ಸಹಾಯ ಮಾಡುತ್ತದೆ.

ವೃತ್ತಿ ಭವಿಷ್ಯ
ಕುಂಭ ರಾಶಿಯವರು ಈ ಸಮಯದಲ್ಲಿ ತಮ್ಮ ವೃತ್ತಿ ಕ್ಷೇತ್ರದಲ್ಲಿ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಈ ತಿಂಗಳು ಗುರುವು ನಿಮ್ಮ ಮೂರನೇ ಮನೆಯಲ್ಲಿ ಇರುತ್ತಾನೆ. ಮತ್ತು ಗುರುವಿನ ಈ ಸ್ಥಾನವು ನಿಮಗೆ ಅಶುಭವಾಗುವ ಸಾಧ್ಯತೆಯಿದೆ. ಸ್ವಂತ ರಾಶಿಯ ಮೊದಲ ಮನೆಯಲ್ಲಿ ಶನಿಯ ಉಪಸ್ಥಿತಿಯಿಂದಾಗಿ ಕುಂಭ ರಾಶೀಯವರು ಕೆಲಸದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು. ಈ ಪರಿಸ್ಥಿತಿಯಲ್ಲಿ ನಿಮ್ಮ ಕೆಲಸದಲ್ಲಿ ನೀವು ತೃಪ್ತರಾಗದಿರುವ ಸಾಧ್ಯತೆಯಿದೆ.
ಈ ಸಂದರ್ಭದಲ್ಲಿ ನೀವು ಯಾವುದೇ ಕೆಲಸ ಮಾಡಿದರೂ ಕೂಡ ಮೆಚ್ಚುಗೆ ಸಿಗದಿರುವ ಸಾಧ್ಯತೆಯೂ ಇದೆ. ನೀವು ಕೆಲಸದಲ್ಲಿ ಸಮಸ್ಯೆಗಳನ್ನು ಮತ್ತು ಕೆಲಸದ ಒತ್ತಡವನ್ನು ಎದುರಿಸಬೇಕಾಗಬಹುದು. ಜೂನ್‌ನಲ್ಲಿ ನಿಮ್ಮ ಕೆಲಸದಲ್ಲಿ ನೀವು ಮಾಡಿದ ಕಠಿಣ ಪರಿಶ್ರಮಕ್ಕೆ ನೀವು ಮೆಚ್ಚುಗೆಯನ್ನು ಪಡೆಯದಿರುವ ಸಾಧ್ಯತೆಯಿದೆ.
ವ್ಯಾಪಾರ ಭವಿಷ್ಯ
ಕುಂಭ ರಾಶಿಯವರು ವ್ಯಾಪಾರ ಮಾಡುವವರು ಈ ತಿಂಗಳಿನಲ್ಲಿ ಅಲ್ಪ ಲಾಭ ಪಡೆಯಬಹುದು. ಹೀಗಾಗಿ ನೀವು ಲಾಭ ಅಥವಾ ನಷ್ಟವನ್ನು ಹೊಂದಿರುವುದಿಲ್ಲ. ಅಲ್ಲದೆ, ಈ ಸಮಯದಲ್ಲಿ ಯಾವುದೇ ರೀತಿಯ ಪಾಲುಗಾರಿಕೆಗೆ ವ್ಯವಹಾರಕ್ಕೆ ಹೋಗುವುದು ಬೇಡ. ಇದರಿಂದ ನಿಮಗೆ ಯಾವುದೇ ರೀತಿ ಲಾಭ ಆಗೋದಿಲ್ಲ. ಏಕೆಂದರೆ ನಿಮ್ಮ ಪಾಲುಗಾರಿಕೆ ವ್ಯವಹಾರದಲ್ಲಿ ನೀವು ನಷ್ಟ ಅಥವಾ ವಿವಾದವನ್ನು ಎದುರಿಸುವ ಸಾಧ್ಯತೆಯಿದೆ.
ವ್ಯಾಪಾರ ಮಾಡುವವರು ಈ ತಿಂಗಳಲ್ಲಿ ಲಾಭ ಪಡೆಯಲು ಕೆಲವೊಂದು ಹೋರಾಟಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಪ್ರತಿಸ್ಪರ್ಧಿಗಳಿಂದ ನೀವು ಕೊಂಚ ಕುಗ್ಗಿ ಹೋಗುತ್ತೀರಿ.
ಈ ತಿಂಗಳಿನಲ್ಲಿ ಗರಿಷ್ಠ ಲಾಭವನ್ನು ಗಳಿಸಲು ನಿಮ್ಮ ವ್ಯಾಪಾರ ತಂತ್ರಗಳನ್ನು ಬದಲಾಯಿಸುವ ಅಗತ್ಯ ಖಂಡಿತಯಿದೆ.
ಆರ್ಥಿಕ ಭವಿಷ್ಯ
ಆರ್ಥಿಕವಾಗಿ ಕುಂಭ ರಾಶಿಯವರಿಗೆ ಈ ತಿಂಗಳು ಕಷ್ಟಕರವಾಗಿರುತ್ತದೆ. ಶನಿ ಮತ್ತು ಕೇತು ಶುಭ ಸ್ಥಾನದಲ್ಲಿರದೇ ಇರುವುದರಿಂದ ನೀವು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಏರಿಳಿತಗಳನ್ನು ಕಾಣಬಹುದು.3 ನೇ ಮನೆಯಲ್ಲಿ ಗುರು ಇರೋದ್ರಿಂದ ನಿಮ್ಮ ಜೀವನದಲ್ಲಿ ಕೊಂಚ ಕಷ್ಟ ಎದುರಾಗಬಹುದು. ಮತ್ತು ಹಣದ ಸುಗಮ ಹರಿವನ್ನು ನಿರ್ವಹಿಸುವುದು ಕಷ್ಟಕರವಾಗಿರುತ್ತದೆ. ಈ ಸಮಯದಲ್ಲಿ ನೀವು ಹಣವನ್ನು ನಿಭಾಯಿಸುವಾಗ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನಷ್ಟಗಳು ಸಂಭವಿಸಬಹುದು.
ಆರೋಗ್ಯ ಭವಿಷ್ಯ
ಈ ತಿಂಗಳಲ್ಲಿ ಕುಂಭ ರಾಶಿಯವರ ಭವಿಷ್ಯ ಅಷ್ಟಾಗಿ ಚೆನ್ನಾಗಿ ಇರೋದಿಲ್ಲ. ಶನಿಯ ಪ್ರಭಾವದಿಂದಾಗಿ ನೀವು ಒತ್ತಡ ಮತ್ತು ಬೆನ್ನುನೋವಿನ ಸಮಸ್ಯೆ ಎದುರಿಸಬೇಕಾಗುತ್ತದೆ. ನಿಮ್ಮ ಮನದಲ್ಲಿ ಒಂದು ರೀತಿಯ ಚಡಪಡಿಕೆ ಇರುತ್ತದೆ. ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಈ ತಿಂಗಳಲ್ಲಿ ನಿಮ್ಮ ಸಮಸ್ಯೆಗೆ ಕಾರಣವಾಗಬಹುದು. ಇನ್ನೂ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಅಲ್ಲದೆ, ಮೂರನೇ ಮನೆಯಲ್ಲಿ ಗುರುವಿನ ಉಪಸ್ಥಿತಿಯು ತಲೆನೋವು ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಗಳಿಗೆ ಕಾರಣವಾಗಬಹುದು.
ಪ್ರೀತಿ ಮತ್ತು ವೈವಾಹಿಕ ಜೀವನ
ಪ್ರೀತಿ ಮತ್ತು ವೈವಾಹಿಕ ಜೀವನಕ್ಕೆ ಕುಂಭ ರಾಶಿಯವರಿಗೆ ಈ ತಿಂಗಳು ಅನುಕೂಲಕರವಾಗಿ ಇರೋದಿಲ್ಲ. ಶನಿಯು ನಿಮ್ಮ ಲಗ್ನ ಮನೆಯಲ್ಲಿ ಸ್ಥಾನ ಪಡೆದಿದ್ದು, ಅದು ನಿಮ್ಮ ಸಂಬಂಧಗಳಲ್ಲಿ ಅಡಚಣೆಯನ್ನು ಉಂಟುಮಾಡಬಹುದು. ಅವಿವಾಹಿತರು ಮದುವೆಯಲ್ಲಿ ವಿಳಂಬ ಉಂಟು ಮಾಡುವ ಸಾಧ್ಯತೆಯಿದೆ.
ಮೂರನೇ ಮನೆಯಲ್ಲಿ ಗುರುವು ರಾಹುವಿನೊಡನೆ ಇರುವ ಕಾರಣ ವಿವಾಹಿತರು ಈ ತಿಂಗಳಲ್ಲಿ ತಮ್ಮ ಸಂಬಂಧಗಳಲ್ಲಿ ಪ್ರೀತಿಯ ಕೊರತೆಯನ್ನು ಎದುರಿಸಬಹುದು. ಈ ಮನೆಯಲ್ಲಿ ಗುರುವಿನ ಉಪಸ್ಥಿತಿಯಿಂದಾಗಿ ನಿಮ್ಮ ಸಂಗಾತಿಯೊಂದಿಗೆ ಸಂವಹನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬಹುದು. ಹೀಗಾಗಿ ನಿಮ್ಮ ಸಂಬಂಧದಿಂದ ಪ್ರೀತಿ ಕಣ್ಮರೆಯಾಗಬಹುದು.
ಶುಕ್ರನು ನಿಮ್ಮ ಆರನೇ ಮನೆಯಲ್ಲಿ ಸ್ಥಿತರಿದ್ದಾನೆ. ಮತ್ತು ಈ ಕಾರಣದಿಂದಾಗಿ ಕುಂಭ ರಾಶಿಯವರ ಪ್ರೇಮ ಜೀವನವು ಸ್ವಲ್ಪ ಕಷ್ಟಕರವಾಗಿರುತ್ತದೆ. ನೀವು ಪ್ರೀತಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ತಿಂಗಳು ಮದುವೆಯಾಗಲು ಯೋಚಿಸುತ್ತಿರುವವರು ಧನಾತ್ಮಕ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಗಳು ಅತ್ಯಲ್ಪವಾಗಬಹುದು. ಆದ್ದರಿಂದ ಈ ತಿಂಗಳು ನೀವು ಮದುವೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರಮುಖ ಯೋಜನೆಗಳನ್ನು ಹಾಕಿಕೊಳ್ಳಬೇಡಿ.
ಪರಿಹಾರ
* ಪ್ರತಿ ಶನಿವಾರ ಶನಿ ಚಾಲೀಸವನ್ನು ಪಠಿಸಿ.
* ಪ್ರತಿದಿನ 108 ಬಾರಿ "ಓಂ ನಮೋ ನಾರಾಯಣ" ಜಪಿಸಿ.
* ಮಂಗಳವಾರ ಆಂಜನೇಯನಿಗೆ ಕೆಂಪು ಹೂವುಗಳನ್ನು ಅರ್ಪಿಸಿ.



Click it and Unblock the Notifications