Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಈ 3 ರಾಶಿಗಳಿಗೆ ಕುಬೇರ ಯೋಗ: ಆಸ್ತಿ, ವಾಹನ ಅಂತ ಈ ವರ್ಷ ನಿಮ್ಮ ಬಹು ದೊಡ್ಡ ಬಯಕೆ ಈಡೇರಲಿದೆ
ದೇವ ಗುರು ಮೇ 1ಕ್ಕೆ ವೃಷಭ ರಾಶಿಗೆ ಸಂಚರಿಸಿದೆ, ಇನ್ನು 12 ತಿಂಗಳು ಗುರು ವೃಷಭ ರಾಶಿಯಲ್ಲಿಯೇ ಇರಲಿದೆ. ಈ ಗುರುವಿನ ಸಾಗಣೆ ಪ್ರತಿಯೊಂದು ರಾಶಿಯ ಆರ್ಥಿಕ ಜೀವನದ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಗುರು ಅನುಕೂಲಕರ ಸ್ಥಾನದಲ್ಲಿ ಇದ್ದರೆ ಲಕ್ಷ್ಮಿ ನಮ್ಮ ಮನೆಯಲ್ಲಿಯೇ ನೆಲೆಸಲಿದ್ದಾರೆ, ಅಷ್ಟೊಂದು ಅದೃಷ್ಟ ಬರಲಿದೆ.
ಈ ಗುರು ವೃಷಭ ರಾಶಿಗೆ ಸಂಚರಿಸಿದಾಗಲೇ ಕುಬೇರ ಯೋಗ ಉಂಟಾಗಿದೆ, ಈ ಯೋಗದಿಂದಾಗಿ ಕೆಲವರು ತುಂಬಾನೇ ಉತ್ತಮವಾದ ಪ್ರಯೋಜನ ಪಡೆಯುತ್ತಾರೆ. ಈ ಕುಬೇರ ಯೋಗದಿಂದಾಗಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ, ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ. ಕುಬೇರ ಯೋಗದಿಂದಾಗಿ ಈ ರಾಶಿಗಳಿಗೆ ಅದ್ಭುತವಾಗಿರಲಿದೆ:

ಮೇಷ ರಾಶಿ
ಕುಬೇರ ಯೋಗದಿಂದಾಗಿ ಮೇಷ ರಾಶಿಯವರಿಗೆ ತುಂಬಾ ಒಳ್ಳೆಯದು. ನಿಮಗೆ ತುಂಬಾನೇ ಆರ್ಥಿಕ ಲಾಭವಾಗಲಿದೆ, ನಿಮ್ಮ ಆರ್ತಿಕ ಸ್ಥಿತಿ ಸುಧಾರಿಸಲಿದೆ. ಉದ್ಯೋಗಿಗಳು ತಮ್ಮ ಸ್ಥಾನದಲ್ಲಿ ಬಡ್ತಿ ಪಡೆಯುತ್ತೀರಿ, ನಿಮ್ಮ ಸಂಬಳ ತುಂಬಾನೇ ಉತ್ತಮವಾಗಿರಲಿದೆ. ನಿಮ್ಮ ಆದಾಯ ಹೆಚ್ಚಾಗುವುದರಿಂದ ನೀವು ಬಯಸಿದ್ದೆಲ್ಲಾ ಸಿಗಲಿದೆ, ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ. ಮನೆ ಕಟ್ಟಬೇಕು ಅಥವಾ ಖರೀದಿಸಬೇಕೆಂದಿದ್ದರೆ ಆ ಆಸೆ ನೆರವೇರಲಿದೆ.
ಕರ್ಕ ರಾಶಿ
ಕುಬೇರ ಯೋಗವು ಕರ್ಕ ರಾಶಿಯವರಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರೆಯಲಿದೆ, ಉದ್ಯಮಿಗಳು ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು, ವ್ಯಾಪಾರಸ್ಥರ ವ್ಯವಹಾರ ಯೋಜನೆ ವಿಸ್ತಾರವಾಗಲಿದೆ. ಮನೆಯಲ್ಲಿ ಆದಾಯ ಹೆಚ್ಚಾಗಿರುವುದರಿಂದ ಮನೆಯಲ್ಲಿಯೂ ಪರಿಸ್ಥಿತಿ ಚೆನ್ನಾಗಿದೆ, ಮನೆಯಲ್ಲಿ ಸೌಕರ್ಯಗಳು ಹೆಚ್ಚಾಗಲಿದೆ. ಮನೆಯಲ್ಲಿ ಕೆಲ ಶುಭ ಕಾರ್ಯಗಳು ನಡೆಯಬಹುದು. ಹಣದ ಕೊರತೆ ಎಂಬುವುದು ಇರುವುದಿಲ್ಲ, ಎಲ್ಲಾ ಶುಭ ಕಾರ್ಯಗಳನ್ನು ಖುಷಿಯಿಂದ ಮಾಡಿ ಮುಗಿಸಲು ಸಾಧ್ಯವಾಗುವುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೂ ಕುಬೇರ ಯೋಗದಿಂದಾಗಿ ಅದೃಷ್ಟದ ಬೆಂಬಲವಿದೆ. ಉದ್ಯಮಿಗಳು ಉತ್ತಮ ಪ್ರಯೋಜನ ಪಡೆಯುತ್ತೀರಿ, ಇನ್ನು ಉದ್ಯೋಗಿಗಳ ಸ್ಥಾನ ಹಾಗೂ ಸಂಬಳ ಹೆಚ್ಚಾಗಲಿದೆ. ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಲಾಭ ಗಳಿಸಲು ಸಾಧ್ಯವಾಗುವುದು. ವ್ಯಾಪಾರಿಗಳು ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಮನೆಯಲ್ಲಿ ಸೌಕರ್ಯ ಹೆಚ್ಚಾಗಲಿದೆ.
ಕುಬೇರ ಯೋಗದಿಂದ ದೊರೆಯುವ ಪ್ರಯೋಜನಗಳು
ಸಂಪತ್ತು ವೃದ್ಧಿಸುತ್ತದೆ: ಕುಬೇರ ಯೋಗ ಇದ್ದಾಗ ಸಂಪತ್ತು ವೃದ್ಧಿಸುತ್ತದೆ, ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರಲಿದೆ, ಆಸ್ತಿ, ಕಾರು ಅಂತ ಐಶ್ವರ್ಯ ಹೆಚ್ಚಾಗುವುದು. ಕುಬೇರ ಯೋಗದಿಂದಾಗಿ ಆದಾಯ ಹೆಚ್ಚಾಗುವುದು.
ಆತ್ಮವಿಶ್ವಾಸ ಹೆಚ್ಚಾಗುವುದು
ಕುಬೇರ ಯೋಗದ ಬಲವಿರುವಾಗ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು, ಯಾವುದೇ ಕೆಲಸವನ್ನು ಮಾಡಲು ಹಿಂದೇಟು ಹಾಕುವುದಿಲ್ಲ, ಅದರಲ್ಲಿ ಪ್ರಗತಿ ಕೂಡ ದೊರೆಯಲಿದೆ.



Click it and Unblock the Notifications
