Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಜನ್ಮಾಷ್ಟಮಿ 2025: ಕೃಷ್ಣ ಜನ್ಮಾಷ್ಟಮಿಗೆ ಶುಭಕೋರಲು ಇಲ್ಲಿದೆ ಗ್ರೀಟಿಂಗ್ಸ್
ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 16 ರಂದು ಆಚರಿಸಲಾಗುವುದು. ಜನ್ಮಾಷ್ಟಮಿ ಪೂಜೆಯನ್ನು ಆಗಸ್ಟ್ 15ರ ಮಧ್ಯರಾತ್ರಿ ಆಚರಿಸಲಾಗುವುದು. ಶ್ರೀಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು (ಉತ್ತರ ಭಾರತದ ಕಡೆ ಭಾದ್ರಪದ ಮಾಸ ಶುರುವಾಗಿದೆ) ಶ್ರೀ ಕೃಷ್ಣ ಜನಿಸಿದನು. ಶ್ರೀಕೃಷ್ಣ ಜನಿಸಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು.
ಜನ್ಮಾಷ್ಟಮಿ ಎಂಬುವುದು ಬರೀ ಒಂದು ಆಚರಣೆಯಲ್ಲ, ಅದೊಂದು ದೊಡ್ಡ ಸಡಗರದ ದಿನ. ಏಕೆಂದರೆ ಈ ದಿನ ಮಕ್ಕಳಿಗೆ ಕೃಷ್ಣ ವೇಷ ಹಾಕಿದಾಗ ಸಾಕ್ಷಾತ್ ಮುದ್ದು ಕೃಷ್ಣರಂತೆಯೇ ಕಾಣುತ್ತಾರೆ, ಅದಲ್ಲದೆ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಅನೇಕ ಕ್ರೀಡಾ ಚಟುವಟಿಕೆಗಳು ಕೂಡ ಇರುವುದರಿಂದ ಪೂಜೆ, ಹಬ್ಬದ ಊಟದ ಜೊತೆಗೆ ಎಲ್ಲರೂ ಒಟ್ಟಾಗಿ ಆಟಗಳನ್ನು ಆಡಿ ಸಂಭ್ರಮಿಸಲಾಗುವುದು. ಜನ್ಮಾಷ್ಟಮಿ ನಿಮ್ಮ ಸಂಭ್ರಮ ಹೆಚ್ಚಿಸಲಿ, ಶ್ರೀ ಕೃಷ್ಣನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಹೇಳುತ್ತಾ ಈ ದಿನ ಶುಭ ಕೋರಲು ಶುಭಾಶಯಗಳನ್ನು ನೀಡಲಾಗಿದೆ ನೋಡಿ:
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
2025
ಶ್ರೀಕೃಷ್ಣ ಪರಮಾತ್ಮನ ಆಶೀರ್ವಾದ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರಲಿ
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಆ ಕೃಷ್ಣ ಆಶೀರ್ವಾದ ಸದಾ ನಿಮ್ಮ ಮೇಲಿರಲಿ, ನಿಮಗೆ ಸೂಕ್ತ ಮಾರ್ಗದರ್ಶನ ನೀಡುವಂತಾಗಲಿ, ಜೀವನದ ಎಲ್ಲಾ ಕಷ್ಟಗಳಿಂದ ಪಾರು ಮಾಡಲಿ, ಬದುಕು ಸುಂದರವಾಗಿರಲು ಆ ಕೃಷ್ಣ ಅನುಗ್ರಹಿಸಲಿ
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
ಶ್ರೀಕೃಷ್ಣ ನಿಮ್ಮ ಮನೆಗೆ ಬಂದು ನಿಮ್ಮೆಲ್ಲಾ ದುಃಖ ಬೇಸರ ದೂರ ಮಾಡಲಿ, ನಿಮ್ಮ ಮನೆಯಲ್ಲಿ ಹರ್ಷದ ವಾತಾವರಣ ತುಂಬಿ ತುಳುಕುವಂತೆ ಮಾಡಲಿ ಎಂಬುವುದೇ ಆ ಕೃಷ್ಣನಲ್ಲಿ ನನ್ನ ಪ್ರಾರ್ಥನೆ.
ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
ಶ್ರೀಕೃಷ್ಣ ನಮ್ಮೊಳಗಿನ ಕಂಶ(ಅಹಂ) ನಾಶ ಮಾಡಲಿ, ಪ್ರೀತಿಯನ್ನು ಹೆಚ್ಚಿಸಲಿ
ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
ಶ್ರೀಕೃಷ್ಣ ಪರಮಾತ್ಮ ನಿಮ್ಮೆಲ್ಲಾ ಆಸೆ, ಕನಸು ನೆರವೇರಸಲಿ, ನಿಮ್ಮ ಇಷ್ಟಾರ್ಥಗಳು ಸಿದ್ಧಿಸಲಿ
ನಿಮಗೂ ನಿಮ್ಮ ಕುಟುಂಬಕ್ಕೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
ಗೀತಾ ಸಾರ
ಆದುದೆಲ್ಲಾ ಒಳ್ಳೆಯದಕ್ಕೆ ಆಗಿದೆ
ಆಗುವುದೆಲ್ಲಾ ಒಳ್ಳೆಯದೇ ಆಗುತ್ತಿದೆ
ಆಗಲಿರುವುದು ಸಹ ಒಳ್ಳೆಯದೇ ಆಗಲಿದೆ
ರೋಧಿಸಲು ನೀನೇನು ಕಳೆದುಕೊಂಡಿರುವೆ
ಕಳೆದುಕೊಳ್ಳಲು ನೀನು ತಂದಿರುವುದಾದರು ಏನು?
ನಾಶವಾಗಲು ನೀನು ಮಾಡಿರುವುದಾದರೂ ಏನು?
ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ
ಏನನ್ನು ಅರ್ಪಿಸಿದರೂ ಅದನ್ನು ಇಲ್ಲಿಗೆ ಅರ್ಪಿಸಿರುವೆ
ನಿನ್ನೆ ಬೇರೆಯಾರದ್ದೋ ಆಗಿದ್ದು
ಇಂದು ನಿನ್ನದಾಗಿದೆ ಮತ್ತು ನಾಳೆ ಇನ್ನಾರದ್ದೋ ಆಗಲಿದೆ
ಪರಿವರ್ತನೆ ಜಗದ ನಿಯಮ ಭಗವಾನ್ ಶ್ರೀ ಕೃಷ್ಣ



Click it and Unblock the Notifications



