Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಕೋಲಾರದ ಮಹಿಳೆಯಲ್ಲಿ ವಿಶ್ವದಲ್ಲೇ ವಿಭಿನ್ನ ರಕ್ತದ ಗುಂಪು ಪತ್ತೆ..! CRIB ಗುಂಪಿನ ಬಗ್ಗೆ ಗೊತ್ತಾ?
ಮಾನವರಲ್ಲಿ ಕಂಡುಬರುವ ರಕ್ತದ ಗುಂಪುಗಳ ಕುರಿತಾಗಿ ನಾವು ತಿಳಿದುಕೊಂಡಿರುವುದು ಬಹಳ ಮುಖ್ಯ. ಅದ್ರಲ್ಲೂ ಸಾಮಾನ್ಯವಾಗಿ 4 ಗುಂಪುಗಳು ಸಾಮಾನ್ಯವಾಗಿ ಕಂಡುಬರುವ ಪ್ರಕಾರಗಳಾಗಿವೆ. ಆದ್ರೆ ಆಗಾಗ ವಿಶೇಷ ಎಂಬಂತೆ ಅಪರೂಪದ ರಕ್ತದ ಗುಂಪುಗಳು ಸಹ ವರದಿಯಾಗುವುದು ನೋಡಬಹುದು.
ಅದ್ರಲ್ಲೂ ಈಗ ಕೋಲಾರದ ಮಹಿಳೆಯೊಬ್ಬರಲ್ಲಿ ವಿಶ್ವದಲ್ಲೇ ಅತ್ಯಂತ ಅಪರೂಪದ ಹಾಗೆ ಯಾವುದೇ ಭಾಗದಲ್ಲೂ ಗುರುತಿಸಲಾಗದ ರಕ್ತದ ಮಾದರಿಯೊಂದು ಪತ್ತೆಯಾಗಿದೆ. ಈ ರಕ್ತದ ಗುಂಪು ಈವರೆಗೆ ಭಾರತದಲ್ಲಿ ವರದಿಯಾದ ಉದಾಹರಣೆ ಇಲ್ಲ ಎಂದು ಹೇಳಲಾಗಿದೆ. ಹಾಗೆ ವಿಶ್ವದಲ್ಲಿ ಕೆಲವೇ ಮಂದಿಯಲ್ಲಿ ಈ ರಕ್ತದ ಮಾದರಿ ಗುರುತಿಸಲಾಗಿದೆ ಎಂದು ಕೂಡ ತಿಳಿದುಬಂದಿದೆ.

ಕೋಲಾರದ ಆಸ್ಪತ್ರೆಯಲ್ಲಿ ದಾಖಲಾಗಿದ್ದ 38 ವರ್ಷದ ಮಹಿಳೆಯೊಬ್ಬರ ರಕ್ತದ ಮಾದರಿಯು ವಿಶ್ವದಲ್ಲೇ ಬಹಳ ಅಪರೂಪದ್ದಾಗಿದೆ. ಅವರಲ್ಲಿ O Rh+ (CRIB) ಎಂಬ ರಕ್ತದ ಮಾದರಿ ಪತ್ತೆಯಾಗಿದೆ. ಇದು ಸಾಮಾನ್ಯ ರಕ್ತದ ಮಾದರಿಯಾಗಿದ್ದರು. ಅವರಿಗೆ ಲಭ್ಯವಿರುವ O ಪಾಸಿಟಿವ್ ರಕ್ತದ ಮಾದರಿಗಳು ಹೊಂದಿಕೆಯಾಗುತ್ತಿರಲಿಲ್ಲ.
ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲು ವೈದ್ಯರು ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದಲ್ಲಿರುವ ಅಡ್ವಾನ್ಸ್ಡ್ ಇಮ್ಯುನೊಹೆಮಟಾಲಜಿ ಫರೆನ್ಸ್ ಲ್ಯಾಬೋರೇಟರಿಯ ಗಮನಕ್ಕೆ ತರಲಾಗಿತ್ತು. ಇಲ್ಲಿ ಹೆಚ್ಚಿನ ಪರೀಕ್ಷೆ ನಡೆಸಿದಾಗ ಯಾವುದೇ ಮಾದರಿಯೊಂದಿಗೆ ಹೊಂದಿಕೆಯಾಗಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಇದು ಅಪರೂಪದ ಹಾಗೆ ವಿಶ್ವದ ಎಲ್ಲೂ ವರದಿಯಾಗದ ಸಂಭವನೀಯ ಪ್ರಕರಣ ಎಂದು ಗುರುತಿಸಲಾಗಿದೆ.
ಸದ್ಯ ಈ ರಕ್ತದ ಮಾದರಿಯನ್ನು ಸಂಯೋಜಿಸುವ ಉದ್ದೇಶದಿಂದ ಅವರ ಕುಟುಂಬಸ್ಥರ ಸುಮಾರು 20 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಯಾರೊಬ್ಬರ ರಕ್ತದ ಮಾದರಿ ಕೂಡ ಅವರೊಂದಿಗೆ ಹೊಂದಿಕೆಯಾಗಿಲ್ಲ ಎಂದು ತಿಳಿದುಬಂದಿದೆ.
ಈ ಮಾದರಿ ವಿಶ್ವದಲ್ಲೇ ಪ್ರಥಮ
ಇದು ಕ್ರೋಮರ್ ರಕ್ತ ಗುಂಪು ವ್ಯವಸ್ಥೆಯ ಭಾಗವಾಗಿದೆ ಮತ್ತು ಅದರ ಮೂಲವನ್ನು ಗುರುತಿಸಿ ಅಧಿಕೃತವಾಗಿ CRIB ಎಂದು ಹೆಸರಿಸಲಾಗಿದೆ, 'CR' 'ಕ್ರೋಮರ್' ಅನ್ನು ಪ್ರತಿನಿಧಿಸುತ್ತದೆ ಮತ್ತು 'IB' 'ಭಾರತ', 'ಬೆಂಗಳೂರು' ಅನ್ನು ಸೂಚಿಸುತ್ತದೆ ಎಂದು ತಿಳಿದುಬಂದಿದೆ. 2025 ರ ಜೂನ್ನಲ್ಲಿ ಇಟಲಿಯ ಮಿಲನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ರಕ್ತ ವರ್ಗಾವಣೆ ಸೊಸೈಟಿ (ISBT) ಯ 35 ನೇ ಪ್ರಾದೇಶಿಕ ಕಾಂಗ್ರೆಸ್‌ನಲ್ಲಿ CRIB ಎಂಬ ಈ ಐತಿಹಾಸಿಕ ಘೋಷಣೆ ಮಾಡಲಾಗಿದೆ. ಸದ್ಯ ಮಹಿಳೆ ಹೃದಯ ಶಸ್ತ್ರಚಿಕಿತ್ಸೆಯ ಉದ್ದೇಶದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ರಕ್ತದ ಅಗತ್ಯತೆ ಇಲ್ಲದೆಯೇ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗಿದೆ.
38 ವರ್ಷದ ಮಹಿಳೆ ಕಳೆದ ವರ್ಷ ಫೆಬ್ರವರಿಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗಾಗಿ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆ ತನ್ನ ರಕ್ತದ ಮಾದರಿಯು ಒ ಪಾಸಿಟಿವ್ ಎಂದು ಹೇಳಿಕೊಂದಿದ್ದಳು. ಆದ್ರೆ ಪರೀಕ್ಷೆಗೊಳಪಡಿಸಿದಾಗ CRIB ಎಂಬ ಹೊಸ ಹಾಗೆ ವಿಶ್ವದಲ್ಲಿ ಮೊದಲ ಬಾರಿಗೆ ಪತ್ತೆಯಾದ ಮಾದರಿ ಎಂದು ತಿಳಿದುಬಂದಿದೆ.
ಮುಂದೆ ಆಕೆಗೆ ಮತ್ತೆ ಶಸ್ತ್ರ ಚಿಕಿತ್ಸೆಯ ಅಗತ್ಯತೆ ಬೇಕಿದ್ದರೆ ಆಕೆಯ ರಕ್ತವನ್ನು ಸಂಗ್ರಹಿಸಿಡಲು ಮುಂದಾಗಲಾಗಿದೆ. ಇದು ಅಪರೂಪದ ರಕ್ತದ ಮಾದರಿ ಆಗಿರುವುದರಿಂದ ಮುಂದೆ ಪ್ರಯೋಗ ಹಾಗೆ ಆಕೆಗೆ ಅಗತ್ಯ ಸಮಯದಲ್ಲಿ ನೀಡಲು ಬಳಸಲು ಸಂರಕ್ಷಿಸಿಡಲು ಮುಂದಾಗಲಾಗಿದೆ.



Click it and Unblock the Notifications
