Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ದೇಶ ಕಾಯುವ ಸೈನಿಕನ ಜೊತೆ ಕೊಹ್ಲಿ ನಡೆದುಕೊಂಡ ರೀತಿ ಸರಿಯೇ? ಕೊಹ್ಲಿಯ ಅಭಿಮಾನಿಗಳೇ ಇದು ಬೇಡವಾಗಿತ್ತು ಅಂತಿದ್ದಾರೆ
ಇವರುಗಳಲ್ಲಿ ನಿಮ್ಮ ಪ್ರಕಾರ ರಿಯಲ್ ಸೂಪರ್ ಹೀರೋ ಯಾರು?
ಸೈನಿಕ
ಕ್ರಿಕೆಟಿಗ
ಸಿನಿಮಾ ಸೆಲೆಬ್ರಿಟಿಗಳು
ಹೀಗೆ ಪ್ರಶ್ನೆ ಕೇಳಿದರೆ ಎಲ್ಲರೂ ಸೈನಿಕ ಎಂದು ಹೇಳುತ್ತೇವೆ, ಸೈನಿಕರ ಬಗ್ಗೆ ದೊಡ್ಡ-ದೊಡ್ಡ ಮಾತುಗಳನ್ನಾಡುತ್ತೇವೆ. ಆದರೆ ಆ ಸೈನಿಕನಿಗೆ ನಾವು ನಿಜವಾಗಿಯೂ ಬೇರೆ ಸೆಲೆಬ್ರಿಟಿಗಳಿಗೆ ನೀಡುವ ಸೌಕರ್ಯವಾಗಲಿ, ಗೌರವಾಗಲಿ ನೀಡ್ತಾ ಇದ್ದೀವಾ? ಎಂದು ಕೇಳಿದರೆ ಅದಕ್ಕೆ ಉತ್ತರವೇಈಗ ವೈರಲ್ ಆಗುತ್ತಿರುವ ವೀಡಿಯೋ.

ಕೊಹ್ಲಿ ನಡೆದುಕೊಂಡ ರೀತಿ ಸರಿಯೇ?
ಕೊಹ್ಲಿ ಎಂದರೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ದೊಡ್ಡ ಕ್ರಿಕೆಟಿಗ. ಕ್ರಿಕೆಟ್ ಜಗತ್ತಿನ ತಾರೆ ಎಲ್ಲವೂ ಸರಿಯೇ ಆದರೆ ಇವರು ದೇಶಕ್ಕಾಗಿ ಕ್ರಿಕೆಟ್ ಆಡುತ್ತಾರೆ ನಿಜ ಆದರೆ ಪ್ರಾಣವನ್ನು ಮುಡಿಪಾಗಿ ಇಟ್ಟಿದಾರೆಯೇ ಇಲ್ಲ, ಯಾವ ಕ್ಷಣದಲ್ಲಿ ಏನು ಬೇಕಾದರು ನಡೆಯಬಹುದು, ಮರು ಕ್ಷಣ ತನ್ನ ಪ್ರಾಣಕ್ಕೆ ಗ್ಯಾರಂಟಿ ಇರಲ್ಲ, ಆದರೂ ಕೊನೆಯುಸಿರು ಇರುವವರೆಗೆ ದೇಶಕ್ಕಾಗಿ ಇರುವವರು ಸೈನಿಕರು. ಕೊಹ್ಲಿ ಸೈನಿಕರೊಬ್ಬರು ಒಂದು ಸೆಲ್ಫಿ ಕೇಳಿದಾಗ ನಿರಾಕರಿಸಿರುವ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಅಷ್ಟಕ್ಕೂ ಅಲ್ಲಿ ಒಂದು ಸೆಕೆಂಡ್ ಒಂದು ಸೆಲ್ಫಿಗೆ ನಿಂತರೆ ಕೊಹ್ಲಿ ಕಳೆದುಕೊಳ್ಳುವಂಥದ್ದೂ ಏನೂ ಇರಲಿಲ್ಲ, ಕೊಹ್ಲಿಯ ಭದ್ರತೆಗೆ ಬಂದಿದ್ದ ಸೈನಿಕ, ಅವರ ಜೊತೆ ಸೆಲ್ಫಿಗೆ ನಿರಾಕರಣೆ ಮಾಡುವ ಮೂಲಕ ದೇಶದ ಜನತೆಯ ಆಕ್ರೋಶಕ್ಕೆ ಕಾರಣರಾಗಿದ್ದಾರೆ ಕಿಂಗ್ ಕೊಹ್ಲಿ.
विराट कोहली को इतना घमंड नहीं करना चाहिए, आर्मी रक्षा करती है ,
— sunilpathak (@sunilpathakram) January 21, 2025
आप सिर्फ क्रिकेट खेलते हो| pic.twitter.com/fHWAESoTKt
ಕ್ರಿಕೆಟ್ ಆಟಗಾರರು ಆಡಲ್ಲ ಅಂದರೂ ದೇಶಕ್ಕೇನು ನಷ್ಟವಿಲ್ಲ, ಅದೇ ಸೈನಿಕರು ನಾವು ನಮ್ಮ ಪ್ರಾಣದ ಬಲಿದಾನಕ್ಕೆ ಸಿದ್ಧರಿಲ್ಲ ಎಂದರೆ ದೇಶಕ್ಕೆ ರಕ್ಷಣೆ ಇದೆಯೇ?
ಇಂದು ನಮ್ಮ ದೇಶ ಇಷ್ಟೊಂದು ಸುರಕ್ಷತೆವಾಗಿದೆ, ನಾವೆಲ್ಲಾ ಸುರಕ್ಷಿತವಾಗಿದ್ದೇವೆ ಎಂದರೆ ಅದಕ್ಕೆ ಪ್ರತಿ ಒಬ್ಬೊಬ್ಬ ಸೈನಿಕರ ಶ್ರಮ, ಬಲಿದಾನ ಕಾರಣವಾಗಿದೆ, ಇಂದು ನಾವೆಲ್ಲಾ ನಮ್ಮ ಮನೆಯಲ್ಲಿ ಬೆಚ್ಚಗೆ ಮಲಗಿರಲು ಗಡಿಯಲ್ಲಿ ಕೊರೆಯುವ ಚಳಿಯಲ್ಲಿ, ತನ್ನ ಕುಟುಂಬವನ್ನೆಲ್ಲಾ ಬಿfಟು ಯೋದರು ದೇಶದ ರಕ್ಷಣೆ ಮಾಡ್ತಾ ಇರುತ್ತಾರೆ. ಸಂಬಳ ಸಿಗುತ್ತೆ ಅಂತ ಅವರು ಅಷ್ಟು ಶ್ರಮ ಪಡುತ್ತಿಲ್ಲ, ಅಲ್ಲಿ ಸಿಗುವ ಸಂಬಳ ಅವರಿಗೆ ತಮ್ಮ-ತಮ್ಮ ಊರಿನಲ್ಲಿಯೇ ದುಡಿಯಬಹುದು, ಆದರೆ ಅವರು ತಮ್ಮೆಲ್ಲಾ ಪ್ರಾಮುಖ್ಯತೆ ಬದಿಗೊತ್ತಿ ದೇಶದ ರಕ್ಷಣೆ ಮಾಡ್ತಾ ಇದ್ದಾರೆ ಎಂದರೆ ಅದು ಅವರು ದೇಶದ ಮೇಲಿಟ್ಟಿರುವ ಪ್ರೀತಿ ಅಲ್ಲದೆ ಸೇನೆಯ ಜವಾಬ್ದಾರಿಯನ್ನು ಅರಿತಿರುವ ರೀತಿ. ಇದಕ್ಕೆ ಪ್ರತಿಯೊಬ್ಬ ಭಾರತೀಯನು ಗೌರವ ಸೂಚಿಸಲೇಬೇಕಾಗಿದೆ.
ಈ ವೈರಲ್ ವೀಡಿಯೋ ಮುಂಬೈಯದು ಎನ್ನಲಾಗುತ್ತಿದೆ
ವಿರಾಟ್ ಕೊಹ್ಲಿ ಕಾರಿನಿಂದ ಇಳಿದು ಬಂದು ಒಂದು ಕಡೆ ನಿಂತಿರುತ್ತಾರೆ, ಆವಾಗ ಅಲ್ಲಿಯೇ ಇದ್ದ ಸೈನಿಕರೊಬ್ಬರು ಒಂದು ಸೆಲ್ಫಿ ಕೇಳುತ್ತಾರೆ, ಅದಕ್ಕೆ ವಿರಾಟ್ ಕೊಹ್ಲಿ ಸ್ವಲ್ಪ ಅಹಂಕಾರದಿಂದಲೇ ತಿರಸ್ಕರಿಸಿರುವ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ಎಲ್ಲಿಗೋ ಧಾವಂತದಿಂದ ಸಾಗುತ್ತಿದ್ದರೆ ಒಕೆ, ಆ ವೀಡಿಯೋದಲ್ಲಿ ಕಾಣಬಹುದು ಅಲ್ಲಿ ಒಂದು ಸೆಕಂಡ್ ಸೆಲ್ಫಿಗೆ ಪೋಸ್ ನೀಡುವಷ್ಟು ಸಮಯವಿತ್ತು.
ಜನರ ಮೈಂಡ್‌ಸೆಟ್ ಬದಲಾಗಬೇಕಾಗಿದೆ
ಎಲ್ಲರೂ ಅವರವರ ವೃತ್ತಿ ಮಾಡ್ತಾ ಇರ್ತಾರೆ, ಹಾಗಾಗಿ ಸೆಲೆಬ್ರಿಟಿಗಳೆಂದರೆ ಅವರೇನೋ ದೇವಲೋಕದವರು ಎಂಬ ಭಾವನೆ ಬಿಡಿ, ಅಲ್ಲದೆ ಅವರಿಗೆ ಅವರದ್ದೇ ಬದುಕು ಕೂಡ ಇರುತ್ತದೆ, ಹೊರಗಡೆ ನಮ್ಮಂತೆ ಮುಕ್ತವಾಗಿ ಓಡಾಡುವ ಆಸೆಯೂ ಇರುತ್ತದೆ, ಹೆಜ್ಜೆ-ಹೆಜ್ಜೆಗೆ ಸೆಲ್ಫಿ ಅಂತ ಮುಗಿ ಬೀಳಬೇಡಿ, ಅವರು ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾಗ ಒಂದು ಫೋಟೋಗೆ ಕೇಳಿದರೆ ತೊಂದರೆಯಿಲ್ಲ, ಅವರು ಯಾವುದೋ ಧಾವಂತದಲ್ಲಿ ಓಡುವಾಗ ನಾವು ಸೆಲ್ಫಿ ಅಂತ ಮುಗಿ ಬೀಳುವುದನ್ನು ಬಿಡಬೇಕು, ಅಲ್ವಾ?



Click it and Unblock the Notifications
