Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಶಾಲಾ ವ್ಯಾನ್ ಹೊರ ಎಸೆಯಲ್ಪಟ್ಟ ಮಕ್ಕಳು, ಎದೆನಡಗಿಸುವ ವೀಡಿಯೋ: ಪೋಷಕರೇ ಮಕ್ಕಳ ಸುರಕ್ಷತೆ ಬಗ್ಗೆ ಎಚ್ಚರ
ಮಕ್ಕಳನ್ನು ಶಾಲಾ ಬಸ್‌ನಲ್ಲಿ ಅಥವಾ ವ್ಯಾನ್, ಆಟೋ ರಿಕ್ಷಾಗಳಲ್ಲಿ ಕಳುಹಿಸುತ್ತಿದ್ದೀರಾ? ನೀವು ನಿಮ್ಮ ಮಕ್ಕಳ ಸುರಕ್ಷತೆ ಕಡೆ ಗಮನಹರಿಸಬೇಕು, ಏನಾದರೂ ಅವಘಡ ಸಂಭವಿಸಿ ಬೊಬ್ಬೆ ಹಾಕುವ ಬದಲಿಗೆ ಅದರ ಮೊದಲೇ ಎಚ್ಚೆತ್ತುಕೊಳ್ಳಬೇಕು. ಶಾಲಾ ವ್ಯಾನ್ ಹೊರಗೆಸಯಲ್ಪಟ್ಟ ವಿದ್ಯಾರ್ಥಿಗಳನ್ನು ನೋಡುವಾಗ ಎದೆ ನಡುಕ ಉಂಟಾಗುತ್ತಿದೆ, ಅದೃಷ್ಟವಶಾತ್ ಏನೂ ಸಂಭವಿಸಿಲ್ಲ, ಆದರೆ ಆ ದೃಶ್ಯ ಮಾತ್ರ ಭಯಾನಕವಾಗಿದೆ.

ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಅಕ್ಕ ಪಕ್ಕ ಮನೆಗಳಿಗೆ ಆದರೆ ಹೆಚ್ಚು ಗಾಡಿ ಓಡಾಡುವ ಸ್ಥಳವಲ್ಲ ಅಲ್ಲೊಬ್ಬರು ಬೈಕ್‌ನಲ್ಲಿ ನಿಂತು ಮನೆಯಲ್ಲಿ ಉಯ್ಯಾಲೆಯಲ್ಲಿ ಕುಳಿತಿರುವ ವ್ಯಕ್ತಿ ಜೊತೆ ಮಾತನಾಡುತ್ತಿದ್ದಾರೆ, ಅಲ್ಲಿಗೆ ಸ್ಕೂಲ್ ವ್ಯಾನ್ ವೇಗವಾಗಿ ಬರುತ್ತದೆ, ಅಷ್ಟರಲ್ಲಿ ಅದರ ಹಿಂಬದಿ ಡೋರ್ ಓಪನ್ ಆಗಿ ಇಬ್ಬರು ವಿದ್ಯಾರ್ಥಿನಿಯರು ಹೊರ ಬಂದು ಬೀಳುತ್ತಾರೆ. ಅಷ್ಟರಲ್ಲಿ ಅಲ್ಲಿರುವವರು ಸೇರುತ್ತಾರೆ, ಗಾಡಿ ಮುಂದೆ ನಿಂತಿರಬಹುದು ಬೇರೆ ವಿದ್ಯಾರ್ಥಿನಿಯೊಬ್ಬಳು ಓಡಿ ಬರುತ್ತಾಳೆ, ಸಣ್ಣ -ಪುಟ್ಟ ಗಾಯವಾಗಿರುವ ವಿದ್ಯಾರ್ಥಿಗಳನ್ನು ಎತ್ತಿಕೊಂಡು ಹೋಗುವುದನ್ನು ಕಾಣಬಹುದು, ಆ ಮಕ್ಕಳು ಅವರ ತಂದೆ ತಾಯಿಂದಿರ ಅದೃಷ್ಟ , ಪುಣ್ಯಕ್ಕೆ ಏನೂ ಆಗಲಿಲ್ಲ, ವ್ಯಾನ್ ಡ್ರೈವರ್ ನಿರ್ಲಕ್ಷ್ಯಕ್ಕೆ ಅಲ್ಲಿ ನೆರೆದಿರುವವರು ಆಕ್ರೋಶದಿಂದ ಮಾತನಾಡುವುದನ್ನು ಕಾಣಬಹುದು.
ಮಕ್ಕಳನ್ನು ತುಂಬಿಕೊಂಡು ಹೋಗುವ ವ್ಯಾನ್, ಮಿನಿ ಬಸ್, ಆಟೋಗಳ ಬಗ್ಗೆ ನಿರ್ಲಕ್ಷ್ಯ ಬೇಡ
ಸಾಕಷ್ಟು ಬಾರಿ ಪೋಷಕರು ಈ ಬಗ್ಗೆ ಪ್ರಶ್ನಿಸುವುದೇ ಇಲ್ಲ, ಅವರು ನಿಮಗೆ ಕಷ್ಟವಾದರೆ ನೀವು ಬೇರೆ ಗಾಡಿಯಲ್ಲಿ ಕಳುಹಿಸಿ ಎಂದು ಅಹಂಕಾರದಿಂದ ಹೇಳುತ್ತಾರೆ, ಮಕ್ಕಳ ಫೀಸ್, ವ್ಯಾನ್ ಫೀಸ್ ಅಂತ ಹಗಲಿರುವ ದುಡಿಯುತ್ತಿರುವ ಪೋಷಕರಿಗೆ ನಿಮ್ಮ ಗಾಡಿ ಬೇಡ ಬೇರೆ ಗಾಡಿ ಮಾಡುತ್ತೇವೆ ಎಂದು ಹೇಳುವಷ್ಟು ಸಾಮರ್ಥ್ಯ ಇರಲ್ಲ, ಏಕೆಂದರೆ ಪ್ರತ್ಯೇಕ ಗಾಡಿ ಮಾಡಿ ಕಳುಹಿಸುವುದು ತಿಂಗಳಿಗೆ 3-4 ಸಾವಿರ ಹೇಳುತ್ತಾರೆ, ಮಧ್ಯಮವರ್ಗದವರಿಗೆ ಇದನ್ನು ಭರಿಸುವುದು ಕಷ್ಟವಾಗುವುದು.
ಮಕ್ಕಳ ಮೇಲೆ ನಿರ್ಲಕ್ಷ್ಯ ವಹಿಸುವ ಶಾಲೆಗಳ ಮೇಲೆ ಕೇಸ್ ದಾಖಲಿಸಬೇಕು
ಹೌದು ಪೋಷಕರಿಗೆ ತನ್ನ ಮಗುವಿಗೆ ಪ್ರತ್ಯೇಕ ಗಾಡಿ ಮಾಡುವುದು ಕಷ್ಟವಾಗುವುದು, ಆದರೆ ಪ್ರತಿಯೊಂದು ಖಾಸಗಿ ಶಾಲೆಗಳಿಗೆ ಅವರ ಮಕ್ಕಳ ಸುರಕ್ಷತೆ ವ್ಯವಸ್ಥೆಗೆ ಗಾಡಿ ವ್ಯವಸ್ಥೆ ಮಾಡುವುದು ಸಾಧ್ಯವಾಗುತ್ತೆ. ಶಾಲಾ ಮುಂದೆ ನಮ್ಮ ಮಕ್ಕಳು ಇಷ್ಟು ಸ್ಕೋರ್ ಮಾಡಿದ್ದಾರೆ ಎಂದು ಬೋರ್ಡ್ ಹಾಕಿ ಪೋಷಕರನ್ನು ಆಕರ್ಷಿಸುತ್ತಾರೆ, ಆದರೆ ಶಾಲೆಗೆ ಬರುವ ಮಕ್ಕಳಿಗೆ ನಮ್ಮ ಬಸ್‌ನಲ್ಲಿ ಇಷ್ಟೆಲ್ಲಾ ಸುರಕ್ಷತೆ ಇದೆ ಎಂದು ಹಾಕುವುದಿಲ್ಲ. ಕೆಲವೊಂದು ಘಟನೆಗಳು ಎಷ್ಟೇ ಸುರಕ್ಷತೆ ತೆಗೆದುಕೊಂಡರೂ ನಡೆಯುತ್ತೆ, ಆದರೆ ಈ ರೀತಿ ವ್ಯಾನ್‌ನಲ್ಲಿ ತುಂಬಿಕೊಂಡು ಹೋಗುವುದು, ಇತರ ಯಾವುದೇ ಸುರಕ್ಷತೆಯಿಲ್ಲದ ಗಾಡಿಯಲ್ಲಿ ಮಕ್ಕಳು ಶಾಲೆಗೆ ಬರುವುದು ನೋಡಿದರೆ ಖಂಡಿತ ಶಾಲೆಯ ವಿರುದ್ಧ ಕಠಿಣ ಕ್ರಮವನ್ನು ಸರಕಾರ ತೆಗೆದುಕೊಳ್ಳಬೇಕು.
ಇದು ಬೇರೆ ರಾಜ್ಯದಲ್ಲಿ ನಡೆದಿರುವುದು ಅಂತ ನಾವು ನಿರ್ಲಕ್ಷ್ಯ ಮಾಡಬಾರದು
ಹೌದು ನಮ್ಮಲ್ಲಿಯೂ ಪ್ರತಿನಿತ್ಯ ಕುರಿಗಳನ್ನು ತುಂಬಿ ಹೋಗುವಂತೆ ಮಕ್ಕಳನ್ನು ತುಂಬಿಕೊಂಡು ಹೋಗುವುದನ್ನು ನೋಡುತ್ತೇವೆ, ಇದನ್ನು ಸಾರ್ವಜನಿಕರು ಪ್ರಶ್ನಿಸಬೇಕು, ಶಾಲೆ ಕೂಡ ಈ ಬಗ್ಗೆ ಹೆಚ್ಚಿ ಜಾಗ್ರತೆವಹಿಸಬೇಕು. ಶಾಲಾ ಮಕ್ಕಳನ್ನು ಕೊಂಡೊಯ್ಯುವ ಬಸ್‌ಗಳಲ್ಲಿ ಸೂಕ್ತ ಗ್ರಿಲ್ಡ್ ಹಾಕಿರಬೇಕು, ಡೋರ್ ಮುಚ್ಚಿರಬೇಕು, ಡ್ರೈವರ್ ಸಮಧಾನದಿಂದ ಮಕ್ಕಳನ್ನು ಕೊಂಡೊಯ್ಯುವವನು ಆಗಿರಬೇಕು, ನಮ್ಮ ಮಕ್ಕಳ ಭವಿಷ್ಯ, ಇಂಥ ನಿರ್ಲಕ್ಷ್ಯಕ್ಕೆ ಬೆಂಬಲ ನೀಡಿದರೆ ಮಕ್ಕಳ ಭವಿಷ್ಯದ ಜೊತೆ ಆಟ ಆಡಿದಂತೆ ಜಾಗ್ರತೆವಹಿಸಿ.
Kids Thrown Out Of The School Van In Vadodara: Viral Video
વડોદરા ની ઘટના!
— My Vadodara (MyVadodara) June 21, 2024
ચાલુ સ્કૂલ વાન નો દરવાજો અચાનક ખુલતા 2 છોકરીઓ રોડ પર પટકાઈ!#vadodara #schoolvanpic.twitter.com/pBRCA07ies



Click it and Unblock the Notifications